ಮನಃಸ್ಥಿತಿ ಎರಡು ಮುಖಗಳಿರುವ ನಾಣ್ಯ

ನಿಮ್ಮ ಮನಸ್ಸಿಗೆ ತರಬೇತಿ ನೀಡುತ್ತಾ ಸ್ವಯಂ ಪ್ರತಿ ಫಲಿಸುತ್ತಾ, ನಿಮ್ಮದೇ ವ್ಯಕ್ತಿತ್ವ ರೂಪಿಸಿಕೊಂಡು ಸಂಕಲ್ಪ ಪ್ರಜ್ಞೆ ಬೆಳೆಸಿಕೊಳ್ಳಿ

Team Udayavani, Feb 9, 2021, 2:28 PM IST

ಮನಃಸ್ಥಿತಿ ಎರಡು ಮುಖಗಳಿರುವ ನಾಣ್ಯ

[ಲಘುವಾಗಿ ಚಿಂತಿಸುವವರು ಅದೃಷ್ಟ ಮತ್ತು ಪರಿಸ್ಥಿತಿಯನ್ನು ನಂಬುತ್ತಾರೆ ಆದರೆ ಆಳವಾಗಿ ಚಿಂತಿಸುವವರು ಕಾರಣ ಪರಿಣಾಮಗಳಲ್ಲಿ ನಂಬಿಕೆ ಇಟ್ಟಿರುತ್ತಾರೆ – ಆರ್.ಡಬ್ಲ್ಯೂ. ಎಮರ್‍ಸನ್]

ಪ್ರಸ್ತುತ ಕಾಡುತ್ತಿರುವ ಸರ್ವವ್ಯಾಪಿ ಸಮಸ್ಯೆಯು ನಮ್ಮ ಕೆಲಸದ ವಿಧಾನ, ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸುವ ರೀತಿ, ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿರುತ್ತಿರುವ ರೀತಿ, ನಮ್ಮ ಸ್ನೇಹಿತರ ಜೊತೆ, ಆತ್ಮೀಯರ ಜೊತೆ ನಮ್ಮ ವರ್ತನೆ – ಹೀಗೆ ಹಲವು ಹತ್ತು ವಿಷಯಗಳಲ್ಲಿ ಬದಲಾವಣೆ ತಂದಿದೆ, ಕೆಲವೇ ಕೆಲವರು ಈ ಸ್ಥಿತ್ಯಂತರ ಶಾಶ್ವತವಲ್ಲವೆಂದು ನಂಬಿ, ಈ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ವ್ಯಾಪಾರ ವ್ಯವಹಾರಗಳು ಅವನತಿ ಹಂತದಲ್ಲಿವೆ. ಇ-ಕಾಮರ್ಸ್ ಉದ್ಯಮ ಅರಳುತ್ತಿದೆ. ಆದರೆ ಪ್ರವಾಸೋಧ್ಯಮ ಭಯಾನಕ ಕುಸಿತ ಕಂಡಿದೆ.

ಇದನ್ನೂ ಓದಿ:ಮನೆಯಲ್ಲಿಯೇ ನಿಮ್ಮ ಬುದ್ಧಿ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

ಪ್ರಕೃತಿಯನ್ನು ಅರ್ಥಮಾಡಿಕೊಂಡರೆ ನಾವು ಅನೇಕ ವಿಷಯಗಳನ್ನು ಕಲಿಯಬಹುದು. ಪ್ರಕೃತಿಯಲ್ಲಿ ಸರಳತೆ, ಸಂಕೀರ್ಣತೆ ಎರಡು ಮೇಳೈಸಿವೆ. ಉಳಿವಿಗಾಗಿ ನಿರಂತರ ಹೋರಾಟ ನಡೆಯುತ್ತಿದ್ದರೂ ಪ್ರಪಂಚದ ಜೀವಿಗಳಲ್ಲಿ ಹೊಂದಾಣಿಕೆಯಿದೆ. ಜೀವನ ಎಲ್ಲರಿಗೂ ಒಂದೇ ಬಗೆಯ ಅವಕಾಶಗಳನ್ನು ನೀಡುತ್ತದೆ. ಅವುಗಳನ್ನು ಬಳಸಿಕೊಳ್ಳುವುದು ಒಬ್ಬ ವ್ಯಕ್ತಿಯ ಮನೋರೂಡಿಯನ್ನು ಅವಲಂಬಿಸಿದೆ. ಸ್ಥಿರವಾದ ಮನಸ್ಥಿತಿ ಹೊಂದಿರುವ ಒಂದು ಗುಂಪಿನ ಜನರು ತಮ್ಮ ಸಾಮಧ್ರ್ಯ ಸ್ಥಿರವಾಗಿದೆ, ಅದನ್ನು ಬದಲಾಯಿಸಲು ಸಾಧ್ಯವಿಲ್ಲವೆಂದು ನಂಬುತ್ತಾರೆ. ಆದರೆ ಪರಿಸ್ಥಿತಿಗೆ ತಕ್ಕಂತೆ ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವ ಶಕ್ತಿ ಇರುವವರು, ತಮ್ಮ ಸಾಮಧ್ರ್ಯ ಖಂಡಿತಾ ಬದಲಾಗಬಲ್ಲರು ಎಂದು ನಂಬುತ್ತಾರೆ.

