ಹಂದಿಗೆ ಕಂಪ್ಯೂಟರ್ ಚಿಪ್ ಜೋಡಿಸಿ ಅಧ್ಯಯನ
Team Udayavani, Aug 30, 2020, 6:45 AM IST
ನ್ಯೂಯಾರ್ಕ್: ಮರಳಿ ಬಳಸಬಹು ದಾದ ರಾಕೆಟ್ ಅನ್ನು ಸಂಶೋಧಿಸಿದ ಹೆಗ್ಗಳಿಕೆ ಪಡೆದ ದೈತ್ಯ ಉದ್ಯಮಿ ಎಲಾನ್ ಮಸ್ಕ್ ಮತ್ತೂಂದು ಸಂಶೋಧನೆಗೆ ಕೈ ಹಾಕಿದ್ದಾರೆ.
ಮೆದುಳಿನ ಕಾಯಿಲೆಯಿಂದ ಬಳಲು ತ್ತಿರುವವರಿಗೆ ಕಂಪ್ಯೂಟರ್ ಚಿಪ್ ಜೋಡಿಸಿ ಅವರ ಸಮಸ್ಯೆ ನಿವಾರಿಸುವ ಕನಸು ಹೊಂದಿರುವ ಮಸ್ಕ್ ಮತ್ತವರ ತಂಡ ಪ್ರಯೋಗ ಆರಂಭಿಸಿದೆ.
3 ಹಂದಿಗಳಿಗೆ ಬ್ರೈನ್ ಮಶೀನ್ ಇಂಟರ್ಫೇಸ್ ಜೋಡಿಸಿ ಪರೀಕ್ಷಿಸ ಲಾಗಿದೆ. ಚಿಪ್ ಜೋಡಿಸಿಕೊಂಡ ಹಂದಿಗೆ ಒಬ್ಬ ವ್ಯಕ್ತಿ ಆಹಾರವನ್ನು ನೀಡುತ್ತಾನೆ. ಕೂಡಲೇ ಅದು ಚಿಪ್ ಅನ್ನು ತಿನ್ನುವ ಪದಾರ್ಥ ವೆಂದು ಗ್ರಹಿಸಿ, ಆಹಾರ ತಿನ್ನಲು ಮುಂದಾಗುತ್ತದೆ. ಬೋನ್ನ ಬಾಗಿಲು ತೆರೆದಾಗ, ಹೊರ ಹೋಗಲು ಯತ್ನಿಸುತ್ತದೆ. ಹಂದಿಯ ಮೆದುಳಿನಲ್ಲಿನ ಪ್ರತಿಕ್ರಿಯೆ ಗಳ ಸಂಕೇತ ಗಳನ್ನು ಚಿಪ್ ನೇರವಾಗಿ ಕಂಪ್ಯೂಟರ್ಗೆ ರವಾನಿಸಿದೆ.
ಅತಿ ಸೂಕ್ಷ್ಮ ಸಂವೇ ದನೆಗಳನ್ನೂ ಅಧ್ಯಯನಕ್ಕೊಳಪಡಿಸಲಾಗಿದೆ. ಹೆಸರಾಂತ ಕಾರು ತಯಾರಿಕಾ ಕಂಪೆನಿ ಟೆಸ್ಲಾ ಮುಖ್ಯಸ್ಥರೂ ಆಗಿರುವ ಮಸ್ಕ್ ನೇತೃತ್ವದ “ನ್ಯೂರಾಲಿಂಕ್’ 2016ರಿಂದ ಬ್ರೇನ್ ಮಶೀನ್ ಇಂಟರ್ಫೇಸ್ ಅಭಿವೃದ್ಧಿಪಡಿಸುತ್ತಿದೆ.