ಮೊಬೈಲು ಸೀಮೆ; ಬಂತು, ನೋಕಿಯಾ ಲ್ಯಾಪ್‌ಟಾಪ್‌!

ನೋಕಿಯಾ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಅಂಥ ಯಶಸ್ಸು ಸಾಧಿಸಲಿಲ್ಲ.

Team Udayavani, Dec 28, 2020, 10:08 AM IST

ಮೊಬೈಲು ಸೀಮೆ; ಬಂತು, ನೋಕಿಯಾ ಲ್ಯಾಪ್‌ಟಾಪ್‌

ಮೊಬೈಲ್‌ ತಯಾರಿಕಾ ಕಂಪನಿಗಳೆಲ್ಲ ಲ್ಯಾಪ್‌ಟಾಪ್‌ ಮಾರುಕಟ್ಟೆಗೆ ಇಳಿದಿರುವುದು ಇತ್ತೀಚಿನ ಬೆಳವಣಿಗೆ. ಶಿಯೋಮಿ, ಆನರ್‌ ಕಂಪನಿಗಳು ಕೆಲ ತಿಂಗಳ ಹಿಂದೆ ತಮ್ಮ ಲ್ಯಾಪ್‌ ಟಾಪ್‌ ಆರಂಗ್ರೇಟಂ ನಡೆಸಿದ್ದವು. ಆನ್‌ ಲೈನ್‌ ಶಿಕ್ಷಣ ಮತ್ತು ಮನೆಯಿಂದಲೇ ಕೆಲಸ ಮಾಡುವುದು ಈಗ ಅನಿವಾರ್ಯವಾಗಿರುವುದರಿಂದ ಲ್ಯಾಪ್‌ ಟಾಪ್‌ಗ್ಳಿಗೆ ಬೇಡಿಕೆ ಹಿಂದಿಗಿಂತ 2 ಪಟ್ಟು ಹೆಚ್ಚಾಗಿದೆ. ಕಳೆದ ಜುಲೈ- ಅಗಸ್ಟ್-ಸೆಪ್ಟೆಂಬರ್‌ ತ್ತೈಮಾಸಿಕದಲ್ಲಿ 34 ಲಕ್ಷ ಪಿ.ಸಿ ಮತ್ತು ಲ್ಯಾಪ್‌ಟಾಪ್‌ ಗಳು ಭಾರತದಲ್ಲಿ ಮಾರಾಟವಾಗಿವೆ. 2019ರ ಸೆಪ್ಟೆಂಬರ್‌ ಅಂತ್ಯದ ತ್ತೈಮಾಸಿಕಕ್ಕಿಂತ ಶೇ.9.2 ಬೆಳವಣಿಗೆ ಸಾಧಿಸಿದೆ.

ಭಾರತದಲ್ಲಿ ಎಚ್‌ಪಿ, ಲೆನೊವೊ ಮತ್ತು ಡೆಲ್‌ ಕಂಪನಿ ಗಳು ಶೇ.70 ಮಾರುಕಟ್ಟೆ ಪಾಲು ಹೊಂದಿವೆ. ಈಗಿನ ಮಾರುಕಟ್ಟೆ ಟ್ರೆಂಡ್‌ ಅರಿತ ನೋಕಿಯಾ, ಇನ್ನೊಮ್ಮೆ ಲ್ಯಾಪ್‌ ಟಾಪ್‌ ಮಾರುಕಟ್ಟೆ ಪ್ರವೇಶಿಸಿದೆ. ಹೌದು! ಇನ್ನೊಮ್ಮೆ! ಹತ್ತು ವರ್ಷಗಳ ಹಿಂದೆ ಬುಕ್‌ ಲೆಟ್‌ 3ಜಿ ಎಂಬ ಹೆಸರಿನ ಲ್ಯಾಪ್‌ಟಾಪ್‌ ಅನ್ನು ನೋಕಿಯಾ ಬಿಡುಗಡೆ ಮಾಡಿತ್ತು. ಅದೇ ಅದರ ಮೊದಲ ಮತ್ತು ಕೊನೆಯ ಲ್ಯಾಪ್‌ಟಾಪ್‌ ಸಹ ಆಗಿ ಹೋಗಿತ್ತು!

