Virat Kohli ನವ ಪೀಳಿಗೆಯ ಕ್ಲಾಸಿಕ್‌ ಬ್ಯಾಟರ್‌


Team Udayavani, Nov 17, 2023, 6:15 AM IST

1-2wedsad

“The first time I met you in the Indian dressing room, you were pranked by other teammates into touching my feet. I couldn’t stop laughing that day. But soon, you touched my heart with your passion and skill. I am so happy that that young boy has grown into a ‘Virat’ player.”

ವಿರಾಟ್‌ ಕೊಹ್ಲಿ ಕುರಿತಂತೆ ಕ್ರಿಕೆಟ್‌ ದಿಗ್ಗಜ, ಕ್ರಿಕೆಟ್‌ ದೇವರು ಎಂದೇ ಖ್ಯಾತರಾಗಿರುವ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಆಡಿದ ಮಾತುಗಳಿವು. ಬುಧವಾರದ ಸೆಮಿಫೈನಲ್‌ ಪಂದ್ಯದಲ್ಲಿ ಸಚಿನ್‌ ತೆಂಡೂಲ್ಕರ್‌ ಅವರ ಎದುರಲ್ಲೇ, ಅವರದ್ದೇ 49 ಶತಕದ ದಾಖಲೆ ಮುರಿದ ವಿರಾಟ್‌ ಕೊಹ್ಲಿ, ನಡುಬಾಗಿ ನಮಸ್ಕರಿಸಿದರು. ಜತೆಗೆ ಈ ಆಟಕ್ಕೆ ಸಾಕ್ಷಿಯಾದದ್ದು ವೆಸ್ಟ್‌ ಇಂಡೀಸ್‌ನ ಕ್ರಿಕೆಟ್‌ ದಿಗ್ಗಜ ವಿವಿಯನ್‌ ರಿಚರ್ಡ್ಸ್, ಫುಟ್‌ಬಾಲ್‌ ಶ್ರೇಷ್ಠ ಆಟಗಾರ ಡೇವಿಡ್‌ ಬೆಕ್ಹಾಮ್‌ ಮತ್ತು ನೆಚ್ಚಿನ ಮಡದಿ ಅನುಷ್ಠಾ ಶರ್ಮ. ಕೊಹ್ಲಿ ಅವರ ಬುಧವಾರದ ಆಟ ಸಾರ್ವಕಾಲಿಕ ಶ್ರೇಷ್ಠ ಎಂದೇ ಬಣ್ಣಿಸಬಹುದಾಗಿದ್ದು, ಭಾರತವನ್ನು ವಿಶ್ವಕಪ್‌ನ ಫೈನಲ್‌ಗೂ ಕರೆದೊಯ್ಯಿತು ಎನ್ನಲಡ್ಡಿ ಇಲ್ಲ.

ವಿಶ್ವ ಕ್ರಿಕೆಟ್‌ ದಿಗ್ಗಜರಲ್ಲಿ ವಿರಾಟ್‌ ಕೊಹ್ಲಿ ಹೆಸರೂ ಶಾಶ್ವತವಾಗಿ ಉಳಿಯುತ್ತದೆ. ಇದು ಕೇವಲ ಅವರು ದಾಖಲೆ ನಿರ್ಮಿಸಿದರು ಎಂಬ ಕಾರಣಕಲ್ಲ. ಅವರ ಆಟದ ವೈಖರಿಗೆ, ಕ್ರಿಕೆಟ್‌ ಮೇಲಿಟ್ಟಿರುವ ಪ್ರೀತಿಗೆ. ಏಕದಿನ ಕ್ರಿಕೆಟ್‌ನಲ್ಲಿ ಸದ್ಯ 50 ಶತಕ ಬಾರಿಸಿರುವ ಅವರು, ಟೆಸ್ಟ್‌, ಟಿ20 ಕ್ರಿಕೆಟ್‌ ಸೇರಿ ಒಟ್ಟು 80 ಶತಕಗಳನ್ನು ತಮ್ಮ ಬುಟ್ಟಿಯಲ್ಲಿ ಇರಿಸಿ­ಕೊಂಡಿದ್ದಾರೆ. ಈ ಮೂಲಕ ತಮ್ಮ ಪೀಳಿಗೆಯ ಅಪ್ರತಿಮ ಕ್ರಿಕೆಟಿಗರಾಗಿ ಆಟದ ಇತಿಹಾಸದಲ್ಲಿ ಉಳಿಯುತ್ತಾರೆ.