ನಮ್ಮ ಮೆದುಳಿನ ಒಂದು ಸದ್ಗುಣವೆಂದರೆ ಅದರ ಹೊಂದಿಕೊಳ್ಳುವ ಶಕ್ತಿ, ನಾವು ಮೆದುಳಿಗೆ ತರಬೇತಿ ನೀಡಬಹುದು ಮತ್ತು ಅದನ್ನು ನಿಯಂತ್ರಿಸಬಹುದು. ಈ ರೀತಿ ಮಾಡುವುದರಿಂದ ನಾವು ನಮ್ಮ ಹಳೆಯ ಜೀವನದ ಅಗ್ನಿ ಪರೀಕ್ಷೆಗಳಿಂದ ಹೊರಬರಬಹುದು. ನಮ್ಮ ದಿನ ನಿತ್ಯದ ಬದುಕಿನಲ್ಲಾಗಲಿ, ವೃತ್ತಿ ಜೀವನದಲ್ಲಾಗಲಿ ಏನೇ ಬದಲಾವಣೆ ಕಂಡಬಂದರೂ ಅದು ಹೊರಗಿನ ಅಂಶಗಳಿಂದ ಅಲ್ಲ. ಅದು ನಮ್ಮ ಮೆದುಳಿನ ಚಿಂತನಾ ಶಕ್ತಿಯ ಪರಿಣಾಮ. ನಾವು ಮೆದುಳಿನ ಶಕ್ತಿಯಲ್ಲಿ ನಂಬಿಕೆ ಇಡಬೇಕು. ಏಕೆಂದರೆ ಇಡಿಯ ಪ್ರಪಂಚ ನಡೆಯುತ್ತಿರುವುದೇ ಮೆದುಳಿನ ಶಕ್ತಿಯಿಂದ, ಆದ್ದರಿಂದ ನಾವು ಸಾಮಧ್ರ್ಯಗಳಿಸಲು ಮನಸ್ಥಿತಿ ಒಂದು ಶಕ್ತಿಶಾಲಿ ಆಯುಧವಾಗಿದೆ.

ಇದನ್ನೂ ಓದಿ:ಲಸಿಕೆ ಪಡೆದು ಆರೋಗ್ಯ ರಕ್ಷಿಸಿಕೊಳ್ಳಲು ಮುಂದಾಗಿ: ರಘುಮೂರ್ತಿ

ಈ ಕೆಳಗಿನ ಎಂಟು ಅಂಶಗಳು ಸ್ಥಿರವಾದ ಮನಸ್ಥಿತಿಯಿಂದ ಬೆಳೆಯುವ (ಬದಲಾಗುವ) ಮನಸ್ಥಿತಿಯನ್ನು ರೂಢಿಸಿಕೊಳ್ಳಲು ಸಹಕಾರಿಯಾಗುತ್ತದೆ.

  1. ತೀವ್ರಾಸಕ್ತಿಯನ್ನು ಬೆಳೆಸಿಕೊಳ್ಳಿ.

[ಉಷಾ ಚಾಮರ್ ಹಲವಾರು ದಶಕಗಳ ಕಾಲ ಸಾಮಾಜಿಕ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸಿ ಈಗ ಸುಲಭ್ ಅಂತರ ರಾಷ್ಟ್ರೀಯ ಸಂಸ್ಥೆಯ ನಿರ್ದೇಶಕನಾಗಿದ್ದಾರೆ].

ನೀವು ನಿಮ್ಮ ವೃತ್ತಿಯನ್ನು ಯಾಕೆ ಆಯ್ಕೆಮಾಡಿಕೊಂಡಿದ್ದೀರಿ ಎನ್ನುವುದನ್ನು ಮರೆಯಬೇಡಿ. ನಿಮ್ಮ ಉತ್ಸಾಹವನ್ನು ನಿರಂತರವಾಗಿ ಹಿಡಿದಿಡಬಲ್ಲ ವೃತ್ತಿಯನ್ನು ಆರಿಸಿಕೊಳ್ಳಿ, ನೀವು ಯಾವುದೇ ವೃತ್ತಿಯನ್ನು ಆರಿಸಿಕೊಂಡರೂ ಸವಾಲನ್ನು ಎದುರಿಸಿ ಅತ್ಯುತ್ತಮವಾದ ಫಲಿತಾಂಶವನ್ನು ಪಡೆಯುವುದರ ಕಡೆಗೆ ಗಮನ ಹರಿಸಿ. ಗಡಿಯಾರದ ನಿಯಮದಂತೆ ಕೆಲಸಮಾಡಬೇಡಿ ನಿಮ್ಮ ನೇಮಕಾತಿಯ ಪತ್ರದಲ್ಲಿ ಕಾಲ ಸೂಚಿಸಿರಬಹುದು. ಆದರೆ ಕಛೇರಿಯ ಅವಧಿ ಮೀರಿ ಕೆಲಸ ಮಾಡುವುದರಿಂದ ಕೆಲವು ಲಾಭಗಳಿವೆ. ನೀವು ಕೆಲಸದಲ್ಲಿ ನೀವ್ರಾಸಕ್ತಿ ಬೆಳೆಸಿಕೊಳ್ಳದಿದ್ದರೆ ಅದು ಅದ್ಬುತ ಕೆಲಸವಾಗಲು ಸಾಧ್ಯವಿಲ್ಲ. ಪ್ರತಿದಿನವೂ ಕೆಲಸದ ಮೊದಲದಿನ ಎನ್ನುವಂತೆ ಕೆಲಸಮಾಡಿ. ತೀವ್ರಾಸಕ್ತಿಯಿಂದ ಕೂಡಿದ ದುಡಿತ, ತಾಳ್ಮೆ ನಿಗಧಿತ ಉದ್ದೇಶ – ಇವುಗಳು ಗುರಿಮುಟ್ಟಿಸುವ ಚಲನೆಯ ಅಂಶಗಳು, ನಿಮ್ಮ ಜೀವನವನ್ನು ತೀವ್ರಾಸಕ್ತಿಯಿಂದ ಆಯೋಜಿಸಿ, ತೀವ್ರಾಸಕ್ತಿಯನ್ನು ಶಕ್ತಿಯಾಗಿ ಬದಲಾಯಿಸಿ ಹಾಗೂ ಆ ಶಕ್ತಿಯಿಂದ ತೃಪ್ತಿ ಪಡೆಯಿರಿ.

