ಕಟಾವು ಯಂತ್ರ ಸಿಗದೆ ರೈತರ ಪರದಾಟ

ಜಿಲ್ಲಾಡಳಿತ ನಿಗದಿಪಡಿಸಿದ ದರಕ್ಕೆ ಒಲ್ಲೆ ಎನುತ್ನಿರುವ ಖಾಸಗಿ ಯಂತ್ರದ ಮಾಲೀಕರು, ರೈತರಿಗೆ ಬೆಳೆ ನಾಶದ ಆತಂಕ

Team Udayavani, Dec 21, 2020, 3:47 PM IST

ಕಟಾವು ಯಂತ್ರ ಸಿಗದೆ ರೈತರ ಪರದಾಟ

ಮಂಡ್ಯ: ಜಿಲ್ಲೆಯಲ್ಲಿ ಭತ್ತ ಬೆಳೆ ಕಟಾವಿಗೆ ಬಂದಿದೆ. ಆದರೆ, ಕಟಾವು ಯಂತ್ರಗಳು ಸಿಗದ ಪರಿಣಾಮ ಕಟಾವು ವಿಳಂಬ ವಾಗುತ್ತಿರುವುದರಿಂದ ರೈತರು ಬೆಳೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯ7ತಾಲೂಕುಗಳಲ್ಲಿ ಸುಮಾರು 57,488 ಹೆಕ್ಟರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಈಗಾಗಲೇ ವಿವಿಧ ತಾಲೂಕುಗಳಲ್ಲಿ ಭತ್ತದ ಫಸಲು ಕಟಾ ವಿಗೆ ಬಂದಿದ್ದು, ಕಟಾವು ಮಾಡಲು ರೈತರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಕಟಾವು ಯಂತ್ರಗಳು ಕಡಿಮೆ ಇರುವುದರಿಂದ ಬೇಡಿಕೆ ಹೆಚ್ಚಾಗಿದೆ. ಇದರಿಂದ ಹೆಚ್ಚಿನ ದರ ನೀಡಬೇಕಾಗಿದೆ.

ನಿಗದಿತ ಸಮಯಕ್ಕೆ ಸಿಗದ ಯಂತ್ರಗಳು: ಭತ್ತ ಕಟಾವು ಪ್ರಾರಂಭವಾಗಿರುವುದರಿಂದ ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಹೊರ ರಾಜ್ಯಗಳಿಂದ ಕಟಾವು ಯಂತ್ರಗಳು ಜಿಲ್ಲೆಗೆ ಆಗಮಿಸಿವೆ. ಆದರೆ, ಏಕ ಕಾಲದಲ್ಲಿ ಭತ್ತ ಕಟಾವು ಬಂದಿರುವುದರಿಂದ ನಿಗದಿತ ಸಮಯಕ್ಕೆ ಕಟಾವು ಯಂತ್ರಗಳು ಸಿಗುತ್ತಿಲ್ಲ.

ಕೃಷಿ ಕೂಲಿ ಕಾರ್ಮಿಕರ ಕೊರತೆ: ಭತ್ತ ಕಟಾವಿಗೆ ಕೃಷಿ ಕೂಲಿ ಕಾರ್ಮಿಕರ ಕೊರತೆ ಉಂಟಾಗಿದೆ. ಕೋವಿಡ್ ಹಾಗೂ ಪ್ರಸ್ತುತ ಗ್ರಾಪಂ ಚುನಾವಣೆಯಿಂದ ಕಾರ್ಮಿಕರು ಕೃಷಿ ಚಟುವಟಿಕೆಗಳಿಂದ ದೂರು ಉಳಿದಿದ್ದು, ಚುನಾವಣೆ ಯಲ್ಲಿ ತೊಡಗಿಸಿಕೊಂಡಿರುವುದು ಇದಕ್ಕೆ ಕಾರಣವಾಗಿದೆ. ಇದರಿಂದ ಬೆಳೆ ಬೆಳೆದ ರೈತರಿಗೆ ದಿಕ್ಕು ತೋಚದಂತಾಗಿದೆ.

