ಪ್ರವಾಹ ತಗ್ಗಿದ ಕಡಬೂರಿನಲ್ಲಿ ಗಬ್ಬು ವಾಸನೆ

Team Udayavani, Oct 23, 2020, 6:58 PM IST

gb-tdy-1

ವಾಡಿ: ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದಂತೆ, ಪ್ರವಾಹ ಬಂದು ಬದುಕು ಕಸಿದು ಹೋದ ಮೇಲೆ ರೋಗ ಭಯ ಆವರಿಸಿದೆ. ಭೀಕರ ನೆರೆ ಹಾವಳಿಗೆ ತುತ್ತಾಗಿ ತತ್ತರಿಸಿದ ಕಡಬೂರು ಗ್ರಾಮದಲ್ಲೀಗ ಪರಿಸರ ಕಲುಷಿತಗೊಂಡಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ಭೀಮಾ ನದಿಯ ರಕ್ಕಸ ಪ್ರವಾಹಕ್ಕೆ ಒಂದು ವಾರಗಳ ಕಾಲ ಮುಳುಗಡೆಯಾಗಿದ್ದ ಚಿತ್ತಾಪುರ ತಾಲೂಕಿನ ಕಡಬೂರ ಗ್ರಾಮದಲ್ಲಿ ಬುಧವಾರದಿಂದ ನೀರು ಕಣ್ಮರೆಯಾಗಿದ್ದು, ನೂರೆಂಟು ಸಮಸ್ಯೆಗಳು ಹುಟ್ಟಿಕೊಂಡಿವೆ. ಜಲಪ್ರಳಯದಿಂದ ಗರಬಡಿದಂತಾಗಿದ್ದ ಗ್ರಾಮಸ್ಥರು, ಊರುಹೊಕ್ಕ ನೀರು ನೆನಪಿಸಿಕೊಂಡು ಈಗಲೂ ಬೆಚ್ಚಿಬೀಳುತ್ತಿದ್ದಾರೆ.

ನೆರೆ ನಿಂತ ಮೇಲೆ ಕುಡಿಯಲು ಶುದ್ಧ ನೀರಿಲ್ಲ. ಗಬ್ಬೆದ್ದ ವಾತಾವರಣದಲ್ಲಿ ಹಿಂಸೆ ಅನುಭವಿಸುತ್ತಿದ್ದೇವೆ. ಹಾವು, ಚೇಳು,ಕಪ್ಪೆಗಳ ಉಪಟಳ ಹೆಚ್ಚಾಗಿ ಭಯದ ಪರಿಸ್ಥಿತಿ ಸೃಷ್ಟಿಯಾಗಿದ್ದರೂ ಯಾರು ನಮ್ಮ ಗೋಳುಕೇಳಲು ಬರುತ್ತಿಲ್ಲ ಎಂದು ಗ್ರಾಮದ ಶರಣಮ್ಮ, ದ್ಯಾವಮ್ಮ, ಶಾಂತಮ್ಮ, ಶರಣಮ್ಮ, ಮಲ್ಲಮ್ಮ ಹಾಗೂ ಹಾಜಿಸಾಬ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿದಾಗ ಹಿರಿಯ ಅಧಿಕಾರಿಗಳು, ಆರೋಗ್ಯಸಿಬ್ಬಂದಿ ಹಾಗೂ ಪೊಲೀಸರ ತಂಡವೇ  ಗ್ರಾಮದಲ್ಲಿ ಬೀಡುಬಿಟ್ಟಿತ್ತು. ಗಂಜಿ ಕೇಂದ್ರತೆರೆದು ಟ್ಯಾಂಕರ್‌ಗಳ ಮೂಲಕ ಕುಡಿಯಲು ನೀರು ಸರಬರಾಜು ಮಾಡಲಾಗುತ್ತಿತ್ತು.

