ಐರಾವನ್‌ಗೆ ಅದ್ವಿತಿ ಶೆಟ್ಟಿ ನಾಯಕಿ

ಸಸ್ಪೆನ್ಸ್‌- ಥ್ರಿಲ್ಲರ್‌ ಚಿತ್ರದಲ್ಲಿ ಮಿಂಚಿಂಗ್‌

Team Udayavani, Nov 10, 2020, 1:56 PM IST

cinema-tdy-4

ನಟಿ ಅದ್ವಿತಿ ಶೆಟ್ಟಿ ಮತ್ತೂಂದು ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು, ಹೊಸ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಅಂದಹಾಗೆ, ಅದ್ವಿತಿ ಶೆಟ್ಟಿ ನಾಯಕಿಯಾಗಿ ಅಭಿನಯಿಸುತ್ತಿರುವ ಹೊಸಚಿತ್ರದ ಹೆಸರು “ಐರಾವನ್‌’.

ಈ ಚಿತ್ರದಲ್ಲಿ ನಟ ಜಯರಾಮ್‌ ಕಾರ್ತಿಕ್‌ (ಜೆ.ಕೆ) ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಜೆ.ಕೆ ಗೆ ಜೋಡಿಯಾಗಿ ಅದ್ವಿತಿ ತೆರೆಮೇಲೆಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ನೆರವೇರಿದ್ದು, ಇದೇ ನ.9 ರಿಂದ ಚಿತ್ರದ ಚಿತ್ರೀಕರಣ ಕೂಡ ಪ್ರಾರಂಭವಾಗಿದೆ.

ಇನ್ನು “ಐರಾವನ್‌’ ಚಿತ್ರದಲ್ಲಿ ತಮ್ಮ ಹೊಸ ಪಾತ್ರದ ಬಗ್ಗೆ ಮಾತನಾಡುವ ಅದ್ವಿತಿ ಶೆಟ್ಟಿ, “ಕೆಲ ದಿನಗಳ ಹಿಂದಷ್ಟೇ ಈ ಸಿನಿಮಾದ ಆಫ‌ರ್‌ ನನಗೆ ಬಂದಿತು. ನನ್ನ ನಿಜ ಜೀವನಕ್ಕೆ ಹತ್ತಿರವಿರುವಂಥಕ್ಯಾರೆಕ್ಟರ್‌ ಇದರಲ್ಲಿ ಸಿಕ್ಕಿದೆ. ಸಿನಿಮಾದ ಸ್ಕ್ರಿಪ್ಟ್ ಮತ್ತುಕ್ಯಾರೆಕ್ಟರ್‌ ಎರಡೂ ಇಷ್ಟವಾಗಿದ್ದರಿಂದ ಈ ಸಿನಿಮಾ ಮಾಡಲು ಒಪ್ಪಿಕೊಂಡೆ’ ಎನ್ನುತ್ತಾರೆ.

“ನನಗೆ ನಿಜ ಜೀವನದಲ್ಲಿ ಮಕ್ಕಳನ್ನು ಕಂಡರೆ ತುಂಬ ಇಷ್ಟ. ಅಂಥದ್ದೇ ಪಾತ್ರ ಈ ಸಿನಿಮಾದಲ್ಲೂ ಸಿಕ್ಕಿದೆ. ಮಕ್ಕಳನ್ನುಕಂಡರೆ ಇಷ್ಟಪಡುವ ಮುಗ್ಧ ಹುಡುಗಿಯಾಗಿ, ಮಕ್ಕಳಿಗೆ ಸಹಾಯ ಮಾಡುವಂಥ ಪಾತ್ರ ನನ್ನದು. ತುಂಬ ಫ್ರೆಂಡ್ಲಿ ಆಗಿರುವಂಥ, ಅಷ್ಟೇ ಲೈವ್ಲಿ ಆಗಿ ಕಾಣಿಸಿಕೊಳ್ಳುತ್ತೇನೆ. ಜೊತೆಗೆ ಸಿನಿಮಾದಲ್ಲಿ ನನಗಾಗಿ ಎರಡು ಸಾಂಗ್‌ಕೂಡ ಇದೆ. ಜೆ.ಕೆ ಮತ್ತು ವಿವೇಕ್‌ ಇಬ್ಬರು ಜೊತೆಗೂ ತೆರೆಮೇಲೆ ನನ್ನ ಕಾಂಬಿನೇಷನ್‌ ಇದೆ’ ಎಂದು ಪಾತ್ರದ ಬಗ್ಗೆ ವಿವರಣೆಕೊಡುತ್ತಾರೆ ಅದ್ವಿತಿ.

ಅಂದಹಾಗೆ, “ಐರಾವನ್‌’ ಸಸ್ಪೆನ್ಸ್‌ – ಥ್ರಿಲ್ಲರ್‌ಕಥೆ ಇರುವ ಸಿನಿಮಾವಂತೆ. “ನಿರಂತರ ಪ್ರೊಡಕ್ಷನ್ಸ್‌’ ಮೂಲಕ ನಿರಂತರ ಗಣೇಶ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹಲವು ಚಿತ್ರಗಳಿಗೆ ಸಹ ಹಾಗೂ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ರಾಮ್ಸ್‌ ರಂಗಾ ಈ ಚಿತ್ರಕ್ಕೆಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “ಐರಾವನ್‌’ ಜೊತೆಗೆ ಇನ್ನೂ ಎರಡು ಹೆಸರಿಡದ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅದ್ವಿತಿ ಶೆಟ್ಟಿ, ಶೀಘ್ರದಲ್ಲಿಯೇ ಈ ಚಿತ್ರ ಅನೌನ್ಸ್‌ ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.