ಕಸಾಪ ಜನಪರ ಮಾಡುವೆ: ಜೋಶಿ

­ಸದಸ್ಯ ಶುಲ್ಕ ಮತ್ತೆ 250 ರೂ.ಗೆ ಇಳಿಕೆ! ­ತಾಲೂಕುಗಳಲ್ಲೂ ಕನ್ನಡ ಭವನ ನಿರ್ಮಾಣಕ್ಕೆ  ಆದ್ಯತೆ

Team Udayavani, Feb 8, 2021, 7:51 PM IST

Mahesh joshi

ಕೊಪ್ಪಳ: ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್‌ಗೆ ನನ್ನನ್ನು ಆಯ್ಕೆ ಮಾಡಿದರೆ ಕಸಾಪವನ್ನು ಜನಪರ-ಜನ ಸಾಮಾನ್ಯರ ಪರಿಷತ್ತನ್ನಾಗಿ ಮಾರ್ಪಡಿಸುವೆ ಎಂದು ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ಡಾ| ಮಹೇಶ ಜೋಶಿ ಹೇಳಿದರು.

ಮೀಡಿಯಾ ಕ್ಲಬ್‌ನಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಾವು ಮಾಧ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ದೂರದರ್ಶನವನ್ನು  ಜನರಿಗೆ ಸಮೀಪ ದರ್ಶನದಂತೆ ಕೆಲಸಮಾಡಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್‌ ಗೆ ದೊಡ್ಡ ಇತಿಹಾಸವಿದೆ. ಈ ಪರಿಷತ್‌ ಗೆ ನಾನು ಸ್ಪರ್ಧೆ ಆಕಾಂಕ್ಷಿ ಎನ್ನುವುದಕ್ಕಿಂತ ಸೇವಾಕಾಂಕ್ಷಿಯೆಂದು ಹೇಳಲು ಇಚ್ಛೆ ಪಡುತ್ತಿದ್ದೇನೆ. ನನ್ನೊಟ್ಟಿಗೆ ಸ್ಪರ್ಧಿಸುವ ಇತರರು ನನಗೆ ಪ್ರತಿಸ್ಪ ರ್ಧಿಗಳಲ್ಲ. ಸಹ ಸ್ಪರ್ಧಿಗಳಾಗಿದ್ದಾರೆ ಎಂದರು.

ನಾನು ಕಸಾಪ ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದರೆ, ಅಜೀವ ಸದಸ್ಯ ಶುಲ್ಕವನ್ನು ಮತ್ತೆ 250 ರೂ.ಗೆ ಮೊದಲಿನಂತೆ ಇಳಿಕೆ ಮಾಡುವೆ. ಜನಸಾಮಾನ್ಯರ ಪರಿಷತ್‌ನ್ನಾಗಿ ಮಾಡುವೆ. ಕಸಾಪ ಸದಸ್ಯತ್ವ ಪಡೆಯುವ ವಿಧಾನವನ್ನು ಸರಳೀಕರಣ ಮಾಡುವೆ. ಕಸಾಪ ಕಾರ್ಯ ಚಟುವಟಿಕೆ ಇನ್ಮುಂದೆ  ಸಂಪೂರ್ಣ ಪಾರದರ್ಶಕವಾಗಿರಬೇಕು. ಹಳ್ಳಿ ಹಳ್ಳಿಗೆ ಪಾದಯಾತ್ರೆ ಮಾಡಿ ಕಸಾಪ ವ್ಯಾಪ್ತಿಯನ್ನು ವಿಸ್ತರಣೆ ಮಾಡಲಿದ್ದೇನೆ. ಕನ್ನಡ ಮಾತೃ ಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಲಿದ್ದೇನೆ ಎಂದರು.

ಅಲ್ಲದೇ ನನ್ನ ಅವಧಿ ಯಲ್ಲಿ ಕನ್ನಡದ ಶಾಲೆಗಳನ್ನು ಮುಚ್ಚದ ಹಾಗೆ ಜಾಗೃತಿ ವಹಿಸುತ್ತೇನೆ. ಜೊತೆಗೆ ಮುಚ್ಚಿದ ಶಾಲೆಗಳನ್ನು ಪುನಃ ಆರಂಭಿಸುವಂತೆಯೂ ಒತ್ತಾಯಿಸಲಿದ್ದೇನೆ. ಕನ್ನಡವು ಅನ್ನದ ಭಾಷೆಯಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ. ಸಾಹಿತ್ಯ ಪರಿಷತ್‌ ಗೆ ಎಲ್ಲ ಕ್ಷೇತ್ರದ ಪ್ರತಿನಿ ಧಿಗಳನ್ನು ಕಾರ್ಯಕಾರ್ಯ ಸಮಿತಿಗೆ ಆಯ್ಕೆ ಮಾಡಿಕೊಂಡು ಅವರಿಂದಲೂ ಸಲಹೆ ಸೂಚನೆ ಪಡೆಯಲಿದ್ದೇನೆ. ಯುವ ಪ್ರತಿಭೆಗಳಿಗೆ ಒತ್ತು ನೀಡಲಿದ್ದೇನೆ. ಅಖೀಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕನಿಷ್ಠ ಇಬ್ಬರು ಮಹಿಳೆಯರಿಗೆ ಸರ್ವಾಧ್ಯಕ್ಷ ಸ್ಥಾನ ನೀಡಲಿದ್ದೇನೆ ಎಂದರು.

ಇದನ್ನೂ ಓದಿ :ಅತಂತ್ರ ಸ್ಥಿತಿಯಲ್ಲಿ ವಸತಿ ಶಾಲೆ ಮಕ್ಕಳು

ಎಲ್ಲ ತಾಲೂಕುಗಳಲ್ಲೂ ಕನ್ನಡ ಭವನ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಿದ್ದೇನೆ. ಅಲ್ಲದೇ ಕಸಾಪ ಪ್ರತಿಯೊಂದು ಮಾಹಿತಿಯೂ ಜನ ಸಾಮಾನ್ಯರಿಗೆ ತಿಳಿಯುವಂತೆ ಮಾಡಲು ಅದಕ್ಕೆ ಡಿಜಿಟಲ್‌ ರೂಪ ಕೊಟ್ಟ ಆ್ಯಪ್‌ ಮಾಡಲಿದ್ದೇನೆ. ಆ್ಯಪ್‌ ಮೂಲಕ ಸದಸ್ಯತ್ವ ಪಡೆಯಲು ಅವಕಾಶ ಮಾಡಿಕೊಡಲಿದ್ದೇನೆ. ಸದಸ್ಯತ್ವ ಪಡೆದ ಪ್ರತಿಯೊಬ್ಬರಿಗೂ 15 ದಿನಗಳಲ್ಲಿ ಗುರುತಿನ ಚೀಟಿ ದೊರೆಯುವಂತೆ ಮಾಡಲಿದ್ದೇನೆ. ಹಾಗಾಗಿ ನನಗೆ ‌ ಸದಸ್ಯರು ಅಭೂತಪೂರ್ವ ಮತ ನೀಡಿ ಬೆಂಬಲಿಸಿ ಗೆಲ್ಲಿಸುವಂತೆ ಮನವಿ ಮಾಡಿದರು.

ನಿವೃತ್ತ ನ್ಯಾಯಾಧಿಧೀಶರಾದ ಅರಳಿ ನಾಗರಾಜ, ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ವೀರಣ್ಣ ನಿಂಗೋಜಿ, ನಬೀಸಾಬ್‌ ಕುಷ್ಟಗಿ ಅವರು ಮಾತನಾಡಿದರು. ಚನ್ನಬಸವ ಕೊಟ್ಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.