ವಿರಾಟ್‌ ಕೊಹ್ಲಿ ಅವರೇ ಹೇಳಿದಂತೆ, ಸಚಿನ್‌ ಮತ್ತು ಕೊಹ್ಲಿ ನಡುವೆ ವ್ಯತ್ಯಾಸ ಮಾಡುವಂತಿಲ್ಲ. ಆದರೂ ಆಟದ ಲೆಕ್ಕಾಚಾರವನ್ನು ನೋಡಿದಾಗ, ಸಚಿನ್‌ ತೆಂಡೂಲ್ಕರ್‌ 463 ಪಂದ್ಯಗಳಲ್ಲಿ 49 ಏಕದಿನ ಶತಕಗಳನ್ನು ಗಳಿಸಿದ್ದರೆ, ಕೊಹ್ಲಿ ಕೇವಲ 291 ಪಂದ್ಯಗಳಲ್ಲಿ 50 ಶತಕದ ದಾಖಲೆ ಮಾಡಿದ್ದಾರೆ. ಇನ್ನು ಸಚಿನ್‌ ತೆಂಡೂಲ್ಕರ್‌ 16 ವರ್ಷಕ್ಕೇ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರೆ, ಕೊಹ್ಲಿ 19 ವರ್ಷಕ್ಕೆ ಕಾಲಿಟ್ಟರು.

ಗ್ರೇಟ್‌ ಪ್ಲೇಯರ್‌
ಕ್ರಿಕೆಟ್‌ನಲ್ಲಿ ಅವರ ವಿರೋಧಿಗಳೂ ವಿರಾಟ್‌ ಕೊಹ್ಲಿ ಬಗ್ಗೆ ಗ್ರೇಟೆಸ್ಟ್‌ ಪ್ಲೇಯರ್‌ ಎಂದೇ ಕರೆಯುತ್ತಾರೆ. ಸಾಧನೆಗಳ ವಿಷಯದಲ್ಲಿ ಅವರು ಅನೇಕ ದಾಖಲೆಗಳನ್ನು ಮುರಿದಿದ್ದಾರೆ. ಸದ್ಯ ಒಟ್ಟಾರೆಯಾಗಿ 517 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 26,478 ರನ್‌ ಗಳಿಸಿದ್ದಾರೆ. ಹಾಗೆಯೇ 143 ಪ್ರಥಮ ದರ್ಜೆ ಪಂದ್ಯಗಳಲ್ಲಿ 10,925 ರನ್‌ ಗಳಿಸಿದ್ದಾರೆ.

2008ರ ಅಂಡರ್‌ 19 ವಿಶ್ವಕಪ್‌ ವೇಳೆ ಕೊಹ್ಲಿ ಯುವ ಭಾರತವನ್ನು ಮುನ್ನಡೆಸಿದ್ದರು. ಈ ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಜಯಸಿತ್ತು ಕೂಡ. ಆಗ ಹುಡುಕಾಟ ಕೊಹ್ಲಿ ಮತ್ತವರ ಸಂಗಡಿಗರಲ್ಲಿ ಕಾಣಿಸುತ್ತಿತ್ತು. ಆದರೆ ಈಗ ಪ್ರಬುದ್ಧರಾಗಿರುವ ಕೊಹ್ಲಿ, ಟೆಸ್ಟ್‌, ಏಕದಿನ ಮತ್ತು ಟಿ20­ಯಲ್ಲೂ ಉತ್ತಮ ರನ್‌ ಗಳಿಸುತ್ತಿದ್ದಾರೆ. 2020ರ ಅನಂತರದಲ್ಲಿ ಎರಡು-ಮೂರು ವರ್ಷಗಳ ಕಾಲ ಕೊಹ್ಲಿ ಬ್ಯಾಟಿಂಗ್‌ ಕೊಂಚ ಹಿನ್ನಡೆ ಅನುಭವಿಸಿದರೂ, ಬಳಿಕ ಹಿಂದಿನ ಹಾದಿಗೆ ಮರಳಿದೆ.

