ಮಾನವತೆಯಲ್ಲಿ ಯಶಸ್ಸು: ಡಾ| ರಾಜ್‌ ಕುಮಾರ್‌

ಮಣಿಪಾಲ ಮಾಹೆ ವಿ.ವಿ. ವರ್ಚುವಲ್‌ ಘಟಿಕೋತ್ಸವ

Team Udayavani, Nov 21, 2020, 6:41 AM IST

ಮಾನವತೆಯಲ್ಲಿ ಯಶಸ್ಸು: ಡಾ| ರಾಜ್‌ ಕುಮಾರ್‌

ಉಡುಪಿ: ಯಶಸ್ಸು ಎನ್ನುವುದು ಅಂತಸ್ತು, ಹುದ್ದೆ, ಸಂಪತ್ತಿನ ನೆಲೆಯಲ್ಲಿರುವುದಿಲ್ಲ, ಬದಲಾಗಿ ಮಾನವತೆಯ ಸಾಮಾನ್ಯ ಚಟುವಟಿಕೆಯಲ್ಲಿರುತ್ತದೆ ಎಂದು ಹರಿಯಾಣ ಸೋನಿಪತ್‌ನ ಶ್ರೇಷ್ಠ ಮಾನ್ಯತಾ ಸಂಸ್ಥೆ ಒಪಿ ಜಿಂದಾಲ್‌ ಗ್ಲೋಬಲ್‌ ಸ್ಥಾಪಕ ಕುಲಪತಿ ಡಾ| ಸಿ.ರಾಜ್‌ಕುಮಾರ್‌ ಅಭಿಪ್ರಾಯಪಟ್ಟರು. ಅವರು ಶುಕ್ರವಾರ ಮಣಿಪಾಲ ಮಾಹೆ ವಿ.ವಿ.ಯ ಮೊದಲ ದಿನದ ಆನ್‌ಲೈನ್‌ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ನಾವೀಗ ಅನಿವಾರ್ಯವಾಗಿ ವರ್ಚುವಲ್‌ ಘಟಿಕೋತ್ಸವವನ್ನು ನಡೆಸುತ್ತಿದ್ದೇವೆ. ಮುಖತಃ ವಿನಿಮಯ ಸಾಧ್ಯವಾಗದೆ ಎಲ್ಲ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ಹಾರೈಸುತ್ತಿದ್ದೇವೆ ಎಂದು ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌ ಶುಭ ಕೋರಿದರು.

ವಿ.ವಿ.ಯು 31 ಶಿಸ್ತುಗಳಲ್ಲಿ 350ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು 28,000 ವಿದ್ಯಾರ್ಥಿಗಳಿಗೆ ನಡೆಸಿದ್ದೇವೆ. ಕೇಂದ್ರ ಸರಕಾರದ ಶ್ರೇಷ್ಠ ಸಂಸ್ಥೆಯ ಮಾನ್ಯತೆ ಮಾಹೆಯ ಜಾಗತಿಕ ದಾಪುಗಾಲಿಗೆ ಇಂಬು ನೀಡಿದೆ ಎಂದು ಕುಲಪತಿ ಲೆ| ಜ| ಡಾ| ಎಂ.ಡಿ.ವೆಂಕಟೇಶ್‌ ಹೇಳಿದರು.

ಕೊರೊನಾ ಸೋಂಕು ಜಾಗತಿಕ ಚಟುವಟಿಕೆಗಳನ್ನು ಅಸ್ತವ್ಯಸ್ತಗೊಳಿಸಿದರೂ ಹೊಸ ಶೋಧಗಳಿಗೆ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ನಮ್ಮ ವಿ.ವಿ., ವಿದ್ಯಾರ್ಥಿಗಳು, ಬೋಧಕರು ಪೂರಕವಾಗಿ ಹೆಜ್ಜೆ ಇರಿಸಿದ್ದಾರೆ. ನಮ್ಮ ಸ್ಥಾಪಕರಾದ ಡಾ| ಟಿಎಂಎ ಪೈಯವರು ಹಾಕಿಕೊಟ್ಟ ಮಾರ್ಗದಲ್ಲಿ ಮಾಹೆಯ ಸಾಧನೆ ಮುಂದು ವರಿಯಲಿದೆ ಎಂದು ಸಹಕುಲಪತಿ ಡಾ| ಪಿಎಲ್‌ಎನ್‌ಜಿ ರಾವ್‌ ಅವರು ಹೇಳಿದರು.

ಮಾಹೆ ಟ್ರಸ್ಟಿ ವಸಂತಿ ಪೈ, ಸಹಕುಲಪತಿಗಳಾದ ಡಾ| ದಿಲೀಪ್‌ ನಾಯಕ್‌, ಡಾ| ಸಿ.ಜಿ.ತಮ್ಮಯ್ಯ, ಮೌಲ್ಯಮಾಪನ ಕುಲಸಚಿವ ಡಾ| ವಿನೋದ ಥಾಮಸ್‌, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕಿ ಡಾ| ಗೀತಾ ಮಯ್ಯ, ವಿವಿಧ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಕುಲಸಚಿವ ಡಾ| ನಾರಾಯಣ ಸಭಾಹಿತ್‌ ವಂದಿಸಿದರು.

ಸವಾಲಿಗೆ ಉತ್ತರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ
ನೀವೇನು ಜೀವನದಲ್ಲಿ ಮಾಡಲು ಉದ್ದೇಶಿಸಿದ್ದಿರೋ ಅದು ಚಿಕ್ಕ ಪ್ರಮಾಣದ ಧೈರ್ಯ, ದಯೆ, ಪ್ರೀತಿ, ಔದಾರ್ಯದ ಮೂಲಕ ಸಾಧ್ಯವಾಗುತ್ತದೆ. ಈ ಗುಣಗಳು ಸುತ್ತಮುತ್ತಲಿನವರ ಮೇಲೆ ಭಾರೀ ಪರಿಣಾಮವನ್ನು ತರುತ್ತದೆ ಎಂದರು. ನಮ್ಮ ಜೀವನದಲ್ಲಿ ಇದುವರೆಗೆ ಕಾಣದಂತಹ ಬಿಕ್ಕಟ್ಟು ಕಂಡುಬಂದಿದೆ. ಕೊರೊನಾ ಕಾರಣದಿಂದ ಅನಿಶ್ಚಿತತೆ, ಸಂಕೀರ್ಣತೆ ಉಂಟಾಗಿದೆ. ಮಣಿಪಾಲ ವಿ.ವಿ.ಯ ಸುರಕ್ಷೆಯಲ್ಲಿರುವ ನೀವು ಜಾಗತಿಕವಾಗಿ ಕಂಡುಬಂದ ಸವಾಲುಗಳಿಗೆ ಉತ್ತರ ನೀಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಈ ಮೂಲಕ ಭವಿಷ್ಯದ ಜಾಗತಿಕ ನಾಯಕರಾಗಬೇಕು ಎಂದು ಡಾ| ರಾಜ್‌ ಕುಮಾರ್‌ ಹಾರೈಸಿದರು.

ಟಾಪ್ ನ್ಯೂಸ್

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.