ಎಂಜಿನಿಯರಿಂಗ್‌ ಕಾಲೇಜು ಮುಚ್ಚಿದರೆ ಧರಣಿ

Team Udayavani, Jun 27, 2020, 5:59 AM IST

nginiring-revanna

ಹಾಸನ: ತಾಲೂಕಿನ ಮೊಸಳೆಹೊಸಹಳ್ಳಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳನ್ನು ಹಾಸನದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿಗೆ ವರ್ಗಾಯಿಸುವಂತೆ ಸರ್ಕಾರ ಆದೇಶ ನೀಡುವ ಮೂಲಕ ಇಲ್ಲಿನ ಕಾಲೇಜು  ಮುಚ್ಚುವ ಹೊನ್ನಾರ ನಡೆಯುತ್ತಿದೆ. ಒಂದು ವೇಳೆ ಮೊಸಳೆಹೊಸಹಳ್ಳಿ ಕಾಲೇಜು ಮುಚ್ಚಿದರೆ ಸಿಎಂ ಮನೆ ಮುಂದೆ ಧರಣಿ ಕೂರಲಾಗುವುದು ಎಂದು ಶಾಸಕ ಎಚ್‌.ಡಿ. ರೇವಣ್ಣ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು, ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜಿ. ವೆಂಕಟೇಶಯ್ಯ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬರೆದಿರುವ ಪತ್ರದಲ್ಲಿ ಈ  ಉಲ್ಲೇಖವಿದೆ ಎಂದರು. ಮೊಸಳೆ ಹೊಸಹಳ್ಳಿ ಕಾಲೇಜಿನಲ್ಲಿ 173 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಕಾಲೇಜಿನಿಂದ ಗ್ರಾಮೀಣ ಭಾಗದ ಸಾಕಷ್ಟು ಬಡ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಅನುಕೂಲವಾಗಿದೆ ಎಂದು  ಹೇಳಿದರು.

ದ್ವೇಷದ ರಾಜಕಾರಣ: ದ್ವೇಷದ ರಾಜಕಾರಣದಿಂದ ಕಾಲೇಜನ್ನು ಹಾಸನದ ಎಂಜಿನಿಯರ್‌ ಕಾಲೇಜಿಗೆ ವಿಲೀನ ಗೊಳಿಸುವ ಹುನ್ನಾರ ನಡೆಸಲಾಗಿದೆ, ಯಾವುದೇ ಕಾರಣಕ್ಕೂ ಕಾಲೇಜು ಇಲ್ಲಿಂದ ಸ್ಥಳಾಂತ ಆಗಲು ಬಿಡುವುದಿಲ್ಲ,  ರಾಜ್ಯದಲ್ಲಿ ಹದಿಮೂರು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಇವೆ ಮೊಸಳೆ ಹೊಸಹಳ್ಳಿ ಕಾಲೇಜಿಗಿಂತಲೂ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿರುವ ಕಾಲೇಜು  ಗಳನ್ನು ಬಿಟ್ಟು ನನ್ನ ಕ್ಷೇತ್ರದ ಕಾಲೇಜನ್ನೇ ಗುರಿ ಮಾಡಲಾಗಿದೆ  ಎಂದರು.

ನಮಗೂ ಕಾಲ ಬರಲಿದೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಶಾಶ್ವತವಾಗಿ ಇರುವುದಿಲ್ಲ. ನಮಗೂ ಕಾಲ ಬರಲಿದೆ. ಇಳಿ ವಯಸ್ಸಿನಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ದ್ವೇಷದ ರಾಜಕಾರಣ ಮಾಡಬಾರದು, ಈ ಕಾಲೇಜು  ಮುಚ್ಚುವುದ ಹಿಂದೆ ಹಾಗೂ ಸಿಎಂಗೆ ಇಲ್ಲಸಲ್ಲದನ್ನು ಕಿವಿಗೆ ತುಂಬಲಾಗುತ್ತಿದೆ. ಇದಕ್ಕೆ ಕಾಲವೇ ಉತ್ತರ ನೀಡಲಿದೆ ಎಂದು ತಿಳಿಸಿದರು.

