ಜಿಲ್ಲೆಯ 30 ಸಾವಿರಕ್ಕೂ ಅಧಿಕ ಕೃಷಿಕರಿಗೆ ಪ್ರಯೋಜನ

ಡೀಮ್ಡ್ ಫಾರೆಸ್ಟ್‌ ನಿಂದ ಕಂದಾಯ ವ್ಯಾಪ್ತಿಗೆ ಭೂಮಿ

Team Udayavani, Sep 30, 2020, 5:34 AM IST

ಜಿಲ್ಲೆಯ 30 ಸಾವಿರಕ್ಕೂ ಅಧಿಕ ಕೃಷಿಕರಿಗೆ ಪ್ರಯೋಜನ

ಕಾರ್ಕಳ ಪ್ರವಾಸಿ ಮಂದಿರದಲ್ಲಿ ಸಚಿವರು ಮಾಧ್ಯಮದ ಜತೆ ಸಂವಾದ ನಡೆಸಿದರು.

ಕಾರ್ಕಳ: ರಾಜ್ಯದ ಸುಮಾರು 9 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ಅರಣ್ಯವೆಂದು ಪರಿಭಾವಿಸಿದ್ದ ಜಮೀನಿನ ಪೈಕಿ 6 ಸಾವಿರ ಹೆಕ್ಟೇರ್‌ಗಳನ್ನು ಕಂದಾಯ ಇಲಾಖೆಗೆ ಪಡೆಯಲು ರಾಜ್ಯ ಸರಕಾರ ನಿರ್ಧರಿಸಿದ್ದು, ಇದರಿಂದ ಜಿಲ್ಲೆಯ ಸುಮಾರು 30 ಸಾವಿರ ಬಡ ಕೃಷಿಕರಿಗೆ ಲಾಭವಾಗಲಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕಾರ್ಕಳ ಪ್ರವಾಸಿ ಮಂದಿರಲ್ಲಿ ಮಂಗಳವಾರ ಮಾಧ್ಯಮ ಸಂವಾದ ನಡೆಸಿದ ಅವರು ಜಿಲ್ಲೆಯಲ್ಲಿ 34 ಸಾವಿರ ಹೆಕ್ಟೇರ್‌ ಭೂಮಿಯನ್ನು ಡೀಮ್ಡ್ ಫಾರೆಸ್ಟ್‌ನಿಂದ ಕೈ ಬಿಡಬೇಕು ಎಂದು ಹಿಂದಿನ ಜಿಲ್ಲಾಧಿಕಾರಿಗಳು ಸರಕಾರಕ್ಕೆ ಶಿಫಾರಸು ಮಾಡಿದ್ದರು. ಡೀಮ್ಡ್ ಫಾರೆಸ್ಟ್‌ ಗುರುತಿಸುವ ವಿಚಾರದಲ್ಲಿದ್ದ ಗೊಂದಲದಿಂದ ಸಾಧ್ಯವಾಗಿರಲಿಲ್ಲ. ಸುಪ್ರೀಂಕೋರ್ಟ್‌ನ ಆದೇಶದಿಂದಲೂ ತೊಂದರೆ ಗಳಾಗಿತ್ತು. ಸರಕಾರದ ಸಚಿವರಾದ ಅಶೋಕ, ಆನಂದ್‌ ಸಿಂಗ್‌ ಅವರು ಸದನದಲ್ಲಿ ಡೀಮ್ಡ್ ಭೂಮಿಯನ್ನು ಪಡೆಯುವ ಮಹತ್ವದ ನಿರ್ಧಾರ ತೆಗೆದುಕೊಂಡಿರುವರು. ಇದರಿಂದ ಅಕ್ರಮ ಸಕ್ರಮ 94ಸಿ ಸಹಿತ ವಿವಿಧ ಯೋಜನೆಗಳಲ್ಲಿ ಅರ್ಜಿ ಸಲ್ಲಿಸಿದ ಬಡವರಿಗೆ ಅನುಕೂಲವಾಗಲಿದೆ ಎಂದರು.