ಇದನ್ನೂ ಓದಿ:ಬಂಟ್ವಾಳ: ತಾಯಿಯ ಕುರಿತು ಭಾವನಾತ್ಮಕ ಸ್ಟೇಟಸ್ ಹಾಕಿ ಯುವಕ ಆತ್ಮಹತ್ಯೆ!

  1. ಒಬ್ಬ ಸಾಮಾನ್ಯವ್ಯಕ್ತಿಯಾಗಿ

[ಮೋನಿಕಾ ಶೇರ್‍ಗಿಲ್ ಪತ್ರಿಕೋಧ್ಯಮದ ಕೋರ್ಸ್ ಮುಗಿಸಿ ಒಬ್ಬ ವರದಿಗಾರಳಾಗಿ ತನ್ನ ವೃತ್ತಿ ಆರಂಭಿಸಿ ಅನೇಕ ಸಾಕ್ಷ್ಯ ಚಿತ್ರಗಳ ನಿರ್ಮಾಪಕಿಯಾದರು. ಈ ದಿನ ಅವರು ಅಂತರ ರಾಷ್ಟ್ರೀಯ ಮೂಲಗಳು ನೆಟ್‍ಫಿಕ್ಸ್ ಭಾರತದ ನಿರ್ದೇಶಕರಾಗಿದ್ದಾರೆ]

ಒಳ್ಳೆಯ ಕೆಲಸ ಪಡೆಯಬೇಕು ಶೇರಾ ಯಶಸ್ಸು ಕಾಣಬೇಕು ಎಂದು ನಿಮ್ಮ ವೃತ್ತಿ ಜೀವನವನ್ನು ಯೋಜಿಸಬೇಡಿ ಯಾವ ಕೆಲಸವನ್ನೂ ವರ್ಗೀಕರಿಸಲು ಸಾಧ್ಯವಿಲ್ಲ ನೀವು ಯಾವುದೇ ಕೆಲಸಮಾಡಿ, ಅದರಲ್ಲಿ ಆನಂದಿಸಿ ನಿಮ್ಮ ವೃತ್ತಿ ಜೀವನ ಆರಂಭಿಸುವ ಮೊದಲು ನಿಮ್ಮ ನೀವು ಅರಿಯಿರಿ. ನಿಮಗೆ ಎಂತಹ ಕೆಲಸಬೇಕು. ಆ ಕೆಲಸದ ಪ್ರಾಮುಖ್ಯತೆ ಏನು ಎಂಬುದನ್ನು ವಿಶ್ಲೇಷಿಸಿ ತಣಿಸಲಾರದ ಜ್ಞಾನದ ಹಸಿವಿರಲಿ ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ಕೆಲಸಮಾಡಿ ಒಂದು ಬಾಗಿಲು ಮುಚ್ಚಿದ್ದರೆ ತೆರೆದಿರುವ ಬೇರೆ ದ್ವಾರಗಳಿರುತ್ತವೆ. ನೀವೆ ನಿಮ್ಮ ಸುತ್ತ ಕೋಟೆಕಟ್ಟಿಕೊಂಡು ಒಂದೇ ರೀತಿ ಯೋಚಿಸಿ ಕೆಲಸಮಾಡುವುದನ್ನು ಬಿಡಿ. ಆ ಕೋಟೆಯನ್ನು ಛೇಧಿಸಿ ಹೊರ ಬಂದು, ಸಾಕಷ್ಟು ವೈವಿಧ್ಯಮಯ ಪ್ರಯತ್ನಗಳನ್ನು ಮಾಡಿ. ವೃತ್ತಿಯ ಮೊದಲದಿನಗಳಲ್ಲಿ ಕಲಿಕೆಗೆ ಆದ್ಯತೆ ನೀಡಿ. ನಿಮ್ಮ ವೃತ್ತಿಗೆ ಬಂದು ಬಲವಾದ ಬುನಾದಿ ನಿರ್ಮಿಸಿ ಚಿಕ್ಕವಯಸ್ಸಿನಲ್ಲಿ ವೃತ್ತಿಗಳನ್ನು ಬದಲಾಯಿಸುತ್ತಾ ನಾನಾ ಪತ್ರಗಳನ್ನು ನಿರ್ವಹಿಸಿ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಯೋಚಿಸಿ ನಿಮ್ಮ ಹೃದಯ ಎಂತಹ ವೃತ್ತಿ ಬಯಸುತ್ತದೆಯೆಂದು ತಿಳಿಯಿರಿ. ನಿಮ್ಮ ವೃತ್ತಿ ಜೀವನದ ಅಡಿಪಾಯ ಭದ್ರವಾಗಿಲ್ಲದಿದ್ದರೆ, ನೀವು ವೃತ್ತಿಯಲ್ಲಿ ಮೇಲೇರುವುದು ಕಷ್ಟ.