ಬೀದಿಗಿಳಿದು ಹೋರಾಟ: ಶಿಕ್ಷಣ ಸಚಿವರು ಕಾಲೇಜು ಸ್ಥಳಾಂತರಿಸಲು ಮಾಡಲು ದ್ವೇಷದ ರಾಜಕಾರಣ ಮಾಡಬಾರದು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ಅನೇಕ ಕಾಮಗಾರಿಗಳು ನಿಂತು ಹೋಗಿವೆ. ನಿರಾವರಿ ಇಲಾಖೆಯ ಯಾವುದೇ ಕೆಲಸ ನಡೆದಿಲ್ಲ. ಈ ಎಲ್ಲಾ ವಿಚಾರ ಕುರಿತು ಸಿಎಂಗೆ ಪತ್ರ ಬರೆಯಲಾಗುವು ದು ಸಕಾರಾತ್ಮಕ ಪ್ರತಿಕ್ರಿಯೆ ಸಿಗದಿದ್ದರೆ ರಸ್ತೆಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ರೈತರ ಒಕ್ಕಲೆಬ್ಬಿಸುವ ಹುನ್ನಾರ: ರಾಜ್ಯ ಸರ್ಕಾರ ಭೂ ಮಾಫಿಯಾ, ರಿಯಲ್‌ ಎಸ್ಟೇಟ್‌, ಖಾಸಗಿ ಶಿಕ್ಷಣ ಸಂಸ್ಥೆಗಳು, ಕೈಗಾರಿ ಕೋದ್ಯಮಿಗಳ, ಬಿಲ್ಡರ್‌ ಜತೆ ಶಾಮೀಲಾಗಿದೆ, ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಾಮಾಣಿಕ ಅಧಿಕಾರಿಗಳಿಗೆ ತೊಂದರೆ: ಜಿಲ್ಲೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಕೆಲಸ ಮಾಡಲು ಅವಕಾಶ ಸಿಗುತ್ತಿಲ್ಲ. ಚನ್ನರಾಯಪಟ್ಟಣದ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಒಬ್ಬರು ಅಲ್ಲಿಗೆ ವರ್ಗಾವಣೆ ಮಾಡಿಸಿಕೊಳ್ಳಲು ತಾವು  1.50 ಲಕ್ಷ ರೂ. ಕೊಟ್ಟಿರುವುದಾಗಿ ಹೇಳುತ್ತಾರೆ. ಸಕಲೇಶಪುರದಲ್ಲಿಯೂ ಪ್ರಮಾಣಿಕ ಅಧಿಕಾರಿಗಳನ್ನು ಕೆಲಸ ಮಾಡಲು ಬಿಡುತ್ತಿಲ್ಲ. ಯಾವುದೇ ಕಾಮಗಾರಿಗೂ ಅನುಮೋದನೆ ಪಡೆಯಬೇಕಾದರೆ 5 ರಿಂದ 10 ಪರ್ಸೆಂಟ್‌ ಕಮಿಷನ್‌  ನೀಡಬೇಕಿದೆ. ಸಮ್ಮಿಶ್ರ ಸರ್ಕಾರದ ಆಡಳಿತವಾಧಿಯಲ್ಲಿ ನಮ್ಮನ್ನು ಪರ್ಸಂಟೇಜ್‌ ಸರ್ಕಾರ ಎಂದು ಟೀಕಿಸುತ್ತಿದ್ದರು, ಈಗ ಯಾವುವು ಪರ್ಸೆಂಟೆಸ್‌ ಸರ್ಕಾರ ಎಂಬುದರ ಬಗ್ಗೆ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ರೇವಣ್ಣ  ವ್ಯಂಗ್ಯವಾಡಿದರು.

ಹಾಸನ ಗಂಡು ಮೆಟ್ಟಿದ ನಾಡು, ನಮ್ಮ ಜಿಲ್ಲೆಯವರನ್ನು ಎದುರು ಹಾಕಿಕೊಂಡರೆ ಯಾವ ಸರ್ಕಾರವು  ಉಳಿಯುವುದಿಲ್ಲ. ಹಿಂದೆ ದೊಡ್ಡಹಳ್ಳಿ ಗೋಲಿಬಾರ್‌ ನಡೆದು ಅಂದಿನ ಸರ್ಕಾರ ಉರುಳಿದ್ದು ಎಲ್ಲರಿಗೂ ಗೊತ್ತಿದೆ.
-ಎಚ್‌.ಡಿ. ರೇವಣ್ಣ, ಶಾಸಕ

ಟಾಪ್ ನ್ಯೂಸ್

ಜಿಗಿದ ಷೇರು ಪೇಟೆ;  ಒಂದೇ ದಿನ ಬಿಎಸ್‌ಇ ಸೆನ್ಸೆಕ್ಸ್‌ 2,507 ಅಂಕ ಜಿಗಿತ

ಜಿಗಿದ ಷೇರು ಪೇಟೆ;  ಒಂದೇ ದಿನ ಬಿಎಸ್‌ಇ ಸೆನ್ಸೆಕ್ಸ್‌ 2,507 ಅಂಕ ಜಿಗಿತ

MLC Elections; ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ

MLC Elections; ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ

Punjalkatte ಬಿರುಗಾಳಿ: ಇರ್ವತ್ತೂರು ಪರಿಸರದಲ್ಲಿ ಅಪಾರ ಹಾನಿ

Punjalkatte ಬಿರುಗಾಳಿ: ಇರ್ವತ್ತೂರು ಪರಿಸರದಲ್ಲಿ ಅಪಾರ ಹಾನಿ

Rain ದ.ಕ., ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆ

Rain ದ.ಕ., ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆ

June. 7, 8ರಂದು ಮೂಡುಬಿದಿರೆಯಲ್ಲಿ “ಆಳ್ವಾಸ್‌ ಪ್ರಗತಿ-2024 ಉದ್ಯೋಗ ಮೇಳ’

