ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಸಾಲ್ಯನ್
Team Udayavani, Jun 14, 2020, 3:54 PM IST
ಮುಂಬೈ: ಬಾಲಿವುಡ್ ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಾಜಪೂತ್ ಇಂದು ತನ್ನ ಮುಂಬೈ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. 34 ವರ್ಷದ ಯುವನಟ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಒಂದು ವಾರದ ಹಿಂದೆ ಸುಶಾಂತ್ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ ಸಾಲ್ಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಕಳೆದ ಜೂ.8ರಂದು ದಿಶಾ ಅವರು ಕಟ್ಟಡದಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮುಂಬೈನ ಮಲಾಡ್ ನಲ್ಲಿರುವ ವಸತಿ ಸಮುಚ್ಛಯದ 14 ನೇ ಮಹಡಿಯಿಂದ ಕೆಳಗೆ ಹಾರಿದ್ದ ದಿಶಾ ಗಂಭೀರ ಗಾಯಗೊಂಡಿದ್ದರು. ಬೊರಿವಲಿಯ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದರು.
ಸಾರ್ವಜನಿಕ ಸಂಪರ್ಕ ಮ್ಯಾನೇಜರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ದಿಶಾ ಸಾಲ್ಯಾನ್ ನಂತರ ಸೆಲೆಬ್ರೆಟಿ ಟ್ಯಾಲೆಂಟ್ ಮ್ಯಾನೇಜರ್ ಆಗಿದ್ದರು. ನಟ ಸುಶಾಂತ್ ಸಿಂಗ್ ರಜಪೂತ್ ಗೆ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಸುಶಾಂತ್ ಹೊರತುಪಡಿಸಿ ಭಾರತೀ ಸಿಂಗ್, ರೆಹಾ ಚಕ್ರವರ್ತಿ ಮತ್ತು ವರುಣ್ ಶರ್ಮಾ ಮುಂತಾದವರಿಗೂ ದಿಶಾ ಸಾಲ್ಯಾನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು.
ಇದನ್ನೂ ಓದಿ: ಎಂ ಎಸ್ ಧೋನಿ ಸಿನಿಮಾ ಖ್ಯಾತಿಯ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ
ಮಾಜಿ ಮ್ಯಾನೇಜರ್ ಕೊನೆಯುಸಿರೆಳದೆ ಒಂದು ವಾರದೊಳಗೆ ನಟ ಸುಶಾಂತ್ ಸಿಂಗ್ ರಜಪೂತ್ ಕೂಡಾ ಅದೇ ಹಾದಿ ತುಳಿದಿದ್ದಾರೆ. ಎಂ ಎಸ್ ಧೋನಿ, ಚಿಚೋರೆ ಮುಂತಾದ ಚಿತ್ರಗಳಲ್ಲಿ ಜೀವನ ಪಾಠ ಹೇಳಿದ್ದ ಸುಶಾಂತ್ ಮಾತ್ರ, ಆತ್ಮಹತ್ಯೆಯತ್ತ ಮನ ಮಾಡಿದ್ದು, ಅಭಿಮಾನಿಗಳಿಗೆ ಅರಗಿಸಲು ಅಸಾಧ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?