ಕೋವಿಡ್ ವೈರಸ್ ಕೊಲ್ಲುವ ಪ್ಲ್ರಾನ್‌ ರೆಡಿ!

ವೈರಸ್‌ ನಿರ್ಮೂಲನೆಗೆ ಹೊಸ ವಿಧಾನ ಕೊನೆಗೂ ಕಂಡು ಹಿಡಿದ ಸಂಶೋಧಕರು ; ಡೆಕಾಯ್‌ ಪಾಲಿಮರ್‌ ತಂತ್ರಜ್ಞಾನದ ಸಹಾಯದಿಂದ ವೈರಾಣುವಿನ ಹತ್ಯೆ

Team Udayavani, Jun 27, 2020, 7:10 AM IST

ಕೋವಿಡ್ ವೈರಸ್ ಕೊಲ್ಲುವ ಪ್ಲ್ರಾನ್‌ ರೆಡಿ!

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ವಿಶ್ವಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿಪಡೆದ, ಯಾವುದೇ ಮುನ್ಸೂಚನೆ ನೀಡದೇ ದೇಹವನ್ನು ಆಕ್ರಮಿಸುವ ಕೋವಿಡ್ 19 ವೈರಸ್‌ಗೆ ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ವಿಶ್ವಾದ್ಯಂತ ಪ್ರಯತ್ನಗಳು ಮುಂದುವರಿದಿದೆ.

ಇದರ ನಡುವೆಯೇ, ಸಂಶೋಧಕರ ತಂಡವೊಂದು ಈ ವೈರಸ್‌ ಅನ್ನೇ ಮೋಸದ ಬಲೆಗೆ ಬೀಳಿಸಿ ಕೊಲ್ಲುವಂಥ ವಿಧಾನವ‌ನ್ನು ಪತ್ತೆಹಚ್ಚಿದೆ.

ಮಾನವನ ದೇಹದೊಳಗೆಯೇ ಸಾರ್ಸ್‌ ಕೋವ್‌-2ನ್ನು (ಕೋವಿಡ್ 19 ವೈರಸ್‌) ಪ್ರತ್ಯೇಕಿಸಿ ನಾಶ ಮಾಡುವಂಥ ಹೊಸ ತಂತ್ರಜ್ಞಾನವನ್ನು ಈ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಈ ಸಂಶೋಧನೆಗೆ ಸಂಬಂಧಿಸಿದ ವಿವರವು ನ್ಯಾನೋ ವಿಜ್ಞಾನಕ್ಕೆ ಸಂಬಂಧಿಸಿದ ನ್ಯಾನೋ ಲೆಟರ್ಸ್‌ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಡೆಕಾಯ್‌ ಪಾಲಿಮರ್‌ಗಳ ಸಹಾಯದಿಂದ ಸಂಶೋಧನೆ ಕೈಗೊಳ್ಳಲಾಗಿದ್ದು, ಅಪಾಯಕಾರಿಯಲ್ಲದ ಕೃತಕ ಕಣಗಳು ಕೋವಿಡ್ 19 ವೈರಸ್‌ ಅನ್ನು ಆಕರ್ಷಿಸಿ, ತನ್ನ ಬಲೆಗೆ ಬೀಳಿಸಿ, ನಾಶಮಾಡುವಲ್ಲಿ ಯಶಸ್ವಿಯಾಗಿವೆ.

ಏನಿದು ಡೆಕಾಯ್‌ ಟೆಕ್ನಿಕ್‌?: ಡೆಕಾಯ್‌ ಎಂದರೆ ಬಲೆಗೆ ಬೀಳಿಸುವುದು ಎಂದರ್ಥ. ಇಲ್ಲಿ ಮೊದಲಿಗೆ ಅತಿ ಸೂಕ್ಷ್ಮವಾದ ಜೈವಿಕ-ಸ್ನೇಹಿ ಪಾಲಿಮರ್‌ ಅನ್ನು ಸೃಷ್ಟಿಸಲಾಗುತ್ತದೆ. ನಂತರ ಅದನ್ನು ಶ್ವಾಸಕೋಶದ ಅಥವಾ ಪ್ರತಿರಕ್ಷಣಾ ವ್ಯವಸ್ಥೆಯ ಸಕ್ರಿಯ ಅಂಗಾಂಶದ ಕೋಶಗಳಿಂದ ಕವರ್‌ ಮಾಡಲಾಗುತ್ತದೆ.