  1. ಸೋಲನ್ನು ಸ್ವೀಕರಿಸಿ:

[ರಾಹುಲ್ ದ್ರಾವಿಡ್ ಅಭಿಪ್ರಾಯದಲ್ಲಿ ಅವರ ಜೀವನಾಧಾರಿತ ಚಲನಚಿತ್ರದ ಮೊದಲಭಾಗ ನೀರಸವಾಗಿರುತ್ತದೆ. ಏಕೆಂದರೆ ಮೊದಲ ಭಾಗದಲ್ಲಿ ಅವರ ಸಾಧನೆ ಶೂನ್ಯ, ಎರಡನೇಯ ಭಾಗದಲ್ಲಿಷ್ಟೇ ಅವರ ನಿರೀಕ್ಷಿತ ಸಾಧನೆಗಳಿಸುವುದು]

ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರಿಯವಯಸ್ಸಿನವರಾಗಿರಲು ಬಯಸುವುದಾದರೆ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಾಗಿ ನೀವು ಆರಿಸಿಕೊಂಡ ಹಾದಿಯಲ್ಲಿ ಎದುರಾಗುವ ಸಮಸ್ಯೆಗಳ ಮತ್ತು ಸವಾಲುಗಳ ಜೊತೆ ಹೋರಾಡಿ. ಪ್ರತಿ ಸೋಲು ಕಲಿಯಲು ಅವಕಾಶ ನೀಡುತ್ತದೆ. ನಿರಾಕರಣೆ ನಿಮ್ಮ ಹೊಸಹಾದಿಯ ಒಂದು ಅಂಶವಾಗಬೇಕು. ಹೆಚ್ಚಿನ ಪ್ರಯತ್ನದಿಂದ ಸೋಲನ್ನು ಗೆಲ್ಲಿ. ಸೋಲು ಎನ್ನುವುದು ಕೊನೆಯಲ್ಲಿ ಸೋಲು ಸುಧಾರಣೆಯಾಗಲು ಏನು ಅಗತ್ಯ ಎನ್ನುವುದನ್ನು ತಿಳಿಸುತ್ತದೆ. ತಾಳ್ಮೆಯಿರಲಿ. ತಪ್ಪುಗಳನ್ನು ಮಾಡಿ. ಸೋಲಿನಿಂದ ಕಲಿಯುತ್ತಾ ಹೋಗಿ ಯಶಸ್ಸು ಸಿಗುವುದು ನಿಧಾನವಾಬಹುದು. ಆದರೆ ಶ್ರಮಪಟ್ಟ ಮೇಲೆ ಯಶಸ್ಸು ಸಿಕ್ಕೇ ಸಿಗುತ್ತದೆ. ನಿಮ್ಮ ಕೆಲಸ ನೀವು ಮಾಡಿ ನಿಮ್ಮ ಕೈಗಳು ಬೇರೆ ಬೇರೆ ಕೆಲಸಗಳನ್ನು ಮಾಡುತ್ತಾ ಮಲಿನವಾಗಲಿ.

ನೀವು ಬೇರೆ ಬೇರೆ ವಸ್ತುಗಳಲ್ಲಿ ವಿಷಯಗಳಲ್ಲಿ ಕೇವಲ ಆನಂದವನ್ನೇ ಬಯಸುವುದಾದರೆ ನಿಮಗೆ ಆಶಾಭಂಗವಾಗಬಹುದು. ನೋವು ಮತ್ತು ನಲಿವು ಹಗಲು ರಾತ್ರಿಗಳಿದ್ದಂತೆ. ಯಾರೊಬ್ಬರೂ ಸದಾ ಸುಖಿಗಳಿರಲಾಗಲಿ ಅಥವಾ ದುಃಖಿಗಳಾಗಿರಲಾಗಲಿ ಸಾಧ್ಯವಿಲ್ಲ. ಈ ಎಲ್ಲಾ ಅಂಶಗಳೂ ನಮ್ಮ ಮನಸ್ಸು ಎಷ್ಟು ಸ್ಥಿರವಾಗಿದೆ ಎನ್ನುವ ಅಂಶದ ಮೇಲೆ ಅವಲಂಬಿಸಿದೆ. ನಾವು ಸೋಲನ್ನು ಬೆಳೆಯುವ ಪ್ರತಿಮೆಯ ಒಂದು ಅವಿಭಾಜ್ಯ ಅಂಗ ಎಂದು ಭಾವಿಸಬೇಕು.

  1. ಸೋಲಿನ ಭಯದಿಂದ ಹೊರಗೆ ಬನ್ನಿ

[ಗೀತಾ ಗೋಪಿನಾಥ್, ಇಂಟರ್ ನ್ಯಾಷನಲ್ ಮಾನಿಟರ್ ಫಂಡನ ಆರ್ಥಿಕ ತಜ್ಞೆ, ಮೈಸೂರಿನಿಂದ ದೆಹಲಿಗೆ ಪದವಿ ಪ್ರಧಾನ ಕಾರ್ಯಕ್ರಮಕ್ಕೆ ಹೊರಟಾಗ, ಅವರು ದೊಡ್ಡ ಸರೋವರದ ಸಣ್ಣ ಮೀನಿನಂತಿದ್ದರು]

