ಕೇಂದ್ರದ ವಿರುದ್ಧ ರೈತ, ಕಾರ್ಮಿಕರ ಆಕ್ರೋಶ


Team Udayavani, Nov 27, 2020, 4:52 PM IST

Untitled-6

ಹಾಸನ: ಕೇಂದ್ರ ಸರ್ಕಾರದ ಕಾರ್ಮಿಕ, ರೈತ ಮತು ¤ ಖಾಸಗೀಕರಣ ನೀತಿ ವಿರೋಧಿಸಿ ರೈತ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.

ಕಾನೂನುಗಳ ತಿದ್ದುಪಡಿ ವಿರೋಧಿಸಿ ಹಾಗೂ ಕನಿಷ್ಠ ವೇತನ ನೀಡುವಂತೆ ಮತ್ತು  ವಿವಿಧ ‌ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು), ಅಖೀಲ ಭಾರತ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ, ವಿದ್ಯಾರ್ಥಿ, ಯುವಜನ, ದಲಿತ, ಮಹಿಳಾ, ಕನ್ನಡ ‌ ಮತ್ತು ಅಲ್ಪಸಂಖ್ಯಾತ ಸಂಘಟನೆಗಳಿಂದಗುರುವಾರದಂದುಕರೆಯಲಾಗಿದ್ದ ಅಖೀಲ ಭಾರತ ಮುಷ್ಕರದ ‌ ಅಂಗವಾಗಿ ಪ್ರತಿಭಟನಾ ಮೆರವಣಿಗೆ ನಂತರ ಸಭೆ ನಡೆಸಿ ಮನವಿ ಮಾಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಆನಂತರ ಬಹಿರಂಗಸಭೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ ಸಾಂಕ್ರಾಮಿಕ ‌ ರೋಗದಿಂದ ದೇಶದಲ್ಲಿ ಅನಿರೀಕ್ಷಿತವಾಗಿ ಅವೈಜ್ಞಾನಿಕ ಲಾಕ್‌ಡೌನ್‌ ಮಾಡಲಾಯಿತು. ಮೊದಲೇ ಸಂಕಷ್ಟದಲ್ಲಿರುವ ಕಾರ್ಮಿಕರ ಹಿತ ಕಾಪಾಡಬೇಕಾಗಿದ್ದ ಸರ್ಕಾರ, ದೇಶದ ಆರ್ಥಿಕಸಾರ್ವಭೌಮತೆಗೆ ಧಕ್ಕೆ ತರುವ, ಅನ್ನದಾತ ರೈತರು ಮತ್ತು ಕಾರ್ಮಿಕರನ್ನು ಪೂರ್ಣ ಗುಲಾಮಗಿರಿಗೆ ತಳ್ಳುವ ಸರ್ವಾಧಿಕಾರಿ ಧೋರಣೆ ತಳೆದಿದೆ ಎಂದು ರೈತ ‌ ಹಾಗೂ ಕಾರ್ಮಿಕ ಸಂಘಟನೆಗಳು ಆರೋಪಿಸಿದವು.