ಬುಧವಾರದಿಂದ ಗಂಜಿ ಕೇಂದ್ರ ಮುಚ್ಚಿದೆ. ಟ್ಯಾಂಕರ್‌ ನೀರು ಸರಬರಾಜು ಕೂಡ ಸ್ಥಗಿತಗೊಂಡಿದೆ. ಬದುಕು ಸಹಜ ಸ್ಥಿತಿಗೆ ಮರಳುವ ಮೊದಲೇ ಅಧಿಕಾರಿಗಳು ಏಕಾಏಕಿ ಸೌಲಭ್ಯ ಕಸಿದುಕೊಂಡಿದ್ದಾರೆ. ಗ್ರಾಮದಲ್ಲಿ ಕೆಟ್ಟ ವಾಸನೆ ಹಬ್ಬಿಕೊಂಡಿದೆ. ಮೂಗು ಮುಚ್ಚಿಕೊಂಡರೂ ತಲೆ ಸುತ್ತಿ ಬೀಳುವಂತಹ ಮೀನಿನ ಪಾಚಿ ವಾಸನೆ. ಪ್ರವಾಹ ಉಕ್ಕಿಸಿದ ರಾಶಿಗಟ್ಟಲೇ ಕಸ ಗ್ರಾಮದ ಬೀದಿಗಳನ್ನು ಮುಚ್ಚಿಸಿದೆ. ಕುಡಿಯಲು ನೀರಿನ ಸಮಸ್ಯೆಯಾಗಿ ಕಲುಷಿತ ನದಿ ನೀರನ್ನೇ ಬಳಕೆ ಮಾಡುತ್ತಿದ್ದೇವೆ. ನದಿಗೆ ಹೋಗುವ ದಾರಿಯಲ್ಲಿ ಮಹಾ ಹೂಳು ಆವರಿಸಿದ್ದು,  ಸ್ವಚ್ಛತೆಗೆ ಕ್ರಮ ಕೈಗೊಂಡಿಲ್ಲ. ಹಾವು, ಚೇಳು ಸೇರಿದಂತೆ ಇನ್ನಿತ ವಿಷಜಂತುಗಳು ಮನೆಯೊಳಗೆ ನುಗ್ಗಿ ಪ್ರಾಣಭೀತಿ ಹುಟ್ಟಿಸಿವೆ. ಮಹ್ಮದ್‌ ರμàಕ್‌ ಎಂಬಾತ ಹಾವು ಕಡಿತಕ್ಕೆ ತುತ್ತಾಗಿದ್ದಾನೆ. ಊರಿನ ಹುಡುಗರು ಹಾವು-ಚೇಳುಗಳನ್ನು ಹುಡುಕಿ ಹುಡುಕಿ ಹೊಡೆಯುತ್ತಿದ್ದಾರೆ. ಪ್ರವಾಹ ನಮ್ಮನ್ನು ಬದುಕಲು ಬಿಡುತ್ತಿಲ್ಲ ಎಂದು ಗ್ರಾಮಸ್ಥರಾದ ಶರಣು ಪಸಾರ, ಸಾಬಣ್ಣ ಬನ್ನೇಟಿ, ಭೀಮರಾಯ ನರಿಬೋಳಿ, ಸಿದ್ರಾಮ, ಶರಣಪ್ಪ ಆಂದೋಲಾ ತಮ್ಮ ಅಳಲು ಹೇಳಿಕೊಂಡಿದ್ದಾರೆ.

ಪ್ರವಾಹ ತಗ್ಗಿದ ಮೇಲೆ ಗ್ರಾಮದಲ್ಲಿ ಹೂಳು ಮತ್ತು ಕಸ ಆವರಿಸುವುದು ಸಹಜ. ವಿಷಜಂತುಗಳೂ ಸಹ ಹರಿದಾಡುತ್ತವೆ. ದುರ್ವಾಸನೆ ಕೂಡ ಹಬ್ಬುತ್ತದೆ. ಇವು ಭೀಕರ ಪ್ರವಾಹದ ಪ್ರಾಕೃತಿಕ ಕೊಡುಗೆಗಳು. ಮೂರು ದಿನಗಳ ವರೆಗೆ ಕಡಬೂರಿನಲ್ಲಿ ಈ ದುಸ್ಥಿತಿ ಜೀವಂತವಿರುತ್ತದೆ. ಕಸ ಮತ್ತು ಹೂಳು ಒಣಗಿದ ನಂತರ ಇಡೀ ಗ್ರಾಮದಲ್ಲಿ ಸ್ವತ್ಛತೆ ಕೈಗೊಂಡು ಬ್ಲೀಚಿಂಗ್‌ ಸಿಂಪರಣೆ ಮಾಡುತ್ತೇವೆ. ಗಂಜಿ ಕೇಂದ್ರ ಬಂದ್‌ ಮಾಡಿದ್ದೇವೆ. ಆದರೆ, ಗ್ರಾಮಕ್ಕೆ ನೀರು ಪೂರೈಕೆ ಸ್ಥಗಿತಗೊಂಡಿದೆ ಎಂಬುದು ಸುಳ್ಳು ಆರೋಪ.  ಬಸಲಿಂಗಪ್ಪ ಡಿಗ್ಗಿ, ತಾಪಂ ಇಒ, ಚಿತ್ತಾಪುರ

ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.