ಶಾಹಿದ್ ಅಫ್ರಿದಿ ಚೇತರಿಕೆ: ಜಾಲತಾಣಿಗರ ವಿರುದ್ಧ ಅಸಮಾಧಾನ
Team Udayavani, Jun 19, 2020, 10:07 PM IST
ಕರಾಚಿ: ಪಾಕಿಸ್ಥಾನದ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ ಕೋವಿಡ್-19 ಸೋಂಕಿಗೆ ಒಳಗಾಗಿದ್ದು, ಈಗ ಚೇತರಿಸಿ ಕೊಳ್ಳುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಇದಕ್ಕೆ ವಿರುದ್ಧವಾದ ಸುದ್ದಿಗಳು ಹರಿ ದಾಡುತ್ತಿವೆ. ಅಫ್ರಿದಿ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂಬ ಸುದ್ದಿ ವೈರಲ್ ಆಗಿದೆ. ಸಹಜ ವಾಗಿಯೇ ಕ್ರಿಕೆಟ್ ಅಭಿಮಾನಿಗಳು ಕಂಗಾಲಾಗಿದ್ದಾರೆ.
ಆದರೀಗ ಸ್ವತಃ ಅಫ್ರಿದಿಯೇ ಇದಕ್ಕೆಲ್ಲ ಸ್ಪಷ್ಟನೆ ನೀಡಿದ್ದು, “ನನ್ನ ಆರೋಗ್ಯದಲ್ಲಿ ಸುಧಾರಣೆ ಆಗುತ್ತಿದೆ. ಈ ಸಾಮಾಜಿಕ ಜಾಲತಾಣಿ ಗರನ್ನು ಅಲ್ಲಾಹು ಚೆನ್ನಾಗಿಟ್ಟಿರಲಿ’ ಎಂದಿದ್ದಾರೆ.
“ಇಂಥ ಊಹಾಪೋಹಗಳು ಹೇಗೆ ಹಬ್ಬುತ್ತವೋ ತಿಳಿಯದು. ನನ್ನ ಆರೋಗ್ಯ ವಿಚಾರಿಸಿ ವಿಶ್ವ ದೆಲ್ಲೆಡೆಯಿಂದ ದಿನವೂ ನೂರಾರು ಕರೆಗಳು ಬರುತ್ತಿವೆ. ಶೀಘ್ರ ಚೇತರಿಕೆ ಹಾರೈಸಿ ಅದೆಷ್ಟೋ ಸಂದೇಶಗಳೂ ಬರುತ್ತಿವೆ. ನನ್ನ ಆರೋಗ್ಯದಲ್ಲಿ ಸುಧಾರಣೆ ಆಗುತ್ತಿದೆ. ಸದ್ಯದಲ್ಲೇ ನನ್ನ ಎಂದಿನ ಕರ್ತವ್ಯಕ್ಕೆ ಮರಳಲಿದ್ದೇನೆ’ ಎಂದು ಅಫ್ರಿದಿ ಹೇಳಿದ್ದಾರೆ.