ಸಲ್ಲು ಎದುರು ತೊಡೆ ತಟ್ಟಿದ ಕಿಚ್ಚ

"ದಬಾಂಗ್‌-3' ಕ್ಲೈಮ್ಯಾಕ್ಸ್‌ ಫೈಟ್‌ನಲ್ಲಿ ಸುದೀಪ್‌ ಬಾಡಿ ಶೋ

Team Udayavani, May 15, 2019, 3:00 AM IST

ಕೆಲ ದಿನಗಳ ಹಿಂದಷ್ಟೇ “ದಬಾಂಗ್‌-3′ ತಂಡ ಸೇರಿಕೊಂಡ ಸುದೀಪ್‌, ಸಲ್ಲು ಜೊತೆಗಿನ ಫೋಟೋವೊಂದನ್ನು ಹಾಕಿ, ತಮ್ಮ ಮೊದಲ ದಿನದ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದರು. ಈಗ ಸುದೀಪ್‌ ಮತ್ತೆ “ದಬಾಂಗ್‌-3′ ಚಿತ್ರದ ಖುಷಿಯನ್ನು ಹಂಚಿಕೊಂಡಿದ್ದಾರೆ.

ಈ ಬಾರಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಸಲ್ಮಾನ್‌ ಖಾನ್‌ ಜೊತೆಗೆ ಫೈಟ್‌ ಮಾಡುವ ಬಗ್ಗೆ ಟ್ವೀಟ್‌ ಮಾಡಿದ್ದಾರೆ ಸುದೀಪ್‌. ಈಗಾಗಲೆ “ಪೈಲ್ವಾನ್‌’ ಚಿತ್ರದಲ್ಲಿ ಅಂಗಿ ಇಲ್ಲದ ಮೈಯಲ್ಲಿ ಅಖಾಡಕ್ಕಿಳಿದಿದ್ದ ಸುದೀಪ್‌ ಈ ಬಾರಿ ಸಲ್ಲು ವಿರುದ್ಧವೂ ಶರ್ಟ್‌ ಬಿಚ್ಚಿ ಬರೀ ಮೈಯಲ್ಲಿ ಫೈಟ್‌ ಮಾಡಿದ್ದಾರೆ.

ಸಾಮಾನ್ಯವಾಗಿ ಸಲ್ಲು ಸಿನಿಮಾಗಳಲ್ಲಿ ಬರೀ ಮೈಯಲ್ಲಿ ಸಿಕ್ಸ್‌ಪ್ಯಾಕ್‌ ತೋರಿಸುವ ದೃಶ್ಯವೊಂದಿರುತ್ತದೆ. ಈ ಬಾರಿ ಸುದೀಪ್‌ ಸಲ್ಲು ಎದುರು ಬರೀ ಮೈಯಲ್ಲಿ ಫೈಟ್‌ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್‌ ಮಾಡಿರುವ ಸುದೀಪ್‌ “ಬಿಡುವಿಲ್ಲದಂತೆ ಚಿತ್ರೀಕರಣದಲ್ಲಿ “ದಬಾಂಗ್‌-3′ ಕ್ಲೈಮ್ಯಾಕ್ಸ್‌ ಫೈಟ್‌ ನಡೆಯುತ್ತಿದೆ.

ಆದರೆ, ಒಳ್ಳೆಯ, ವಿನಮ್ರವಾದ ತಂಡ ಸಿಕ್ಕಿದೆ. ಸಲ್ಮಾನ್‌ ಖಾನ್‌ ಎದುರು ನಾನು ಬೇರ್‌ ಬಾಡಿಯಲ್ಲಿ ಫೈಟ್‌ ಮಾಡುತ್ತೇನೆಂದು ಯಾವತ್ತೂ ಅಂದುಕೊಂಡಿರಲಿಲ್ಲ. ಸ್ವಲ್ಪ ವಿಶ್ವಾಸದೊಂದಿಗೆ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದು, ನಾನಿದ್ದನ್ನು ಎಂಜಾಯ್‌ ಮಾಡುತ್ತಿದ್ದೇನೆ’ ಎಂದಿದ್ದಾರೆ.

ಈ ನಡುವೆಯೇ ಸುದೀಪ್‌ ಅವರ “ಪೈಲ್ವಾನ್‌’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಆಗಸ್ಟ್‌ನಲ್ಲಿ ತೆರೆಕಾಣುತ್ತಿದೆ. ಈ ಚಿತ್ರಕ್ಕಾಗಿ ಸುದೀಪ್‌ ಬಾಡಿ ಬಿಲ್ಡ್‌ ಮಾಡಿ, ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕೋಲಾರ: ಲೋಕಸಭಾ ಕ್ಷೇತ್ರದ ನೂತನ ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಮುಕ್ತ ಮಾಡಿಸಿ ಬಿಜೆಪಿ...

  • ಬ್ಯಾಡಗಿ: ವೀರಯೋಧ ಶಿವಲಿಂಗೇಶ ಪಾಟೀಲ ನಿಧನದ ಸುದ್ದಿ ಗುಂಡೇನಹಳ್ಳಿ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದ್ದು, ಇದೀಗ ಸ್ಮಶಾನ ಮೌನ ಆವರಿಸಿದೆ. ಯೋಧ ಶಿವಲಿಂಗೇಶ...

  • ಹಾವೇರಿ: ಮಳೆ ಆರಂಭಕ್ಕೂ ಮುನ್ನವೇ ಡೆಂಘೀ ಜ್ವರ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಆರೋಗ್ಯ, ಶಿಕ್ಷಣ, ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ...

  • ಸಕಲೇಶಪುರ: ತಾಲೂಕಿನಲ್ಲಿ ಅನುಷ್ಠಾನಗೊಳಿಸ ಲಾಗುತ್ತಿರುವ ಎತ್ತಿನಹೊಳೆ ಸಮಗ್ರ ನೀರಾವರಿ ಯೋಜನೆಯಿಂದ ಮಲೆನಾಡಿನ ಪರಿಸರ ಹದಗೆಡಲು ಕಾರಣವಾಗಿದೆ ಎಂಬ ಮಾತುಗಳು...

  • ಹಾಸನ: ನಗರದ ಎಪಿಎಂಸಿ ಪ್ರಾಂಗಣದಲ್ಲಿ ಬಿತ್ತನೆ ಆಲೂಗಡ್ಡೆ ವ್ಯಾಪಾರ ಆರಂಭವಾಗಿ ಎರಡು ವಾರ ಗಳಾಗುತ್ತಾ ಬಂದರೂ ಆಲೂಗಡ್ಡೆ ಖರೀದಿಗೆ ರೈತರಿಂದ ನೀರಸ ಪ್ರತಿಕ್ರಿಯೆ...

  • ನರೇಗಲ್ಲ: ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಸಂಚಾರಿ ಸುರಕ್ಷಾ ಸಪ್ತಾಹ ಅಡಿಯಲ್ಲಿ ರವಿವಾರ ವಿಶೇಷ ಕಾರ್ಯಾಚರಣೆ ನಡೆಸಿ ಆಟೋಗಳ ದಾಖಲೆಗಳನ್ನು ನರಗುಂದ ಡಿವೈಎಸ್‌ಪಿ...