ಪೊಲೀಸರ ಸಲಹೆ, ಮುನ್ನೆಚ್ಚರಿಕೆ ನಿರ್ಲಕ್ಷಿಸದಿರಿ

ಕರಾವಳಿಯಲ್ಲಿ ಹೆಚ್ಚುತ್ತಿದೆ ಸುಲಿಗೆ, ದರೋಡೆ ಆತಂಕ

Team Udayavani, Dec 27, 2020, 5:55 AM IST

ಪೊಲೀಸರ ಸಲಹೆ, ಮುನ್ನೆಚ್ಚರಿಕೆ ನಿರ್ಲಕ್ಷಿಸದಿರಿ

ಸಾಂದರ್ಭಿಕ ಚಿತ್ರ

ಮಂಗಳೂರು: ಸಾರ್ವಜನಿಕರು ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳಿಂದಲೂ ಸುಲಿಗೆ, ದರೋಡೆಗಳನ್ನು ಸ್ವಲ್ಪ ಮಟ್ಟಿಗೆ ತಪ್ಪಿಸಲು ಸಾಧ್ಯವಿದೆ. ಪ್ರತೀ ಮನೆಯವರ ಸಹಕಾರದಿಂದ ಇಡೀ ಊರನ್ನೇ ಸುರಕ್ಷಿತವಾಗಿಟ್ಟುಕೊಳ್ಳಲು ಸಾಧ್ಯ. ಆಗ ಜಾಗೃತ ಸಮಾಜ ಸುರಕ್ಷಿತ ಸಮಾಜವಾಗಿ ರೂಪುಗೊಳ್ಳುತ್ತದೆ.

ನ್ಯೂ ಬೀಟ್‌ ಬಲಗೊಳ್ಳಲಿ
ರಾಜ್ಯದಲ್ಲಿ ಈ ಹಿಂದಿನ ಪೊಲೀಸ್‌ ಬೀಟ್‌ ವ್ಯವಸ್ಥೆ ಬದಲಾಯಿಸಿ ನ್ಯೂ ಬೀಟ್‌ ಜಾರಿಗೊಳಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಇದು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಅಲ್ಲದೆ ಪೊಲೀಸ್‌ ಮ್ಯಾನುವಲ್‌ ಪ್ರಕಾರ ಗ್ರಾಮ ರಕ್ಷಣಾ ಸಮಿತಿ ರಚನೆ, ದಳಪತಿಗಳ ನಿಯೋಜನೆಗೂ ಅವಕಾಶವಿತ್ತು. ಆದರೆ ನಮ್ಮ ಜಿಲ್ಲೆಯಲ್ಲಿ ಇಂತಹ ವ್ಯವಸ್ಥೆಗಳು ಜಾರಿಯಲ್ಲಿಲ್ಲ. ಈ ಹಿಂದೆ ಇದ್ದ “ಗೂರ್ಖಾ ಕಾವಲು’ ಕೂಡ ಈಗ ಇಲ್ಲ. ಚೆಕ್‌ಪೋಸ್ಟ್‌ಗಳು ಮತ್ತು ಸಿಸಿ ಕೆಮರಾಗಳ ಅಳವಡಿಕೆಗೆ ಇನ್ನುಷ್ಟು ಆದ್ಯತೆ ದೊರೆಯಬೇಕಿದೆ.

ಮಾಹಿತಿ ನೀಡಲು ಅಂಜಿಕೆ ಬೇಡ
ಸಾರ್ವಜನಿಕರು ಪೊಲೀಸ್‌ ಠಾಣೆಗೆ ಯಾವುದೇ ರೀತಿಯ ಮಾಹಿತಿ ನೀಡಲು ಹಿಂಜರಿಯಬೇಕಾಗಿಲ್ಲ. ಎಲ್ಲ ರೀತಿಯ ಗೌಪ್ಯತೆ ಕಾಪಾಡಿಕೊಳ್ಳಲಾಗುತ್ತದೆ. ಪ್ರತಿಯೊಂದು ಮನೆಯವರೂ ಠಾಣೆಯ ಸಂಪರ್ಕ ಹೊಂದಿರುವುದು ಉತ್ತಮ. ತುರ್ತು ಸಂದರ್ಭದಲ್ಲಿ ಸ್ಥಳೀಯ ಪೊಲೀಸರಿಗೆ ಅಥವಾ 112 ತುರ್ತು ಸಹಾಯವಾಣಿಗೆ ಮಾಹಿತಿ ನೀಡಬಹುದು. ಮಾಹಿತಿಗಳನ್ನು 112 ಐNಈಐಅ ಆ್ಯಪ್‌ ಮೂಲಕವೂ ರವಾನಿಸಬಹುದು.
-ಬಿ.ಎಂ. ಲಕ್ಷ್ಮೀಪ್ರಸಾದ್‌, ಎಸ್‌ಪಿ, ದ.ಕ.

