ಸರ್ಕಾರಿ ಕೆಲಸದ ಜತೆ ಜಾನಪದ ಹಾಡು

Team Udayavani, May 2, 2017, 11:37 AM IST

Sarkari-Kelasa-Devara-Kelasa-2.jpg

ಕನ್ನಡದ ಅನೇಕ ಚಿತ್ರಗಳಲ್ಲಿ ಅದೆಷ್ಟೋ ಹಳೆಯ ಪ್ರಸಿದ್ಧ ಚಿತ್ರಗೀತೆಗಳು, ಭಾವಗೀತೆಗಳು ಮತ್ತು ಜಾನಪದ ಗೀತೆಗಳನ್ನು ಬಳಸಿರುವುದುಂಟು. ಈಗ ಅಂಥದ್ದೇ ಜನಪ್ರಿಯ ಗೀತೆಯೊಂದನ್ನು ಚಿತ್ರವೊಂದರಲ್ಲಿ ಬಳಸಲಾಗಿದೆ. ಅದು, “ಬೊಳ್ಳೊಳ್ಳೆವ್ವ ಬೊಳ್ಳೊಳ್ಳಿ’ ಎಂಬ ಪ್ರಸಿದ್ಧ ಗೀತೆ. ಬಹುಶಃ ಈಗಿನ ತಲೆಮಾರಿನವರಿಗೂ ಈ ಹಾಡು ಗೊತ್ತಿಲ್ಲವಂತಲ್ಲ.

ಉತ್ತರ ಕರ್ನಾಟಕ ಭಾಷೆಯಲ್ಲಿ ಹೊರಬಂದಿರುವ ಈ ಹಾಡಿನ ಜನಪ್ರಿಯತೆ ಬಗ್ಗೆ ಹೇಳುವ ಅಗತ್ಯವಿಲ್ಲ. ಈ ಹಾಡನ್ನು ಈಗ “ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅರ್ಜುನ್‌ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಹಾಡು ಕಥೆಗೆ ಪೂರಕವಾಗಿದ್ದರಿಂದಲೇ ಬಳಸಿಕೊಳ್ಳಲಾಗಿದೆ ಎಂಬುದು ನಿರ್ಮಾಪಕ ಅಶ್ವಿ‌ನಿ ರಾಮ್‌ಪ್ರಸಾದ್‌ ಮಾತು.

ಹೌದು, ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿಯೇ ಈ  ಜನಪ್ರಿಯ ಜಾನಪದ ಗೀತೆಯನ್ನು ಬಿಡುಗಡೆ ಮಾಡಿತ್ತು. ಸುಮಾರು 20 ವರ್ಷಗಳ ಹಿಂದೆ ಆಡಿಯೋ ಕ್ಯಾಸೆಟ್‌ ಬಿಡುಗಡೆ ಮಾಡಿದ್ದ ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿ, ಆ ದಿನಗಳಲ್ಲೇ ಸುಮಾರು 10 ಲಕ್ಷಕ್ಕೂ ಹೆಚ್ಚು ಕ್ಯಾಸೆಟ್‌ಗಳ ದಾಖಲೆ ಮಾರಾಟ ಮಾಡಿತ್ತು.

ಇಂದಿಗೂ ಅದೇ ಜನಪ್ರಿಯತೆ ಉಳಿಸಿಕೊಂಡಿರುವ ಆ ಗೀತೆಯನ್ನು ತಮ್ಮ ನಿರ್ಮಾಣದ ಚಿತ್ರದಲ್ಲಿ ಹೊಸ ಸಂಗೀತ ಸ್ಪರ್ಶ ಕೊಟ್ಟು ಬಳಸಿಕೊಂಡಿದ್ದಾರಂತೆ. ಇನ್ನು ಈ ಹಾಡನ್ನು ಗಾಯಕ ವಿಜಯ್‌ ಪ್ರಕಾಶ್‌ ಹಾಡಿರುವುದು ಇನ್ನೊಂದು ವಿಶೇಷ. ಒಂದೊಳ್ಳೆಯ ಸೆಟ್‌ ಹಾಕಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಇದೊಂದೇ ವಿಶೇಷತೆ ಇಲ್ಲ.

ನಾಗೇಂದ್ರ ಪ್ರಸಾದ್‌ ಬರೆದಿರುವ “ದಗಲ್‌ ಬಾಜಿ ದುನಿಯಾ’ ಎಂಬ ಗೀತೆಗೆ ಚಂದನ್‌ ಶೆಟ್ಟಿ ದನಿಯಾಗಿದ್ದು, ಅವರೇ ಅಭಿನಯಿಸಿದ್ದಾರೆ. ಬಾಲಿವುಡ್‌ನ‌ ಝೀ “ಸಾರೆಗಮಪ’ ಗಾಯಕಿ ರೂಪಾಲಿ ಜಗ್ಗಾ ಅವರು “ಕಣ್ಣು ಹೊಡಿಬೇಡಿ’ ಎಂಬ ಐಟಂ ಗೀತೆಯನ್ನು ಹಾಡಿದ್ದಾರೆ. ನಾಗೇಂದ್ರಪ್ರಸಾದ್‌ ಈ ಗೀತೆ ಬರೆದಿದ್ದಾರೆ.

