11 ಕೋಟಿ.ರೂ. ಮೌಲ್ಯದ ಚಿನ್ನ- ವಜ್ರದ ಮಾಸ್ಕ್
Team Udayavani, Aug 11, 2020, 6:15 AM IST
ಜೆರುಸಲೇಂ: ಕೋವಿಡ್ ಕಾಣಿಸಿಕೊಂಡ ಬಳಿಕ ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಇದರ ಬೆಲೆ ಹೆಚ್ಚೆಂದರೆ 100-300 ರೂ. ಇರ ಬಹುದು. ಒಂದು ಬಾರಿ ಬಳಸಿ, ಬಿಸಾಡುವ ಮಾಸ್ಕ್ಗಳು ಇನ್ನೂ ಕಡಿಮೆ ದರಕ್ಕೆ ಸಿಗಲಿವೆ. ಆದರೆ, ಇಸ್ರೇಲ್ನಲ್ಲಿ ಚಿನ್ನ ಹಾಗೂ ವಜ್ರ ಬಳಸಿ ಬರೋಬ್ಬರಿ 11 ಕೋಟಿ.ರೂ. ಮೌಲ್ಯದ ಮಾಸ್ಕ್ ತಯಾರಿಸ ಲಾಗಿದೆ. ಇಸ್ರೇಲ್ ಜ್ಯುವೆಲ್ಲರಿ ಕಂಪೆನಿಯು, 18 ಕ್ಯಾರೆಟ್ ಬಿಳಿ ಚಿನ್ನ ಹಾಗೂ ಕಪ್ಪು ಬಿಳಿಯ 3,600 ವಜ್ರ ಗಳನ್ನು ಬಳಸಿ ವಜ್ರಾಲಂಕೃತ ಮಾಸ್ಕ್ ತಯಾರಿಸಿದೆೆ. “ದುಡ್ಡಿನಿಂದ ಎಲ್ಲ ವನ್ನೂ ಖರೀದಿಸಲು ಆಗುವು ದಿಲ್ಲ. ಆದರೆ, ಈ ಪ್ರತಿಷ್ಟಿತ ದುಬಾರಿ ಬೆಲೆಯ ಮಾಸ್ಕ್ ಖರೀದಿಸಿ ಮಾಸ್ಕ್ ಧರಿಸಿ ಕೊಂಡು ಹೊರಗೆ ಹೋದರೆ ಎಲ್ಲರ ಗಮನ ನಿಮ್ಮ ಮೇಲೆ ಇರುತ್ತದೆ. ಇದರಿಂದ ಸಂತೋಷ ಸಿಗಲಿದೆ’ ಎಂದು ಯೆÌಲ್ ಕಂಪೆನಿಯ ಮಾಲೀಕ, ಡಿಸೈನರ್ ಐಸಾಕ್ ಲೆವಿ ತಿಳಿಸಿದ್ದಾರೆ.