ಕಾಕ್ಟೈಲ್‌ಗೆ ಜೋಗಿ ಪ್ರೇಮ್‌ ಸಾಥ್‌


Team Udayavani, Aug 20, 2022, 3:44 PM IST

Untitled-1 copy

ಕಾಕ್ಟೈಲ್‌ಗೆ ಪ್ರೇಮ್‌ ಸಾಥ್‌ ವಿಜಯಲಕ್ಷ್ಮೀ ಕಂಬೈನ್ಸ್‌ ಬ್ಯಾನರ್‌ನಲ್ಲಿ ಡಾ.ಶಿವಪ್ಪ ನಿರ್ಮಾಣದ “ಕಾಕ್ಟೈಲ್‌’ ಸಿನಿಮಾದ ಚಿತ್ರೀಕರಣವು ಮುಗಿದಿದ್ದು, ಸದ್ಯ ಪೋಸ್ಟ್‌ ಪ್ರೂಡಕ್ಷನ್‌ ಕೆಲಸದಲ್ಲಿ ಬಿಝಿ ಇದೆ.

ಇತ್ತೀಚೆಗೆ ನಿರ್ದೇಶಕ ಜೋಗಿ ಪ್ರೇಮ್‌ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈಗಾಗಲೇ ಸಿನಿರಸಿಕರಿಂದ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗೊಂಡಿದ್ದು, ಚಿತ್ರತಂಡದ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಈ ಚಿತ್ರವನ್ನು ಶ್ರೀರಾಮ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಸ ಪ್ರತಿಭೆಗಳಾದ ವೀರೇನ್‌ ಕೇಶವ್‌ ನಾಯಕ, ಚರಿಷ್ಮಾ ನಾಯಕಿ. ಇವರೊಂದಿಗೆ ಶೋಭರಾಜ್‌, ರಮೇಶ್‌ ಪಂಡಿತ್‌, ಮಹಾಂತೇಶ್‌ ಹಿರೇಮಠ್, ಶಿವಮಣಿ, ಚಂದ್ರಕಲಾ ಮೋಹನ್‌ ಮುಂತಾದವರ ತಾರಾಗಣವಿದೆ. ಹೃದಯ ಶಿವ-ಸಿರಾಜ್‌ ಮಿಜಾರ್‌ ಸಾಹಿತ್ಯದ ಗೀತೆಗಳಿಗೆ ಅರ್ಮನ್‌ ಮಲ್ಲಿಕ್‌, ಅನುರಾಧ ಭಟ್‌ ಧ್ವನಿ ನೀಡಿದ್ದು, ಲೋಕಿತವಸ್ಯ ಸಂಗೀತ ಸಂಯೋಜಿಸಿದ್ದಾರೆ.  ರವಿವರ್ಮ(ಗಂಗು) ಛಾಯಾಗ್ರಹಣ, ಮೋಹನ್‌.ಬಿ.ರಂಗಕಹಳೆ ಸಂಕಲನ, ನರಸಿಂಹ ಸಾಹಸ, ಸುನಿಲ್‌ ನೃತ್ಯವಿದೆ.

ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌,ಮರ್ಡರ್‌ ಮಿಸ್ಟರಿ ಕಥೆಯನ್ನು ಹೊಂದಿದೆ. “ಈ ಸಿನಿಮಾದಲ್ಲಿ ಹುಡುಗ-ಹುಡುಗಿಯ ನಡುವಿನ ಪ್ರೀತಿಯಿದೆ. ಆದ್ರೆ ಲವ್‌ಸ್ಟೋರಿಯಲ್ಲ. ಒಂದಷ್ಟು ಕೊಲೆಗಳ ಸುತ್ತ ಕಥೆ ನಡೆಯುತ್ತದೆ. ಆದರೆ ಮರ್ಡರ್‌ ಮಿಸ್ಟರಿಯಲ್ಲ. ಮಾಟ-ಮಂತ್ರದ ದೃಶ್ಯಗಳಿವೆ, ಆದ್ರೆ ಹಾರರ್‌ ಸಿನಿಮಾವಲ್ಲ…’ ಎನ್ನುತ್ತದೆ ಚಿತ್ರತಂಡ.

ಆದರೆ ಇದ್ಯಾವುದೂ ಅಲ್ಲ ಅಂದಮೇಲೆ ” ಕಾಕ್ಟೈಲ್‌’ ಯಾವ ಥರದ ಸಿನಿಮಾ? ಎಂದು ಕೇಳಿದರೆ, ಇದೊಂದು ಕಂಪ್ಲೀಟ್‌ ಎಂಟರ್‌ಟೈನ್ಮೆಂಟ್‌ ಸಿನಿಮಾ. ನೋಡುಗರು ಭಯಸುವ ಎಲ್ಲ ಅಂಶಗಳೂ ಸಿನಿಮಾದಲ್ಲಿರುವುದರಿಂದ, ಇದು ಯಾವುದೋ ಒಂದು ಜಾನರ್‌ಗೆ ಸೀಮಿತವಾದ ಸಿನಿಮಾವಲ್ಲ. “ಕಾಕ್ಟೇಲ್‌’ ಅಂದ್ರೆ “ಮಿಕ್ಸ್‌ ಆಫ್ ವೆರೈಟಿ ಡ್ರಿಂಕ್ಸ್‌’ ಅದರಂತೆ, ಇದೊಂದು “ಮಿಕ್ಸ್‌ ಆಫ್ ವೆರೈಟಿ ಸಬ್ಜೆಕ್ಟ್’ ಸಿನಿಮಾ ಎನ್ನುವುದು ಚಿತ್ರತಂಡದ ಮಾತು.

ಗಣೇಶ ಹಬ್ಬಕ್ಕೆ ಚಿತ್ರದ ಟೀಸರ್‌ ಬಿಡುಗಡೆಯಾಗಲಿದೆ.

ಟಾಪ್ ನ್ಯೂಸ್

1-eeqwew

Ban; ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ww-ewqe

India-Bangladesh ಇಂದಿನಿಂದ ವನಿತಾ ಟಿ20 ಸರಣಿ

1-eeqwew

Ban; ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.