3 ಸಾವಿರ ಕೊಟ್ಟರೂ ಬಾರದ ಯಂತ್ರಗಳು: ಸಮಯ ಮೀರುತ್ತಿರುವುದರಿಂದ ರೈತರು ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ನಿಗದಿಪಡಿಸಿದಕ್ಕಿಂತ ಹೆಚ್ಚು ದರ ನೀಡಿ ಮುಂಚಿತವಾಗಿ ಬುಕ್ಕಿಂಗ್‌ ಮಾಡಿಕೊಳ್ಳ ಬೇಕು. ಕೆಲ ರೈತರು ಕೊಡಲು ಸಿದ್ಧರಿದ್ದರೂ ಯಂತ್ರಗಳು ಬರುತ್ತಿಲ್ಲ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ.

ಕಾಳು ಉದುರುವ ಆತಂಕ: ಈಗಾಗಲೇ ಭತ್ತ ಕಟಾವಿಗೆ ಬಂದಿರುವುದರಿಂದ ನಿಗದಿತ ಸಮಯದಲ್ಲಿ ಕಟಾವು ಮಾಡದಿದ್ದರೆ ಕಾಳು ಉದುರುವ ಆತಂಕ ಎದುರಾಗಿದೆ. ಒಂದು ವೇಳೆಕೃಷಿ ಕಾರ್ಮಿಕರಿಂದಕಟಾವು ಮಾಡಿಸಿದರೂ ಸಹ ಕಟಾವುಮಾಡುವಾಗಭತ್ತದ ಕಾಳುಹೆಚ್ಚುಉದುರುವ ಸಾಧ್ಯತೆ ಇದೆ. ಇದರಿಂದ ರೈತರಿಗೆ ನಷ್ಟವಾಗಲಿದೆ.

ಮಧ್ಯವರ್ತಿಗಳ ಹಾವಳಿ :

ಭತ್ತ ಕಟಾವು ಮಾಡುವ ಯಂತ್ರಗಳನ್ನು ಮುಂಚಿತವಾಗಿಯೇ ಮಧ್ಯವರ್ತಿಗಳು ಬುಕ್ಕಿಂಗ್‌ ಮಾಡಿಕೊಂಡಿರುವುದರಿಂದ ರೈತರಿಗೆ ನಿಗದಿತ ಸಮಯದಲ್ಲಿ ಸಿಗುತ್ತಿಲ್ಲ. ಮಧ್ಯವರ್ತಿಗಳ ಮೂಲಕವೇ ಯಂತ್ರಗಳ ಬುಕ್ಕಿಂಗ್ ಮಾಡಿಕೊಳ್ಳಬೇಕಾಗಿದೆ. ಮಧ್ಯವರ್ತಿಗಳಿಗೆ ಭತ್ತಕಟಾವು ಮಾಡಿಸುವ ರೈತರು ಹಣ ಸಂಗ್ರಹಿಸಿ ಕೊಟ್ಟರೆ ಮಾತ್ರ ಯಂತ್ರಗಳು ಬರಲಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು : ಕಳೆದ ಡಿ.4ರಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅವರು, ಜಿಲ್ಲೆಯಲ್ಲಿ ಭತ್ತದ ಬೆಳೆಯುಕಟಾವಿಗೆ ಬಂದಿರುವುದರಿಂದಕೃಷಿ ಕಾರ್ಮಿಕರ ಕೊರತೆ ಹೆಚ್ಚಾಗಿದೆ. ಇದರಿಂದ ಹೊರ ರಾಜ್ಯದ ಕಟಾವು ಯಂತ್ರಗಳನ್ನು ರೈತರು ಅವಲಂಬಿಸಿದ್ದಾರೆ. ಆದ್ದರಿಂದ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ನಿರ್ಧರಿಸಿದಂತೆ ಭತ್ತ ಕಟಾವು ಮಾಡುವಕಂಬೈಂಡ್‌ ಹಾರ್ವೆಸ್ಟರ್ ಚೈನ್‌/ಟ್ರಾಕ್‌ ಮಾಡೆಲ್‌ ಹಾಗೂ ಟಯರ್‌ ಮಾಡೆಲ್‌ ಯಂತ್ರಗಳಿಗೆ ಪ್ರತಿ ಗಂಟೆಗೆ 2300 ರೂ. ಹಾಗೂ 2100 ರೂ. ದರನಿಗದಿಪಡಿಸಲಾಗಿದೆ. ಅದನ್ನು ಬಿಟ್ಟುಹೆಚ್ಚುವರಿ ಹಣವಸೂಲಿ ಮಾಡಬಾರದು ಎಂದು ಆದೇಶ ನೀಡಿದ್ದಾರೆ. ಆದರೂ, ಆದೇಶವನ್ನು ದಿಕ್ಕರಿಸಿ ಯಂತ್ರದಮಾಲೀಕರು ಬೇಡಿಕೆ ಹೆಚ್ಚಿರುವುದರಿಂದ  ಹೆಚ್ಚಿನ ದರ ನೀಡಿದರೆ ಮಾತ್ರ ಕಟಾವು ಮಾಡಲು ಮುಂದಾಗುತ್ತಿದ್ದಾರೆ.