ಜನರು ಸಾವಿಗಿಂತ ಹೆಚ್ಚಾಗಿ ಸೋಲಿಗೆ ಭಯಪಡುತ್ತಾರೆ. ಪ್ರತಿಯೊಂದು ಸಣ್ಣ ತಪ್ಪನ್ನೂ ಬಣ್ಣ ಬಳಿದು ವರ್ಣಿಸಿ ಹಿಗ್ಗಿಸುತ್ತಾರೆ. ಪ್ರತಿ ಸೋಲೂ ನಮಗೆ ಆ ಕೆಲಸದಲ್ಲಿ ಗುಪ್ತವಾಗಿ ಅಡಗಿರುವ ಅವಕಾಶದ ಬಾಗಿಲು ತೆರೆದು, ಹೊಸ ವಿಷಯ ಕಲಿತು, ಸಫಲತೆ ಕಾಣಲು ಬೇರೆ ರೀತಿಯಲ್ಲಿ ಪ್ರಯತ್ನಿಸಲು ತಿಳಿಸುತ್ತದೆ. ತಪ್ಪು ಮಾಡಿದ್ದರ ಬಗ್ಗೆ ಚಿಂತಿಸುತ್ತಾ ಹೋದರೆ, ಅದು ನಿಮ್ಮನ್ನು ವಿಶೇಷಣೆಗೆ, ನಿಷ್ಟ್ರಿಯತೆಗೆ ದೂಡುತ್ತದೆ. ತಾಳ್ಮೆ ಇರಲಿ ಒಂದು ವಿಷಯದ ಬಗ್ಗೆ ಅತಿಯೋಚಿಸಿ ತಲೆ ಕೆಡಿಸಿಕೊಳ್ಳದೆ, ಆ ಕೆಲಸದಲ್ಲಿ ಎದುರಾಗಬಿಹುದಾದ ಸೋಲನ್ನು ನಿರೀಕ್ಷಿಸಿ. ಹೀಗೆ ಮಾಡುವುದರಿಂದ ಯಾವ ಅಂಶಗಳೂ ನಿಮ್ಮ ಯೋಜನೆಗಳನ್ನು ಹಾಳು ಮಾಡುವುದಿಲ್ಲ. ದೈರ್ಯದಿಇಂದ, ಏಕಾಗ್ರತೆಯಿಂದ ಕಷ್ಟಪಟ್ಟು ಕೆಲಸಮಾಡಿ ಸೋಲಿನ ಹೆದರಿಕೆಯನ್ನು ಜಯಿಸಿರಿ.

  1. ನಿರಂತರ ಕಲಿಯುವಂತವರಾಗಿ

[ಅಜಿತ್ ಡೋವಲ್, ರಾಷ್ಟ್ರೀಯ ಭದ್ರತಾ ಸಂಸ್ಥೆಯ ಅತಿ ಧೀರ್ಘಾವಧಿಯ ಕಾಲ ಸೇವೆ ಸಲ್ಲಿಸಿದ ಸಲಹೆಗಾರರಾಗಿದ್ದಾರೆ]

ಪದವಿಗಳ ಬಗ್ಗೆ ಹೆಮ್ಮೆ ಪಡಬೇಡಿ ಏಕೆಂದರೆ ಉನ್ನತ ಶಿಕ್ಷಣ ನಿಮಗೆ ಕೇವಲ ಜ್ಞಾನವನ್ನು ನೀಡುತ್ತದೆ. ವಾಸ್ತವಾಂಶಗಳ ಅರಿವಿರಲಿ. ಅಲ್ಪ ಕಲಿತವರಿಂದ ಕಲಿಯುವುದು ಬೇಕಾದಷ್ಟಿದೆ. ಅವರ ಬಳಿ ಹೋಗಿ, ಪ್ರೀತಿಯಿಂದ, ಗೌರವದಿಂದ ಒಡನಾಡಿ, ಜೀವನದ ಪಾಠಗಳನ್ನೂ ಮೌಲ್ಯಗಳನ್ನೂ ಅವರಿಂದ ಕಲಿಯಿರಿ. ಮೊದಲು ಮಾಡಿದ ಕೆಲಸಗಳಿಂದ ಹೊರಬನ್ನಿ ಹಾಗೂ ನಿಮ್ಮ ಬೆಳವಣಿಗೆಗೆ ಯಾವುದೇ ಕೆಲಸಗಳಿಂದ ಹೊರಬನ್ನಿ ಹಾಗೂ ನಿಮ್ಮ ಬೆಳವಣಿಗೆಗೆ ಯಾವುದು ಅಗತ್ಯವೆಂದು ಅರಿಯಿರಿ ಇಲ್ಲದಿದ್ದರೆ. ನೀವೇ ನಿಮ್ಮ ಬೆಳವಣಿಗೆಗೆ ಅಡ್ಡಗಾಲಾಗಿ ನಿಮ್ಮ ಸಂಸ್ಥೆಯು ಬಾರೀ ಹೊಡೆತಕ್ಕೆ ಗುರಿಯಾಗುವುದನ್ನು ಕಾಣುತ್ತೀರ ನಿಮ್ಮ ಸ್ಥಳದಲ್ಲಿ, ನಿಮ್ಮ ಕೆಲಸದ ಪ್ರದೇಶದಲ್ಲಿ ಏನಾಗುತ್ತಿದೆ ಎಂದು ತಿಳಿಯಿರಿ. ಸೆಮಿನಾರ್‍ಗಳಿಗೆ (ಸಮ್ಮೇಳನಗಳಿಗೆ) ವೆಬಿನರ್‍ಗಳಿಗೆ ಹಾಜರಾಗಿ ತಮ್ಮದೇ ಕ್ರಮವನ್ನು ಅನುಸರಿಸಿ, ಕಾರ್ಯನಿರ್ವಹಿಸುವವರ ಜೊತೆ ಕೆಲಸಮಾಡಿ ನಿಮ್ಮದೇ ಆದ ಮಾದರಿಗಳನ್ನು ರೂಪಿಸಿಕೊಳ್ಳಿ, ವಿವಿಧ ವಿಷಯಗಳನ್ನು ಅಭ್ಯಾಸ ಮಾಡಲು ಮಾರ್ಗದರ್ಶಿಗಳನ್ನು ಹುಡುಕಿಕೊಳ್ಳಿ ಉತ್ಸಾಹದಿಂದ ಜ್ಞಾನದಾಹಿಗಳಾಗಿ, ಬದಲಾವಣೆ ನಿರೀಕ್ಷಿಸಿ ಕೆಲಸಮಾಡಿ. ಕೇವಲ ಹಣಕ್ಕಾಗಿ ಕೆಲಸಮಾಡಬೇಡಿ ಹಣ ನಿಮಗೆ ಸಿಗದಿದ್ದರೂ, ನಿಮ್ಮ ಅನುಭವದ ಶ್ರೀಮಂತಿಕೆ ಮೌಲ್ಯಯುತವಾದುದ್ದು ಆ ಅನುಭವವನ್ನು ಪಡೆಯಲು ಕಲಿಯಿರಿ

