ಹೆಸರು ಬದಲಿಸಿಕೊಂಡ ಕ್ರೇಜಿ ಪುತ್ರ

ಮನೋರಂಜನ್‌ ಇನ್ನು ಮುಂದೆ ಮನುರಂಜನ್‌

Team Udayavani, Nov 17, 2019, 6:02 AM IST

ಚಿತ್ರರಂಗದಲ್ಲಿ ಈಗಾಗಲೇ ಹಲವು ಹೀರೋಗಳು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಆ ಸಾಲಿಗೆ ಈಗ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಪುತ್ರ ಮನೋರಂಜನ್‌ ಹೊಸ ಸೇರ್ಪಡೆ. ಹೌದು, ಮನೋರಂಜನ್‌ ತಮ್ಮ ಹೆಸರು ಬದಲಿಸಿಕೊಳ್ಳುವ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇಷ್ಟಕ್ಕೂ ಅವರು ಬದಲಿಸಿಕೊಂಡಿರುವ ಹೆಸರಲ್ಲಿ ದೊಡ್ಡ ಬದಲಾವಣೆಯೇನೂ ಇಲ್ಲ.

ತಮ್ಮ ಹೆಸರನ್ನು ಮನೋರಂಜನ್‌ ಬದಲಾಗಿ ಮನುರಂಜನ್‌ ಎಂದು ಬದಲಿಸಿಕೊಂಡಿದ್ದಾರಷ್ಟೇ. ಅಷ್ಟಕ್ಕೂ ಈ ಬದಲಾವಣೆಗೆ ಕಾರಣ, ಸಂಖ್ಯಾಶಾಸ್ತ್ರ. ಹೀಗಂತ ಸ್ವತಃ ಮನುರಂಜನ್‌ ಅವರೇ ಹೇಳುತ್ತಾರೆ. ಅಷ್ಟಕ್ಕೂ ಅವರು ಹೊಸ ಹೆಸರಿನೊಂದಿಗೆ ಗುರುತಿಸಿಕೊಳ್ಳುತ್ತಿರೋದು “ಮುಗಿಲ್‌ ಪೇಟೆ’ ಚಿತ್ರದ ಮೂಲಕ. ಹೌದು, ಭರತ್‌ ನಾವಂದ ನಿರ್ದೇಶನದ “ಮುಗಿಲ್‌ ಪೇಟೆ’ ಚಿತ್ರಕ್ಕೆ ಮೊನ್ನೆಯಷ್ಟೇ ಮುಹೂರ್ತ ನೆರವೇರಿದೆ.

ಈ ಚಿತ್ರದ ಶೀರ್ಷಿಕೆ ಪೋಸ್ಟರ್‌ ನೋಡಿದಾಗ, ಮನುರಂಜನ್‌ ಹೆಸರು ರಾರಾಜಿಸುತ್ತಿತ್ತು. ಹೆಸರು ಬದಲಿಸಿಕೊಂಡ ಬಗ್ಗೆ ಕೇಳಿದ ಪ್ರಶ್ನೆಗೆ ಮನುರಂಜನ್‌ ಹೇಳಿದ್ದು ಹೀಗೆ. “ಹೆಸರು ಬದಲಾಯಿಸಲು ಸಂಖ್ಯಾಶಾಸ್ತ್ರ ಬಿಟ್ಟರೆ ಬೇರೇನು ಇಲ್ಲ. ಮನೋರಂಜನ್‌ ಬದಲು ಮನುರಂಜನ್‌ ಎಂಬ ಹೆಸರಾಗಿದೆ. ಇಂಗ್ಲೀಷ್‌ನಲ್ಲಿ “ಓ’ ಬದಲಾಗಿ “ಯು’ ಬರೆಯಬೇಕಷ್ಟೇ. ಅಷ್ಟಕ್ಕೂ ನನ್ನನ್ನು ಎಲ್ಲರೂ ಮನು ಅನ್ನುತ್ತಿದ್ದರೇ ಹೊರತು, ಮನೋ ಅಂತ ಕರೆಯುತ್ತಿರಲಿಲ್ಲ.

ಸದ್ಯಕ್ಕೆ ನಾನೀಗ ಮನುರಂಜನ್‌. ಇದೇ ಹೆಸರು ಈ ಚಿತ್ರದ ಮೂಲಕ ಇರಲಿದೆ’ ಎಂದು ಸ್ಪಷ್ಟಪಡಿಸಿದರು ಮನುರಂಜನ್‌. ಈ ಚಿತ್ರದಲ್ಲಿ ಅವರು ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಬಾಡಿ ಬಿಲ್ಡ್‌ ಕೂಡ ಮಾಡುತ್ತಿದ್ದಾರಂತೆ. ಆ ಕುರಿತು ಹೇಳುವ ಮನುರಂಜನ್‌, “ಚಿಲ್ಲಂ ಚಿತ್ರಕ್ಕಾಗಿ ಬಾಡಿ ಬಿಲ್ಡ್‌ ಮಾಡಿದ್ದೆ. ಆದರೆ, ಆ ಚಿತ್ರ ನಿಂತು ಹೋಯ್ತು. ಈ ಸಿನಿಮಾ ನಿರ್ಮಾಪಕ ಮೋತಿ ಮಹೇಶ್‌ ನನ್ನ ಗೆಳೆಯ.

ಅವನು ಈ ಕಥೆಗೆ ಸಖತ್‌ ಬಾಡಿ ಬಿಲ್ಡ್‌ ಮಾಡು ಅನ್ನುತ್ತಿದ್ದ. ಹಾಗಾಗಿ, ಬಾಡಿ ವರ್ಕೌಟ್‌ ಮಾಡುತ್ತಿದ್ದೇನೆ. ಪರ್ಸನಲಿ ನನಗೆ ದಪ್ಪ ಇರೋದು ಇಷ್ಟವಿಲ್ಲ. ಆದರೂ ಪಾತ್ರಕ್ಕಾಗಿ ಮಾಡುತ್ತಿದ್ದೇನೆ. ಈಗಾಗಲೇ ಚಿತ್ರದ ಪೋಸ್ಟರ್‌ ನೋಡಿರುವ ಡ್ಯಾಡಿ, ಹೇರ್‌ಸ್ಟೈಲ್‌ ಚೆನ್ನಾಗಿದೆ ಎಂದಿದ್ದಾರೆ. ಇಲ್ಲಿ ಎರಡು ರೀತಿಯ ಪಾತ್ರವಿದೆ. ಪಕ್ಕಾ ರಗಡ್‌ಲುಕ್‌ ಇರಲಿದೆ, ಸಾಫ್ಟ್ ಆಗಿಯೂ ಕಾಣಿಸಿಕೊಳ್ಳಲಿದ್ದೇನೆ’ ಎಂದಷ್ಟೇ ಹೇಳುತ್ತಾರೆ ಮನುರಂಜನ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