ಕೋವಿಡ್ ಸೋಂಕಿಗೆ ಉಳ್ಳಾಲ ಅಝಾದ್ನಗರದ ಮಹಿಳೆ ಬಲಿ ?
Team Udayavani, Jun 24, 2020, 12:10 PM IST
ಉಳ್ಳಾಲ: ನಿನ್ನೆಯಷ್ಟೇ ಕೋವಿಡ್ ಸೋಂಕು ದೃಢ ಪಟ್ಟ ಉಳ್ಳಾಲ ಅಝಾದ್ನಗರದ ಮಹಿಳೆಯೊಬ್ಬರು ಇಂದು ಮೃತಪಟ್ಟಿದ್ದು ಅವರು ಕೋವಿಡ್ ಸೋಂಕಿನಿಂದಲೇ ಮೃತಪಟ್ಟಿರಬಹುದೆಂದು ಹೇಳಲಾಗಿದೆ.
ಉಳ್ಳಾಲ ಅಝಾದ್ನಗರದ 57ರ ಹರೆಯದ ಮಹಿಳೆಗೆ 10 ದಿನಗಳ ಹಿಂದೆ ಬೇದಿ(ಲೂಸ್ಮೋಷನ್) ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಅವರು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎಂಟು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಎರಡು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ದಾಖಲಾದ ಸಂದರ್ಭದಲ್ಲಿ ಮಹಿಳೆಯ ಗಂಟಲುದ್ರವ ಪರೀಕ್ಷೆ ತೆಗೆದುಕೊಂಡಿದ್ದು ನಿನ್ನೆ ದ್ರವ ಪರೀಕ್ಷೆಯಲ್ಲಿ ಪಾಸೆಟಿವ್ ಬಂದ ಹಿನ್ನಲೆಯಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ ಬುಧವಾರ ಮಹಿಳೆ ಸಾವನ್ನಪ್ಪಿದ್ದಾರೆ ಈ ಕುರಿತು ಅರೋಗ್ಯ ಇಲಾಖೆ ಹಾಗೂ ಶಾಸಕರು ಕೋವಿಡ್ ಸೋಂಕಿನಿಂದಲೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದು, ಅರೋಗ್ಯ ಇಲಾಖೆಯಿಂದ ಅಧಿಕೃತ ಹೇಳಿಕೆ ಬಾಕಿ ಇದೆ.
ಟ್ರಾವೆಲ್ ಹಿಸ್ಟರಿ ನಿಗೂಢ : ಮಹಿಳೆ ಮನೆ ಬಿಟ್ಟು ಎಲ್ಲೂ ಹೊರಗೆ ಹೋಗಿಲ್ಲ, ಮನೆಯಲ್ಲಿರುವವರು ಯಾರೂ ಹೊರಗಿನಿಂದ ಬಂದಿಲ್ಲ ಆದರೆ ಮಹಿಳೆಗೆ ಸೋಂಕು ಹೇಗೆ ತಗುಲಿದೆ ಎನ್ನುವುದೇ ನಿಗೂಢವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಎಂಟು ದಿನಗಳ ಕಾಲ ಚಿಕಿತ್ಸೆಯಲ್ಲಿರುವಾಗ ಸೋಂಕು ತಗುಲಿರುವ ಸಾಧ್ಯತೆಯ ಬಗ್ಗೆಯೂ ಆರೋಗ್ಯ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ.