ಮಯೂರಿ “ಮೌನಂ’ ಮಾತಾಗುವ ಹೊತ್ತು…

Team Udayavani, May 14, 2019, 3:00 AM IST

“ಕೃಷ್ಣಲೀಲಾ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಕದ ತಟ್ಟಿ, ಒಂದಷ್ಟು ಭರವಸೆ ಮೂಡಿಸಿದ್ದ ನಟಿ ಮಯೂರಿ ಸದ್ಯ “ಮೌನಂ’ಗೆ ಶರಣಾಗಿದ್ದಾರೆ. ಅರೇ ಪಟಪಟ ಅಂಥ ಮಾತಿನ ಮೂಲಕವೇ ಮನೆ ಕಟ್ಟುತ್ತಿದ್ದ ಈ ಚಿನಕುರಳಿ ಮೌನವ್ರತವೇನಾದ್ರೂ ಮಾಡುತ್ತಿದ್ದಾರಾ? ಅಂತ ಕೇಳಬೇಡಿ. ನಾವು ಹೇಳುತ್ತಿರುವುದೇನೂ ಮಯೂರಿ “ಮೌನಂ’ ಬಗ್ಗೆಯಾದರೂ, ಮೌನವ್ರತದ ಬಗ್ಗೆ ಅಲ್ಲ.

ವಿಷಯವೇನೆಂದರೆ, ಮಯೂರಿ ಅಭಿನಯಿಸುತ್ತಿರುವ ಮುಂಬರುವ ಚಿತ್ರದ ಹೆಸರು “ಮೌನಂ’. ಈ ಚಿತ್ರದಲ್ಲಿ ಮಯೂರಿ ಅವರದ್ದು ಎರಡು ಶೇಡ್‌ಗಳಿರುವ ಪಾತ್ರವಂತೆ. ಒಂದು ಶೇಡ್‌ನ‌ಲ್ಲಿ ಮೌನವಾಗಿರುವ ಹೋಮ್ಲಿ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಮಯೂರಿ ಮತ್ತೂಂದು ಶೇಡ್‌ನ‌ಲ್ಲಿ ಆ್ಯಕ್ಷನ್‌ ಕ್ವೀನ್‌ ಆಗಿಯೂ ಕಾಣಿಸಿಕೊಳ್ಳುತ್ತಾರಂತೆ.

ಇನ್ನು ಚಿತ್ರದಲ್ಲಿ ಹಿರಿಯ ನಟ ಅವಿನಾಶ್‌ ಕೂಡ ತಮ್ಮ 35 ವರ್ಷಗಳ ವೃತ್ತಿ ಬದುಕಿನಲ್ಲಿ ಅತ್ಯಂತ ವಿಶಿಷ್ಟವಾದ ಸುಮಾರು ಆರು ಶೇಡ್‌ಗಳಿರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ “ಮೌನಂ’ ಚಿತ್ರದಲ್ಲಿ ಬಾಲಾಜಿ ಶರ್ಮ, ಹನುಮಂತೇಗೌಡ, ರಿತೇಶ್‌, ಕೆಂಪೇಗೌಡ, ಗುಣವಂತ ಮಂಜು, ನಯನ (ಕಾಮಿಡಿ ಕಿಲಾಡಿಗಳು), ಸಿಂಚನ, ಮಂಜುಳಾ ರೆಡ್ಡಿ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ನಿಹಾರಿಕಾ ಮೂವೀಸ್‌’ ಬ್ಯಾನರ್‌ನಲ್ಲಿ ಶ್ರೀಹರಿ ನಿರ್ಮಿಸಿರುವ “ಮೌನಂ’ ಚಿತ್ರಕ್ಕೆ ರಾಜ್‌ ಪಂಡಿತ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಶಂಕರ್‌ ಛಾಯಾಗ್ರಹಣ, ಗುರುಮೂರ್ತಿ ಹೆಗಡೆ ಸಂಕಲನ ಕಾರ್ಯವಿದೆ.

ಚಿತ್ರದ ಹಾಡುಗಳಿಗೆ ಆರವ್‌ ರಿಶಿಕ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಅಂದಹಾಗೆ, ಮನುಷ್ಯನಿಗೆ ಮನುಷ್ಯನೇ ಶತ್ರು. ನಾವೇ ನಮ್ಮ ಹೊರಗಡೆ ಇರುವ ಶತ್ರುವನ್ನು ಮಟ್ಟಹಾಕುವ ಮೊದಲು ನಮ್ಮ ಒಳಗಡೆ ಇರುವ ಶತ್ರುವನ್ನು ಮಟ್ಟಹಾಕಬೇಕು ಎಂಬ ಎಳೆಯೇ “ಮೌನಂ’ ಚಿತ್ರದ ಕಥಾಹಂದರ ಎನ್ನುತ್ತದೆ ಚಿತ್ರತಂಡ.


ಈ ವಿಭಾಗದಿಂದ ಇನ್ನಷ್ಟು

  • ಆಲ್ಬಂ ಇವೆಲ್ಲವೂ ಸಿನಿಮಾ ಎಂಟ್ರಿಗೆ ಮೊದಲ ಹೆಜ್ಜೆ ಇದ್ದಂತೆ. ಅನೇಕ ಹೊಸಬರು ಮೊದಲು ಈ ಪ್ರಯತ್ನದ ಮೂಲಕವೇ ಸಿನಿಮಾ ರಂಗಕ್ಕೆ ಕಾಲಿಡುತ್ತಾರೆ. ಆದರೆ, ಇಲ್ಲೊಂದು...

  • ಉಪೇಂದ್ರ ಅಭಿನಯದ "ಐ ಲವ್‌ ಯು' ಚಿತ್ರ ಜೂನ್‌ 14 ರಂದು ತೆರೆಕಾಣಲಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಚಿತ್ರದ ಹಾಡುಗಳು, ಟೀಸರ್‌ ಹಿಟ್‌ ಆಗಿದ್ದು,...

  • ಕನ್ನಡದಲ್ಲಿ ಇನ್ನೊಂದು ಪ್ರಯೋಗಾತ್ಮಕ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಕೃಪಾ ಸಾಗರ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ‘ಸಾರ್ವಜನಿಕರಲ್ಲಿ...

  • ಬೆಂಗಳೂರು: ದುನಿಯಾ ಚಿತ್ರದ ಲೂಸ್‌ ಮಾದ ಖ್ಯಾತಿಯ ಯೋಗಿ ಅವರು ತಂದೆಯಾದ ಸಂಭ್ರಮದಲ್ಲಿದ್ದಾರೆ. ಯೋಗಿ ಅವರ ಪತ್ನಿ ಸಾಹಿತ್ಯ ಶನಿವಾರ ಬೆಳಗ್ಗೆ ಪದ್ಮನಾಭನಗರದಲ್ಲಿರುವ...

  • ದಿಗಂತ್‌ ಅಭಿನಯದ "ಶಾರ್ಪ್‌ ಶೂಟರ್‌' ಚಿತ್ರ ನಿರ್ದೇಶಿಸಿದ್ದ ಗೌಸ್‌ಪೀರ್‌, ಆ ಚಿತ್ರದ ಬಳಿಕ ಬೇರೇನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿತ್ತು. ಆ ಪ್ರಶ್ನೆಗೆ...

ಹೊಸ ಸೇರ್ಪಡೆ