Tibet, ಮ್ಯಾನ್ಮಾರ್‌ನಲ್ಲಿಯೂ ಜನಜನಿತ ರಾಮಕಥಾ!


Team Udayavani, Jan 10, 2024, 6:57 AM IST

1-asdsdas

ಟಿಬೆಟ್‌ ಹಾಗೂ ಮ್ಯಾನ್ಮಾರ್‌ನಲ್ಲಿಯೂ ರಾಮಾಯಣವನ್ನು ಕಾಣಬಹುದು. 20ನೇ ಶತಮಾನದಲ್ಲಿ ಟಿಬೆಟ್‌ನ ಡುನಹುಆಂಗ್‌ನಲ್ಲಿರುವ ಮೊಗಾಓ ಗುಹೆಗಳಲ್ಲಿ ಟಿಬೆಟಿಯನ್‌ ರಾಮಾಯಣಕ್ಕೆ ಸಂಬಂಧಿಸಿದ, ಅಪೂರ್ಣವಾಗಿರುವ ಹಲವು ಹಸ್ತಪ್ರತಿಗಳು ದೊರೆತಿವೆ. ಈ ರಾಮಾಯಣದ ಕಥೆಗಳು 4 ರಿಂದ 11ನೇ ಶತಮಾನದಲ್ಲಿ ಬಹಳ ಜನಪ್ರಿಯವಾಗಿದ್ದವು ಎಂಬುದು ಪೌರಾಣಿಕ ಅಧ್ಯಯನಗಳಲ್ಲಿ ದೃಢಪಟ್ಟಿದೆ. ಈ ಡುನಹುಆಂಗ್‌ ಗುಹೆಗಳಲ್ಲಿ ಅನೇಕ ಸಂಖ್ಯೆಯಲ್ಲಿ ಈ ಹಸ್ತಪ್ರತಿಗಳು ಇರುವುದರಿಂದ ಲೈಬ್ರರಿ ಗುಹೆಗಳು ಎಂದು ಇದನ್ನು ಕರೆಯಲಾಗುತ್ತದೆ.

ಈ ಗುಹೆಗಳಲ್ಲಿ ಲಭಿಸಿರುವ ರಾಮಾಯಣದ ಹಸ್ತಪ್ರತಿಗಳು ಅತೀ ಪ್ರಾಚೀನವಾದ ಟಿಬೆಟಿಯನ್‌ ಭಾಷೆಯಲ್ಲಿ ಇದೆ. ಭಾರತದ ವಾಲ್ಮೀಕಿ ರಾಮಾಯಣಕ್ಕೂ, ಟಿಬೆಟಿಯನ್‌ ರಾಮಾಯಣಕ್ಕೂ ಬಹಳಷ್ಟು ವ್ಯತ್ಯಾಸಗಳಿವೆಯಾದರೂ ಭಾರತದಲ್ಲಿ ಪ್ರಚಲಿತವಿರುವ ರಾಮಾಯಣದಲ್ಲಿ ಬರುವ ಬಹುತೇಕ ಪಾತ್ರಗಳು ಟಿಬೆಟಿಯನ್‌ ರಾಮಾಯಣದಲ್ಲೂ ಬರುತ್ತವೆ ಮತ್ತು ಇಲ್ಲಿಯೂ ರಾಮ-ಸೀತೆಯರೇ ಪ್ರಮುಖ ಪಾತ್ರಧಾರಿಗಳು.
ಟಿಬೆಟಿಯನ್‌ ರಾಮಾಯಣದಲ್ಲಿ ರಾಮನು ದಶರಥನ ಕೊನೆಯ ಮಗನಾಗಿದ್ದು, ಲಕ್ಷಣನು ಮೊದಲ ಪುತ್ರನಾಗಿರುತ್ತಾನಂತೆ. ಜತೆಗೆ ಭರತ ಹಾಗೂ ಶತ್ರುಘ್ನರ ಯಾವುದೇ ಉಲ್ಲೇಖಗಳು ಇದರಲ್ಲಿ ಕಂಡುಬರುವುದಿಲ್ಲ. ಇನ್ನು ಈ ರಾಮಾಯಣದಲ್ಲಿ ಸೀತೆ, ರಾವಣನ ಮಗಳು ಎಂಬ ಉಲ್ಲೇಖವಿದೆ.

ಟಿಬೆಟಿಯನ್‌ ರಾಮಾಯಣದ ಮತ್ತೂಂದು ವಿಶೇಷತೆ ಎಂದರೆ, ಪತ್ರ ಬರಹ. ಇದರ ಪ್ರಕಾರ ರಾಮನು ಲಂಕಾದ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ಸುಗ್ರೀವನಿಗೆ ಪತ್ರವನ್ನು ಬರೆದಿದ್ದನು, ಅಲ್ಲದೇ ಸೀತಾಳಿಗೂ ತಾನು ರಕ್ಷಣೆಗೆ ಬರುವುದಾಗಿ ಪತ್ರವನ್ನು ಬರೆದಿದ್ದ. ಅದಕ್ಕೆ ಪತ್ರದ ಮೂಲಕವೇ ಸೀತೆ ಉತ್ತರಿಸಿದ್ದಳು.