ಒಂದು ದಶಕದ ನಂತರ…
ಈಗ ಒಂದು ದಶಕದ ನಂತರ ನೋಕಿಯಾ ಲ್ಯಾಪ್‌ಟಾಪ್‌ ಮಾರುಕಟ್ಟೆಗೆ ಕಾಲಿಡುತ್ತಿದೆ. ಇಲ್ಲೊಂದು ವಿಶೇಷವಿದೆ. ನೋಕಿಯಾ ಲ್ಯಾಪ್‌ಟಾಪ್‌ ವಿಭಾಗ, ಫಿನ್ಲಂಡಿನ ಮೂಲ ನೋಕಿಯಾ ಒಡೆತನದಲ್ಲೇ ಇದೆ. ಹಾಗಾಗಿ ಲ್ಯಾಪ್‌ಟಾಪ್‌ ವಿಭಾಗದಲ್ಲಿ ಮೂಲ ನೋಕಿಯಾ ಗುಣಮಟ್ಟ , ತಾಂತ್ರಿಕತೆಯನ್ನು ನಿರೀಕ್ಷಿಸಬಹುದು. ಮೊಬೈಲ್‌ ವಿಭಾಗದ ಲೈಸೆನ್ಸ್ ಹೊಂದಿರುವುದು ಎಚ್‌ಎಂಡಿ ಗ್ಲೋಬಲ್ ಮೂಲ ನೋಕಿಯಾ ಒಡೆತನ, ನಿರ್ವಹಣೆ ಇಲ್ಲದ ಕಾರಣ ಈಗಿನ
ನೋಕಿಯಾ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಅಂಥ ಯಶಸ್ಸು ಸಾಧಿಸಲಿಲ್ಲ. ಮೊಬೈಲ್‌ ಹೆಸರು ನೋಕಿಯಾ ಆದರೂ ಅದರ ಉತ್ಪಾದಕ ಮತ್ತು ನಿರ್ವಾಹಕ, ಮಾಲೀಕ ಎಚ್‌.ಎಂ.ಡಿ. ಗ್ಲೋಬಲ್ . ಆದರೆ ಲ್ಯಾಪ್‌ ಟಾಪ್‌ನ  ಮಾಲೀಕತ್ವ ಮೂಲ ನೋಕಿಯಾದ್ದೇ ಆಗಿದೆ.

ಫ್ಲಿಪ್‌ಕಾರ್ಟ್‌ ಕಂಪನಿ ಸಹಭಾಗಿತ್ವ ವಹಿಸಿದೆ. ಭಾರತದಲ್ಲಿ ನೋಕಿಯಾ ಲ್ಯಾಪ್‌ಟಾಪ್‌ ಅನ್ನು ಬಿಡುಗಡೆ ಮಾಡುತ್ತಿರುವುದು ಫ್ಲಿಪ್‌ ಕಾರ್ಟ್‌ ಕಂಪನಿ. ನೋಕಿಯಾ ಪ್ಯೂರ್‌ಬುಕ್‌ ಎಕ್ಸ್ 14 ನೋಕಿಯಾದ ನೂತನ ಲ್ಯಾಪ್‌ ಟಾಪ್‌ ಹೆಸರು ಪ್ಯೂರ್‌ ಬುಕ್‌ ಎಕ್ಸ್ 14. ಇದು 1.1 ಕೆಜಿ ತೂಕವಿದ್ದು, 16.8 ಮಿ. ಮೀ.ನಷ್ಟು ತೆಳುವಾಗಿದೆ. ಮೆಗ್ನಿಶಿಯಂ, ಅಲ್ಯು ಮಿನಿಯಂ ಬಾಡಿ ಹೊಂದಿದೆ. 14 ಇಂಚಿನ ಫ‌ುಲ್‌ ಎಚ್‌ಡಿ ಐಪಿಎಸ್‌ ಪರದೆ ಹೊಂದಿದೆ. 4.2 ಗಿಗಾಹರ್ಟ್‌ ಇಂಟೆಲ್‌ ಐ5 10ನೇ ತಲೆಮಾರಿನ ನಾಲ್ಕು ಕೋರ್‌ಗಳ ಪೊ›ಸೆಸರ್‌ ಇದೆ. ಇದು ವಿಂಡೋಸ್‌ 10 ಹೋಂ ಅನ್ನು ಮೊದಲೇ ಒಳಗೊಂಡಿದೆ.