June 7, 8ರಂದು ಮೂಡುಬಿದಿರೆಯಲ್ಲಿ “ಆಳ್ವಾಸ್‌ ಪ್ರಗತಿ-2024 ಉದ್ಯೋಗ ಮೇಳ’

Nalin Kumar Kateel ಮೈಸೂರು ರೈಲ್ವೇ ವಿಭಾಗಕ್ಕೆ ಮಂಗಳೂರು ಸೇರ್ಪಡೆ ಶೀಘ್ರ

Nalin Kumar Kateel ಮೈಸೂರು ರೈಲ್ವೇ ವಿಭಾಗಕ್ಕೆ ಮಂಗಳೂರು ಸೇರ್ಪಡೆ ಶೀಘ್ರ

kejriwal

AAP ಆರೋಪ; ಸಿಎಂ ಕೇಜ್ರಿಗೆ ಜೈಲಿನಲ್ಲಿ ಕೂಲರ್‌ ನೀಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD Revanna: ಸಂಕಷ್ಟದ ನಡುವೆಯೂ ರಾಜಕೀಯ ಚಟುವಟಿಕೆಗಳಲ್ಲಿ ವ್ಯಸ್ತರಾದ ಎಚ್‌.ಡಿ.ರೇವಣ್ಣ

HD Revanna: ಸಂಕಷ್ಟದ ನಡುವೆಯೂ ರಾಜಕೀಯ ಚಟುವಟಿಕೆಗಳಲ್ಲಿ ವ್ಯಸ್ತರಾದ ಎಚ್‌.ಡಿ.ರೇವಣ್ಣ

Hassan: ವಿಚಾರಣೆಯಿಂದ ತಪ್ಪಿಸಿಕೊಂಡಿರುವ ಭವಾನಿ ರೇವಣ್ಣ… ಪೊಲೀಸರ ಪರದಾಟ

Hassan: ವಿಚಾರಣೆಯಿಂದ ತಪ್ಪಿಸಿಕೊಂಡಿರುವ ಭವಾನಿ ರೇವಣ್ಣ… ಪೊಲೀಸರ ಪರದಾಟ

10-alur

Aloor: ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ಹಲ್ಲೆ

Pen drive  ಹಂಚಿಕೆ ಆರೋಪ: ನವೀನ್‌ ಗೌಡ,ಚೇತನ್‌ ಗೌಡಗೆ 14 ದಿನ ನ್ಯಾಯಾಂಗ ಬಂಧನ

Pen drive ಹಂಚಿಕೆ ಆರೋಪ: ನವೀನ್‌ ಗೌಡ,ಚೇತನ್‌ ಗೌಡಗೆ 14 ದಿನ ನ್ಯಾಯಾಂಗ ಬಂಧನ

Pendrive Case: ಜೆಡಿಎಸ್‌ ಶಾಸಕ ಎ.ಮಂಜು ವಿಚಾರಣೆ

Pendrive Case: ಜೆಡಿಎಸ್‌ ಶಾಸಕ ಎ.ಮಂಜು ವಿಚಾರಣೆ

MUST WATCH

udayavani youtube

ನಿಮ್ಮ ಮಗುವಿಗೆ Adenoid ಸಮಸ್ಯೆ ಇದೆಯೇ ಇಲ್ಲಿದೆ ಪರಿಹಾರ

udayavani youtube

ಉಳ್ಳಾಲ: ಉರುಮಣೆ ಸಮೀಪ ಬಸ್ಸುಗಳೆರಡರ ಮುಖಾಮುಖಿ ಢಿಕ್ಕಿ; ಸಣ್ಣಪುಟ್ಟ ಗಾಯ

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

ಹೊಸ ಸೇರ್ಪಡೆ

ಜಿಗಿದ ಷೇರು ಪೇಟೆ;  ಒಂದೇ ದಿನ ಬಿಎಸ್‌ಇ ಸೆನ್ಸೆಕ್ಸ್‌ 2,507 ಅಂಕ ಜಿಗಿತ

ಜಿಗಿದ ಷೇರು ಪೇಟೆ;  ಒಂದೇ ದಿನ ಬಿಎಸ್‌ಇ ಸೆನ್ಸೆಕ್ಸ್‌ 2,507 ಅಂಕ ಜಿಗಿತ

Amit Shah

FIR ನಿಂದ ಅಮಿತ್‌ ಶಾ ಹೆಸರು ಕೈಬಿಟ್ಟ ಪೊಲೀಸರು

MLC Elections; ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ

MLC Elections; ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ

Punjalkatte ಬಿರುಗಾಳಿ: ಇರ್ವತ್ತೂರು ಪರಿಸರದಲ್ಲಿ ಅಪಾರ ಹಾನಿ

Punjalkatte ಬಿರುಗಾಳಿ: ಇರ್ವತ್ತೂರು ಪರಿಸರದಲ್ಲಿ ಅಪಾರ ಹಾನಿ

NIA (2)

ISIS ಜತೆ ನಂಟು: 17 ಜನರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.