ಹೊಸವರ್ಷಕ್ಕೆ ಮುನ್ನವೇ ಸಂಭ್ರಮಾಚರಣೆ

ಪಕ್ಕದ ರಾಜ್ಯದಲ್ಲಿ ನಿರ್ಬಂಧ ಪರಿಣಾಮ-ಉತ್ತರ ಕನ್ನಡ ಜಿಲ್ಲೆಗೆ ಹರಿದು ಬಂದ ಜನಸಾಗರ,ಸಾಗರ ತೀರಗಳಲ್ಲಿ ಜನಸಂದಣಿ

Team Udayavani, Dec 28, 2020, 4:01 PM IST

ಹೊಸವರ್ಷಕ್ಕೆ ಮುನ್ನವೇ ಸಂಭ್ರಮಾಚರಣೆ

ಕಾರವಾರ: ಹೊಸ ವರ್ಷಾಚರಣೆಗೆ ಜನ ಗುಂಪು ಸೇರುವುದನ್ನು ಸರ್ಕಾರ ನಿರ್ಬಂಧಿಸಿದ ಪರಿಣಾಮ ಪ್ರವಾಸಿಗರು ಮೊದಲೇ ಕಡಲತೀರದ ತಾಣಗಳಿಗೆ ಹರಿದು ಬರುತ್ತಿದ್ದಾರೆ.

ಕಾರವಾರ ಪಕ್ಕದ ಗೋವಾ ಸರ್ಕಾರ ಹೊಸವರ್ಷ ಆಚರಿಸಲು ಹಲವು ನಿಯಮಗಳನ್ನು ಪ್ರವಾಸಿಗರ ಮೇಲೆ ಹೇರಿದೆ. ಕೆಲಅಘೋಷಿತನಿರ್ಬಂಧಗಳನ್ನು ಹೇರಿರುವ ಕಾರಣ ಉತ್ತರ ಕನ್ನಡ ಜಿಲ್ಲೆಯ ಬೀಚ್‌ಗಳಲ್ಲಿ ನಾಲ್ಕು ದಿನ ಮೊದಲೇ ಪ್ರವಾಸಿಗರ ಸಂಖ್ಯೆ ಏರಿದೆ. ಜಿಲ್ಲೆಯ ಹೋಮ್‌ ಸ್ಟೇಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.ಬಹುತೇಕ ಪ್ರವಾಸಿಗರು ಕೊರೊನಾ ಭಯದಿಂದ ಮುಕ್ತರಾಗಿದ್ದಾರೆ.ಸರ್ಕಾರದ ಕಟ್ಟೆಚ್ಚರದ ನಡುವೆಯೂ ಕೆಲವರು ಮಾಸ್ಕ್ ಧರಿಸಿದ್ದು ಕಾಣಿಸಿದರೆ. ಹಲವರು ಮಾಸ್ಕ್ ಪಕ್ಕಕ್ಕಿಟ್ಟು ಸಂಭ್ರಮದಲ್ಲಿ ಮುಳುಗಿದ್ದಾರೆ.

ರವಿವಾರ ಸಂಜೆ ಕಾರವಾರದ ಬೀಚ್‌ನಲ್ಲಿ ಜನಸಾಗರ ತುಂಬಿತುಳುಕುತ್ತಿದ್ದು, ಬಹುತೇಕರು ಕೊರೊನಾ ಮರೆತಿರುವುದು ಕಂಡುಬಂತು. ಪ್ರವಾಸಿಗರಲ್ಲಿ ಬೆಂಗಳೂರು, ಮೈಸೂರು ಸೇರಿದಂತೆದಕ್ಷಿಣ ಕರ್ನಾಟಕದವರು ಹೆಚ್ಚಾಗಿದ್ದರು. ಮಹಾರಾಷ್ಟ್ರ ಹಾಗೂಉತ್ತರ ಭಾರತದ ಕಡೆಯಿಂದ ಸಹ ಪ್ರವಾಸಿಗರು ಆಗಮಿಸಿದ್ದುಜಿಲ್ಲೆಯ ದಾಂಡೇಲಿ ಹಾಗೂ ಜೋಯಿಡಾ ಭಾಗದಲ್ಲಿ ರೆಸಾರ್ಟ್‌ಗಳು ಹಾಗೂ ಹೋಂ ಸ್ಟೇಗಳಲ್ಲಿ ಹೊಸ ವರ್ಷ ಆಗಮನದ ಮೊದಲೇ ಬೀಡು ಬಿಟ್ಟಿದ್ದಾರೆ. ಇನ್ನು ಕೆಲವರು ಕಡಲತೀರಗಳಲ್ಲಿ ಸಂಭ್ರಮ ಮಾಡಿ, ಡಿ.31 ರಂದು ಗೋವಾಕ್ಕೆ ತೆರಳಲು ಪ್ಲಾನ್‌ ಮಾಡಿದ್ದಾರೆ.