ಬಾಲಿವುಡ್‌ನ‌ “ಝೀ ಸಾರೆಗಮಪ’ ಗಾಯಕರಾದ ಸಚಿನ್‌ಕುಮಾರ್‌ ಹಾಗೂ ಜ್ಯೋತಿಕಾ ತಾಂಡ್ರೆ “ಸದಾ ನೋಡುವೆ’ ಎಂಬ ಡ್ಯುಯೆಟ್‌ ಹಾಡಿಗೆ ದನಿಯಾಗಿದ್ದಾರೆ. ನಾಗೇಂದ್ರಪ್ರಸಾದ್‌ ಬರೆದ “ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಶೀರ್ಷಿಕೆ ಹಾಡಿಗೆ ವಿಜಯಪ್ರಕಾಶ್‌ ದನಿಯಾಗಿದ್ದಾರೆ.

ಈ ಚಿತ್ರದಲ್ಲಿ ರವಿಶಂಕರ್‌ ಗೌಡ ನಾಯಕರಾದರೆ, ಸಂಯುಕ್ತಾ ಹೊರನಾಡು ನಾಯಕಿ. ಉಳಿದಂತೆ ಚಿತ್ರದಲ್ಲಿ ಮುಖ್ಯಮಂತ್ರಿ ಚಂದ್ರು, ರಂಗಾಯಣ ರಘು, ರಾಜು ತಾಳಿಕೋಟೆ, ಆಶಿಷ್‌ ವಿದ್ಯಾರ್ಥಿ, ಜೈ ಜಗದೀಶ್‌, ಜಯಲಕ್ಷ್ಮೀ, ಸುಧಾಬೆಳವಾಡಿ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. 

ಟಾಪ್ ನ್ಯೂಸ್

22

Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ 

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !

Revanna 2

Holenarasipur case; ರೇವಣ್ಣ ಅವರಿಗೆ ಒಂದು ದಿನದ ರಿಲೀಫ್

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ‘ಇದು ನಮ್‌ ಶಾಲೆ’ಯ ಹಾಡುಗಳು ಬಂತು

Sandalwood: ‘ಇದು ನಮ್‌ ಶಾಲೆ’ಯ ಹಾಡುಗಳು ಬಂತು

god promise kannada movie

Kannada Cinema; ‘ಗಾಡ್‌ ಪ್ರಾಮಿಸ್‌’ ಮುಹೂರ್ತ ಮಾಡಿದ್ರು

ಅರ್ಜುನ ಸಮಾಧಿಗೆ ದರ್ಶನ್‌ ಫ್ಯಾನ್ಸ್‌ ಸಾಥ್‌

Actor Darshan; ಅರ್ಜುನ ಸಮಾಧಿಗೆ ದರ್ಶನ್‌ ಫ್ಯಾನ್ಸ್‌ ಸಾಥ್‌

15

Vidhyarthi Vidyarthiniyare Trailer: ಟ್ರೇಲರ್‌ನಲ್ಲಿ ಟೀನೇಜ್‌ ಸ್ಟೋರಿ

Brinda Acharya: ಸಾವಿರ ಗುಂಗಲ್ಲಿ ಬೃಂದಾ ಆಚಾರ್ಯ; ಆಲ್ಬಂ ಸಾಂಗ್‌ನಲ್ಲಿ ನಟನೆ

Brinda Acharya: ಸಾವಿರ ಗುಂಗಲ್ಲಿ ಬೃಂದಾ ಆಚಾರ್ಯ; ಆಲ್ಬಂ ಸಾಂಗ್‌ನಲ್ಲಿ ನಟನೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

22

Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ 

Transfer: ಕೆಇಎ ನಿರ್ದೇಶಕಿ ರಮ್ಯಾ ಎತ್ತಂಗಡಿ; ಸಿಇಟಿ ಪತ್ರಿಕೆ ಗೊಂದಲಕ್ಕೆ ತಲೆದಂಡ

Transfer: ಕೆಇಎ ನಿರ್ದೇಶಕಿ ರಮ್ಯಾ ಎತ್ತಂಗಡಿ; ಸಿಇಟಿ ಪತ್ರಿಕೆ ಗೊಂದಲಕ್ಕೆ ತಲೆದಂಡ

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

Supreme Court: ಕೇಜ್ರಿ ಜಾಮೀನು ರದ್ದು ಕೋರಿದ್ದ ಇ.ಡಿ. ಅರ್ಜಿ ವಜಾ

Supreme Court: ಕೇಜ್ರಿ ಜಾಮೀನು ರದ್ದು ಕೋರಿದ್ದ ಇ.ಡಿ. ಅರ್ಜಿ ವಜಾ

Chikkaballapur: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ, ರಕ್ಷಣೆಗೆ ಹೋದವ ಸಾವು

Chikkaballapur: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ, ರಕ್ಷಣೆಗೆ ಹೋದವ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.