ಸರ್ಕಾರಿ ಶಾಲೆ ಹೈಟೆಕ್‌ ಶಾಲೆಗಳಾಗಬೇಕು

ಶಾಸಕ ಜ್ಯೋತಿ ಗಣೇಶ್‌ರಿಂದ 3 ಶಾಲೆ ದತ್ತು, ಸ್ಮಾರ್ಟ್‌ ಶಾಲಾ ಕೊಠಡಿ, ಇತರೆ ಸೌಲಭ್ಯಕ್ಕೆ ಆದ್ಯತೆ

Team Udayavani, Dec 8, 2020, 3:47 PM IST

ಸರ್ಕಾರಿ ಶಾಲೆ ಹೈಟೆಕ್‌ ಶಾಲೆಗಳಾಗಬೇಕು

ತುಮಕೂರು: ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು ಜೊತೆಗೆ ಅವು ಮಾದರಿ ಶಾಲೆಗಳಾಗಬೇಕು ಎಂದು 2020-21ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಿಂದ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಮೂರು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ.

ತಮ್ಮ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಶೋಕ ರಸ್ತೆಯ ಎಂಪ್ರಸ್‌ ಶಾಲೆ, ಶಿರಾಗೇಟ್‌ ಉತ್ತರ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕ್ಯಾತ್ಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು ಎಂದು ಸರ್ಕಾರದ ನಿಯಮದಹಿನ್ನೆಲೆಯಲ್ಲಿ ಶಾಸಕರು ತಮ್ಮ ವ್ಯಾಪ್ತಿಯ ಮೂರು ಶಾಲೆಗಳನ್ನು ದತ್ತು ಪಡೆದಿದ್ದುಈ ಶಾಲೆಗಳುಈಗ ಹೊಸ ರೂಪದಲ್ಲಿ ಅಭಿವೃದ್ಧಿಕಾಣಲಾರಂಭಿಸಿವೆ.

ನಿರೀಕ್ಷೆಗೂ ಮೀರಿದ ಮಕ್ಕಳ ದಾಖಲಾತಿ: ಖಾಸಗಿ ಶಾಲೆಗಳ ಅಬ್ಬರದ ನಡುವೆ ನಗರ, ಪಟ್ಟಣ, ಹಳ್ಳಿಗಳಲ್ಲಿ ಇದ್ದ ನಮ್ಮ ಕನ್ನಡ ಸರ್ಕಾರಿ ಶಾಲೆಗಳುಮುಚ್ಚಿಹೋಗುತ್ತಿರುವ ವೇಳೆಯಲ್ಲಿ ಸರ್ಕಾರಿ ಶಾಲೆಖಾಸಗಿ ಶಾಲೆಯನ್ನು ಮೀರಿಸುವ ರೀತಿಯಲ್ಲಿಇತ್ತೀಚೆಗೆ ಅಭಿವೃದ್ಧಿ ಕಾಣುತ್ತಿದ್ದು ಕೆಲವು ಸರ್ಕಾರಿಶಾಲೆಗಳಲ್ಲಿ ಈಗ ನಿರೀಕ್ಷೆಗೂ ಮೀರಿದ ಮಕ್ಕಳುದಾಖಲಾತಿ ಆಗುತ್ತಿದ್ದಾರೆ, ಜೊತೆಗೆ ಸರ್ಕಾರಿಶಾಲೆಗಳು ಎಲ್ಲರನ್ನು ಬೆರಗು ಗೊಳಿಸುವ ರೀತಿಯಲ್ಲಿ ನಗರದ ಮೂರು ಶಾಲೆಗಳುಅಭಿವೃದ್ಧಿ ಕಾಣುತ್ತಿವೆ. ದತ್ತು ಪಡೆದಿರುವ ಶಾಲೆಗಳು ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿದ್ದು ಎಲ್‌ಕೆಜಿ ಯಿಂದ12ನೇ ತರಗತಿ ವರೆಗೆ ಇಲ್ಲಿ ಶಿಕ್ಷಣ ಕಲಿಸುವ ಅವಕಾಶಗಳಾಗುತ್ತಿದೆ.

