ಹೊಸ ಕಾರು ಖರೀದಿಸಿದ ವಜ್ರಕಾಯದ ಬೆಡಗಿ ಕಾರುಣ್ಯ ರಾಮ್
Team Udayavani, Apr 7, 2021, 9:15 PM IST
ಬೆಂಗಳೂರು : ವಜ್ರಕಾಯದ ಚೆಲುವೆ ನಟಿ ಕಾರುಣ್ಯ ಫುಲ್ ಖುಷಿಯಲ್ಲಿದ್ದಾರೆ. ಅವರ ಈ ಸಂತಸಕ್ಕೆ ಕಾರಣ ಹೊಸ ಕಾರು ಖರೀದಿ.
ಹೌದು, ಕಾರುಣ್ಯಾ ಐಷಾರಾಮಿ ಬಿಎಂಡಬ್ಲೂ ಕಾರ್ ಖರೀದಿಸಿದ್ದಾರೆ. ಬಿಳಿ ಬಣ್ಣದ ಹೊಸ ಕಾರ್ ನಲ್ಲಿ ಡ್ರೈವ್ ಹೋಗಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಹೊಸ ಕಾರು ಖರೀದಿಸಿರುವ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿರುವ ಕಾರುಣ್ಯ, “ಇದು ನನ್ನ ಕನಸಾಗಿತ್ತು, ಆಮೇಲೆ ಗುರಿಯಾಯ್ತು. ಈಗ ಇದು ಸಾಧನೆಯಾಗಿದೆ. ಕನಸುಗಳನ್ನು ಈಡೇರಿಸಿಕೊಳ್ಳಲು ಕೆಲವರು ತುಂಬ ಶ್ರಮಪಡುತ್ತಾರೆ. ನನ್ನ ದೊಡ್ಡ ಕನಸುಗಳ ಲಿಸ್ಟ್ನಲ್ಲಿರುವ ಸಣ್ಣ ಸಾಧನೆ ಇದು ಅಂತ ಹೇಳುವೆ. ಬಾಕಿಯವುಗಳನ್ನು ಇನ್ನುಮೇಲೆ ಈಢೇರಿಸಿಕೊಳ್ಳಬೇಕಿದೆ. ಇದು ನನ್ನ ಮೊದಲ ಲಕ್ಷುರಿ ಕಾರ್. ನನಗೆ ಸದಾ ಹಾರೈಸುತ್ತ, ಬೆಂಬಲಿಸುತ್ತ ಬಂದಿರುವವರೆಲ್ಲರಿಗೂ ಧನ್ಯವಾದಗಳು” ಎಂದು ನಟಿ ಕಾರುಣ್ಯಾ ರಾಮ್ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.
ಕೆಲದಿನಗಳ ಹಿಂದೆ ಕಾರುಣ್ಯಾ ರಾಮ್ ಅವರು ಕ್ಯಾನ್ಸರ್ ರೋಗಿಗಳಿಗೆ ಅವರ ಕೂದಲು ದಾನ ಮಾಡಿದ್ದರು. “ಕೂದಲಿನಿಂದ ಮಹಿಳೆಯರ ಸೌಂದರ್ಯ ಹೆಚ್ಚುತ್ತದೆ. ಇಷ್ಟು ಉದ್ದದ ಕೂದಲು ಬೆಳೆಸಲು ನನಗೆ 2 ವರ್ಷ ಬೇಕಾಯಿತು. ಇದು ನನಗೆ ತುಂಬ ಇಷ್ಟವಿದ್ದರೂ ಕೂಡ 2021ರ ಈ ವರ್ಷದಲ್ಲಿ ಅಗತ್ಯ ಇರುವವರಿಗಾಗಿ ಏನಾದರೂ ಮಾಡಬೇಕು ಎಂದು ಕೂದಲು ನೀಡುತ್ತಿದ್ದೇನೆ” ಎಂದು ಕಾರುಣ್ಯಾ ಹೇಳಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು