ಬೀಜಿಂಗ್: ಸಿನೆಮಾ ಮಂದಿರ ತೆರೆಯಲು ಅವಕಾಶ
Team Udayavani, Jul 26, 2020, 10:55 AM IST
ಬೀಜಿಂಗ್: ಕೋವಿಡ್ ವೈರಸ್ನ ಹರಡುವಿಕೆ ಕಡಿಮೆಯಿರುವ ರಾಜಧಾನಿಯ ಕೆಲವು ಭಾಗಗಳಲ್ಲಿ ಸಿನೆಮಾ ಮಂದಿರಗಳನ್ನು ಭಾಗಶಃ ತೆರೆಯಲು ಅವಕಾಶ ನೀಡಲಾಗಿದೆ.
ಹೊಸ ನಿಯಮದಂತೆ ಟಿಕೆಟ್ಗಳನು ಮುಂಚಿತವಾಗಿ ಪಡೆಯುವುದು ಕಡ್ಡಾಯವಾಗಿದೆ. ಶೇಕಡಾ 30ರಷ್ಟು ಮಂದಿ ಮಾತ್ರ ಸಿನೆಮಾವನ್ನು ವೀಕ್ಷಿಸಬಹುದು.
ಪ್ರದರ್ಶನದ ವೇಳೆ ತಿನ್ನುವ ಮತ್ತು ಕುಡಿಯುವುದಕ್ಕೆ ಅವಕಾಶವಿಲ್ಲ. ಸಿನೆಮಾ ಮಂದಿರದ ಒಳಗಡೆ ಪ್ರವೇಶಿಸುವ ಮೊದಲು ಎಲ್ಲರನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲಾಗುತ್ತದೆ.