ಮ್ಯಾನ್ಮಾರ್‌ನಲ್ಲೂ ರಾಮಲೀಲಾ ಪ್ರದರ್ಶನ

ಈ ಹಿಂದೆ ಬರ್ಮಾ ಎಂದು ಕರೆಯಲ್ಪಡುತ್ತಿದ್ದ ಮ್ಯಾನ್ಮಾರ್‌ನಲ್ಲಿ ಬರ್ಮಾ ಆವೃತ್ತಿಯ ರಾಮಾಯಣ ಪ್ರಚಲಿತದಲ್ಲಿದೆ. ಇಲ್ಲಿ ರಾಮಾಯಣವನ್ನು “ಯಮ ಜಟಡಾ’ ಎಂದು ಕರೆಯುಲಾಗುತ್ತದೆ. ಮ್ಯಾನ್ಮಾರ್‌ನಲ್ಲಿ ರಾಷ್ಟ್ರೀಯ ಪುಸ್ತಕದ ಮಾನ್ಯತೆ ಈ ರಾಮಾಯಣಕ್ಕಿದೆ. ಯಮ ಜಟಡಾದ ಒಂಬತ್ತು ಪ್ರಚಲಿತವಾದ ತುಣುಕುಗಳು ಮ್ಯಾನ್ಮಾರ್‌ನಲ್ಲಿವೆ. ಇದರ ಬರ್ಮಾ ಆವೃತ್ತಿಯ ಪುಸ್ತಕದ ಹೆಸರು “ಯಮಾಯಣ’ ಎಂದು.

ಬರ್ಮಾದಲ್ಲಿ ಯಮ ಎಂದರೆ ರಾಮ ಹಾಗೂ ಮೆಂತಿಡಾ ಎಂದರೆ ಸೀತಾ ಎಂದು ಅರ್ಥ. ಯಮ ಜಟಡಾವು 11ನೇ ಶತಮಾನದಲ್ಲಿ ರಾಜ ಅನವರತನ ಕಾಲದಲ್ಲಿ ಪರಿಚಯಿಸಲಾದ ಜಾತಕ ಕತೆಗಳ ಒಂದು ಭಾಗವೆಂದು ಹೇಳಲಾಗುತ್ತದೆ. ಹೆಚ್ಚಿನ ಭಾಗವು ವಾಲ್ಮೀಕಿ ರಾಮಾಯಣದೊಂದಿಗೆ ಹೋಲಿಕೆಯನ್ನು ಹೊಂದಿದೆ. ಭಾರತದಲ್ಲಿ ಹಬ್ಬಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ರಾಮಲೀಲಾವನ್ನು ಪ್ರದರ್ಶಿಸಿದಂತೆ ಅಲ್ಲಿ ಯಮ ಜಟಡಾವನ್ನು ನಾಟಕದ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ. ಮ್ಯಾನ್ಮಾರ್‌ನ ಸಂಸ್ಕೃತಿ, ಜಾನಪದ ಸಂಗತಿಗಳನ್ನು ಇದು ಒಳಗೊಂಡಿದ್ದು ದೃಶ್ಯರೂಪಕದ ಮಾದರಿಯಲ್ಲಿ ಪ್ರದರ್ಶಿಸಲ್ಪಡುತ್ತದೆ.

ರಾಮನ ಕರೆದರೆ ಹನುಮನೂ ಬರುವ ತಾರಕ ಮಂತ್ರ
“ಶ್ರೀರಾಮ ಜಯರಾಮ ಜಯಜಯ ರಾಮ’ವನ್ನು ರಾಮತಾರಕ ಮಂತ್ರವೆಂದು ಹೇಳುತ್ತಾರೆ. ಸ್ವತಃ ಶಿವ ಪಾರ್ವತಿಗೆ ಉಪದೇಶಿಸಿದ ಮಂತ್ರ ಇದು ಎಂಬ ಪ್ರತೀತಿಯಿದೆ. ಈ ಮಂತ್ರ ಕ್ಕೊಂದು ವಿಶೇಷವಿದೆ. ಇದು ರಾಮನಿಗೆ ಸಂಬಂಧಿಸಿರುವ ಮಂತ್ರವಾದರೂ, ಇದನ್ನು ಪಠಿಸಿದಾಗ ಅಲ್ಲಿ ಹನುಮನೂ ಬರುತ್ತಾನೆ! ಒಂದು ಮಂತ್ರವನ್ನು ಪಠಿಸಿದಾಗ ಇಬ್ಬರು ದೇವತೆಗಳು ಬರುವ ಏಕೈಕ ಮಂತ್ರ ಇದು ಎಂದು ಖ್ಯಾತವಾಗಿದೆ. ಅಯೋಧ್ಯೆಯಲ್ಲಿ ಮಂದಿರ ಉದ್ಘಾಟನೆಯಾಗುವ ಹೊತ್ತಿನಲ್ಲೇ ಈ ಮಂತ್ರದ ಪಠಣ ದೇಶಾದ್ಯಂತ ತಾರಕಕ್ಕೇರಿದೆ!

ಟಾಪ್ ನ್ಯೂಸ್

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.