ಜ. 8ರಿಂದ ಭಾರತ-ಬ್ರಿಟನ್ ವಿಮಾನಯಾನ
Team Udayavani, Jan 1, 2021, 10:05 PM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಭಾರತ ಮತ್ತು ಬ್ರಿಟನ್ ನಡುವೆ ಜ. 8ರಿಂದ ವಿಮಾನ ಸಂಚಾರ ಆರಂಭವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಆದರೆ ಕೊರೊನಾ ರೂಪಾಂತರಿತ ವೈರಾಣು ಕಾಟದ ಹಿನ್ನೆಲೆಯಲ್ಲಿ ಕಠಿನ ನಿಯಮಾವಳಿಗಳನ್ನು ಪಾಲಿಸಬೇಕಿರುವುದರಿಂದ ವಾರದಲ್ಲಿ 15 ವಿಮಾನಗಳು ಮಾತ್ರ ದಿಲ್ಲಿ, ಮುಂಬಯಿ, ಬೆಂಗಳೂರು ಮತ್ತು ಹೈದರಾಬಾದ್ಗಳಿಂದ ಹಾರಾಟ ನಡೆಸಲಿವೆ ಎಂದು ಅವರು ತಿಳಿಸಿದ್ದಾರೆ.
ಹೊಸ ವರ್ಷದ ಜ. 8ರಿಂದ ಬ್ರಿಟನ್ಗೆ ವಿಮಾನಗಳ ಹಾರಾಟ ಪುನರಾರಂಭಿಸಲು ನಿಶ್ಚಯಿಸಲಾಗಿದೆ. ಜ. 23ರ ತನಕ ವಾರಕ್ಕೆ 15 ವಿಮಾನಗಳಷ್ಟೇ ಹಾರಾಡಲಿವೆ. ಡಿಜಿಸಿಎಯು ಸದ್ಯವೇ ವಿವರಗಳನ್ನು ನೀಡಲಿದೆ ಎಂದು ಸಚಿವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ರೂಪಾಂತರಿತ ಕೊರೊನಾ ವೈರಾಣು ಪತ್ತೆಯಾಗುವುದಕ್ಕೆ ಮುನ್ನ ಭಾರತ -ಬ್ರಿಟನ್ ನಡುವೆ ಏರ್ ಬಬಲ್ ಒಪ್ಪಂದದ ಪ್ರಕಾರ ವಾರಕ್ಕೆ 67 ವಿಮಾನಗಳು ಹಾರಾಟ ನಡೆಸುತ್ತಿದ್ದವು. ಇವುಗಳಲ್ಲಿ ಪ್ರತೀ ದಿನ ಬ್ರಿಟನ್ನಿಂದ ಎರಡರಿಂದ ಎರಡೂವರೆ ಸಾವಿರ ಪ್ರಯಾಣಿಕರು ಭಾರತಕ್ಕೆ ಪ್ರಯಾಣಿಸುತ್ತಿದ್ದರು. ಇನ್ನೀಗ ವಾರಕ್ಕೆ ಸರಾಸರಿ ಆರಷ್ಟೇ ವಿಮಾನಗಳು ಹಾರಾಟ ನಡೆಸುವ ಸಂದರ್ಭ ಇಷ್ಟು ಪ್ರಯಾಣಿಕರಿಗೆ ಅವಕಾಶ ನೀಡುವುದು ವಿಮಾನ ಯಾನ ಸಂಸ್ಥೆಗಳಿಗೆ ಸವಾಲಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್ ಗೆ ಬಿಜೆಪಿ ತಿರುಗೇಟು
Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ
Lok Sabha Election: ಬೃಜ್ ಭೂಷಣ್ ಸಿಂಗ್ ಬದಲಿಗೆ ಪುತ್ರನಿಗೆ ಟಿಕೆಟ್ ನೀಡಿದ ಬಿಜೆಪಿ
ಕಾಂಗ್ರೆಸ್ನಿಂದ ಮತ ಬ್ಯಾಂಕ್ ರಾಜಕಾರಣ; ನೇಹಾ ಹತ್ಯೆ ಲವ್ ಜೆಹಾದ್:ಅಮಿತ್ ಶಾ ಆರೋಪ
ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!