ಒಂದು ಚೆಂಡಿನ ಕಥೆ: ಕ್ರಿಕೆಟ್ ಚೆಂಡಿನ ಬಣ್ಣ ಬದಲಾದಂತೆ ಅದರ ಗುಣವೂ ಬದಲಾಗುತ್ತದೆ!


Team Udayavani, Oct 2, 2020, 4:29 PM IST

ಕ್ರಿಕೆಟ್ ಚೆಂಡಿನ ಬಣ್ಣ ಬದಲಾದಂತೆ ಅದರ ಗುಣವೂ ಬದಲಾಗುತ್ತದೆ!

ಕ್ರಿಕೆಟ್‌ನಲ್ಲಿ ಬಳಸುವ ಚೆಂಡು ವಿವಿಧ ಬಣ್ಣಗಳದ್ದಾಗಿದೆ. ಒಂದೊಂದು ಬಣ್ಣದ ಹಿಂದೆ ಒಂದೊಂದು ಕಥೆಯಿದೆ. ಎಲ್ಲ ಚೆಂಡನ್ನು ಎಲ್ಲ ಮಾದರಿಯ ಕ್ರಿಕೆಟ್‌ಗೆ ಬಳಸಲಾಗುವುದಿಲ್ಲ. ಎಲ್ಲದಕ್ಕೂ ಒಂದು ಲೆಕ್ಕಾಚಾರವಿದೆ. ಟೆಸ್ಟ್‌ಗೊಂದು, ಏಕದಿನ ಹಾಗೂ ಟಿ20ಗೆ ಮತ್ತೂಂದು ಎಂದು ಇಲ್ಲಿ ಪ್ರತ್ಯೇಕವಾಗಿ ಚೆಂಡುಗಳನ್ನು ವಿಭಾಗಿಸಲಾಗಿದೆ. ಇದೀಗ ಟೆಸ್ಟ್‌ ಜನಪ್ರಿಯಗೊಳಿಸಲು ಹಗಲುರಾತ್ರಿ ಟೆಸ್ಟ್‌ ಆರಂಭಿಸಲಾಗಿದೆ. ಇದಕ್ಕೆಂದೆ ಗುಲಾಲಿ ಬಣ್ಣದಿಂದ ವಿಶೇಷವಾಗಿ ವಿನ್ಯಾಸಗೊಳಿಸಿದ ಚೆಂಡನ್ನು ಬಳಸಲಾಗಿದೆ. ಈ ಹಿನ್ನೆಲೆಯಲ್ಲಿ ಒಟ್ಟಾರೆ ಎಲ್ಲ ಚೆಂಡಿನ ಹಿಂದಿರುವ ವಿಶೇಷತೆಯನ್ನು ಇಲ್ಲಿ ವಿವರಿಸಲಾಗಿದೆ.

ಕೆಂಪು ಚೆಂಡು

ಕೆಂಪು
ಕೆಂಪು ಚೆಂಡಿನ ಬಳಕೆ ಟೆಸ್ಟ್‌ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಾತ್ರ. ಇಲ್ಲಿ ಒಂದು ಚೆಂಡಿನಲ್ಲಿ 80 ಓವರ್‌ ತನಕ ಆಡಬಹುದು. ಅಂದರೆ ಒಂದು ದಿನದ ಸಂಪೂರ್ಣ ಆಟ ಎಂದು ಪರಿಗಣಿಸಬಹುದು. ಕೆಂಪು ಚೆಂಡು ಏಕದಿನ, ಟಿ20ಯಲ್ಲಿ ಬಳಸುವ ಬಿಳಿ ಚೆಂಡಿಗಿಂತ ಹೆಚ್ಚು ಗಟ್ಟಿಯಾಗಿದೆ. ಕೆಂಪು ಚೆಂಡಿನಲ್ಲಿ ಸ್ವಿಂಗ್‌ ಮಾಡುವುದು ಕಷ್ಟ ಎನ್ನುವುದು ಹಿಂದೆ ಸಂಶೋಧನೆಗಳಿಂದ ಬಹಿರಂಗಗೊಂಡಿದೆ. ಗಾಳಿಯ ಒತ್ತಡವು ಚೆಂಡಿನ ಪ್ರತಿ ಬದಿಯ ಮೇಲಿರುವ ಗಾಳಿಯ ಹರಿವನ್ನು ಆಧರಿಸುತ್ತದೆ. ಚೆಂಡಿನ ಒಂದು ಬದಿಯ ಮೇಲೆ ಗಾಳಿಯ ಹರಿವು ತಡೆದಾಗ ಚೆಂಡು ಸ್ವಿಂಗ್‌ ಆಗುತ್ತದೆ.

