ಆಸೀಸ್ ಗೆ ಬಾಕ್ಸಿಂಗ್ ಡೇ ಪಂಚ್ ನೀಡಿದ ಬುಮ್ರಾ, ಅಶ್ವಿನ್, ಸಿರಾಜ್
Team Udayavani, Dec 26, 2020, 11:39 AM IST
ಮೆಲ್ಬರ್ನ್: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ಬೌಲರ್ ಗಳು ಆಸೀಸ್ ಗೆ ಪಂಚ್ ನೀಡುವಲ್ಲಿ ಸಫಲರಾಗಿದ್ದಾರೆ. ಆಸ್ಟ್ರೇಲಿಯಾ ತಂಡ 195 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ಗೆ ಭಾರತದ ಬೌಲರ್ ಗಳು ನಿರಂತರವಾಗಿ ಕಾಡಿದರು. ಯಾವುದೇ ಆಟಗಾರ ನೆಲೆಯೂರಲು ಬಿಡಲಿಲ್ಲ. ಮಾರ್ನಸ್ ಲಬುಶೇನ್ 48 ರನ್ ಗಳಿಸಿದ್ದೇ ಕಾಂಗರೂಗಳು ಪರ ಗರಿಷ್ಠ ಗಳಿಕೆ. ಉಳಿದಂತೆ ಟ್ರಾವಿಸ್ ಹೆಡ್ 38 ರನ್, ಮ್ಯಾಥ್ಯೂ ವೇಡ್ 30 ರನ್ ಮಾಡಿದರು.
ಭಾರತದ ಪರ ಬಿಗು ದಾಳಿ ಸಂಘಸಿದ ಬುಮ್ರಾ ನಾಲ್ಕು ವಿಕೆಟ್ ಕಬಳಿಸಿದರೆ. ಆರ್.ಅಶ್ವಿನ್ ಮೂರು ವಿಕೆಟ್ ಪಡೆದರು. ಮೊದಲ ಪಂದ್ಯವಾಡುತ್ತಿರುವ ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಪಡೆದು ಮಿಂಚಿದರು. ಒಂದು ವಿಕೆಟ್ ಜಡೇಜಾ ಪಾಲಾಯಿತು.