65+ ವ್ಯಕ್ತಿಗಳಿಗೆ ಅಂಚೆ ಮತದಾನವಿಲ್ಲ
Team Udayavani, Jul 17, 2020, 9:53 AM IST
ಹೊಸದಿಲ್ಲಿ: ಬಿಹಾರ ವಿಧಾನಸಭೆಗೆ ಶೀಘ್ರದಲ್ಲಿಯೇ ನಡೆಯಲಿರುವ ಚುನಾವಣೆ ಮತ್ತು ಇತರ ಉಪ ಚುನಾವಣೆಗಳಲ್ಲಿ 65 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತದಾನ ಮಾಡುವ ಸೌಲಭ್ಯ ನೀಡದಿರಲು ನಿರ್ಧರಿಸಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಗುರುವಾರ ವಿವರಣೆ ನೀಡಿದೆ. ಕೋವಿಡ್ ನಿಯಮಗಳು, ಮಾನವ ಸಂಪನ್ಮೂಲ ಮತ್ತು ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಈ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಆಯೋಗ ಸ್ಪಷ್ಟನೆ ನೀಡಿದೆ. 80 ವರ್ಷ ಮೇಲ್ಪಟ್ಟವರು, ದಿವ್ಯಾಂಗರು ಮತ್ತು ಕೋವಿಡ್ ಪೀಡಿತರು ಹಾಗೂ ಶಂಕಿತ ಸೋಂಕುಪೀಡಿತರಿಗೆ ಅಂಚೆ ಮತದಾನಕ್ಕೆ ಅವಕಾಶ ಇದೆ.