ಕಠಿನ ಲಾಕ್ಡೌನ್: ಬ್ರಿಸ್ಬೇನ್ ಟೆಸ್ಟ್ ಅನುಮಾನ
Team Udayavani, Jan 9, 2021, 6:30 AM IST
ಬ್ರಿಸ್ಬೇನ್: ಭಾರತ-ಆಸ್ಟ್ರೇಲಿಯ ನಡುವಿನ ಬ್ರಿಸ್ಬೇನ್ ಟೆಸ್ಟ್ ಪಂದ್ಯ ಮತ್ತೆ ಇಕ್ಕಟ್ಟಿಗೆ ಸಿಲುಕಿದೆ. ಇಲ್ಲಿ 4ನೇ ಟೆಸ್ಟ್ ನಡೆಸಿಯೇ ತೀರುವ ಇಂಗಿತ ಹೊಂದಿರುವ “ಕ್ರಿಕೆಟ್ ಆಸ್ಟ್ರೇಲಿಯ’ಕ್ಕೆ ಮತ್ತೂಂದು ಕಂಟಕ ಎದುರಾಗಿದೆ.
ಬ್ರಿಸ್ಬೇನ್ನಲ್ಲಿ ಕೊರೊನಾ ಪ್ರಕರಣ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಕ್ವೀನ್ಸ್ಲ್ಯಾಂಡ್ ಸರಕಾರ ಮುಂದಿನ ಮೂರು ದಿನಗಳ ಕಾಲ ಕಠಿನ ಲಾಕ್ಡೌನ್ ಘೋಷಿಸಿದೆ. ಇದು 4ನೇ ಟೆಸ್ಟ್ ಪಂದ್ಯಕ್ಕೆ ತೊಡಕಾಗಿ ಪರಿಣಮಿಸುವ ಸಾಧ್ಯತೆ ಇದೆ. ಆದರೆ “ಕ್ರಿಕೆಟ್ ಆಸ್ಟ್ರೇಲಿಯ’ ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಈ ಪಂದ್ಯ ಜ. 15ರಿಂದ ಆರಂಭವಾಗಬೇಕಿದೆ.
ಬ್ರಿಸ್ಬೇನ್ನ ಕಠಿನ ಕ್ವಾರಂಟೈನ್ ನಿಯಮದಿಂದ ನಮ್ಮ ಆಟಗಾರರಿಗೆ ತೊಂದರೆಯಾಗಲಿದೆ, ಇದನ್ನು ಸಡಿಲಗೊಳಿಸಿ ಎಂದು ಬಿಸಿಸಿಐ “ಕ್ರಿಕೆಟ್ ಆಸ್ಟ್ರೇಲಿಯ’ಕ್ಕೆ ಪತ್ರ ಬರೆದ 24 ಗಂಟೆಗಳಲ್ಲೇ ಈ ನಿಯಮ ಇನ್ನಷ್ಟು ಬಿಗಿಗೊಂಡಿರುವುದು ವಿಪರ್ಯಾಸ. ಅಕಸ್ಮಾತ್ ಬ್ರಿಸ್ಬೇನ್ನಲ್ಲಿ ಈ ಪಂದ್ಯ ನಡೆಯದೇ ಹೋದರೆ ಆಗ ಅಂತಿಮ ಟೆಸ್ಟ್ ಕೂಡ ಸಿಡ್ನಿಯಲ್ಲೇ ನಡೆಯುವ ಸಾಧ್ಯತೆ ಹೆಚ್ಚು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Mumbai Indians ವಿರುದ್ಧ ತವರಿನ ಅಂಗಳ: ರಾಹುಲ್ಗೆ ಮಹತ್ವದ ಪಂದ್ಯ
Champions Trophy ತಾಣ ಅಂತಿಮ ಲಾಹೋರ್, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?
MUST WATCH
ಹೊಸ ಸೇರ್ಪಡೆ
ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ
Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್