ಸಿನಿಪ್ರಿಯರ ಗಮನ ಸೆಳೆದ “ಕೃಷ್ಣ ಟಾಕೀಸ್‌’ ಚಿತ್ರದ “ಮನಮೋಹನ…’ ಹಾಡು


Team Udayavani, Jan 22, 2021, 3:26 PM IST

ಸಿನಿಪ್ರಿಯರ ಗಮನ ಸೆಳೆದ “ಕೃಷ್ಣ ಟಾಕೀಸ್‌’ ಚಿತ್ರದ “ಮನಮೋಹನ…’ ಹಾಡು

ನಟ ಕೃಷ್ಣ ಅಜೇಯ್‌ ರಾವ್‌ ಈ ವರ್ಷ ಮತ್ತೂಂದು ಕೃಷ್ಣವತಾರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅದು “ಕೃಷ್ಣ ಟಾಕೀಸ್‌’ನಲ್ಲಿ. ಅಜೇಯ್‌ ರಾವ್‌ ಸಕ್ಸಸ್‌ ಚಿತ್ರಗಳ “ಕೃಷ್ಣ’ ಬ್ರ್ಯಾಂಡ್‌ ನೇಮ್‌ ಈ ಚಿತ್ರದಲ್ಲೂ ಮುಂದುವರೆದಿದ್ದು, ಈ ಬಾರಿ “ಕೃಷ್ಣ ಟಾಕೀಸ್‌’ನಲ್ಲಿ ಅಜೇಯ್‌ ತುಂಬ ಗಂಭೀರವಾಗಿರುವಂಥ ಜರ್ನಲಿಸ್ಟ್‌ ಪಾತ್ರಕ್ಕೆ ಜೀವ ತುಂಬಿದ್ದಾರೆ.  ಸದ್ಯ ಅಜೇಯ್‌ ರಾವ್‌ ಅಭಿನಯದ “ಕೃಷ್ಣ ಟಾಕೀಸ್‌’ ರಿಲೀಸ್‌ಗೆ ರೆಡಿಯಾಗಿದ್ದು, ಚಿತ್ರತಂಡ ನಿಧಾನವಾಗಿ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.

ಕೆಲ ದಿನಗಳ ಹಿಂದಷ್ಟೇ “ಕೃಷ್ಣ ಟಾಕೀಸ್‌’ ಚಿತ್ರದ “ನೈಟಿ ಮಾತ್ರ ಹಾಕ್ಕೋಬೇಡ…’ ಎಂಬ ಡ್ಯಾನ್ಸ್‌ ನಂಬರ್‌ ಹಾಡಿನ ಮೂಲಕ ಮಾಸ್‌ ಆಡಿಯನ್ಸ್‌ ಗಮನ ಸೆಳೆದಿದ್ದ ಚಿತ್ರತಂಡ, ಸಂಕ್ರಾಂತಿ ಹಬ್ಬದ ಸಂದರ್ಭದಲಿ “ಮನಮೋಹನ…’ ಎಂಬ ಲಿರಿಕಲ್‌ ವಿಡಿಯೋ ಸಾಂಗ್‌ ಬಿಡುಗಡೆ ಮಾಡಿದೆ.

ಇನ್ನು ಈ ಮೆಲೋಡಿ ರೊಮ್ಯಾಂಟಿಕ್‌ ಲಿರಿಕಲ್‌ ವಿಡಿಯೋ ಸಾಂಗ್‌ ನಿಧಾನವಾಗಿ ಕೇಳುಗರ ಗಮನ ಸೆಳೆಯುತ್ತಿದ್ದು, ಹಾಡು ಬಿಡುಗಡೆಯಾದ ಕೆಲವೇ ದಿನದಲ್ಲಿ ಯು-ಟ್ಯೂಬ್‌ನಲ್ಲಿ 1.7 ಮಿಲಿಯನ್ಸ್‌ ವೀವ್ಸ್‌ ಪಡೆದುಕೊಂಡಿದೆ. ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ಸಂಯೋಜನೆಯ ಈ ಹಾಡಿಗೆ ವಿಹಾನ್‌ ಆರ್ಯ ಮತ್ತು ಅನ್ವೇಷಾ ಧ್ವನಿಯಾಗಿದ್ದು, ನಿರ್ದೇಶಕ ವಿಜಯಾನಂದ್‌ ಸಾಲುಗಳನ್ನು ಬರೆದಿದ್ದಾರೆ.