ಶೀಘ್ರ ಸ್ಪಷ್ಟ ನೀತಿ
ರೈತರಿಗೆ ಕುಮ್ಕಿ ಕಾನೆ ಬಾನೆ, ಗೇರು ತೋಟ ಹಂಚುವ ವಿಚಾರಲ್ಲಿ ಸರಕಾರ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ 5 ಎಕರೆ ನಿಗದಿಪಡಿಸಿ ನೀಡುವ ವಿಚಾರದಲ್ಲಿ ಸರಕಾರ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ಯಾವ ರೀತಿ ನೀಡಬೇಕು ಎನ್ನುವ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಸರಕಾರ ಶೀಘ್ರ ಬರಲಿದೆ ಎಂದರು.

ಮರಳುಗಾರಿಕೆ ಹದ್ದು ಬಸ್ತಿನಲ್ಲಿಡಲು ಸಾಧ್ಯ
ಮರಳುಗಾರಿಕೆ ಸಂಬಂಧ ಸರಕಾರದ ಗೈಡ್‌ಲೈನ್‌ ಇದೆ. ಎರಡು ರೀತಿಯ ಮರಳುಗಾರಿಕೆ ನೀತಿ ಜಾರಿಯಲ್ಲಿದೆ. ಗ್ರಾ.ಪಂಗಳಿಗೆ ಮರಳು ತೆಗೆಯಲು ಅಧಿಕಾರ ನೀಡಲಾಗಿದೆ. ಪಿಡಿಒ ಹಾಗೂ ಗಣಿಗಾರಿಕೆಯ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿರುವ ಮರಳಿನ ಮೂಲಕಗಳನ್ನು ಗುರುತಿಸಿ, ಮರಳು ಎತ್ತಲು ಅನುಮತಿ ನೀಡಲಾಗಿದೆ. ಅದನ್ನು ತಾಲೂಕು ಸಮಿತಿ ಮೂಲಕ ವಿತರಣೆ ಮಾಡಲು ಅವಕಾಶವಿದೆ. ಅಗತ್ಯವಿರುವವರು ಸ್ವಂತ ವಾಹನದಲ್ಲಿ ನಿಗದಿತ ದರ ನೀಡಿ ಕೊಂಡುಹೋಗಲು ಅವಕಾಶವಿದೆ. ಸರೋವರ, ನದಿ ಇತ್ಯಾದಿ ದೊಡ್ಡ ಮಟ್ಟದ ಮರಳನ್ನು ಗಣಿಗಾರಿಕೆ ಇಲಾಖೆಯವರು ಜಿಲ್ಲೆಯಲ್ಲಿ ರಚನೆಯಾಗಿರುವ ಎಂಎಸ್‌ಐಎಲ್‌ ಮೂಲಕ ವಿತರಣೆಗೆ ಅವಕಾಶ ಮಾಡಿ ಕೊಡಲಾಗುತ್ತದೆ. ಈ ಸಂಬಂಧ ಕಾನೂನಿನಡಿ ವಿತರಣೆಗೆ ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದರು. ಅಕ್ರಮ ಮರಳುಗಾರಿಕೆಯನ್ನು ಪೂರ್ಣ ವಾಗಿ ತಡೆಲು ಸಾಧ್ಯವಿಲ್ಲ. ತಕ್ಕ ಮಟ್ಟಿಗೆ ಹದ್ದುಬಸ್ತಿನಲ್ಲಿಡಲು ಸಾಧ್ಯವಿದೆ ಎಂದರು.