ಇದನ್ನೂ ಓದಿ: ವಿದ್ಯಾರ್ಥಿನಿಯ ಮೇಲೆ ಸಂಬಂಧಿಯಿಂದ ಅತ್ಯಾಚಾರ ಯತ್ನ: ಧೃತಿಗೆಡದೆ ಪರೀಕ್ಷೆ ಬರೆದ ದಿಟ್ಟೆ

ಹೀಗಾಗಿ, ಹೊರಗಿನಿಂದ ನೋಡುವಾಗ ಈ ಪಾಲಿಮರ್‌ಗಳು (ನ್ಯಾನೋ ಕಣಗಳು) ಮಾನವನ ದೇಹದಲ್ಲಿನ ಸಕ್ರಿಯ ಜೀವಕೋಶದಂತೆಯೇ ಕಾಣುತ್ತದೆ. ಕೋವಿಡ್ 19 ವೈರಸ್‌ ಯಾಮಾರುವುದೇ ಇಲ್ಲಿ. ಮನುಷ್ಯದ ದೇಹದೊಳಗಿರುವ ಈ ಪಾಲಿಮರ್‌ ಅನ್ನು ನೈಜ ಜೀವಕೋಶವೆಂದೇ ಭಾವಿಸಿ, ಆ ಕೋಶದೊಳಗೆ ಕೊರೊನಾವೈರಸ್‌ ದಾಳಿಯಿಡುತ್ತದೆ. ಒಂದು ಬಾರಿ ಕೋಶದೊಳಗೆ ವೈರಸ್‌ ಹೊಕ್ಕಿತೆಂದರೆ ಅದು ಟ್ರ್ಯಾಪ್‌ ಆಯಿತು ಎಂದೇ ಅರ್ಥ.

ಜೀವಕೋಶದೊಳಗೆ ಏನಾಗುತ್ತದೆ?: ಸಾಮಾನ್ಯವಾಗಿ ಸೋಂಕು ಉಂಟಾದಾಗ ವೈರಸ್‌ ಮಾನವನ ಜೀವಕೋಶದೊಳಗೆ ಪ್ರವೇಶಿಸಿ, ಅಲ್ಲಿ ಅಗಾಧವಾಗಿ ತನ್ನ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತದೆ. ಜತೆಗೆ, ವೈರಸ್‌ ಒಳಗೇ ಇದ್ದುಕೊಂಡು ಆ ಜೀವಕೋಶವನ್ನು ತಿನ್ನಲು ಆರಂಭಿಸುತ್ತದೆ. ಬಳಿಕ ಅಲ್ಲಿಂದ ನಿರ್ಗಮಿಸಿ ಮತ್ತೂಂದು ಜೀವಕೋಶದ ಮೇಲೆ ದಾಳಿ ಮಾಡುತ್ತದೆ.

ಈ ರೀತಿ ವೈರಸ್‌ ಜೀವಕೋಶಗಳನ್ನು ನಾಶ ಮಾಡುತ್ತಾ ಸಾಗುತ್ತದೆ. ಆದರೆ, ಇಲ್ಲಿ ಡೆಕಾಯ್‌ ಪಾಲಿಮರ್‌ಗಳು ನೈಜ ಹಾಗೂ ಸಜೀವ ಜೀವಕೋಶಗಳಾಗಿರುವುದಿಲ್ಲ. ಹೀಗಾಗಿ ಇದರೊಳಗೆ ಹೋಗುವ ರೋಗಕಾರಕ ವೈರಸ್‌ಗೆ ಒಳಗೆ ತಿನ್ನಲು ಏನೂ ಸಿಗದೇ, ತನ್ನ ಸಂಖ್ಯೆ ವೃದ್ಧಿಸಿಕೊಳ್ಳಲೂ ಆಗದೇ, ಕೊನೆಗೆ ಸಾವನ್ನಪ್ಪುತ್ತದೆ.

ಅಪಾಯಕಾರಿಯಲ್ಲ: ಶ್ವಾಸಕೋಶದಲ್ಲಿನ ಜೀವಕೋಶಗಳಿಗೆ ಕೋವಿಡ್ 19 ವೈರಸ್‌ ಬೇಗನೆ ಆಕರ್ಷಿತವಾಗುವ ಕಾರಣ, ಅದನ್ನು ಬಲೆಗೆ ಬೀಳಿಸುವ ವಿಧಾನವನ್ನು ಅನುಸರಿಸುವಾಗ ಶ್ವಾಸಕೋಶದ ಅಂಗಾಂಶಗಳ ಪೊರೆಯನ್ನೇ ಬಳಸುವುದು ಸೂಕ್ತ ಎನ್ನುತ್ತಾರೆ ವಿಜ್ಞಾನಿಗಳು. ಕೋವಿಡ್ 19 ವೈರಸ್‌ ಅನ್ನು ಸೆಳೆಯಲು ಈ ಪಾಲಿಮರ್‌ಗಳು ನ್ಯಾನೋ ಸ್ಪಾಂಜ್‌ಗಳಾಗಿ ಕೆಲಸ ಮಾಡುತ್ತವೆ.