  1. ಸ್ವಯಂ ಪ್ರತಿಫಲಿಸಿ

[ಅಮಿತ್ ಅಗರವಾಲ್, ಅಮೇಷಾನ್ ಕಂಪನಿ ಸೇರಿದ್ದು ತಂತ್ರಾಂಶ ಅಭಿವೃದ್ಧಿ ಅಧಿಕಾರಿಯಾಗಿ ಈಗವರು ಜಾಗತಿಕ ಮಟ್ಟದ ಹಿರಿಯ ಉಪಾಧ್ಯಕ್ಷರಾಗಿದ್ದಾರೆ].

ನಿಮ್ಮ ಸಾಮಧ್ರ್ಯವನ್ನು ಗುರುತಿಸಿ ನಿಮ್ಮ ಪ್ರಗತಿಗೆ ಕುಂಠಿತವಾಗುವ ಅಡೆತಡೆಗಳನ್ನು ಪ್ರಾಮಾಣಿಕವಾಗಿ ನಿರ್ಣಯಿಸಿ ನಮ್ಮ ಜೀವನ ಎನ್ನುವುದು ಒಂದು ಅತ್ಯಮುಲ್ಯ ಕೊಡುಗೆ ಆದ್ದರಿಂದ ಕೊಂಚಕಾಲ ನಿಮಗಾಗಿ ಮೀಸಲಿಡಿ, ಬರಿಗಾಲಿನಲ್ಲಿ ಕೆಲವು ಕಿಲೋಮೀಟರ್ ನಡೆಯಲು ಸಿದ್ಧರಾಗಿ ಇದರಿಂದ ನೀವು ನಿಮ್ಮ ದೌರ್ಬಲ್ಯಗಳನ್ನು ಅರಿತು, ಸವಾಲು ಹಾಕುವಂತಹ ಸಂಧರ್ಭಗಳನ್ನು ಸಮರ್ಥವಾಗಿ ಎದುರಿಸಬಹುದು ನಿಮ್ಮ ಮನದ ಬಾಗಿಲು ತೆರೆದು, ಪರಿಮರ್ತನಾಶೀಲವಾದ ಭಿನ್ನವಾಗಿ ಯೋಚಿಸುವ ರೀತಿಯನ್ನು ಅಭ್ಯಾಸ ಮಾಡಿಕೊಂಡಲ್ಲಿ, ನಿಮಗೆ ನೀವು ಎದುರಿಸಬಹುದಾದ ಸಮಸ್ಯೆಗಳ ಅರಿವಾಗುತ್ತದೆ. ನಿಮ್ಮ ವ್ಯಕ್ತಿತ್ವವನ್ನು ಬೇರೆಯವರು ಹೇಗೆ ಅವಲೋಕಿಸುತ್ತಿದ್ದಾರೆಂದು ಗಮನಿಸಿ ತೀವ್ರವಾಗಿ ಯೋಚಿಸಿ. ನಿಮ್ಮ ಮನಸ್ಸನ್ನು / ಮೆದುಳನ್ನು ಒಂದೇ ತರಹದ ಯೋಚನೆಗಳಿಗೆ ಸೀಮಿತಗೊಳಿಸಿಕೊಳ್ಳಬೇಡಿ. ನೀವು ಏನನ್ನು ಸಾಧಿಸಲು ಬಯಸುವಿರಿ, ನಿಮ್ಮ ಸಾಧನೆಗೆ ನಿಮ್ಮ ವ್ಯಕ್ತತ್ವ ಹೇಗೆ ಅಡ್ಡಿಯಾಗಿದೆ ಎಂಬುದರ ಅಂತರ ತಿಳಿಯಿರಿ ನೀವು ಒಮ್ಮೆ ಈ ಅಂತರ ಕಂಡುಕೊಂಡರೆ, ನಿಮ್ಮ ಗುರಿ ಅರಿತು ಮುಂದುವರೆಯಬಹುದು. ಸಮಗ್ರತೆ ಕೆಲಸದ ಆರಂಭದಲ್ಲಿ ಕಾಣಬಹುದು, ಆದರೆ ದಕ್ಷತೆ, ಕಾರ್ಯಕ್ಷಮತೆ, ಸಾಧನೆಯ ದೃಷ್ಠಿಕೋನ ತ್ವರಿತವಾಗಿ ಕಂಡುಬರುವುದು.