ಖಾತೆ ಬದಲಾವಣೆ ಸಮಸ್ಯೆ ನಿವಾರಣೆಗೆ ಯತ್ನ
ದ.ಕ ಜಿಲ್ಲೆಗಳಲ್ಲಿ ತುಂಡು ಭೂಮಿಗಳ ಪ್ರಮಾಣ ಹೆಚ್ಚಿರುವುದರಿಂದ ಖಾತೆ ಬದಲಾವಣೆ ವಿಚಾರದಲ್ಲಿ ತೊಂದರೆ ಗಳಾಗಿವೆ. ಬೇರೆ ಜಿಲ್ಲೆಗಳಲ್ಲಿ 9/11 ವಿಚಾರದಲ್ಲಿ ಸಮಸ್ಯೆಗಳಿಲ್ಲ. ಈ ವಿಚಾರವಾಗಿ ಕಾಗೋಡು ತಿಮ್ಮಪ್ಪರವರು ಸಚಿವರಾಗಿದ್ದಾಗ ಗಮನ ಸೆಳೆದಿದ್ದೆ. ಕರಾವಳಿ ಜಿಲ್ಲೆಗೆ ಆಗುತ್ತಿರುವ ತೊಂದರೆ ಬಗ್ಗೆ ಪ್ರಸ್ತಾಪಿಸಿದ್ದೆ. ಈ ಬಗ್ಗೆ ಸರಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಸ್ಥಾನ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ
ಸಂಪುಟ ಪುನಾರಚನೆ ಮತ್ತು ವಿಸ್ತರಣೆಯಾ ಈ ಕುರಿತು ಕೇಂದ್ರ ಹಾಗೂ ರಾಜ್ಯದ ಮುಖಂಡರು ನಿರ್ಧಾರ ಕೈಗೊಳ್ಳುತ್ತಾರೆ. ಮುಖ್ಯಮಂತ್ರಿಗಳ ಮೇಲೆ ಪಕ್ಷದ ಮುಖಂಡರು ಪೂರ್ಣ ವಿಶ್ವಾಸ ಇರಿಸಿದ್ದಾರೆ. ಮಂತ್ರಿ ಮಂಡಲದಲ್ಲಿ ಯಾರು ಇರುತ್ತಾರೆ ಎನ್ನುವುದನ್ನು ರಾಷ್ಟ್ರೀಯ ಮುಖಂಡರು, ರಾಜ್ಯಧ್ಯಕ್ಷರು, ಮುಖ್ಯಮಂತಿಗಳು ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಯಡಿಯೂರಪ್ಪರವರು ಪಕ್ಷವನ್ನಯ ಕಟ್ಟಿ ಬೆಳೆಸುವಲ್ಲಿ ಮುಂಚೂಣಿ ನಾಯಕರು ಎಂದರು.

ದೇವಸ್ಥಾನಗಳಲ್ಲಿ ಗೋಶಾಲೆಗೆ ಜಾಗ ಮೀಸಲು
ಆಯ್ದ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಗೋಶಾಲೆ ತೆರೆಯಲು ಯೋಜನೆ ರೂಪಿಸಲಾಗಿದ್ದು, 5ರಿಂದ 10 ಎಕರೆ ಜಾಗ ಇದ್ದಲ್ಲಿ ಮುಜರಾಯಿ ಇಲಾಖೆಯಿಂದ ಗೋಶಾಲೆ ನಿರ್ಮಿಸಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎರಡು ಕಡೆ 10 ಎಕರೆಗೂ ಅಧಿಕ ಸ್ಥಳವನ್ನು ದೇವಸ್ಥಾನದ ವತಿಯಿಂದ ಬೇಲಿ ಹಾಕಲಾಗಿದೆ. ಗೋಮಾಳ ಜಾಗದ ಜತೆಗೆ ಅವಶ್ಯವಿದ್ದಲ್ಲಿ ಸರಕಾರಿ ಜಾಗವನ್ನು ಪಡೆಯಲಾಗುವುದು, ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಸೂಚಿಸಲಾಗಿದೆ. ಬೀಡಾಡಿ ಗೋವುಗಳು ಗೊಂದಲವಿಲ್ಲದೆ ಗೋಶಾಲೆಗೆ ಸೇರುವಂತಾಗಬೇಕು ಎಂದು ಸಚಿವರು ಹೇಳಿದರು.