ಪ್ರೀತಿ- ಸಂಘರ್ಷ
ವಿರಾಟ್‌ ಕೊಹ್ಲಿಯವರ ಆಟದ ವೈಖರಿಯೇ ಅಂತದ್ದು. ತಂಡದ ಬೌಲರ್‌ವೊಬ್ಬ ವಿಕೆಟ್‌ ಪಡೆದಾಗ, ಹೆಚ್ಚು ಸಂಭ್ರಮಿಸುವ ವ್ಯಕ್ತಿಯೂ ವಿರಾಟ್‌ ಕೊಹ್ಲಿಯೇ. ಕೆಲವೊಮ್ಮೆ ವಿಕೆಟ್‌ ಪಡೆದವರಿಗಿಂತ ಕೊಹ್ಲಿ ಅವರೇ ಹೆಚ್ಚು ಸಂಭ್ರಮಿಸುತ್ತಾರೆ ಎಂದು ಕಾರ್ಯಕ್ರಮವೊಂದರಲ್ಲಿ ಪತ್ನಿ ಅನುಷ್ಠಾ ಶರ್ಮ ಅವರೇ ಕಿಚಾಯಿಸಿದ್ದರು. ಅದೇ ರೀತಿ ಕೆಲವೊಮ್ಮೆ ಎದುರಾಳಿ ತಂಡದ ಆಟಗಾರರ ಜತೆಗೂ ಕಿರಿಕ್‌ ಮಾಡಿಕೊಳ್ಳುವುದುಂಟು. ಕಳೆದ ಐಪಿಎಲ್‌ ವೇಳೆ ಅಫ್ಘಾನಿಸ್ಥಾನದ ನವೀನ್‌ ಉಲ್‌ ಹಕ್‌ ಜತೆಗೆ ಕೊಂಚ ಸಂಘರ್ಷ ಮಾಡಿಕೊಂಡಿದ್ದರು. ಆದರೆ ಈ ವಿಶ್ವಕಪ್‌ನಲ್ಲಿ ಎಲ್ಲವೂ ಸರಿ ಹೋಗಿ, ಈಗ ಬೆಸ್ಟ್‌ ಫ್ರೆಂಡ್‌ ರೀತಿ ಆಗಿದ್ದಾರೆ. ಅಂದರೆ ದಿಲ್ಲಿಯಲ್ಲಿ ನಡೆದ ಪಂದ್ಯದ ವೇಳೆ, ಅಭಿಮಾನಿಗಳು ನವೀನ್‌ ಬಗ್ಗೆ ವ್ಯಂಗ್ಯ ಮಾಡಿದ್ದರು. ಆಗ ಕೊಹ್ಲಿ ಅವರೇ ಆ ರೀತಿ ಮಾಡದಂತೆ ಅಭಿಮಾನಿಗಳಿಗೆ ಹೇಳಿ ಸುಮ್ಮನಾಗಿಸಿ ಮನಗೆದ್ದರು. ಅದೇ ರೀತಿ ಪಾಕಿಸ್ಥಾನ ಜತೆಗಿನ ಪಂದ್ಯದ ಬಳಿಕ ಅವರ ನಡೆ ಹೆಚ್ಚು ಶ್ಲಾಘನೀಯವಾಗಿಯೂ ಇತ್ತು. ತಮ್ಮ ಟೀಶರ್ಟ್‌ ಮೇಲೆ ಸಹಿ ಮಾಡಿ ಅದನ್ನು ಪಾಕ್‌ ತಂಡದ ನಾಯಕ ಬಾಬರ್‌ ಆಜಂಗೆ ಕೊಟ್ಟಿದ್ದರು. ಇವು ಅವರ ಕ್ರೀಡಾಸ್ಫೂರ್ತಿಗೆ ಸಾಕ್ಷಿಯಾಗಿದ್ದವು.