  1. ನಿಮ್ಮದೇ ಗುರುತನ್ನು ರೂಪಿಸಿಕೊಳ್ಳಿ (ನಿಮ್ಮದೇ ಗುರುತನ್ನು ರೂಪಿಸಿಕೊಳ್ಳಿ)

[ಹಾಲಕ್ಕಿ ಬುಡಕಟ್ಟಿನ ತುಳಿಸಿಗೌಡ ಗಿಡ ಮೂಲಿಕೆಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದು ಪ್ರಸಿದ್ಧರಾಗಿದ್ದಾರೆ]

ನಿಮ್ಮ ಮನೆತನ ಪರಂಪರೆ ಕುಲನಾಮ ಅಥವಾ ನಿಮ್ಮ ತಂದೆ-ತಾಯಿಯರ ಸಾಧನೆಗಳ ವೈಭವದ ಮೇಲೆ ಅವಲಂಬಿತತಾರಿಬೇಡಿ ರೂಢಿಯಲ್ಲಿರುವ ಹಾದಿಬಿಟ್ಟು ದಾಪುಗಾಲಿಡುತ್ತಾ ಮುಂದುವರೆಯಿರಿ. ಬೇರೆಯವರ ಒಪ್ಪಿಗೆಗೆ, ಮೆಚ್ಚುಗೆಗೆ ಮೌಲ್ಯಮಾಪನಕ್ಕೆ ಬೆಲೆಕೊಡಬೇಡಿ. ನಿಮ್ಮ ಪ್ರಯತ್ನವನ್ನು ಯಾವಕಾರಣಕ್ಕೂ ತಡೆಹಿಡಿಯಬೇಡಿ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಸಾಮಥ್ರ್ಯ ಹೊಂದಿರುತ್ತಾನೆ. ಆ ಸಾಮಥ್ರ್ಯವನ್ನು ಪಾಲನೆ ಮಾಡುತ್ತಾ, ಪೋಷಿಸುತ್ತಾ, ಸರಿಯಾದ ರೀತಿಯಲ್ಲಿ ತರಬೇತಿ ನೀಡಿದರೆ, ಅಗತ್ಯವಾದುದನ್ನು ಸಾಧಿಸಿ, ಸಾಮಥ್ರ್ಯಗಳಿಸಿ ನಮ್ಮ ವ್ಯಕ್ತಿತ್ವರೂಪಿಸಿಕೊಳ್ಳಲು ಸಾಧ್ಯ. ನಿಮ್ಮಲ್ಲಿ ಆಸೆ ಇದ್ದರೆ, ನಿರಂತರ ಪ್ರಯತ್ನದಿಂದ ಗುರುಮುಟ್ಟಲು ಸಾಧ್ಯ.

  1. ಸಂಕಲ್ಪ ಪ್ರಜೆಗಳಿಸಿಕೊಳ್ಳಿ

(ಅಬ್ದುಲ್ ಜಬ್ಬಾರ್ ಭೂಪಾಲ್ ಗ್ಯಾಸ್ ದುರಂತದಲ್ಲಿ ಬದುಕುಳಿದ ಸಂತಸ್ತ್ರೀರ ನ್ಯಾಯಯುತ ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ಹೋರಾಡಿದರು)

ಒಬ್ಬ ವೃತ್ತಿನಿರತ ವ್ಯಕ್ತಿಯಾಗಿ ನೀವು ಅಲ್ಲಲ್ಲಿ ಜೀವನ ನಿರ್ವಹಣೆಗಾಗಿ ಹಣಸಂಪಾದನೆ, ವೃತ್ತಿಯ ಪ್ರಗತಿ ಮುಂತಾದ ವಿಷಯಗಳಲ್ಲಿ ಸಿಲುಕಿ, ನೀವು ಆವೃತ್ತಿ ಕೈಗೊಳ್ಳಲು ಯಾವ ಅಂಶ ಕಾರಣವಾಯಿತು ಎಂದು ಮರೆತಿರಬಹುದು. ನೀವು ಯಾವುದರ ಹಿಂದೆ ಓಡುತ್ತಿರುವಿರೋ ಅದೆಲ್ಲಾ ಶೂನ್ಯವೆಂದು ಸ್ಮಶಾನಗಳು ತಿಳಿವಳಿಕೆ ನೀಡುತ್ತವೆ. ನಿಮ್ಮ ಸಾಮಥ್ರ್ಯಕ್ಕೆ ಮಿತಿಹಾಕಿಕೊಳ್ಳಬೇಡಿ ಹಾಗೆಯೇ ನಿಮ್ಮ ಅಪಾರ ಸಾಮಥ್ರ್ಯವನ್ನು ಪದೇಪದೇ ಪ್ರಶ್ನಿಸಿಕೊಳ್ಳುವಂತಹ, ಅವಕಾಶಗಳ ದ್ವಾರಗಳನ್ನು ಮುಚ್ಚುವಂತಹ, ನೀವು ಭ್ರಾಂತಿಗೆ, ಅಸ್ಥಿರತೆÀಗೆ

ಒಳಗಾಗುವಂತಹ ವಿಷವರ್ತುಲ ಪ್ರವೇಶಿಸಬೇಡಿ. ಗುರಿಸ್ಪಷ್ಟವಾಗಿದ್ದು, ವಾಪಕವಾದ ಉದ್ದೇಶವಿರಲಿ ಆತ್ಮವಿಶ್ವಾಶದಿಂದ, ಬದ್ಧತೆಯಿಂದ ಶ್ರದ್ಧೆಯಿಂದ ಕೆಲಸಮಾಡಿ ಮನೆಯಲ್ಲಿ ಸೂಕ್ತವಾದ ಉತ್ತೇಜನ ನೀಡುವಂತಹ ವಾತಾವರಣ ನಿರ್ಮಿಸಿ.

