ಪಟ್ಟಣದಲ್ಲಿ ಹರಡಿದೆ ಸೊಗಡು ಅವರೆ ಘಮಲು

ರಾಗಿ, ಜೋಳ ಬೆಳೆ ಮಧ್ಯೆ ನಳನಳಿಸುತ್ತಿರುವ ಅವರೆಕಾಯಿ ಈಗ ಮಾರುಕಟ್ಟೆಗೆ ಲಗ್ಗೆ „ ಕೇಜಿಗೆ 40 ರೂ.ಗೆ ಮಾರಾಟ

Team Udayavani, Jan 3, 2021, 2:11 PM IST

ಪಟ್ಟಣದಲ್ಲಿ ಹರಡಿದೆ ಸೊಗಡು ಅವರೆ ಘಮಲು

ಚನ್ನರಾಯಪಟ್ಟಣ: ಡಿಸೆಂಬರ್‌ ಜನವರಿ ಬಂದರೆ ಪ್ರತಿ ಮನೆಯಲ್ಲಿಯೂ ಅವರೆಕಾಯಿ ಘಮಲು ಇದ್ದೇ ಇರುತ್ತದೆ. ಚಳಿಗಾಲದಲ್ಲಿ ಅವರೆಕಾಳಿನ ಉಪ್ಪೆಸರು, ಮುದ್ದೆ ಹೆಸರು ಕೇಳಿದರೆ ಎಂತಹವರ ಬಾಯಲ್ಲೂನೀರು ಬರುತ್ತದೆ. ಅದರಲ್ಲೂ ಸೊಗಡು ಅವರೆಕಾಳಿನಸಾರು, ಮುದ್ದೆ ರುಚಿಯ ಮುಂದೆ ಬೇರೆ ಊಟವಿಲ್ಲ.ತಾಲೂಕಿನ ರೈತರು ರಾಗಿ, ಜೋಳದ ಬೆಳೆ ಮಧ್ಯೆಬೆಳೆಯುವ ಅವರೆಕಾಯಿ ಘಮಲು ಈಗ ಪಟ್ಟಣದಲ್ಲೂ ಹರಡಿಕೊಂಡಿದ್ದು, ರಸ್ತೆ ಬದಿಯಲ್ಲಿ ರಾಶಿ ಹಾಕಿಕೊಂಡು ಮಾರಾಟ ಮಾಡಲಾಗುತ್ತಿದೆ.

ತಾಲೂಕಿನ 6 ಹೋಬಳಿಯಲ್ಲಿ 40, 325 ಹೆಕ್ಟೇರ್‌ನಲ್ಲಿ ರಾಗಿ, 9,300ಹೆಕ್ಟೇರ್‌ನಲ್ಲಿ ಮೆಕ್ಕೆ ಜೋಳಬೆಳೆದಿದ್ದು, ಅದರ ಮಧ್ಯದಲ್ಲಿಬಹುತೇಕ ರೈತರು ಅವರೆಬೆಳೆಯ ನ್ನೇ ಹಾಕಿದ್ದಾರೆ.ಈ ಬಾರಿ ಮಾಗಿಯಚಳಿ ಹೆಚ್ಚಿದ್ದು, ಬೆಳಗ್ಗೆ9 ಗಂಟೆಯಾದ್ರೂಮಂಜು ಬೀಳುತ್ತಲೇ ಇರುತ್ತದೆ. ಇದು ಅವರೆ ಬೆಳೆಗೆಹೇಳಿ ಮಾಡಿದಂತಹ ವಾತಾವರಣವಾಗಿದೆ.ಕಂಗೊಳಿಸುತ್ತಿರುವ ಅವರೆ: ತಾಲೂಕಿನ ರೈತರ ಜಮೀನಿನಲ್ಲಿ ಅವರೆ ಮೊಗ್ಗು, ಪಿಂದಿ ಜೋತಾಡುತ್ತಿದ್ದು, ರಸ್ತೆಯಲ್ಲಿ ಸಂಚರಿಸುವವರ ಕಣ್ಮನ ಸೆಳೆಯುತ್ತಿದೆ. ಪ್ರಸಕ್ತ ವರ್ಷ ಮುಂಗಾರು, ಹಿಂಗಾರು ಮಳೆ ಉತ್ತಮವಾಗಿ ಸುರಿದಿದ್ದು, ಜೋಳ, ರಾಗಿ ಬೆಳೆಯ ಮಧ್ಯೆ ಹಾಕಿರುವ ಅವರೆ ಬಳ್ಳಿ ಈಗ ಜಮೀನಿನ ತುಂಬ ಹರಡಿಕೊಂಡು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

