ಗಣೇಶ ವಿಗ್ರಹ ತಯಾರಿಕೆಗೂ ಕೋವಿಡ್ ವಿಘ್ನ

ಸರ್ಕಾರ ಇದುವರೆಗೂ ಮಾರ್ಗಸೂಚಿ ಹೊರಡಿಸದ್ದರಿಂದ ಗಣೇಶ ವಿಗ್ರಹ ತಯಾರಕರಲ್ಲಿ ಗೊಂದಲ

Team Udayavani, Jul 13, 2020, 3:32 PM IST

ಗಣೇಶ ವಿಗ್ರಹ ತಯಾರಿಕೆಗೂ ಕೋವಿಡ್ ವಿಘ್ನ

ಚಿಕ್ಕಮಗಳೂರು: ಕೋವಿಡ್ ಸೋಂಕು ಎಲ್ಲಾ ಕ್ಷೇತ್ರಗಳ ಮೇಲೂ ತನ್ನ ಪ್ರಭಾವ ಬೀರಿದ್ದು, ಅನೇಕರ ಉದ್ಯೋಗವನ್ನು ಕಸಿದುಕೊಂಡಿದೆ. ಬದುಕು ಅತಂತ್ರಗೊಳಿಸಿದೆ. ಅದೇ ರೀತಿ ಗಣೇಶ ವಿಗ್ರಹ ರಚನಕಾರರ ಬದುಕನ್ನು ಕಿತ್ತುಕೊಂಡಿದ್ದು ಗಣೇಶ ವಿಗ್ರಹ ತಯಾರಿಸಬೇಕೇ? ಬೇಡವೇ? ಎಂಬ ಗೊಂದಲ ಅವರನ್ನು ಕಾಡುತ್ತಿದೆ.

ಮುಂದಿನ ಒಂದೂವರೆ ತಿಂಗಳಲ್ಲಿ ಗಣೇಶ ಚತುರ್ಥಿ ಹಬ್ಬ ಬರಲಿದೆ. ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿಗೆ ಗಣೇಶ ವಿಗ್ರಹ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲು ಸರ್ಕಾರ ಆದೇಶ ನೀಡುತ್ತೋ? ಇಲ್ಲವೋ? ಎಂಬ ಪ್ರಶ್ನೆ ಮೂಡಿದೆ. ಗಣೇಶ ಹಬ್ಬಕ್ಕೂ ಎರಡು ತಿಂಗಳ ಮುಂಚಿತವಾಗಿ ಗಣೇಶ ವಿಗ್ರಹ ತಯಾರಿ ಕಾರ್ಯ ನಡೆಸಬೇಕು.

ಆದರೆ, ಸರ್ಕಾರ ಯಾವುದೇ ಮಾರ್ಗಸೂಚಿಯನ್ನು ಇದುವರೆಗೂ ಹೊರಡಿಸದ ಹಿನ್ನೆಲೆಯಲ್ಲಿ ಗಣೇಶ ವಿಗ್ರಹ ತಯಾರಿಕಾ ಕಾರ್ಯಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಗಣೇಶ ಮೂರ್ತಿಗೆ ಮುಂಚಿತವಾಗಿ ಬೇಡಿಕೆಯೂ ಬರದಿರುವುದರಿಂದ ತೊಳಲಾಟಕ್ಕೆ ಸಿಲುಕಿದ್ದಾರೆ. ನಗರದ ಕುಂಬಾರ ಬೀದಿಯಲ್ಲಿ ಸಾವಿರಾರು ಗಣೇಶ ವಿಗ್ರಹ ತಯಾರು ಮಾಡಲಾಗುತ್ತದೆ. ಇದನ್ನೇ ನಂಬಿಕೊಂಡು 15-20 ಕುಟುಂಬಗಳು ಜೀವನ ನಡೆಸುತ್ತವೆ. ಗಣೇಶ ವಿಗ್ರಹ ತಯಾರಿಕೆಗೆ ಬೇಕಾಗುವ ಕಚ್ಛಾ ಸಾಮಗ್ರಿಗಳನ್ನು ತಯಾರಿ ಮಾಡಿಕೊಂಡು ಸರ್ಕಾರದ ಮಾರ್ಗಸೂಚಿಗಾಗಿ ಎದುರು ನೋಡುತ್ತಿದ್ದಾರೆ. ಕಳೆದ ಒಂದು ವಾರದಿಂದ 3ರಿಂದ 6 ಅಡಿಯ ಮನೆಯಲ್ಲಿ ಪ್ರತಿಷ್ಠಾಪಿಸುವ ವಿಗ್ರಹಗಳನ್ನು ಮಾತ್ರ ತಯಾರು ಮಾಡುತ್ತಿದ್ದೇವೆ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಗಣಪತಿ ವಿಗ್ರಹ ಪ್ರತಿಷ್ಠಾಪನೆಯ ಯಾವ ಮಾರ್ಗಸೂಚಿಯನ್ನೂ ಇನ್ನೂ ಹೊರಡಿಸದ ಹಿನ್ನೆಲೆಯಲ್ಲಿ ದೊಡ್ಡ ವಿಗ್ರಹಗಳ ತಯಾರಿಕೆಗೆ ಕೈ ಹಾಕಿಲ್ಲವೆಂದು ವಿಗ್ರಹ ತಯಾರಕರು ತಿಳಿಸಿದರು.