ಫೀಲ್ಡಿಂಗ್‌ ಮಾಡುವಾಗ ಅವರ ಲೈವ್‌ನೆಸ್‌ ಎಲ್ಲರಿಗೂ ಇಷ್ಟವಾಗುತ್ತದೆ. ಕ್ರೀಡಾಂಗಣದಲ್ಲಿನ ಹಾಡಿಗೆ ಹೆಜ್ಜೆ ಹಾಕುವುದು, ಅಭಿಮಾನಿಗಳ ಜತೆ ಅಲ್ಲಿಂದಲೇ ಸಂವಹನ ನಡೆಸುವುದು ಅವರ ಈ ಲೈವ್‌ನೆಸ್‌ಗೆ ಉದಾಹರಣೆಗಳು. ಹೀಗಾಗಿಯೇ ಕೊಹ್ಲಿ ಅವರಿಗೆ ಭಾರೀ ಪ್ರಮಾಣದ ಅಭಿಮಾನಿಗಳು ಇರುವುದು.

ಮೈಲುಗಲ್ಲುಗಳು

ವಿರಾಟ್‌ ಕೊಹ್ಲಿಯವರು ಕೇವಲ ಸಚಿನ್‌ 49 ಶತಕಗಳ ದಾಖಲೆಯನ್ನಷ್ಟೇ ಹಿಂದಿಕ್ಕಲಿಲ್ಲ. ಇದರ ಜತೆ ಅವರ ವೃತ್ತಿಜೀವನದಲ್ಲಿ ಸಾಕಷ್ಟು ಸಾಧನೆಗಳನ್ನೂ ಮಾಡಿದ್ದಾರೆ. ಅವುಗಳೆಂದರೆ,

ಕ್ಯಾಲೆಂಡರ್‌ ವರ್ಷದಲ್ಲಿ ಹೆಚ್ಚು ರನ್‌, 6 ಬಾರಿ

2017 1,460
2011 1,381
2019 1,377
2023 1,323
2013 1,268
2018 1202

ನಾಯಕತ್ವ ಸಾಧನೆಗಳು
ಕೊಹ್ಲಿ ನಾಯಕನಾಗಿಯೂ ಭಾರತ ತಂಡಕ್ಕೆ ಅತ್ಯಮೋಘ ಕಾಣಿಕೆ ನೀಡಿದ್ದಾರೆ. ಕೊಹ್ಲಿ ವಿಶ್ವಕಪ್‌ ಅಥವಾ ಚಾಂಪಿಯನ್ಸ್‌ ಟ್ರೋಫಿಯಂಥ ಕಪ್‌ಗಳನ್ನು ಗೆಲ್ಲಲಿಲ್ಲ ಎಂಬುದನ್ನು ಬಿಟ್ಟರೆ, ದ್ವಿಪಕ್ಷೀಯ ಸರಣಿಗಳು, ಇತರೆ ಸರಣಿಗಳಲ್ಲಿ ಉತ್ತಮ ಸಾಧನೆಯನ್ನೇ ಮಾಡಿದ್ದಾರೆ. 68 ಪಂದ್ಯಗಳಲ್ಲಿ 40ರಲ್ಲಿ ಗೆದ್ದಿರುವ ಕೊಹ್ಲಿ, ಭಾರತದ ಅತ್ಯಂತ ಯಶಸ್ವೀ ಟೆಸ್ಟ್‌ ನಾಯಕ. ಜಯದ ಅಂದಾಜು ಶೇ.58.8. ಎರಡನೇ ಸ್ಥಾನದಲ್ಲಿ ಎಂ.ಎಸ್‌.ಧೋನಿ ಇದ್ದು 27 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ನಾಯಕನಾಗಿಯೇ 20 ಟೆಸ್ಟ್‌ ಸೆಂಚುರಿ, 7 ದ್ವಿಶತಕಗಳನ್ನೂ ಬಾರಿಸಿದ್ದಾರೆ. 95ರಲ್ಲಿ 65 ಪಂದ್ಯ ಗೆದ್ದಿರುವ ಕೊಹ್ಲಿ ಭಾರತದ ನಾಲ್ಕನೇ ಅತ್ಯಂತ ಯಶಸ್ವಿ ನಾಯಕ. ಅಲ್ಲದೆ, ನಾಯಕನಾಗಿಯೇ ಕೊಹ್ಲಿ 21 ಶತಕ ಬಾರಿಸಿದ್ದಾರೆ.