ವೈರಸ್‌ ನಾಶವಾದ ಬಳಿಕ ಅದರ ಅವಶೇಷವನ್ನು ಮಾನವನ ಪ್ರತಿರಕ್ಷಣಾ ವ್ಯವಸ್ಥೆಯು ಹೇಗೆ ಹೊರಹಾಕುತ್ತದೋ ಅದೇ ರೀತಿ ನೈಸರ್ಗಿಕ ಪ್ರಕ್ರಿಯೆ ಮೂಲಕ ಈ ಪಾಲಿಮರ್‌ ಅನ್ನೂ ಹೊರಹಾಕುತ್ತದೆ. ಹಾಗಾಗಿ ಪಾಲಿಮರ್‌ ಬಳಕೆಯು ದೇಹಕ್ಕೆ ಅಪಾಯಕಾರಿ ಆಗಲಾರದು ಎಂದೂ ವಿಜ್ಞಾನಿಗಳು ಹೇಳಿದ್ದಾರೆ.

ಎಬೋಲಾದಂಥ ಇತರೆ ಸೋಂಕುಗಳ ನಿರ್ಮೂಲನೆಗೂ ಈ ವಿಧಾನ ಅನುಸರಿಸಬಹುದಾಗಿದೆ. ಈಗ ಪ್ರಯೋಗಾಲಯದಲ್ಲಿ ಈ ವಿಧಾನ ಯಶಸ್ವಿಯಾಗಿದ್ದು, ಮುಂದಿನ ಹಂತದಲ್ಲಿ ಪ್ರಾಣಿಗಳ ಮೇಲೆ, ನಂತರ ಮಾನವನ ಮೇಲೆ ಇದರ ಪ್ರಯೋಗ ನಡೆಸಲಾಗುತ್ತದೆ ಎಂದೂ ವಿಜ್ಞಾನಿಗಳು ತಿಳಿಸಿದ್ದಾರೆ.

ಕೋವಿಡ್ 19 ವೈರಸ್ ಮೆದುಳಿನ ಮೇಲೆ ಆಕ್ರಮಣ
ಕೋವಿಡ್ 19 ವೈರಸ್ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ಬರೀ ಶಾರೀರಿಕ ಬಾಧೆ ಮಾತ್ರವಲ್ಲ, ಮಾನಸಿಕ ಏರುಪೇರುಗಳು ದೊಡ್ಡ ಮಟ್ಟದಲ್ಲಿಯೇ ಸಂಭವಿಸುತ್ತವೆ. ಹೀಗೆಂದು ಇಂಗ್ಲೆಂಡ್‌ನ‌ಲ್ಲಿ ನಡೆದ ಅಧ್ಯಯನವೊಂದರಲ್ಲಿ ಗೊತ್ತಾಗಿದೆ.

125 ರೋಗಿಗಳನ್ನು ಅಧ್ಯಯನ ನಡೆಸಿದ ವರದಿ ಲ್ಯಾನ್ಸೆಟ್‌ ಸೈಕಿಯಾಟ್ರಿ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಅದರಲ್ಲಿ ಹಲವು ಗಂಭೀರ ಸಂಗತಿಗಳು ಪ್ರಸ್ತಾಪವಾಗಿವೆ. ಮುಖ್ಯವಾಗಿ ಮೆದುಳಿನ ಮೇಲೆ ಆಕ್ರಮಣವಾಗುತ್ತದೆ. ಅಂದರೆ ರೋಗಿ ಪಾರ್ಶ್ವವಾಯುವಿಗೆ ತುತ್ತಾಗಬಹುದು, ಮಾನಸಿಕ ಅಸ್ವಸ್ಥತೆ, ಬುದ್ಧಿಮಾಂದ್ಯತೆಯನ್ನು ಎದುರಿಸಬಹುದು.

ಇನ್ನೂ ಒಂದು ಸಮಸ್ಯೆಯೆಂದರೆ ವಿಪರೀತ ಉಷ್ಣಾಂಶ. ಈ ಬಗ್ಗೆ ಇನ್ನೂ ವಿಸ್ತೃತ ಅಧ್ಯಯನ ನಡೆದರೆ ಕೋವಿಡ್ 19 ವೈರಸ್ ಗೆ ಚಿಕಿತ್ಸೆ ನೀಡಲು ಬಹಳ ಸುಲಭವಾಗುತ್ತದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಪ್ರೊಫೆಸರ್‌ ಸಾರಾ ಪೆಟ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.