ಇಳುವರಿ ಹೆಚ್ಚಳ: ಅವರೆ ಬಳ್ಳಿ ಹಾಗೂ ಅದರ ಕಾಯಿಯ ಮೇಲೆ ಬಿದ್ದಿರುವ ಮಂಜಿನ ಹನಿನೋಡುವುದೇ ಒಂದು ಸೊಬಗು, ಅವರೆಕಾಯಿಮುಟ್ಟಿದರೆ ಅದರ ಸೊಗಡು ಕೈಗೆ ಅಂಟುತ್ತಿದೆ. ಅಷ್ಟರಮಟ್ಟಿಗೆ ಈ ಬಾರಿ ಅವರೆಕಾಯಿ ಬೆಳೆದಿದ್ದು,ಇಳುವರಿಯೂ ಉತ್ತಮವಾಗಿದೆ.

ಬೇಡಿಕೆ ಹೆಚ್ಚು: ತಾಲೂಕಿನಲ್ಲಿ ಬೆಳೆಯುವ ಅವರೆ ಜೊತೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಜಿಲ್ಲೆ ಹಾಗೂ ಆಂಧ್ರ ಪ್ರದೇಶದಿಂದಲೂಸೊಗಡು ಅವರೆಕಾಯಿ ಪಟ್ಟಣದ ಮಾರುಕಟ್ಟೆಗೆ ಬರುತ್ತದೆ. ಈ ಬಾರಿ ತಡವಾಗಿರುವ ಕಾರಣಮಾರುಕಟ್ಟೆಯಲ್ಲಿ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿಅವರೆಕಾಯಿ ದೊರೆಯುತ್ತಿಲ್ಲ. ಒಂದು ಕೇಜಿ ಅವರಈಗ 40 ರೂ.ಗೆ ಮಾರಾಟಮಾಡಲಾಗುತ್ತಿದೆ. ಕಡಿಮೆ ಇಲ್ವಾ ಎಂದು ಗ್ರಾಹಕರು ಕೇಳಿದ್ರೆ 100 ರೂ. ಕೊಡಿ ಕೇಜಿ ತೆಗೆದುಕೊಳ್ಳಿ ಎನ್ನುತ್ತಾರೆ ವರ್ತಕರು.

ನಾಲ್ಕು ತಿಂಗಳು ಮಾತ್ರ: ಅವರೆಕಾಯಿಹೆಚ್ಚೆಂದರೆ ನಾಲ್ಕು ತಿಂಗಳುದೊರೆಯುತ್ತದೆ. ಪ್ರತಿವರ್ಷ ನವೆಂಬರ್‌ ತಿಂಗಳಿನಲ್ಲೇ ಮಾರುಟ್ಟೆಗೆ ಬಂದಿದ್ದ ಅವರೆ,ಈ ಬಾರಿ ಡಿಸೆಂಬರ್‌ನಲ್ಲಿ ಬಂದಿದೆ. ಗ್ರಾಪಂ ಚುನಾವಣೆ ಇದ್ದ ಕಾರಣ ಹೊರ ಜಿಲ್ಲೆಯಿಂದ ಅಷ್ಟಾಗಿ ಅವರೆಕಾಯಿ ತಾಲೂಕಿಗೆ ಬಂದಿಲ್ಲ. ಇದರಿಂದ ಬೆಲೆಹೆಚ್ಚಿದೆ. ಒಂದೆರಡು ವಾರದಲ್ಲಿ 20 ರೂ.ಗೆ ಇಳಿಯುವ ನಿರೀಕ್ಷೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.