ಬಿಳಿ ಚೆಂಡು

ಬಿಳಿ ಚೆಂಡು
ಬಿಳಿ ಚೆಂಡು ಏಕದಿನ ಹಾಗೂ ಟಿ20ನಲ್ಲಿ ಮಾತ್ರ ಉಪಯೋಗಿಸಲಾಗುತ್ತದೆ. ಕೆಂಪು ಚೆಂಡಿಗೆ ಹೋಲಿಸಿದರೆ ಈ ಚೆಂಡು ಸ್ವಲ್ಪ ಮೆದು, ಹೊನಲುಬೆ ಳಕಿನಲ್ಲಿ ಹೆಚ್ಚು ಕಣ್ಣಿಗೆ ಕಾಣುತ್ತದೆ. ಬಿಳಿ ಚೆಂಡಿನಲ್ಲಿ ವೇಗದ ಬೌಲರ್‌ಗಳು ಸ್ವಿಂಗ್‌ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಕ್ಕಾಬಿಕ್ಕಿಯಾಗಿಸುತ್ತಾರೆ. ಅದರಂತೆ ಈ ಚೆಂಡಿನಲ್ಲಿ ಸುಲಭವಾಗಿ ಸ್ವಿಂಗ್‌ ಮಾಡಬಹುದು.

ಗುಲಾಲಿ ಚೆಂಡು

ಗುಲಾಲಿ ಚೆಂಡು
ಇತ್ತೀಚೆಗೆ ಕ್ರಿಕೆಟ್‌ಗೆ ಬಂದ ಗುಲಾಲಿ ಚೆಂಡಿನ ಬಳಕೆ ಹಗಲುರಾತ್ರಿ ಟೆಸ್ಟ್‌ಗೆ ಮಾತ್ರ. ಕತ್ತಲೆಯಲ್ಲಿ ಈ ಚೆಂಡು ಹೆಚ್ಚು ಹೊಳಪಿನಿಂದ ಕಾಣುತ್ತದೆ. ಬ್ಯಾಟ್ಸ್‌ಮನ್‌, ಬೌಲರ್‌ ಅಥವಾ ಫೀಲ್ಡರ್‌ ಯಾರೇ ಆದರೂ ಅವರಿಗೆ ಚೆಂಡನ್ನು ಗುರುತಿಸುವುದು ಕಷ್ಟವಾಗಲಾರದು. ಕೆಂಪು ಬಣ್ಣದ ಚೆಂಡು, ಬಿಳಿ ಚೆಂಡಿಗಿಂತಲೂ ಇದು ಹೆಚ್ಚು ಗಟ್ಟಿ. ಫೀಲ್ಡರ್‌ಗಳಿಗೆ ಹೆಚ್ಚು ಅಪಾಯವಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕಾಗಿಯೇ ಕೆಲವು ಕ್ರಿಕೆಟಿಗರು ಈ ಚೆಂಡನ್ನು ಬಳಸಲು ವಿರೋಧ ವ್ಯಕ್ತಪಡಿಸಿದ್ದಾರೆ.

ಚೆಂಡಿನ ತಯಾರಿಕೆ ಹೇಗೆ?