ಇದನ್ನೂ ಓದಿ:‘ಇನ್ಸ್‌ಪೆಕ್ಟರ್‌ ವಿಕ್ರಂ’ ರೆಡಿ ಟು ರಿಪೋರ್ಟಿಂಗ್‌ …

ಇನ್ನು “ಕೃಷ್ಣ ಟಾಕೀಸ್‌’ ಚಿತ್ರದ ಹಾಡುಗಳಿಗೆ ಕೇಳುಗರಿಂದ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಮಾತನಾಡುವ ಸಂಗೀತ ನಿರ್ದೇಶಕ ಶ್ರೀಧರ್‌ ವಿ. ಸಂಭ್ರಮ್‌, “ಅಜೇಯ್‌ ರಾವ್‌ ಅಭಿನಯದ “ಕೃಷ್ಣ’ ಸೀರಿಸ್‌ನ ಎಲ್ಲ ಸಿನಿಮಾಗಳಲ್ಲೂ ಒಂದೆರಡು ಮೆಲೋಡಿ ರೊಮ್ಯಾಂಟಿಕ್‌ ಹಾಡುಗಳು ಹಿಟ್‌ ಆಗುತ್ತಲೇ ಇವೆ. ಇಂದಿಗೂ ಆ ಹಾಡುಗಳು ಆಗಾಗ್ಗೆ ಕೇಳುಗರ ಬಾಯಲ್ಲಿ ಗುನುಗುಡುತ್ತಿರುತ್ತವೆ. ಸಾಲಿಗೆ ಈಗ “ಕೃಷ್ಣ ಟಾಕೀಸ್‌’ ಹಾಡು ಕೂಡ ಸೇರ್ಪಡೆಯಾಗುತ್ತಿದೆ. “ಕೃಷ್ಣ ಟಾಕೀಸ್‌’ನಲ್ಲಿ ಮೂರು ಹಾಡುಗಳಿದ್ದು, ಈಗಾಗಲೇ ರಿಲೀಸ್‌ ಆಗಿರುವ ಎರಡು ಹಾಡುಗಳಿಗೂ ಆಡಿಯನ್ಸ್‌ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. ಹಾಡುಗಳು ಹಿಟ್‌ ಆಗುತ್ತಿದೆ. ಆದಷ್ಟು ಬೇಗ “ನೂರೆಂಟು ಸಂದೇಹ, ಕಗ್ಗಂಟು ಸಂದೇಶ…’ ಎಂಬ ಮೂರನೇ ಹಾಡನ್ನು ರಿಲೀಸ್‌ ಮಾಡುವ ಯೋಚನೆಯಲ್ಲಿದ್ದೇವೆ’ ಎನ್ನುತ್ತಾರೆ.

ಇನ್ನು “ಕೃಷ್ಣ ಟಾಕೀಸ್‌’ ಚಿತ್ರದಲ್ಲಿ ಅಜೇಯ್‌ ರಾವ್‌ಗೆ ಅಪೂರ್ವ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಸಿಂಧೂ ಲೋಕನಾಥ್‌, ಚಿಕ್ಕಣ್ಣ, ಪ್ರಮೋದ್‌ ಶೆಟ್ಟಿ, ಪ್ರಕಾಶ್‌ ತೂಮಿನಾಡು, ಶೋಭರಾಜ್‌, ಮಂಡ್ಯ ರಮೇಶ್‌, ಯಶ್‌ ಶೆಟ್ಟಿ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಗೋಕುಲ್‌ ಎಂಟರ್‌ಟೈನರ್’ ಬ್ಯಾನರ್‌ನಲ್ಲಿ ಗೋವಿಂದ ರಾಜು ಆಲೂರ್‌ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಹಿಂದೆ “ಓಳ್‌ ಮುನ್ಸಾಮಿ’ ಚಿತ್ರವನ್ನು ನಿರ್ದೇಶಿಸಿದ್ದ ವಿಜಯಾನಂದ್‌ “ಕೃಷ್ಣ ಟಾಕೀಸ್‌’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

ಜಿ.ಎಸ್‌. ಕಾರ್ತಿಕ ಸುಧನ

ಟಾಪ್ ನ್ಯೂಸ್

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.