ಪ್ರಸಕ್ತ ವರ್ಷ ಮಾಗಿ ಚಳಿ ಜನರ ಮೈನಡುಗಿಸುತ್ತಿದೆ. ಈ ಹಿತವಾದವಾತಾವರಣಕ್ಕೆ ಅವರೆ ಬೆಳೆ ಉತ್ತಮವಾಗಬಂದಿದೆ. ವರ್ತಕರೇ ಜಮೀನಿಗೆ ಬಂದು ಎಕರೆಗೆ ಇಂತಿಷ್ಟು ಹಣ ನೀಡಿ, ಬೆಳೆ ಪಡೆಯುತ್ತಿದ್ದಾರೆ. ಶಾಂತಮ್ಮ, ರೈತ ಮಹಿಳೆ, ಕುರುವಂಕ.

ಬೇಡಿಕೆ ಇರುವಷ್ಟು ಅವರೆಕಾಯಿಗೆ ಮಾರುಕಟ್ಟೆಗೆ ಬರುತ್ತಿಲ್ಲ, ಹೀಗಾಗಿಪ್ರಸ್ತುತ ಬೆಲೆ ಜಾಸ್ತಿ ಇದೆ. ಆಂಧ್ರ ಪ್ರದೇಶದ ಅವರೆ ಬಂದರೆ ಬೆಲೆ ಕಡಿಮೆಆಗಲಿದೆ. ಗ್ರಾಪಂ ಚುನಾವಣೆ ಇದ್ದ ಕಾರಣ, ನಿರೀಕ್ಷಿತ ಮಟ್ಟದಲ್ಲಿ ರೈತರು ಅವರೆಕಾಯಿಯನ್ನು ಮಾರುಕಟ್ಟೆಗೆ ತಂದಿಲ್ಲ. ನಾವೇ ಜಮೀನಿಗೆ ಹೋಗಿ ಖರೀದಿಸಿ, ಮಾರಾಟ ಮಾಡುತ್ತಿದ್ದೇವೆ. ಮಹದೇವ, ಅವರೆಕಾಯಿ ವ್ಯಾಪಾರಿ.

 

ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

Bommai BJP

Modi 3ನೇ ಸಲ ಪ್ರಧಾನಿಯಾದ 3 ತಿಂಗಳಲ್ಲಿ ಕಾಂಗ್ರೆಸ್‌ ಇಬ್ಭಾಗ: ಬೊಮ್ಮಾಯಿ ಭವಿಷ್ಯ

1-qwe-ewewe

AAP ನಾಯಕರಿಗೆ 100 ಕೋಟಿ ಕಿಕ್ ಬ್ಯಾಕ್;ಕವಿತಾ ವಿರುದ್ಧ ಇಡಿ ಆರೋಪ

1-qwewewq

Delhi; ಹೊತ್ತಿ ಉರಿದ ತಾಜ್ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು

renukaacharya

Threat ಇವತ್ತೇ ನಿನಗೆ ಕೊನೆಯ ದಿನ; ರೇಣುಕಾಚಾರ್ಯ ಅವರಿಗೆ ವಿದೇಶದಿಂದ ಬೆದರಿಕೆ ಕರೆ

Satish Jaraki

Exit poll ಸಮೀಕ್ಷೆಗಳ ಬಗ್ಗೆ ನಂಬಿಕೆಯಿಲ್ಲ: ಸಚಿವ ಸತೀಶ್ ಜಾರಕಿಹೊಳಿ

Feticide case: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಯೋಗದ ಸದಸ್ಯರ ಕಿಡಿ

Feticide case: ಆರೋಪಿಗಳ ಮೇಲೆ ಕಠಿಣ ಕ್ರಮಕ್ಕೆ ಶಿಫಾರಸ್ಸು: ನ್ಯಾ.ಎಸ್.ಕೆ.ಒಂಟಗೋಡಿ

shashi-taroor

Kerala ದಲ್ಲಿ ತಿರುವನಂತಪುರಂ ಬಿಜೆಪಿಯ ಪ್ರಬಲ ಕ್ಷೇತ್ರವಾದರೂ.. :ತರೂರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD Revanna: ಸಂಕಷ್ಟದ ನಡುವೆಯೂ ರಾಜಕೀಯ ಚಟುವಟಿಕೆಗಳಲ್ಲಿ ವ್ಯಸ್ತರಾದ ಎಚ್‌.ಡಿ.ರೇವಣ್ಣ