 ಚೆಂಡು
ವಿಶೇಷ ಮರವೊಂದರ ತಿರುಳಿನಿಂದ ಚೆಂಡನ್ನು ರಚಿಸಲಾಗುತ್ತದೆ. ಇದಕ್ಕೆ ಹೊಲಿದ ಚರ್ಮದ ಹೊದಿಕೆಯ ತಿರುಳನ್ನು ಸುತ್ತಲಾಗುತ್ತದೆ.  ನಂತರ ಬಿಗಿಯಾದ ದಾರದಿಂದ ಕಟ್ಟಲಾಗುತ್ತದೆ. ಹೊದಿಕೆಯ ಕಾಲು ಭಾಗ ಕಿತ್ತಳೆ ಹಣ್ಣಿನ ಸಿಪ್ಪೆಯ ಆಕಾರದಲ್ಲಿರುವ ಚರ್ಮದ ನಾಲ್ಕು ತುಂಡುಗಳಿಂದ 90 ಡಿಗ್ರಿಯಿಂದ ಸುತ್ತುವ ಒಂದು ಅರೆಗೋಲದಂತೆ ನಿರ್ಮಿಸಲಾಗುತ್ತದೆ. ಪ್ರಧಾನ ಮಧ್ಯಗೆರೆ ರಚನೆಗೆ ಆರು ಸಾಲುಗಳನ್ನು ದಾರದಿಂದ ಹೊಲಿಯಲಾಗುತ್ತದೆ. ಪುರುಷರ ಕ್ರಿಕೆಟ್‌ಗೆ 5.5ರಿಂದ 5.75 ಔನ್ಸ್‌ (155.9 ರಿಂದ 163.0 ಗ್ರಾಮ್) ತೂಕವಿರಬೇಕು. ಸುತ್ತಳತೆ 8 13/16ರಿಂದ 9 (224 ಮತ್ತು 229 ಎಂಎಂ) ಒಳಗಿರಬೇಕು.

ಪ್ರಮುಖ ಚೆಂಡು ಉತ್ಪಾದಕ ಸಂಸ್ಥೆಗಳು
ಗನ್‌ ಅಂಡ್‌ ಮೋರ್‌ ಕ್ರಿಕೆಟ್‌ ಬಾಲ್ಸ್‌, ಕೊಕಬುರ್ರಾ ಕ್ರಿಕೆಟ್‌ ಬಾಲ್ಸ್‌, ಸ್ಲಂಜರ್‌ ಕ್ರಿಕೆಟ್‌ ಬಾಲ್ಸ್‌, ಸಿಎ ಕ್ರಿಕೆಟ್‌ ಬಾಲ್ಸ್‌ , ಎಸ್‌ಜಿ ಕ್ರಿಕೆಟ್‌ ಬಾಲ್ಸ್‌ ಇವುಗಳು ಚೆಂಡು ತಯಾರಿಕೆಯಲ್ಲಿ ಪ್ರಸಿದ್ಧಿ ಹೊಂದಿದ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ಅಪಾಯಕಾರಿ ಚೆಂಡುಗಳಿವು?
ಟೆನಿಸ್‌ ಬಾಲ್‌ಗ‌ಳು ಮೆದುವಾಗಿರುತ್ತದೆ. ಲೆದರ್‌ ಚೆಂಡುಗಳು ಗಡುಸಾಗಿರುತ್ತದೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳು ತಲೆಗೆ ಹೆಲ್ಮೆಟ್‌, ಕೈಗೆ ಗ್ಲೌಸ್‌, ಪ್ಯಾಡ್‌ ಸೇರಿದಂತೆ ಮತ್ತಿತರ ರಕ್ಷಣಾ ಕವಚಗಳನ್ನು ಧರಿಸಿಯೇ ಆಡಬೇಕು. ಚೆಂಡಿನೇಟಿಗೆ ಆಸೀಸ್‌ ಕ್ರಿಕೆಟಿಗ ಫಿಲಿಪ್‌ ಹ್ಯೂಸ್‌, ಭಾರತದ ಕ್ರಿಕೆಟಿಗ ರಮಣ್‌ ಲಾಂಬಾ ಸೇರಿದಂತೆ ಹಲವಾರು ಕ್ರಿಕೆಟಿಗರು ಸಾವಿಗೀಡಾಗಿದ್ದಾರೆ. ಮತ್ತೆ ಕೆಲವರು ಗಂಭೀರ ಗಾಯಗೊಂಡಿರುವ ಘಟನೆ ಕಣ್ಣೆದುರಿದೆ. ತಲೆ, ಮುಖದ ಭಾಗಕ್ಕೆ ಈ ಚೆಂಡು ಜೋರಾಗಿ ಬಡಿದರೆ ಪ್ರಾಣಾಪಾಯ ಸಂಭವಿಸಬಹುದು. ಹೀಗಾಗಿ ಐಸಿಸಿ ಮಾನ್ಯತೆ ಪಡೆದ ಕಂಪೆನಿಗಳು ಮಾತ್ರ ವೃತ್ತಿಪರ ಕ್ರಿಕೆಟಿಗರ ಕ್ರಿಕೆಟ್‌ ಕಿಟ್‌ ತಯಾರಿಸುತ್ತಾರೆ.