ಆದರೆ ಗೋವಾದಿಂದ ಬಂದ ಮಾಧ್ಯಮ ವರದಿಗಳ ಪ್ರಕಾರ ಪ್ರತಿ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರವಾಸಿಗರಸಂಖ್ಯೆ ಭಾರಿ ಕಡಿಮೆ ಪ್ರಮಾಣದಲ್ಲಿದೆ. ಹಿಂದೆ ಹೋಟೆಲ್‌ಗಳು, ರೆಸಾರ್ಟ್‌ಗಳು ಹಾಗೂ ಬೀಚ್‌ಗಳು ಹೊಸವರ್ಷಾಚರಣೆವೇಳೆ ತುಂಬಿ ತುಳುಕುತ್ತಿದ್ದವಾದರೂ, ಈ ಬಾರಿ ಎಲ್ಲವೂ ಖಾಲಿ ಖಾಲಿ ಎನ್ನಿಸುತ್ತಿದೆ. ಹೀಗಾಗಿ ಅಲ್ಲಿನ ವ್ಯಾಪಾರಿಗಳು ನಿರಾಳರಾದಂತಿದೆ.ಅಧಿಕೃತವಾಗಿ ಘೋಷಿಸದಿದ್ದರೂ ಅಲ್ಲಿನ ಬೀಚ್‌ಗಳಲ್ಲಿ ಡಿ.31  ರಂದು ತಡರಾತ್ರಿವರೆಗೆ ಹೊಸ ವರ್ಷಾಚರಣೆ ಆಚರಿಸಲು ಅವಕಾಶ ನೀಡಲಾಗದು ಎಂಬ ಸುಳಿವನ್ನರಿತ ಜನ ಕರ್ನಾಟಕ ಕರಾವಳಿಯತ್ತ ಧಾವಿಸುತ್ತಿದ್ದಾರೆ.

ಹೋಟೆಲ್‌ -ರೆಸಾರ್ಟ್‌ಗಳು ಭರ್ತಿ :  ಜಿಲ್ಲೆಯ ಪ್ರವಾಸಿ ಸ್ಥಳಗಳ ಬಹುತೇಕ ರೆಸಾರ್ಟ್‌ಗಳು, ಹೊಟೇಲ್‌ಗ‌ಳು ಹಾಗೂ ಹೋಮ್‌ ಸ್ಟೇಗಳು ಭರ್ತಿಯಾಗಿದ್ದು ಜ.3ರ ವರೆಗೆ ಹೆಚ್ಚು ಕಡಿಮೆ ಎಲ್ಲ ಕಡೆ ಬುಕಿಂಗ್‌ ಆಗಿದೆ. ಕಾರವಾರ ನಗರದಲ್ಲೂ ಎಲ್ಲ ಲಾಡ್ಜ್ ಗಳು ಬುಕ್‌ ಆಗಿದ್ದು, ಜೋಯಿಡಾ ಹಾಗೂ ದಾಂಡೇಲಿಯ ರೆಸಾರ್ಟ್‌, ಹೋಮ್‌ ಸ್ಟೇ ಹಾಗೂ ಸರ್ಕಾರಿ ಸ್ವಾಮ್ಯದ ವಸತಿಗೃಹಗಳು ಬುಕ್‌ ಆಗಿವೆ. ಈ ಎರಡು ತಾಲೂಕುಗಳಲ್ಲಿಯೇ ಸುಮಾರು 200 ಹೋಮ್‌ ಸ್ಟೇ ಹಾಗೂ ರೆಸಾರ್ಟ್‌ ಗಳಿವೆ. ಈಗಾಗಲೇ ರಾಜ್ಯ ಸರ್ಕಾರ ಎಲ್ಲ ಒಳಾಂಗಣ ಪಾರ್ಟಿ ಹಾಗೂ ಕಾರ್ಯಕ್ರಮಗಳನ್ನು ನಿರ್ಬಂಧಿ ಸಿದೆ. ಹೀಗಾಗಿಬೀಚ್‌ಗಳಲ್ಲಿ ಜನಸಂದಣಿ ಹೊಸವರ್ಷದ ಮುನ್ನಾ ದಿನ ಸೇರುವ ನಿರೀಕ್ಷೆ ಇದೆ. ಜಿಲ್ಲೆಯ ಅಧಿಕೃತ 32 ರೆಸಾರ್ಟ್‌ ಮತ್ತು 138 ಹೋಂ ಸ್ಟೇಗಳು ಬುಕ್‌ ಆಗಿವೆ. ಇಲ್ಲಿಗೆ ಬರುವ ಪ್ರವಾಸಿಗರು ಗುಂಪು ಸೇರಿದರೂ, ಮಾಸ್ಕ್ ಧರಿಸುವಂತೆ ನೋಡಿಕೊಳ್ಳಲು ಪೊಲೀಸ್‌ ಕಾವಲು ಹಾಕಲು ಸಿದ್ಧತೆಗಳು ಆಗಿವೆ.

