ಸುರಕ್ಷತೆಯೊಂದಿಗೆ S.V.S ಪರೀಕ್ಷಾ ಕೇಂದ್ರದಲ್ಲಿ 2 PUC ಆಂಗ್ಲ ಪರೀಕ್ಷೆ
Team Udayavani, Jun 18, 2020, 12:45 PM IST
ಕಟಪಾಡಿ: ಲಾಕ್ ಡೌನ್ ಹಿನ್ನಲೆಯಲ್ಲಿ ದ್ವಿತೀಯ ಪಿಯುಸಿ ಇಂಗ್ಲೀಷ್ ಪಠ್ಯ ಪರೀಕ್ಷೆಯು ಬಾಕಿ ಉಳಿದಿದ್ದು ಅದನ್ನು ಇಂದು ಕಟಪಾಡಿ s.v.s. ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿದೆ.ಮುಂಜಾಗ್ರತಾ ಕ್ರಮವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಮಾಸ್ಕನ್ನು ಕಡ್ಡಾಯಗೊಳಿಸಿ, ಮತ್ತು ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವಿದ್ಯಾರ್ಥಿಗಳನ್ನು ಸಾಕಷ್ಟು ಸುರಕ್ಷತಾ ಕ್ರಮ ಕೈಗೊಂಡಿರುತ್ತಾರೆ.
ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯರು ಆಶಾ ಕಾರ್ಯಕರ್ತೆಯರು ಗರೋಡಿ ಜವನೆರ್ ತಂಡದ ಸದಸ್ಯರು ಸ್ಕೌಟ್ಸ್-ಗೈಡ್ಸ್ ಅಧಿಕಾರಿಗಳು ಆಡಳಿತ ಮಂಡಳಿ ಅಧ್ಯಾಪಕ ವೃಂದ ಸುರಕ್ಷತಾ ಕ್ರಮಗಳನ್ನು ಕಾಯ್ದುಕೊಳ್ಳುವಲ್ಲಿ ಸಹಕಾರವನ್ನು ನೀಡಿರುತ್ತಾರೆ