ಹೊಸ ಚೆಂಡು ಬಳಕೆಗೆ ಒಂದೇ ಸಲ ಅವಕಾಶ
ಅಂತಾರಾಷ್ಟ್ರೀಯ ಪಂದ್ಯವೊಂದು ಆರಂಭವಾದ ಶುರುವಾತಿನಲ್ಲಿ ತಂಡವೊಂದಕ್ಕೆ ಎಸೆಯಲು ಹೊಸ ಚೆಂಡು ನೀಡಲಾಗುತ್ತದೆ. ಮತ್ತೊಂದು ಇನಿಂಗ್ಸ್‌ ಆರಂಭವಾದಾಗಲೂ ಇದೇ ನಿಯಮ ಅನ್ವಯವಾಗುತ್ತದೆ. ಇದಾದ ಬಳಿಕ ಪಂದ್ಯದ ನಡುವಿನಲ್ಲಿ ಎಲ್ಲಿಯೂ ಹೊಸ ಚೆಂಡು ಬಳಕೆಗೆ ಅವಕಾಶವಿಲ್ಲ. ಒಂದು ವೇಳೆ ಚೆಂಡು ಕಾಣೆಯಾದರೆ ಅಥವಾ ಚೆಂಡು ವಿರೂಪಗೊಂಡರೆ ಮಾತ್ರ ಹೊಸ ಚೆಂಡು ಕೊಡಲಾಗುತ್ತದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 80 ಓವರ್‌ ಮುಗಿದ ಬಳಿಕ ಹೊಸ ಚೆಂಡನ್ನು ಪಡೆಯಲು ಅವಕಾಶವಿರುತ್ತದೆ. ಕ್ರೀಡಾಂಗಣಕ್ಕೆ ಚೆಂಡನ್ನು ಉಜ್ಜುವುದು, ಚೆಂಡನ್ನು ಸ್ಯಾಂಡ್‌ಪೇಪರ್‌ ಬಳಸಿ ತಿಕ್ಕುವುದು, ಚೆಂಡಿನ ಮೂಲ ಸ್ವರೂಪಕ್ಕೆ ಹಾನಿ ಮಾಡುವುದು ಕ್ರಿಕೆಟ್‌ ನಿಯಮಗಳಿಗೆ ವಿರುದ್ಧವಾಗಿದೆ. 2018ರ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯವೊಂದರಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಆಸೀಸ್‌ ನಾಯಕ ಸೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಒಂದು ವರ್ಷಗಳ ಕಾಲ ನೀಷೇದಕ್ಕೊಳಗಾಗಿದ್ದರು.

-ಅಭಿ

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.