ಲೈಫ್‌ಗಾರ್ಡ್‌ ಇಲ್ಲದೇ ಆತಂಕ :  ಇಲ್ಲಿನ ಟಾಗೋರ್‌ ಕಡಲ ತೀರಕ್ಕೆ ನೂರಾರು ಪ್ರವಾಸಿಗರು ಬರುತ್ತಿದ್ದಾರೆ. ಆದರೆ ಕಡಲಿಗಿಳಿಯುವ ಪ್ರವಾಸಿಗರ ಸುರಕ್ಷತೆಗೆ ಇರಬೇಕಿದ್ದ ಲೈಫ್‌ಗಾರ್ಡ್‌ಗಳು ಸ್ಥಳದಲ್ಲಿ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ವೇತನ ಕಡಿಮೆ ಇರುವುದರಿಂದ ನಿಯೋಜಿತ ಸಿಬ್ಬಂದಿ ಕೆಲವು ದಿನದಿಂದ ಕೆಲಸಕ್ಕೆ ಹಾಜರಾಗುತ್ತಿಲ್ಲ. ಕಳೆದ 3 ವರ್ಷದಲ್ಲಿ ಅಪಾಯಕ್ಕೆ ಸಿಲುಕಿದ್ದ 82 ಪ್ರವಾಸಿಗರನ್ನು ಲೈಫ್‌ಗಾರ್ಡ್‌ ಸಿಬ್ಬಂದಿ ಸುರಕ್ಷಿತವಾಗಿ ದಡ ಸೇರಿಸಿದ್ದರು. ಕೋವಿಡ್‌-19 ಕಾರಣ ಪ್ರವಾಸಿಗರು ಬಾರದ ಸನ್ನಿವೇಶದಲ್ಲಿ ಕೆಲವು ತಿಂಗಳು ಕೆಲಸ ಇರಲಿಲ್ಲ. ಆ ಸಮಯದಲ್ಲಿ ಲೈಫ್‌ಗಾರ್ಡ್ಸ್‌ ಸಿಬ್ಬಂದಿಗೆಗೌರವ ವೇತನ 5000 ರೂ. ನೀಡಲಾಗಿತ್ತು. ಪುನಃ ಪ್ರವಾಸೋದ್ಯಮ ಚಟುವಟಿಕೆ ಆರಂಭವಾಗುತ್ತಿದ್ದಂತೆ ಮರುನಿಯೋಜನೆಗೊಂಡವರಿಗೆ 5000 ರೂ. ಗೌರವಧನ ನೀಡುವ ಬಗ್ಗೆ ಜಿಲ್ಲಾಡಳಿತ ತಿಳಿಸಿತ್ತು. ಆದರೆ ಮೊದಲು ಗೌರವಧನ, ಇದ್ದಂತೆ 10 ಸಾವಿರದಿಂದ 12 ಸಾವಿರ ರೂ. ವೇತನ ನೀಡಲು ಸಿಬ್ಬಂದಿ ಒತ್ತಾಯಿಸಿದ್ದು, ಜಿಲ್ಲಾಡಳಿತ ಮೂಲ ವೇತನ ನೀಡಲು ಒಪ್ಪದ ಕಾರಣ, 10 ರಿಂದ 12 ದಿನಗಳಿಂದ ಕೆಲಸಕ್ಕೆ ಹಾಜರಾಗುತ್ತಿಲ್ಲ

ಗೋವಾದಲ್ಲಿ ಕಠಿಣ ನಿಯಮ ;