ಹೈಟೆಕ್‌ ಸೌಲಭ್ಯ: ಈಗ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನಡೆಯುತ್ತಿದೆ, ಈ ಶಾಲೆಯಲ್ಲಿ ಖಾಸಗಿ ಶಾಲೆಯಲ್ಲಿಯೂ ಇರದ ರೀತಿಯಲ್ಲಿ ಸ್ಮಾರ್ಟ್‌ ಕ್ಲಾಸ್‌ ರೀತಿಯ ರೂಮ್‌, ಆನ್‌ಲೈನ್‌ ಸ್ಕೂಲ್‌, ಶುದ್ಧ ಕುಡಿಯುವ ನೀರಿನ ಸೌಲಭ್ಯ,ಹೈಟೆಕ್‌ ಶೌಚಾಲಯಗಳು, ಆಟದ ಮೈದಾನಗಳು, ನುರಿತ ಅನುಭವಿ

ಶಿಕ್ಷಕರಿಂದ ಬೋಧನೆ, ಕಂಪ್ಯೂಟರ್‌ ಶಿಕ್ಷಣ, ಯೋಗ ಶಿಕ್ಷಣ, ಸಂಗೀತ ಶಿಕ್ಷಣ, ವಿಜ್ಞಾನ ಪ್ರಯೋಗಾಲಯ, ಭಾಷಾ ಪ್ರಯೋಗಾಲಯ, ಸಮಾಜ ವಿಜ್ಞಾನ ಪ್ರಯೋಗಾಲಯಗಳು ಈ ಶಾಲೆಯಲ್ಲಿ ನಿರ್ಮಾಣವಾಗುತ್ತಿವೆ.  ‌ನಗರದ ಪ್ರತಿಷ್ಠಿತ ‌ ಎಂಪ್ರಸ್‌ ಶಾಲೆಯಲ್ಲಿ 1700ಕ್ಕೂ ಹೆಚ್ಚು ವಿದ್ಯಾರ್ಥಿಗ ‌ಳು, ಉತ್ತರ ಬಡಾವಣೆ ಮತ್ತು ಕ್ಯಾತ್ಸಂದ್ರದಲ್ಲಿ 200 ಮಕ್ಕಳು ಶಿಕ್ಷಣ ಕ ‌ಲಿಯುತ್ತಿದ್ದಾರೆ.

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅಭಿವೃದ್ಧಿ: ಈ ಶಾಲೆಗಳಲ್ಲಿ ಆಟದ ಮೈದಾನ, ಶಾಲಾ ಕಾಂಪೌಂಡ್‌ ಮಕ್ಕಳಿಗೆ ಬಿಸಿಯೂಟ, ಜೊತೆಗೆ ದೈಹಿತ ಶಿಕ್ಷಕರೂ ಸೇರಿದಂತೆ ಶಿಕ್ಷಕರ ಕೊರತೆ ಇರುವುದಿಲ್ಲ. ನಗರದಲ್ಲಿಇರುವ ಶಾಲೆಗಳಿಗೆ ಹೈಟೆಕ್‌ ಸ್ಪರ್ಶ ನೀಡಲು ತುಮಕೂರು ಶಾಸಕರು ಮುಂದಾಗಿದ್ದು ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿಕೆಲವು ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ರೂಮ್‌ ಮಾಡಲು ಮುಂದಾಗಿದ್ದು ನಗರದಲ್ಲಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಯಾಗಲಿವೆ.

ನಬಾರ್ಡ್‌ನಿಂದ ಹಣ ತಂದು ಅಭಿವೃದ್ಧಿ : ತುಮಕೂರು ನಗರದಲ್ಲಿ ನೂರಾರು ಸರ್ಕಾರಿ ಶಾಲೆಗಳು ಇವೆ, ಆದರೆ ಇದರಲ್ಲಿ ಮಕ್ಕಳಿಗೆ ಅನುಕೂಲ ವಾಗುವ ರೀತಿಯಲ್ಲಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು. ನಗರದ ಸರ್ಕಾರಿ ಜೂನಿಯರ್‌ಕಾಲೇಜಿನವ್ಯಾಪ್ತಿಯಲ್ಲಿ ಉತ್ತಮ ಪರಿಸರ ಇದೆ. ಇಲ್ಲಿಯ ಶಾಲಾಕಟ್ಟಡಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇಲ್ಲಿಯೂ ಒಂದುಕರ್ನಾಟಕ ಪಬ್ಲಿಕ್‌ ಶಾಲೆ ಆರಂಭಿಸಲು ಎಲ್ಲಾ ಸಿದ್ಧತೆ ನಡೆದಿದೆ.ನಬಾರ್ಡ್‌ನಿಂದ ಹಣ ತಂದು ಇಲ್ಲಿಯ ಶಾಲೆಗಳಅಭಿವೃದ್ಧಿಯಾಗುತ್ತಿದೆ. ಎಂಪ್ರಸ್‌ ಶಾಲೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ಮೇಲೆ ಈ ಶಾಲೆಯಅಭಿವೃದ್ಧಿಗೆ ಇನ್ನೂ ಹೆಚ್ಚಿನ ಒತ್ತು ನೀಡಲಾಗುವುದು. ಸ್ಮಾರ್ಟ್‌ ಸಿಟಿಯೋಜನೆಯಲ್ಲಿ ಜೂನಿಯರ್‌ ಕಾಲೇಜು ಮೈದಾನವೂ ಅಭಿವೃದ್ಧಿಯಾಗುತ್ತಿದೆ. ಇದೆಲ್ಲಾ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಪೂರಕವಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದರು.

ಸರ್ಕಾರಿ ಶಾಲೆಗಳುಖಾಸಗಿ ಶಾಲೆಗಳ ರೀತಿಯಲ್ಲಿ ಅಭಿವೃದ್ಧಿಕಾಣ ಬೇಕು ಎಂದು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ನಗರದ ಮೂರುಶಾಲೆಗಳನ್ನು ದತ್ತು ಪಡೆದಿದ್ದು ಈ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡಲು ಅಗತ್ಯಕ್ರಮಕೈಗೊಂಡಿದ್ದೇವೆ. ಜಿ.ಬಿ.ಜ್ಯೋತಿ ಗಣೇಶ್‌ ಶಾಸಕರು ತುಮಕೂರು ನಗರ.

ನಗರದ ಸರ್ಕಾರಿ ಶಾಲೆಗಳಲ್ಲಿಈಗ ದಾಖಲಾತಿ ಹೆಚ್ಚುತ್ತಿದೆ, ನಗರದ ಮೂರು ಶಾಲೆಗಳನ್ನು ಶಾಸಕರು ದತ್ತು ಪಡೆದಿದ್ದಾರೆ ಅವು ಅಭಿವೃದ್ಧಿಯಾಗುತ್ತಿವೆ. ಮೂರು ಶಾಲೆಗಳೂ ಕರ್ನಾಟಕಪಬ್ಲಿಕ್‌ ಶಾಲೆಯಾಗಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ ಶಾಲೆಗಳನ್ನು ಹೈಟೆಕ್‌ ಶಾಲೆ ಮಾಡಲು ಶಾಸಕರು ಮುಂದಾಗಿದ್ದಾರೆ. ಇದುಮಕ್ಕಳ ಕಲಿಕೆಗೆಹೆಚ್ಚು ಸಹಕಾರಿಯಾಗುತ್ತದೆ ಹನುಮಾನಾಯಕ್‌, ಕ್ಷೇತ್ರ ಶಿಕ್ಷಣಾಧಿಕಾರಿ

 

-ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.