ಕಾಬೂಲ್: ಉಗ್ರರಿಬ್ಬರನ್ನು ಕೊಂದ ಬಾಲಕಿ
Team Udayavani, Jul 23, 2020, 9:40 AM IST
ಕಾಬೂಲ್: ಅಫ್ಘಾನಿಸ್ಥಾನದಲ್ಲಿ ಬಾಲಕಿಯೊಬ್ಬಳು ಎಕೆ 47 ರೈಫಲ್ನಿಂದ ಇಬ್ಬರು ತಾಲಿಬಾನ್ ಉಗ್ರರನ್ನು ಕೊಂದಿದ್ದಾಳೆ. ಮನೆಗೆ ನುಗ್ಗಿ ತನ್ನ ತಂದೆ ತಾಯಿಯನ್ನು ಕೊಂದು ಹಾಕಿದ ಉಗ್ರರ ಮೇಲೆ 14-16 ವರ್ಷದ ಬಾಲಕಿ ಕ್ವಾಮರ್ ಗುಲ್ ಸೇಡು ತೀರಿಸಿಕೊಂಡಿದ್ದಾಳೆ. ಕೇಂದ್ರ ಭಾಗದ ಘೋರ್ ಪ್ರಾಂತ್ಯದ ಗ್ರಿವಾ ಎಂಬ ಗ್ರಾಮಕ್ಕೆ ಬಾಲಕಿಯ ತಂದೆ ಮುಖ್ಯಸ್ಥರು. ಅವರು ಸರಕಾರದ ಬೆಂಬಲಿಗರೂ ಆಗಿದ್ದರು.
ಈ ಕಾರಣಕ್ಕಾಗಿ ಇತ್ತೀಚೆಗೆ ತಾಲಿಬಾನ್ ಉಗ್ರರು, ಮನೆಗೆ ನುಗ್ಗಿ ಈಕೆಯ ತಂದೆ ತಾಯಿಯನ್ನು ಹೊರಗೆ ಎಳೆದುಕೊಂಡು ಬಂದು ಕೊಂದು ಹಾಕಿದ್ದರು. ಇದರಿಂದ ಸಿಟ್ಟಿಗೆದ್ದ ಬಾಲಕಿ ಗುಲ್, ಮನೆಯಲ್ಲಿದ್ದ ಎಕೆ 47 ರೈಫಲ್ ತೆಗೆದು ಕೊಂಡು ಗುಂಡು ಹಾರಿಸಿ, ಇಬ್ಬರು ಹಂತಕರನ್ನು ಹತ್ಯೆ ಮಾಡಿದ್ದಾರೆ. ಅಲ್ಲದೆ ತನ್ನ ಕಿರಿಯ ಸಹೋದರರನ್ನು ರಕ್ಷಿಸಿದ್ದಾರೆ. ಘಟನೆ ಬಳಿಕ ಹಲವು ಮಂದಿ ಉಗ್ರರು ಮನೆಗೆ ಬಂದು ಆಕೆಯ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾರೆ. ಗ್ರಾಮಸ್ಥರು ಪ್ರತಿರೋಧ ತೋರಿದ್ದಕ್ಕಾಗಿ ಉಗ್ರರು ಪರಾರಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