ಗೋವಾದಲ್ಲಿ ಹೊಸ ವರ್ಷಾಚರಣೆಗೆ ಸಾಕಷ್ಟು ನಿರ್ಬಂಧ ಹೇರಲಾಗಿದ್ದು ಕೋವಿಡ್ ಹರಡದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು ಅಲ್ಲಿಗೆ ಆಗಮಿಸುತ್ತಿರುವ ಪ್ರವಾಸಿಗರ ಮೇಲೆ ಪೊಲೀಸರು ಅತಿಯಾದನಿರ್ಬಂಧ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಕಾರವಾರಕ್ಕೆ ಬಂದಿದ್ದಾಗಿ ಬೆಂಗಳೂರಿನ ಪ್ರವಾಸಿಗರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡರು. ನಾವು ಬೀಚ್‌ಗಳಲ್ಲಿ ಎಂಜಾಯ್‌ ಮಾಡುವ ಉದ್ದೇಶದಿಂದ ಗೋವಾಕ್ಕೆ ಆಗಮಿಸಿದ್ದೆವು. ಆದರೆ ಅಲ್ಲಿ ಈ ಬಾರಿಸಾಕಷ್ಟು ನಿರ್ಬಂಧ ಹೇರಿದ್ದಾರೆ. ಹೀಗಾಗಿ ಕಾರವಾರಕ್ಕೆ ಬಂದು ಇಲ್ಲಿಯೇ ಉಳಿದುಕೊಂಡಿದ್ದೇವೆ. ಹೊಸ ವರ್ಷಾಚರಣೆ ನಂತರ ಗೋಕರ್ಣ, ಮುಡೇìಶ್ವರಕ್ಕೆ ಭೇಟಿ ನೀಡಿ ಬೆಂಗಳೂರಿಗೆ ತೆರಳುವುದಾಗಿಪ್ರವಾಸಿಗರು ತಿಳಿಸಿದರು. ಕಾರವಾರ, ಗೋಕರ್ಣ ಹಾಗೂ ಮುರ್ಡೇಶ್ವರ ಬೀಚ್‌ನಲ್ಲಿ ಹೊಸ ವರ್ಷಾಚರಣೆ ಮಾಡಲು ಉದ್ದೇಶಿಸಿರುವ ಪ್ರವಾಸಿಗರಿಗೂ, ಕೊನೆ ಗಳಿಗೆಯಲ್ಲಿಬೀಚ್‌ಗಳಲ್ಲಿ ಆಚರಣೆಗೆ ಪೊಲೀಸರು ಅಡ್ಡಿ ಪಡಿಸಬಹುದು ಎಂಬ ಭಯವಿದೆ. ನಾವು ಕೋವಿಡ್‌ನ‌ ಎಲ್ಲ ಶಿಷ್ಟಾಚಾರ ಪಾಲಿಸುವುದಾಗಿ ಬಹುತೇಕ ಪ್ರವಾಸಿಗರು ಹೇಳಿಕೊಂಡರು.

ಧಾರ್ಮಿಕ ಪ್ರವಾಸಿ ಕೇಂದ್ರಗಳಿರುವ ಮುರ್ಡೇಶ್ವರ, ಗೋಕರ್ಣ, ಶಿರಿಸಿ ಮಾರಿಕಾಂಬೆ ದೇವಸ್ಥಾನಗಳಿಗೆ ಧಾರ್ಮಿಕ ಪ್ರವಾಸಿಗಳ ಆಗಮನಸಹಜ. ಅವರನ್ನು ನಾವು ನಿಯಂತ್ರಿಸುವುದಿಲ್ಲ. ಆದರೆಕೋವಿಡ್‌ ಸಂದರ್ಭದಲ್ಲಿನನಿಯಮ ಪಾಲನೆ ಅನಿವಾರ್ಯ.  –ಪುರುಷೋತ್ತಮ, ಉಪನಿರ್ದೇಶಕರು (ಪ್ರಭಾರ) ಪ್ರವಾಸೋದ್ಯಮ ಇಲಾಖೆ

ಕರ್ನಾಟಕದ ಕರಾವಳಿಯಲ್ಲೇ ಇಷ್ಟೊಂದು ಸುಂದರ ಬೀಚ್‌ ಗಳು ಇರುವಾಗ ಗೋವಾಕ್ಕೆ ಯಾಕೆಹೋಗಬೇಕು. ಈ ಸಲ ಉತ್ತರ ಕನ್ನಡದ ವಿವಿಧ ತಾಣಗಳನ್ನು ಸುತ್ತಿ ಹೊಸ ವರ್ಷದ ಮರುದಿನ ಬೆಂಗಳೂರಿಗೆ ಮರಳುತ್ತೇವೆ. –ಜಿತೇಂದ್ರ ಪ್ರಸನ್ನ, ಸಾಫ್ಟವೇರ್‌ ಉದ್ಯೋಗಿ, ಬೆಂಗಳೂರು.

 

-ನಾಗರಾಜ್‌ ಹರಪನಹಳ್ಳಿ

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

1-sirsi

Modi ಬಂದಿದ್ದು ಕಾಂಗ್ರೆಸ್‌ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.