ಪೊಲೀಸರ ಸಲಹೆ-ಸೂಚನೆ
– ಅನುಮಾನಾಸ್ಪದ ವ್ಯಕ್ತಿಗಳು ಮನೆ ಪಕ್ಕದಲ್ಲಿ ತಿರುಗಾಡುವುದು, ಅಪರಿಚಿತ ವಾಹನಗಳನ್ನು ನಿಲ್ಲಿಸಿರುವುದು ಕಂಡುಬಂದರೆ ತತ್‌ಕ್ಷಣ ಠಾಣೆಗೆ ಮಾಹಿತಿ ನೀಡಬೇಕು.

– ಮನೆಬಿಟ್ಟು ಹೋಗುವಾಗ ನೆರೆಯ ವಿಶ್ವಾಸದ ಮನೆಯವರಿಗೆ ತಿಳಿಸಿ. ಸಾಧ್ಯವಾದರೆ ಪೊಲೀಸ್‌ ಠಾಣೆಗೂ ಮಾಹಿತಿ ನೀಡಿ.

– ಕೆಲಸಗಾರರನ್ನು ನೇಮಿಸುವಾಗ ಅವರ ಭಾವಚಿತ್ರ, ಸಂಪೂರ್ಣವಿಳಾಸ ಪಡೆದು ನೇಮಿಸಿ. ಒಂದು ವಾರದೊಳಗೆ ಆ ಬಗ್ಗೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ. ಬೆಲೆ ಬಾಳುವ ಸೊತ್ತುಗಳನ್ನು ಕೆಲಸದಾಳುವಿನ ಗಮನಕ್ಕೆ ಬಾರದಂತೆ ಇಡಬೇಕು.

– ಮನೆ ಮನೆಗಳಿಗೆ ಬರುವ ಮಾರಾಟಗಾರರ ಬಗ್ಗೆ ಎಚ್ಚರದಿಂದ ಇರಬೇಕು.

– ಯಾರಾದರೂ ಮನೆ ಬಾಗಿಲು ತಟ್ಟಿದರೆ, ಕಾಲಿಂಗ್‌ ಬೆಲ್‌ ಮಾಡಿದರೆ ಬಂದವರು ಯಾರೆಂದು ಖಚಿತಪಡಿಸಿ ಕೊಳ್ಳದೇ ಬಾಗಿಲು ತೆರೆಯದಿರಿ.

– ಮನೆಯಲ್ಲಿರುವ ಹಣ, ಚಿನ್ನಾಭರಣಗಳನ್ನು ಭದ್ರವಾಗಿ ಡಬೇಕು ಅಥವಾ ಸೇಫ್ ಲಾಕರ್‌ಗಳಲ್ಲಿ ಇಡುವ ವ್ಯವಸ್ಥೆ ಮಾಡಬೇಕು.

– ಮನೆಯ ಮುಂಬಾಗಿಲು ಮತ್ತು ಹಿಂಬಾಗಿಲುಗಳು ಭದ್ರವಾಗಿರಲಿ.

– ಮನೆಯ ದೂರವಾಣಿಗೆ ಕರೆ ಮಾಡಿ ಯಾರೂ ಇಲ್ಲದಿರು ವುದನ್ನು ಖಚಿತಪಡಿಸಿಕೊಂಡು ಕಳ್ಳತನ ಮಾಡಿರುವ ನಿದರ್ಶನಗಳಿರುವುದರಿಂದ ಈ ಬಗ್ಗೆ ಎಚ್ಚರದಿಂದ ಇರಬೇಕು, ದೂರವಾಣಿಗೆ ಕಾಲರ್‌ ಐಡಿ ಅಳವಡಿಸಿಕೊಳ್ಳಬೇಕು.

– ಮನೆಯ ಅಕ್ಕಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಲ್ಲಿ ಕಳ್ಳರು ತಂಗುವ ಸಾಧ್ಯತೆ ಇರುವುದರಿಂದ ಎಚ್ಚರದಿಂದ ಇರಬೇಕು.

– ಮಾಧ್ಯಮಗಳಲ್ಲಿ ಬರುವ ಅಪರಾಧಗಳ ಬಗ್ಗೆ ತಿಳಿದುಕೊಂಡು ವಂಚಕರಿಂದ ಮೋಸ ಹೋಗದಂತೆ ಎಚ್ಚರದಿಂದಿರಬೇಕು.

ಟಾಪ್ ನ್ಯೂಸ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.