ಕಳೆದ 10-12 ವರ್ಷಗಳಿಂದ ಗಣಪತಿ ವಿಗ್ರಹ ತಯಾರಿಕೆ ಮಾಡುತ್ತಿದ್ದೇವೆ. ಪ್ರತಿ ವರ್ಷ ಮೇ, ಜೂನ್‌ ತಿಂಗಳಲ್ಲೇ ವಿಗ್ರಹ ತಯಾರಿಕೆ ಪ್ರಾರಂಭಿಸುತ್ತಿದ್ದೆವು. ಕೋವಿಡ್ ಸೋಂಕು ಸಮಸ್ಯೆ ಇರುವುದರಿಂದ ವಿಗ್ರಹ ತಯಾರಿಕೆಗೆ ಕಳೆದೆರೆಡು ದಿನಗಳಿಂದ ಪ್ರಾರಂಭಿಸಿದ್ದೇವೆ. ನಮ್ಮ ಬೀದಿಯಲ್ಲಿ 15ರಿಂದ 20 ಕುಟುಂಬಗಳು ಪ್ರತಿವರ್ಷ 1500-2000 ಗಣಪತಿ ವಿಗ್ರಹಗಳನ್ನು ಮಾಡುತ್ತೇವೆ. ಈ ವರ್ಷ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಸರ್ಕಾರ ಯಾವ ನಿರ್ಧಾರ ಪ್ರಕಟಿಸುತ್ತದೆಂದು ಎದುರು ನೋಡುತ್ತಿದ್ದೇವೆ. ದೊಡ್ಡ ದೊಡ್ಡ ಗಣಪತಿ ತಯಾರಿ ಮಾಡಿಕೊಂಡಿರುತ್ತೇವೆ. ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ನಿಷೇಧವೆಂದು ಸರ್ಕಾರ ಘೋಷಿಸಿದರೆ ನಾವು ಮಾಡಿದ ಗಣಪತಿ ನಾವೇ ಕೆರೆಗೆ ಬಿಡಬೇಕಾಗುತ್ತದೆ. ಸರ್ಕಾರ ಆದಷ್ಟು ಬೇಗ ಮಾರ್ಗಸೂಚಿಯನ್ನು ಹೊರಡಿಸಿದರೆ ರಾಜ್ಯದ ಎಲ್ಲಾ ಗಣಪತಿ ವಿಗ್ರಹ ತಯಾರಕರಿಗೆ ಅನುಕೂಲವಾಗುತ್ತದೆ ಎಂದು ನಗರದ ಕುಂಬಾರ ಬೀದಿಯ ದಿನೇಶ್‌ ತಿಳಿಸಿದರು.

ಸರ್ಕಾರದ ಆದೇಶದಂತೆ ವಾಟರ್‌ ಪೆಯಿಂಟ್‌ ಬಳಸಿ ವಿಗ್ರಹಗಳನ್ನು ತಯಾರಿಸುತ್ತೇವೆ. ಕೋವಿಡ್ ದಿಂದ ಎಲ್ಲಾ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ವಿಗ್ರಹ ತಯಾರಿಕೆಗೆ ಬೇಕಾಗುವ ಕಚ್ಚಾವಸ್ತುವನ್ನು ಸಂಗ್ರಹಿಸಿಟ್ಟುಕೊಂಡಿದ್ದೇವೆ. ಸರ್ಕಾರ ಬೇಗ ಮಾರ್ಗಸೂಚಿ ಹೊರಡಿಸದಿದ್ದರೆ ನಮ್ಮ ಶ್ರಮ ಹಾಗೂ ಖರ್ಚು ಮಾಡಿದ ಹಣ ವ್ಯರ್ಥವಾಗುತ್ತದೆ ಎಂದರು.