ಶೀಘ್ರ ಪೂರ್ಣ ಪ್ರಮಾಣದ ವ್ಯವಸ್ಥಾಪನ ಸಮಿತಿ
ರಾಜ್ಯದ ಅವಧಿ ಪೂರ್ಣಗೊಂಡ 84 ದೇವಸ್ಥಾನಗಳಿಗೆ ಅರ್ಜಿ ಆಹಾ°ನಿಸಲಾಗಿದೆ. ಪೊಲೀಸ್‌ ಪರಿಶೀಲನೆ ವೇಳೆ ಕೆಲ ದೇವಸ್ಥಾನಗಳ ಸಮಿತಿಗೆ ಅರ್ಜಿಸಲ್ಲಿಸಿದವರಲ್ಲಿ ಅನ್ಯ ರಾಜ್ಯಗಳ ಮಂದಿ ಇರುವುದು ಕಂಡು ಬಂದಿದೆ. ತಮಿಳುನಾಡು, ಕೇರಳ ರಾಜ್ಯದವರು ಕೂಡ ಅರ್ಜಿ ಸಲ್ಲಿಸಿದ್ದಾರೆ. ಅವರನ್ನು ನೇಮಕ ಮಾಡಬಾರದು ಅಂತ ಉದ್ದೇಶವಲ್ಲ. ಆದರೇ ಈ ವಿಚಾರವಲ್ಲಿ ಒಂದಷ್ಟು ಸಮಸ್ಯೆಗಳು ಎದುರಾಗಿ ವಿಳಂಬವಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ರಾಜ್ಯದ 65 ದೇವಸ್ಥಾನಗಳಿಗೆ ಆಡಳಿತ ಸಮಿತಿ ನೇಮಕ ಮಾಡಲಾಗುವುದು. ಜಿಲ್ಲೆಗಳ ಬಿ ಮತ್ತು ಸಿ ದರ್ಜೆ ದೇವಸ್ಥಾನಗಳಿಗೆ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ, ಧಾರ್ಮಿಕ ಪರಿಷತ್‌ ಈಗಾಗಲೇ ಸಮಿತಿ ರಚನೆ ಮಾಡಿದೆ. 30 ಜಿಲ್ಲೆಗಳ ಪೈಕಿ 29 ಜಿಲ್ಲೆಗಳಲ್ಲಿ ಪೂರ್ಣವಾಗಿದೆ. ಉಳಿದ ಅವಧಿ ಪೂರ್ಣವಾದ ದೇವಸ್ಥಾನಗಳಿದ್ದಲ್ಲಿ ಶೀಘ್ರ ಅರ್ಜಿ ಆಹ್ವಾನಿಸಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ವ್ಯವಸ್ಥಾಪನ ಸಮಿತಿಯನ್ನು ಪೂರ್ಣ ಪ್ರಮಾಣದಲ್ಲಿ ನೇಮಕ ಮಾಡಲಾಗುವುದು. ದೇವಸ್ಥಾನಗಳಿಗೆ ಸಿಸಿ ಕೆಮರಾ ಸಹಿತ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು.

ಮಸೂದೆಯಿಂದ ರೈತರಿಗೆ ಲಾಭ
ರೈತ ತಾನು ಬೆಳೆದಿದ್ದನ್ನು ಎಲ್ಲಾದರೂ ಮಾರಾಟ ಮಾಡಬಹುದು. ರೈತನಿಗೆ ಉತ್ತಮ ದರ ದೊರೆತು ಅವರಿಗೆ ಅನುಕೂಲವಾಗುವುದು ಎಪಿಎಂಸಿ ಕಾಯ್ದೆಯ ಉದ್ದೇಶ. ದಲ್ಲಾಳಿಗಳು ಮುಂಗಡ ಹಣ ಕೊಟ್ಟು ದಾರಿ ತಪ್ಪಿಸುತಿದ್ದರು. ರೈತರಿಗೆ ತೊಂದರೆಯಾಗುತ್ತಿತ್ತು. ಕಾಯ್ದೆಯಿಂದ ತೊಂದರೆ ಯಾಗಿರುವುದು ಮಧ್ಯವರ್ತಿಗಳಿಗೆ ಹೊರತು ರೈತರಿಗಲ್ಲ. ರೈತರ ಬದುಕಿಗೆ ಶಕ್ತಿ ಕೊಡುವ ಉದ್ದೇಶ ಕಾಯ್ದೆಯಲ್ಲಿದೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.