ತೆರವಾಗದ ಮೃತ್ಯುಂಜಯ ನದಿ ಹೂಳು

5 ಮೀ. ಎತ್ತರ ಮರಳು ಸಂಗ್ರಹ ; ಸೇತುವೆಗೆ ಹಾನಿ ಸಾಧ್ಯತೆ

Team Udayavani, Jun 20, 2020, 5:10 AM IST

ತೆರವಾಗದ ಮೃತ್ಯುಂಜಯ ನದಿ ಹೂಳು

ಮುಂಡಾಜೆ: ಚಾರ್ಮಾಡಿಯಿಂದ ಮುಂಡಾಜೆ ಮೂಲಕ ಕಲ್ಮಂಜ ವಾಗಿ ಹರಿಯುವ ಮೃತ್ಯುಂಜಯ ನದಿಯಲ್ಲಿ ಕಳೆದ ಮಳೆಗಾಲ ಪ್ರವಾಹ ದೊಂದಿಗೆ ಬಂದ ಮರಳು ತುಂಬಿ ಕೊಂಡಿದ್ದು, ಅಪಾಯ ಆಹ್ವಾನಿಸುತ್ತಿದೆ.

ಮಂಗಳೂರು-ಮೂಡಿಗೆರೆ ರಾಜ್ಯ ಹೆದ್ದಾರಿಯ ಮುಂಡಾಜೆ ಸೇತುವೆ ಬಳಿ ಮೃತ್ಯುಂಜಯ ನದಿಯಲ್ಲಿ ಸುಮಾರು 200 ಮೀ. ದೂರದವರೆಗೆ ಸುಮಾರು 5 ಮೀ. ಎತ್ತರಕ್ಕೆ ಮರಳು ಬಂದು ಬಿದ್ದಿದ್ದು, ನದಿ ಹರಿಯುವ ದಿಕ್ಕನ್ನೇ ಬದಲಾಯಿಸಿದೆ. ಸೇತುವೆ ಬಳಿ ನೀರು ಹರಿದು ಬರುವ ಸ್ಥಳದಲ್ಲಿರುವ ಮರಳು ನಿಂತಿದ್ದು, ಈ ಮಳೆಗಾಲದಲ್ಲಿ ಸೇತುವೆಗೆ ಹಾನಿ ಯಾಗುವ ಸಾಧ್ಯತೆ ಇದೆ. ಈ ಸೇತುವೆಗೆ ಹಾನಿ ಸಂಭವಿಸಿ ರಸ್ತೆ ಹಾನಿಯಾದರೆ, ಚಾರ್ಮಾಡಿ ಮೂಲಕ ವಾಹನ ಸಂಚಾರ ಸ್ಥಗಿತಗೊಳ್ಳ‌ಬಹುದು. ಕೆಳಭಾಗದಲ್ಲಿರುವ ಮುಂಡಾಜೆ ವಾಳ್ಯ, ಕಲ್ಮಂಜ ಭಾಗದ ತೋಟಗಳಿಗೆ ಮತ್ತೆ ಪ್ರವಾಹದೊಂದಿಗೆ ಮರಳು ನುಗ್ಗುವ ಸಾಧ್ಯತೆಯಿದೆ. ಮರಳು ತೆರವು ಬಗ್ಗೆ ವಿಚಾರಿಸಿದರೆ, ಒಂದು ಇಲಾಖೆ ಇನ್ನೊಂದು ಇಲಾಖೆಯತ್ತ ಬೆರಳು ತೋರಿಸುತ್ತಿದೆ.