ಪ್ರತಿ ವರ್ಷದಂತೆ ಈ ವರ್ಷ ಗಣಪತಿ ವಿಗ್ರಹ ರಚನೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ದೊಡ್ಡ ವಿಗ್ರಹಗಳನ್ನು ಮಾಡಿಲ್ಲ. ಸಣ್ಣಸಣ್ಣ ವಿಗ್ರಹಗಳನ್ನು ಮಾತ್ರ ಮಾಡುತ್ತೀದ್ದೇವೆ. ಸರ್ಕಾರ ಮಾರ್ಗಸೂಚಿ ಇನ್ನೂ ಹೊರಡಿಸಿಲ್ಲ, ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಸರ್ಕಾರ ಅವಕಾಶ ನೀಡುತ್ತೋ ಇಲ್ಲವೋ, ಮಾರ್ಗಸೂಚಿ ಏನು ಎಂಬುದನ್ನು ಶೀಘ್ರವಾಗಿ ತಿಳಿಸುವಂತೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದೇವೆ. ತಡವಾಗಿ ಸಾರ್ವಜನಿಕ ಗಣಪತಿ ವಿಗ್ರಹ ಪ್ರತಿಷ್ಠಾಪನೆಗೆ ಅವಕಾಶ ನೀಡಿದರೂ ಗಣಪತಿ ವಿಗ್ರಹ ತಯಾರಿಕೆ ಸಾಧ್ಯವಿಲ್ಲ, ದೊಡ್ಡ ಗಣಪತಿ ವಿಗ್ರಹ ತಯಾರಿಸಿ ಸರ್ಕಾರ ಸಾರ್ವಜನಿಕ ಗಣಪತಿ ವಿಗ್ರಹ ಪ್ರತಿಷ್ಠಾಪನೆಗೆ ಅವಕಾಶ ನೀಡಿಲ್ಲವೆಂದರೆ ಸರ್ಕಾರದಿಂದ ಪರಿಹಾರ ಕೇಳಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ತನ್ನ ನಿರ್ಧಾರವನ್ನು ಶೀಘ್ರವಾಗಿ ಪ್ರಕಟಿಸಬೇಕೆಂದು ವಿಗ್ರಹ ತಯಾರಕ ಚೇತನ್‌ ತಿಳಿಸಿದರು.

ಗಣಪತಿ ಮೂರ್ತಿಯನ್ನೇ ತಯಾರಿಸಿ ಜೀವನ ಸಾಗಿಸುತ್ತಿರುವರ ಬದುಕು ಅತಂತ್ರವಾಗಿದ್ದು ಸರ್ಕಾರದ ನಿರ್ಧಾರದ ಮೇಲೆ ಇವರ ಬದುಕು ರೂಪುಗೊಳ್ಳಲಿದೆ. ಗಣೇಶ ಚತುರ್ಥಿಗೆ ಸರ್ಕಾರ ಸಾರ್ವಜನಿಕ ಗಣಪತಿ ವಿಗ್ರಹ ಪ್ರತಿಷ್ಠಾಪನೆಗೆ ಅವಕಾಶ ನೀಡುತ್ತೋ? ಅಥವಾ ಕೋವಿಡ್ ಹಿನ್ನೆಲೆಯಲ್ಲಿ ನಿಷೇಧ ಹೇರುತ್ತೋ? ಕಾದುನೋಡಬೇಕಿದೆ.

50 ವರ್ಷದಿಂದ ಗಣಪತಿ ವಿಗ್ರಹ ಹಾಗೂ ಮಡಿಕೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಈ ವರ್ಷ ಮಡಿಕೆಗೂ ಬೇಡಿಕೆಯಿಲ್ಲ, ಗಣಪತಿ ವಿಗ್ರಹ ತಯಾರು ಮಾಡುವುದೋ ಬೇಡವೋ ಎಂದು ಚಿಂತಿಸುತ್ತಿದ್ದೇವೆ. –ರಾಜಣ್ಣ, ಕುಂಬಾರ ಬೀದಿಯ ಮಡಿಕೆ ವ್ಯಾಪಾರಿ

-ಸಂದೀಪ ಜಿ.ಎನ್‌.ಶೇಡ್ಗಾರ್‌

ಟಾಪ್ ನ್ಯೂಸ್

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1—dsdasd

Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

9-kushtagi

Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.