HD Revanna: ಸಂಕಷ್ಟದ ನಡುವೆಯೂ ರಾಜಕೀಯ ಚಟುವಟಿಕೆಗಳಲ್ಲಿ ವ್ಯಸ್ತರಾದ ಎಚ್‌.ಡಿ.ರೇವಣ್ಣ

Hassan: ವಿಚಾರಣೆಯಿಂದ ತಪ್ಪಿಸಿಕೊಂಡಿರುವ ಭವಾನಿ ರೇವಣ್ಣ… ಪೊಲೀಸರ ಪರದಾಟ

Hassan: ವಿಚಾರಣೆಯಿಂದ ತಪ್ಪಿಸಿಕೊಂಡಿರುವ ಭವಾನಿ ರೇವಣ್ಣ… ಪೊಲೀಸರ ಪರದಾಟ

10-alur

Aloor: ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ಹಲ್ಲೆ

Pen drive  ಹಂಚಿಕೆ ಆರೋಪ: ನವೀನ್‌ ಗೌಡ,ಚೇತನ್‌ ಗೌಡಗೆ 14 ದಿನ ನ್ಯಾಯಾಂಗ ಬಂಧನ

Pen drive ಹಂಚಿಕೆ ಆರೋಪ: ನವೀನ್‌ ಗೌಡ,ಚೇತನ್‌ ಗೌಡಗೆ 14 ದಿನ ನ್ಯಾಯಾಂಗ ಬಂಧನ

Pendrive Case: ಜೆಡಿಎಸ್‌ ಶಾಸಕ ಎ.ಮಂಜು ವಿಚಾರಣೆ

Pendrive Case: ಜೆಡಿಎಸ್‌ ಶಾಸಕ ಎ.ಮಂಜು ವಿಚಾರಣೆ

MUST WATCH

udayavani youtube

ನಿಮ್ಮ ಮಗುವಿಗೆ Adenoid ಸಮಸ್ಯೆ ಇದೆಯೇ ಇಲ್ಲಿದೆ ಪರಿಹಾರ

udayavani youtube

ಉಳ್ಳಾಲ: ಉರುಮಣೆ ಸಮೀಪ ಬಸ್ಸುಗಳೆರಡರ ಮುಖಾಮುಖಿ ಢಿಕ್ಕಿ; ಸಣ್ಣಪುಟ್ಟ ಗಾಯ

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

ಹೊಸ ಸೇರ್ಪಡೆ

Bommai BJP

Modi 3ನೇ ಸಲ ಪ್ರಧಾನಿಯಾದ 3 ತಿಂಗಳಲ್ಲಿ ಕಾಂಗ್ರೆಸ್‌ ಇಬ್ಭಾಗ: ಬೊಮ್ಮಾಯಿ ಭವಿಷ್ಯ

1-qwe-ewewe

AAP ನಾಯಕರಿಗೆ 100 ಕೋಟಿ ಕಿಕ್ ಬ್ಯಾಕ್;ಕವಿತಾ ವಿರುದ್ಧ ಇಡಿ ಆರೋಪ

1-qwewewq

Delhi; ಹೊತ್ತಿ ಉರಿದ ತಾಜ್ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು

renukaacharya

Threat ಇವತ್ತೇ ನಿನಗೆ ಕೊನೆಯ ದಿನ; ರೇಣುಕಾಚಾರ್ಯ ಅವರಿಗೆ ವಿದೇಶದಿಂದ ಬೆದರಿಕೆ ಕರೆ

KMC Manipal; ಖ್ಯಾತ ಸಂತಾನೋತ್ಪತ್ತಿ ತಜ್ಞ ಡಾ. ಪ್ರತಾಪ್ ಪೂರ್ಣ ಸಮಯದ ಸಮಾಲೋಚನೆಗೆ ಲಭ್ಯ

KMC Manipal; ಖ್ಯಾತ ಸಂತಾನೋತ್ಪತ್ತಿ ತಜ್ಞ ಡಾ. ಪ್ರತಾಪ್ ಪೂರ್ಣ ಸಮಯದ ಸಮಾಲೋಚನೆಗೆ ಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.