ಡಾಲ್ಬಿ ವಿಷನ್‌ ಮತ್ತು ಡಾಲ್ಬಿ ಅಟ್ಮೋಸ್ ಅಳವಡಿಸಿದ್ದು, ದೃಶ್ಯ ಮತ್ತು ಶ್ರವ್ಯ ಅನುಭವ ಚೆನ್ನಾಗಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಪ್ಯೂರ್‌ಬುಕ್‌ ಎಕ್ಸ್ 14 ಶೇ.86 ಸ್ಕ್ರೀನ್‌ ಮತ್ತು ಬಾಡಿ ಅನುಪಾತ ಹೊಂದಿದೆ. ಬ್ಲೂಟೂತ್‌ 5.1, ಎರಡು ಯುಎಸ್ ಬಿ 3.1ಪೋರ್ಟ್‌ಗಳು, ಒಂದು ಯುಎಸ್ ಬಿ 2.0
ಪೋರ್ಟ್‌. ಒಂದು ಯುಎಸ್‌ಬಿ ಟೈಪ್‌ ಸಿ ಪೋರ್ಟ್‌, ತಲಾ ಒಂದು ಎಚ್‌ಡಿಎಂಐ ಮತ್ತು ಆರ್‌ಜೆ45 ಪೋರ್ಟ್‌ ಹೊಂದಿದೆ. ಈ ಲ್ಯಾಪ್‌ ಟಾಪ್‌ 512ಜಿಬಿ ಎಸ್‌ಎಸ್‌ಡಿ, 8 ಜಿಬಿ ರ್ಯಾಮ್‌ ಹೊಂದಿದೆ. ವಿಂಡೋಸ್‌ ಹಲೋ ಫೇಸ್‌ ಅನ್ಲಾಕ್‌ ಸೌಲಭ್ಯ ಇದೆ. ಅಂತರ್ಗತ ಇಂಟೆಲ್‌ ಯುಎಚ್‌ಡಿ 620 ಗ್ರಾಫಿಕ್ಸ್ ಹೊಂದಿದೆ. 65 ವ್ಯಾಟ್ಸ್‌ನ ಚಾರ್ಜರ್‌ ಹೊಂದಿದ್ದು, ಬ್ಯಾಟರಿ 8 ಗಂಟೆಯಷ್ಟು ದೀರ್ಘ‌ಕಾಲ ಬರುತ್ತದೆ ಎಂದು ಕಂಪನಿ ತಿಳಿಸಿದೆ. ಇದರ ದರ 59,990 ರೂ. ಗಳಾಗಿದ್ದು, ಫ್ಲಿಪ್‌ಕಾರ್ಟ್‌ ನಲ್ಲಿ ಮಾತ್ರ ಲಭ್ಯ.

*ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

IPL 2024: 8 ಅಂಕ ಹೊಂದಿರುವ ಆರ್ ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

IPL 2024: 8 ಅಂಕ ಹೊಂದಿರುವ ಆರ್ ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gayatri Siddeshwar: “ರಾಹುಲ್‌ ಪ್ರಧಾನಿಯಾಗಿಸುವ ಪಾಕಿಸ್ತಾನ ಷಡ್ಯಂತ್ರ ಫಲ ನೀಡಲ್ಲ’

Gayatri Siddeshwar: “ರಾಹುಲ್‌ ಪ್ರಧಾನಿಯಾಗಿಸುವ ಪಾಕಿಸ್ತಾನ ಷಡ್ಯಂತ್ರ ಫಲ ನೀಡಲ್ಲ’

B.Y. Raghavendra: ಕಮಲದ ಗುರುತಿಗೆ ಮತ ನೀಡಿ; ಬಿವೈಆರ್‌

B.Y. Raghavendra: ಕಮಲದ ಗುರುತಿಗೆ ಮತ ನೀಡಿ; ಬಿವೈಆರ್‌

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

ಬಿಲ್ಡರ್‌ಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ಮರಳಿಸುವ ಆದೇಶಕ್ಕೆ ತಡೆ: ಜಲಮಂಡಳಿಗೆ ರಿಲೀಫ್

ಬಿಲ್ಡರ್‌ಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ಮರಳಿಸುವ ಆದೇಶಕ್ಕೆ ತಡೆ: ಜಲಮಂಡಳಿಗೆ ರಿಲೀಫ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.