ಬ್ಯಾಂಗ್ ಟ್ರೇಲರ್; ಗ್ಯಾಂಗ್ ಸ್ಟರ್ ಗಳ ಅಖಾಡದಲ್ಲಿ ಹುಡುಗರ ನರಳಾಟ
Team Udayavani, Jul 31, 2023, 6:15 PM IST
ಶಾನ್ವಿ ನಾಯಕಿಯಾಗಿರುವ “ಬ್ಯಾಂಗ್’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ನೋಡಿದವರಿಗೆ ಇದೊಂದು ಡಾರ್ಕ್ ಕಾಮಿಡಿ ಹಾಗೂ ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ ಎಂಬುದು ಗೊತ್ತಾಗುತ್ತದೆ.
ಕಿಚ್ಚ ಸುದೀಪ್ ಅವರ ಹಿನ್ನೆಲೆ ಧ್ವನಿಯೊಂದಿಗೆ ತೆರೆದುಕೊಳ್ಳುವ ಟ್ರೇಲರ್ನಲ್ಲಿ ಒಂದಷ್ಟು ಕುತೂಹಲಭರಿತ ಅಂಶಗಳನ್ನು ಕಟ್ಟಿಕೊಟ್ಟಿದ್ದಾರೆ. . ಮೂವರು ಹುಡುಗರು ಇಬ್ಬರು ಗ್ಯಾಂಗ್ಸ್ಟರ್ಗಳ ಕೈಯಲ್ಲಿ ಸಿಕ್ಕಿಕೊಳ್ಳುತ್ತಾರೆ. ಅದರಿಂದ ಹೇಗೆ ಹೊರಗೆ ಬರುತ್ತಾರೆ ಎಂಬುದೇ ಸಿನಿಮಾದ ಹೈಲೈಟ್. ಇಷ್ಟು ದಿನ ಗ್ಲಾಮರಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದ ಶಾನ್ವಿ ಈ ಬಾರಿ “ಬ್ಯಾಂಗ್’ನಲ್ಲಿ ಗ್ಯಾಂಗ್ಸ್ಟರ್ ಆಗಿ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.
ಬಹುತೇಕ ಕತ್ತಲು-ಬೆಳಕಿನಲ್ಲೇ ಸಿನಿಮಾ ಕಟ್ಟಿಕೊಟ್ಟಿರೋದು ಎದ್ದು ಕಾಣುತ್ತದೆ. ಇಂತಹ ಸನ್ನಿವೇಶಗಳಲ್ಲಿ ಛಾಯಾಗ್ರಹಣದ ಪಾತ್ರ ಕೂಡಾ ಪ್ರಮುಖವಾಗಿರುತ್ತದೆ. ಆ ಕೆಲಸವನ್ನು ಛಾಯಾಗ್ರಾಹಕ ಉದಯ್ ಲೀಲ ಅಚ್ಚುಕಟ್ಟಾಗಿ ಮಾಡಿರೋದು ಎದ್ದು ಕಾಣುತ್ತದೆ. ಚಿತ್ರದಲ್ಲಿ ಶಾನ್ವಿ ಹಾಗೂ ರಘು ದೀಕ್ಷಿತ್ ಗ್ಯಾಂಗ್ಸ್ಟರ್ಗಳಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಿತ್ವಿಕ್ ಮುರಳಿಧರ್, ಸುನೀಲ್, ನಾಟ್ಯ ರಂಗ ಹಾಗೂ ಸಾತ್ವಿಕ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಶ್ರೀಗಣೇಶ್ ಪರಶುರಾಮ “ಬ್ಯಾಂಗ್’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. “ಯು.ಕೆ.ಪ್ರೊಡಕ್ಷನ್ಸ್’ ಬ್ಯಾ್ನರ್ನಲ್ಲಿ ಪೂಜಾ ವಸಂತಕುಮಾರ್ “ಬ್ಯಾಂಗ್’ ಚಿತ್ರವನ್ನು ನಿರ್ಮಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