ವರ್ಕ್ ಫ್ರಮ್ ಹೋಮ್: ಬಜೆಟ್ ಪರಿಗಣನೆ ?
Team Udayavani, Jan 24, 2021, 6:10 AM IST
Representative Image
ಹೊಸದಿಲ್ಲಿ: ಮನೆಯಿಂದ ಕೆಲಸ (ವರ್ಕ್ ಫ್ರಮ್ ಹೋಮ್) ಮಾಡುತ್ತಿರುವ ಉದ್ಯೋಗಿಗಳು ಈ ಬಾರಿಯ ಬಜೆಟ್ನಲ್ಲಿ ಆದಾಯ ತೆರಿಗೆ ವಿನಾಯಿತಿ ಪಡೆಯುವ ಸಾಧ್ಯತೆಗಳಿವೆ.
ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ನಿರ್ಮಾಣಕ್ಕೆ ಖರ್ಚುವೆಚ್ಚಗಳಿರುತ್ತವೆ. ಅಲ್ಲದೆ ಮನೆಯಿಂದ ಕೆಲಸ ಮಾಡುತ್ತಿರುವವರ ಪ್ರಯಾಣ ಭತ್ತೆ ಮತ್ತಿತರ ವೇತನಾಂಶಗಳು ಸಂಪೂರ್ಣವಾಗಿ ತೆರಿಗೆಗೆ ಅರ್ಹವಾಗಿರುತ್ತವೆ. ಜತೆಗೆ ಮನೆ ಬಾಡಿಗೆ ಭತ್ತೆ ಇತ್ಯಾದಿ ಅಲೊವೆನ್ಸ್ಗಳನ್ನು ಹೊಂದಿದ್ದು ಹೆಚ್ಚು ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂಥವರ ಆದಾಯ ತೆರಿಗೆ ವಿಚಾರದಲ್ಲಿ ವಿಶೇಷ ಪರಿಗಣನೆ ಇರಲಿದೆ ಎನ್ನಲಾಗಿದೆ.