ಭಕ್ತ ಕಟಾವಿಗೆ ಬಂದಿದೆ. ನಿಗದಿತ ಸಮಯದಲ್ಲಿ ಭತ್ ಕಟಾವು ಮಾಡದಿದ್ದರೆ ಕಾಳು ಉದುರಲಿವೆ.ಇತ್ತ ಕೃಷಿ ಕಾರ್ಮಿಕರು ಸಿಗುತ್ತಿಲ್ಲ. ಹೇಗಾದರೂ ಮಾಡಿಕರೆ ತಂದರೆ ಕಟಾವು ಮಾಡುವಾಗ ಹೆಚ್ಚು ಕಾಳುಗಳು ಉದುರುತ್ತವೆ. ಇದರಿಂದ ನಷ್ಟವಾಗಲಿದೆ. ಇತ್ತ ಗಂಟೆಗೆ 3 ಸಾವಿರ ಕೊಡುತ್ತೇನೆ ಎಂದರೂಯಂತ್ರಗಳು ಸಿಗುತ್ತಿಲ್ಲ. ಏನುಮಾಡುವುದು ಎಂದು ತೋಚುತ್ತಿಲ್ಲ. –ಭಾಸ್ಕರ್‌, ರೈತ, ಚಿಕ್ಕ ಮಂಡ್ಯ

ಇವತ್ತು ನಾಳೆ ಎಂದು ಸಬೂಬು ಹೇಳುತ್ತಿದ್ದಾರೆ. ಆದರೆ,ಯಂತ್ರಗಳುಇನ್ನೂ ಬರುತ್ತಿಲ್ಲ.ಕಟಾವು ಅವಧಿ ಮೀರುತ್ತಿದೆ.ಇತ್ತ ಖರೀದಿಕೇಂದ್ರಗಳಿಗೆ ಭತ್ತ ಸಾಗಿಸುವ ದಿನವೂ ಹತ್ತಿರವಾಗುತ್ತಿದೆ. ಸಮಯಕ್ಕೆ ಸರಿಯಾಗಿ ಬೇಗ ಕಟಾವು ಮಾಡಿದರೆ ಇಳುವರಿಬರಲಿದೆ. ಇಲ್ಲದಿದ್ದರೆ ನಷ್ಟ ಉಂಟಾಗಲಿದೆ. ಆದ್ದರಿಂದ ಜಿಲ್ಲಾಡಳಿತಕ್ರಮಕೈಗೊಳ್ಳಬೇಕು. ಈ.ಬಸವರಾಜು, ಇಂಡುವಾಳು ಗ್ರಾಮ

 

ಎಚ್‌.ಶಿವರಾಜು

ಟಾಪ್ ನ್ಯೂಸ್

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.