ನಿಖಿಲ್ ಚಿತ್ರ ಮೆಚ್ಚಿದ ಕಿಚ್ಚ
Team Udayavani, Jan 29, 2019, 10:57 AM IST
ಯುವರಾಜ ನಿಖಿಲ್ ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ “ಸೀತಾರಾಮ ಕಲ್ಯಾಣ’ ಚಿತ್ರ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಬೊಂಬಾಟ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ ಸ್ಯಾಂಡಲ್ವುಡ್ನ ಆರಡಿ ಕಟೌಟ್, ಬಾದ್ಷಾ, ಕಿಚ್ಚ ಸುದೀಪ್ “ಸೀತಾರಾಮ ಕಲ್ಯಾಣ’ವನ್ನು ಕಣ್ತುಂಬಿಕೊಂಡಿದ್ದು, ಚಿತ್ರಕ್ಕೆ ಫುಲ್ ಫಿದಾ ಆಗಿದ್ದಾರೆ. ಮುಖ್ಯವಾಗಿ ನಿಖಿಲ್ ಕುಮಾರ್ ನಟನೆಯನ್ನು ಮೆಚ್ಚಿದ್ದು, ಟ್ವೀಟರ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
“ನಿಖಿಲ್ ನಿಜಕ್ಕೂ ಒಬ್ಬ ಭರವಸೆಯ ನಟ. ಚಿತ್ರದಲ್ಲಿ ತುಂಬಾ ಸೂಕ್ಷ್ಮವಾಗಿ ನಟಿಸಿದ್ದಾರೆ. ಅಂತೆಯೇ ದೃಶ್ಯಗಳಿಗೆ ತಕ್ಕಂತೆ ಅವರು ತಮ್ಮಿಂದ ಎಷ್ಟು ನ್ಯಾಯ ಕೊಡಬೇಕೋ ಅಷ್ಟು ಚೆನ್ನಾಗಿಯೇ ಅಭಿನಯಿಸಿದ್ದಾರೆ. ಅಲ್ಲದೇ ಜನರ ಹೃದಯಗಳಿಗೆ ಇನ್ನಷ್ಟು ಹತ್ತಿರವಾಗುವಂತ ಕಥೆಯುಳ್ಳ ಚಿತ್ರಗಳಲ್ಲಿ, ಅಂತಾ ಪಾತ್ರಗಳಲ್ಲಿ ನಿಖಿಲ್ನ ನೋಡೋಕೆ ಇಷ್ಟ ಪಡ್ತೀನಿ. ಶುಭಹಾರೈಕೆಗಳು ಗೆಳೆಯ’ ಎಂದು ಟ್ವೀಟರ್ನಲ್ಲಿ ಹಾರೈಸಿದ್ದಾರೆ.
Nikhil surely looks a promising actor. luvd his subtlety in performance n has delivered what’s expected outta him towards the scene written. Would luv to see him in a script and a character mch simpler to take him close to peoples hearts. Bst wishes my friend.#Seetharamakalyana
— Kichcha Sudeepa (@KicchaSudeep) January 28, 2019
ಇನ್ನು ಚೆನ್ನಾಂಬಿಕ ಫಿಲಂಸ್ ಬ್ಯಾನರ್ನಲ್ಲಿ ಶ್ರೀಮತಿ ಅನಿತಾ ಕುಮಾರಸ್ವಾಮಿ ನಿರ್ಮಾಣದ ಈ ಚಿತ್ರಕ್ಕೆ ಹರ್ಷ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