ಯೋಚನಾ ಪ್ರಕ್ರಿಯೆ- ನಿಷ್ಕ್ರಯತೆಂಯಿಂದ ವಶ್ಲೇಷಣೆಯತ್ತ

ನಮ್ಮ ವೃತ್ತಿಜೀವನದಲ್ಲಾಗಲಿ, ವೈಯುಕ್ತಿಕ ಬದುಕಿನಲ್ಲಾಗಲಿ

ಪ್ರಗತಿ ತಡೆಹಿಡಿಯಲ್ಪಡಲು ಬಾಹ್ಯ ಅಂಶಗಳು ಕಾರಣವಲ್ಲ ನಮ್ಮಯೋಚನಾ ಪ್ರಕ್ರಿಯೆ. ನಮ್ಮ ಮನಸ್ಸು ನಿಷ್ಟ್ರೀಯಗೊಳ್ಳಲು ಕಾರಣ.

ನಿಮ್ಮ ಮೇಲಧಿಕಾರಿ, ಸಾಲುಗಾರ, ಸ್ನೇಹಿತರು, ಸಂಗಾತಿ – ಎಲ್ಲರೂ ಸ್ಥಿತ್ಯಂತರ ಸ್ಥಿತಿಯಲ್ಲಿರುತ್ತಾರೆ. ಅಂತೆಯೇ ನಿಮ್ಮ ಮನಸ್ಸೂ ಕೂಡ, ನಿಮ್ಮ ಸುತ್ತ ಮುತ್ತಲಿರುವ ಸ್ನೇಹಿತರಿಂದ, ಸ್ಥಳಗಳಿಂದ ಹಾಗೂ ದಿನನಿತ್ಯಕಾಣುವ ಜೀವನದಿಂದ ಪ್ರೇರಣೆಗಾಗಿ ಹುಡುಕಿ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ, ಕೆಲಸದಲ್ಲಿ ಅತ್ಯುತ್ಸಾಹಿಗಳಾಗಿ, ಸೋಲನ್ನು ಒಪ್ಪಿಕೊಂಡು, ಭಯವನ್ನು ಓಡಿಸುತ್ತಾ, ನಿರಂತರ ಕಲಿಯುತ್ತಾ, ನಿಮ್ಮ ಮನಸ್ಸಿಗೆ ತರಬೇತಿ ನೀಡುತ್ತಾ ಸ್ವಯಂ ಪ್ರತಿ ಫಲಿಸುತ್ತಾ, ನಿಮ್ಮದೇ ವ್ಯಕ್ತಿತ್ವ ರೂಪಿಸಿಕೊಂಡು ಸಂಕಲ್ಪ ಪ್ರಜ್ಞೆ ಬೆಳೆಸಿಕೊಳ್ಳಿ.

ಜೀವನದ ಕ್ರಿಯೆಗಳು

ಜೀವನ ಒಂದು ಪ್ರಯಾನವಿದ್ದಂತೆ ಬದುಕೆಂಬ ಈ ನಿಧಿಯನ್ನು ಪೋಷಿಸಲು, ಆಸ್ವಾದಿಸಲು, ಕೃತಜ್ಞತೆಯಿಂದ ಕಾಪಾಡಿಕೊಳ್ಳಲು ಕಲಿಯಬೇಕು ನಮ್ಮ ಜೀವನದಲ್ಲಿ ಈ ಸರ್ವವ್ಯಾಪಿ ಸಮಸ್ಯೆಯು ಅನಿರೀಕ್ಷಿತ ಅಡೆತಡೆಗಳನ್ನುಂಟುಮಾಡಿದೆ, ಸ್ವಲ್ಪ ಕಾಲಾವಕಾಶ ತೆಗೆದುಕೊಂಡ, ವಿರಾಮಕೊಟ್ಟು ಸೂಕ್ತ ಕಾರ್ಯನಿಧಾನದಿಂದ ನಮ್ಮ ಮನಸ್ಸಿಗೆ ತರಬೇತಿ ನೀಡುವ ಅವಶ್ಯಕತೆಯಿದೆ ವಿನಮ್ರತೆಯಿಂದ ಬದಲಾವಣೆಯಾಗುವಂತಹ ಮನಸ್ಥಿತಿಯನ್ನು ರೂಡಿಸಿಕೊಂಡು ಕುಸಿತದಿಂದ ಮೇಲೆಳುವ ಹಂತವನ್ನು ತ್ವರಿತಗೊಳಿಸುವ ಕ್ರಮವನ್ನು ಆಯ್ಕೆಮಾಡಿಕೊಳ್ಳಿ.

ಮೂಲ – ಶ್ರೀವತ್ಸ ಅನಂತರಾವ್

ಅನುವಾದಕರು ;ಶ್ರೀಮತಿ. ಸಿ.ಎನ್. ಮುಕ್ತಾ     

ಮಲ್ಟಿ ನ್ಯಾಷಿನಲ್ ಕಂಪನಿ, ಆಪ್ತ ಸಮಾಲೋಚಕರು                              

 

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.