ಸದ್ಯದಲ್ಲೇ ದಂಡುಪಾಳ್ಯ-4
Team Udayavani, Nov 19, 2018, 12:09 PM IST
“ದಂಡುಪಾಳ್ಯಂ 4′ ಚಿತ್ರೀಕರಣ ಮುಗಿದಿದ್ದು, ತೆರೆಗೆ ಬರುವ ಸಿದ್ಧತೆಯಲ್ಲಿದೆ. ಮುಮೈತ್ ಖಾನ್ ಕುಣಿದಿರುವ ಚಿತ್ರದ ಐಟಂ ಸಾಂಗ್ವೊಂದು ಬಿಡುಗಡೆಯಾಗಿದ್ದು, ಪಡ್ಡೆ ಹುಡುಗರ ಅಡ್ಡದಲ್ಲಿ ಈ ಹಾಡು ಹೆಚ್ಚು ಸದ್ದು ಮಾಡುತ್ತಿದೆ. “ಸ್ಟೆಪ್ಪು ಹೊಡಿ ಸ್ಟೆಪ್ಪು ಹೊಡಿ ಟಪ್ಪಾಂಗುಚ್ಚಿ ಸ್ಟೆಪ್ಪು ಹೊಡಿ’ ಎಂಬ ಇಡೀ ಹಾಡನ್ನು ಮಾದಕವಾಗಿ ಚಿತ್ರೀಕರಿಸಲಾಗಿದೆ.
ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಈ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ನಿರ್ಮಾಪಕರಾದ ವೆಂಕಟ್ ಅವರೇ ಬರೆದಿದ್ದಾರೆ. ಆನಂದ್ ರಾಜ್ ವಿಕ್ರಂ ಸಂಗೀತ ನೀಡಿದ್ದಾರೆ. ಕೆ ಟಿ ನಾಯಕ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಆರ್. ಗಿರಿ ಕ್ಯಾಮರಾ, ಬಾಬು ಎ ಶ್ರೀವತ್ಸ, ಪ್ರೀತಿ ಮೋಹನ್ ಸಂಕಲನವಿದೆ.
ಸುಮನ್ ರಂಗನಾಥ್, ಮುಮೈತ್ ಖಾನ್, ಬ್ಯಾನರ್ಜಿ, ರಾಕ್ಲೈನ್ ಸುಧಾಕರ್, ಸಂಜೀವ್ ಕುಮಾರ್, ಅರುಣ್ ಬಚ್ಚನ್, ಬುಲೆಟ್ ಸೋಮು, ವಿಠ್ಠಲ್ ರಂಗಾಯಣ, ಜೀವಾ ಸೈಮನ್, ರಿಚ್ಚಾ ಶಾಸ್ತ್ರಿ, ಸ್ನೇಹಾ ಮುಂತಾದವರ ತಾರಾಗಣವಿದೆ. ನಿರ್ಮಾಪಕ ವೆಂಕಟ್ ಅವರು ಕೂಡಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