ಆಗಸ್ಟ್ 1ರಿಂದ ಆರಂಭವಾಗಲಿದೆ ಇಂಗ್ಲೆಂಡ್ ಕೌಂಟಿ ಚಾಂಪಿಯನ್ ಶಿಪ್
Team Udayavani, Jun 30, 2020, 11:40 AM IST
ಲಂಡನ್: ಇಂಗ್ಲೆಂಡ್ ನ ಕೌಂಟಿ ಚಾಂಪಿಯನ್ ಶಿಪ್ ನಡೆಸಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅನುಮತಿ ನೀಡಿದೆ. ಹೀಗಾಗಿ ಆಗಸ್ಟ್ ಒಂದರಿಂದ ಆಂಗ್ಲರ ನಾಡಿನಲ್ಲಿ ಕೌಂಟಿ ಕ್ರಿಕೆಟ್ ಆರಂಭವಾಗಲಿದೆ.
ಈ ಮೊದಲು ಕೌಂಟಿ ಚಾಂಪಿಯನ್ ಶಿಪ್ ಎಪ್ರಿಲ್ 12ರಿಂದ ಆರಂಭವಾಗಲಿತ್ತು. ಆದರೆ ಕೋವಿಡ್-19 ಸೋಂಕು ಭೀತಿಯ ಕಾರಣ ಮುಂದೂಡಲಾಗಿತ್ತು. ಈಗ ಆಗಸ್ಟ್ ಒಂದರಿಂದ ನಡೆಸಲು ಇಸಿಬಿ ಅನುಮತಿ ನೀಡಿದೆ.
ಯೋಜನಗಳು ಮತ್ತು ಪಂದ್ಯಗಳ ವೇಳಾಪಟ್ಟಿಯನ್ನು ಇನ್ನಷ್ಟೇ ಅಂತಿಮಗೊಳಿಸಲಾಗುವುದು. 18 ಪ್ರಥಮ ದರ್ಜೆ ತಂಡಗಳ ನಡುವೆ ಕೌಂಟಿ ಕ್ರಿಕೆಟ್ ಚಾಂಪಿಯನ್ ಶಿಪ್ ನಡೆಯಲಿದೆ.
ಆಟಗಾರರು, ತರಬೇತುದಾರರು, ಅಧಿಕಾರಿಗಳ ಸುರಕ್ಷತೆಯೆ ನಮ್ಮ ಪ್ರಥಮ ಆದ್ಯತೆಯಾಗಿರಲಿದೆ. ಚರ್ಚೆ ನಡೆಸಿ, ಸರ್ಕಾರದ ಸಲಹೆಗಳನ್ನು ಪಾಲಿಸಿ ಒಂದು ಉತ್ತಮ ಯೋಜನೆ ರೂಪಿಸಲಾಗುತ್ತದೆ ಎಂದು ಇಸಿಬಿ ಸಿಇಒ ಟಾಮ್ ಹ್ಯಾರಿಸನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