ಕಾರ್ಮಿಕಸಂಘಟನೆಗಳು,ಸ್ವತಂತ್ರಸಂಘಟನೆಗಳು ಎಲ್‌ಐಸಿ, ಬ್ಯಾಂಕ್‌, ರಕ್ಷಣಾ ವಲಯ, ರೈಲ್ವೆ, ಬಿಎಸ್‌ ಎನ್‌ಎಲ್‌, ರಾಜ್ಯ ಮತು ¤ ಕೇಂದ್ರ ಸೇವೆ ಮುಂತಾದ ಅಖೀಲ ಭಾರತ ಸಂಘಟನೆಗಳು, ಕಾರ್ಮಿಕರು, ನೌಕರರು ಅಸಂಘಟಿತ ‌ ಕ್ಷೇತ್ರದ ಕಾರ್ಮಿಕರಾದ ಕಟ್ಟಡ, ಹಾಸ್ಟೆಲ್‌, ಹಮಾಲಿ, ಬೀಡಿ, ತೋಟಗಾರಿಕೆ, ಗುತ್ತಿಗೆ ಕಾರ್ಮಿಕರು, ಪಂಚಾಯ್ತಿ ನೌಕರರು, ಬೀದಿ ಬದಿ ವ್ಯಾಪಾರಸ್ಥರು, ಮನೆ ಕೆಲಸಗಾರರು, ಆಟೋ, ಟ್ಯಾಕ್ಸಿ, ಸಾರಿಗೆಯಲ್ಲಿ ಕಾರ್ಯನಿರ್ವಹಿಸುವ ನೌಕರರು, ಅಂಗನವಾಡಿ, ಬಿಸಿಯೂಟ, ಆಶಾ, ನೌಕರರು ಮತ್ತು ವಿದ್ಯಾರ್ಥಿ, ಯುವಜನ, ಮಹಿಳಾ, ರೈತ ಸಂಘಟನೆಗಳು ಜೊತೆಗೂಡಿ ಸಂವಿಧಾನಿಕ ಹಕ್ಕುಗಳಿಗಾಗಿ ಕೇಂದ್ರ ಸರ್ಕಾರದ ‌ವಿರುದ್ಧಹೋರಾಟ ನಡೆಸು ತ್ತಿದ್ದೇವೆಎಂದು ಪ್ರತಿಭಟನಾಕಾರರು ಹೇಳಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್‌, ದಲಿತ ಮುಖಂಡರಾದ ‌ ಎಚ್‌.ಕೆ.ಸಂದೇಶ್‌, ಎಐಟಿ ಯುಸಿಯ ಮುಖಂಡ ಎಂ.ಸಿ.ಡೋಂಗ್ರೆ, ಕೆಪಿಆರ್‌ಎಸ್‌ ಜಿಲ್ಲಾಧ್ಯಕ್ಷ ಎಚ್‌.ಆರ್‌.ನವೀನ್‌ಕುಮಾರ್‌,  ರೈತ ಮುಖಂಡ ಕುಮಾರ್‌, ಅರಂವಿದ್‌, ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಮಂಜುನಾಥ್‌,ಕರಿಯಪ್ಪ, ರಂಗಸ್ವಾಮಿ, ರಾಜ್ಯ ರೈತ ‌ ಸಂಘದ ಮುಖಂಡಆನೆಕೆರೆ ರವಿ, ಅಂಗನವಾಡಿ, ಬಿಸಿಯೂಟ ನೌಕರರು, ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

6–strike

Holenarasipur: ಶಾಸಕ ಹೆಚ್.ಡಿ. ರೇವಣ್ಣ ಬಂಧನ ಹಿನ್ನೆಲೆ ಬಂದ್ ಗೆ ಕರೆ

Sakleshpur: ಮಲೆನಾಡಿಗರಿಗೆ ಕಾಡಾನೆ ಜತೆ ಚಿರತೆ ಭಯ

Sakleshpur: ಮಲೆನಾಡಿಗರಿಗೆ ಕಾಡಾನೆ ಜತೆ ಚಿರತೆ ಭಯ

HD Revanna ಫಾರ್ಮ್ ಹೌಸ್‌ನಲ್ಲಿ ಎಸ್‌ಐಟಿ ತಂಡ ಪರಿಶೀಲನೆ

HD Revanna ಫಾರ್ಮ್ ಹೌಸ್‌ನಲ್ಲಿ ಎಸ್‌ಐಟಿ ತಂಡ ಪರಿಶೀಲನೆ

Prajwal Revanna ಲೈಂಗಿಕ ದೌರ್ಜನ್ಯ ಪ್ರಕರಣ: ಪೊಲೀಸರ  ಕಾರ್ಯವೈಖರಿ ಬಗ್ಗೆ ವಕೀಲರ ಸಂಶಯ

Prajwal Revanna ಲೈಂಗಿಕ ದೌರ್ಜನ್ಯ ಪ್ರಕರಣ: ಪೊಲೀಸರ  ಕಾರ್ಯವೈಖರಿ ಬಗ್ಗೆ ವಕೀಲರ ಸಂಶಯ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.