ಕಳೆದ ಮಳೆಗಾಲದಲ್ಲಿ ಬಂದ ಮರಳು ತೋಟಗಳಲ್ಲಿ ಹುದುಗಿದೆ. ಭೂ ಮತ್ತು ಗಣಿ ವಿಜ್ಞಾನ ಇಲಾಖೆಯಿಂದ ತೋಟಗಳಿಂದ ಮರಳು ಸಾಗಾಟ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ ಇದನ್ನು ದುರುಪಯೋಗಪಡಿಸಿ ತೋಟಗಳಲ್ಲಿ ರಸ್ತೆ ನಿರ್ಮಿಸಿ ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳಿಂದ ಅವ್ಯಾಹತವಾಗಿ ಮರಳು ಸಾಗಾಟ ನಡೆದಿದೆ ಎಂಬ ಆರೋಪವಿದೆ.

ಸರಕಾರದ ಹಣ ಪೋಲು
ಕಳೆದ ವರ್ಷದ ಪ್ರವಾಹದ ಸಮಯ ಕೃಷಿ ತೋಟಗಳಿಗೆ ನುಗ್ಗಿದ ಮರಳು ತೆರವಿಗೆ ಸರಕಾರ ಈ ಭಾಗದ ಪ್ರವಾಹ ಪೀಡಿತರಿಗೆ ಪ್ರತಿ ಎಕ್ರೆಗೆ 11,000 ರೂ.ಗೂ ಹೆಚ್ಚಿನ ಪರಿಹಾರ ಮೊತ್ತ ಮಂಜೂರು ಮಾಡಿತ್ತು. ಈಗ ನದಿಯಲ್ಲಿ ತುಂಬಿರುವ ಮರಳು ಈ ಬಾರಿ ಮತ್ತೆ ತೋಟಗಳಿಗೆ ಬಂದು ಬಿದ್ದರೆ ಮತ್ತೆ ಪರಿಹಾರ ನೀಡಬೇಕಾಗುತ್ತದೆ. ನದಿ ಪಾತ್ರಗಳಲ್ಲಿರುವ ಮರಳನ್ನು ಸರಕಾರದ ವತಿಯಿಂದ ತೆರವುಗೊಳಿಸಿದರೆ ಸರಕಾರದ ಹಣ ಪರಿಹಾರ ರೂಪದಲ್ಲಿ ಪೋಲಾಗುವುದು ತಪ್ಪುತ್ತದೆ.

ತೆರವಿಗೆ ಸೂಚನೆ
ಸೇತುವೆಯ ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಸೇತುವೆಯ ಆಸು ಪಾಸಿನಲ್ಲಿರುವ ಮರಳನ್ನು ತೆರವು ಗೊಳಿಸುವಂತೆ ಸೂಚಿಸಲಾಗಿದೆ.
-ನಿರಂಜನ್‌, ಅಡಿಶನಲ್‌ ಡೈರೆಕ್ಟರ್‌,
ಭೂ ಮತ್ತು ಗಣಿ ವಿಜ್ಞಾನ ಇಲಾಖೆ, ಮಂಗಳೂರು

ತೆರವು ಅಗತ್ಯ
ಕಳೆದ ಮಳೆಗಾಲದಲ್ಲಿ ತೋಟಕ್ಕೆ ನೆರೆಯೊಂದಿಗೆ ನುಗ್ಗಿದ ಮರಳಿನಿಂದ ಸಾಕಷ್ಟು ನಷ್ಟ ಉಂಟಾಗಿದೆ. ಸೇತುವೆ ಬಳಿ ಇರುವ ಮರಳನ್ನು ತೆರವುಗೊಳಿಸದಿದ್ದಲ್ಲಿ ಈ ಮಳೆ ಗಾಲದಲ್ಲಿ ಪ್ರವಾಹ ಉಂಟಾದರೆ ಅಡಿಕೆ ತೋಟಗಳು ಸಂಪೂರ್ಣ ನಾಶ ವಾಗಲಿವೆ. ಮರಳನ್ನು ಕೂಡಲೇ ತೆರವು ಗೊಳಿಸುವುದು ಅವಶ್ಯ.
– ಶಶಿಧರ ಠೊಸರ್‌
ಸಕೃಷಿಕರು, ಮುಂಡಾಜೆ

ಟಾಪ್ ನ್ಯೂಸ್

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ

Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ

ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.