ಟೆಸ್ಟ್‌
ಪಂದ್ಯ – 68
ಗೆಲುವು – 40
ಡ್ರಾ – 11
ಸೋಲು – 1

ಏಕದಿನ
ಪಂದ್ಯ – 95
ಗೆಲುವು – 65
ಸೋಲು – 27
ಫ‌ಲಿತಾಂಶ ರಹಿತ – 3

ಟಿ20
ಪಂದ್ಯ -50
ಗೆಲುವು – 30
ಸೋಲು – 16
ಫ‌ಲಿತಾಂಶ ರಹಿತ – 4
ಒಟ್ಟಾರೆ
ಪಂದ್ಯ – 213
ಗೆಲುವು – 135
ಸೋಲು – 60
ಡ್ರಾ/ಫ‌ಲಿತಾಂಶ
ರಹಿತ – 18

ದ್ವಿತೀಯ ಇನಿಂಗ್ಸ್‌ನಲ್ಲಿ ಹೆಚ್ಚು ಶತಕ

ವಿರಾಟ್‌ ಕೊಹ್ಲಿ – 27
ಸಚಿನ್‌ ತೆಂಡೂಲ್ಕರ್‌ – 17
ರೋಹಿತ್‌ ಶರ್ಮ – 15
ಕ್ರಿಸ್‌ ಗೇಲ್‌ – 12
ತಿಲಕರತ್ನೆ ದಿಲಾÏನ್‌ – 11
ಸನತ್‌ ಜಯಸೂರ್ಯ – 10
ಏಕದಿನದಲ್ಲಿ ಹೆಚ್ಚು ಆವರೇಜ್‌
ವಿರಾಟ್‌ ಕೊಹ್ಲಿ – ಶೇ.66.5
ಎ.ಬಿ. ಡೀವಿಲಿಯರ್ಸ್‌ – ಶೇ.56.8
ಮೈಕಲ್‌ ಬೆವನ್‌ – ಶೇ.56
ಮಿಷೆಲ್‌ ಕ್ಲಾರ್ಕ್‌ – ಶೇ.53.9
ಬಾಬರ್‌ ಆಜಂ – ಶೇ.53.1
ಶೇನ್‌ ವ್ಯಾಟ್ಸನ್‌ – ಶೇ.52.8
ಜೋ ರೂಟ್‌ – ಶೇ.51.9
ಎಂ.ಎಸ್‌.ಧೋನಿ – ಶೇ.51
ಇಮಾಮ್‌ ಉಲ್‌ ಹಕ್‌ – ಶೇ.50.5

ನಂ.1 ದಾಖಲೆಗಳು
1 ವೇಗವಾಗಿ 13,000
ರನ್‌ ಗಳಿಸಿದ ಆಟಗಾರ
2 ಟಿ20ಯಲ್ಲಿ ಅತೀ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿ(7)
3 ಟಿ20ಯಲ್ಲಿ ಅತೀ ಹೆಚ್ಚು ರನ್‌ ಬಾರಿಸಿದ ಆಟಗಾರ(4008)
4 ಟಿ20ಯಲ್ಲಿ ಅತೀ
ಹೆಚ್ಚು ಅರ್ಧಶತಕ(38)
5 ಮೂರು ವಿಭಾಗ ಸೇರಿ ಅತೀ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿ(20)

ಸಿ.ಜೆ. ಸೋಮಶೇಖರ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.