ಚಿತ್ರರಂಗದಲ್ಲಿ ಮುಹೂರ್ತ ಸಂಭ್ರಮ

ಸೆಟೇರುತ್ತಿವೆ ಸಾಲು ಸಾಲು ಸಿನಿಮಾ – ಚೇತರಿಕೆ ಹಾದಿಯಲ್ಲಿ ಕನ್ನಡ ಚಿತ್ರರಂಗ

Team Udayavani, Oct 20, 2020, 1:12 PM IST

CINEMA-TDY-05

ಕೋವಿಡ್ ಹೊಡೆತದಿಂದ ನಲುಗಿದ್ದ ಕನ್ನಡ ಚಿತ್ರರಂಗ ಈಗ ಚೇತರಿಕೆಯ ಹಾದಿಯಲ್ಲಿದೆ. ಈಗಾಗಲೇ ಚಿತ್ರಮಂದಿರಗಳು ಆರಂಭವಾಗಿರುವ ಖುಷಿ ಒಂದು ಕಡೆಯಾದರೆ ಹೊಸ ಸಿನಿಮಾಗಳು ಸೆಟ್ಟೇರುತ್ತಿರುವ ಸಂಭ್ರಮ ಮತ್ತೂಂದು ಕಡೆ. ಹೌದು, ಸಾಕಷ್ಟು ಹೊಸ ಸಿನಿಮಾಗಳು ಆರಂಭವಾಗುತ್ತಿವೆ. ಮತ್ತೆ ಚಿತ್ರರಂಗದಲ್ಲಿ ಮುಹೂರ್ತ ಸಮಾರಂಭ ಕಳೆಗಟ್ಟಿದೆ. ಸ್ಟಾರ್‌ ನಟರಿಂದ ಹಿಡಿದು ಹೊಸಬರ ಚಿತ್ರಗಳು ಆರಂಭವಾಗುತ್ತಿವೆ. ಒಂದರ್ಥದಲ್ಲಿ ಕನ್ನಡಚಿತ್ರರಂಗದಲ್ಲಿ ಮತ್ತೆ ಸಿನಿ ಸಂಭ್ರಮ ಆರಂಭವಾಗಿದೆ ಎನ್ನಬಹುದು. ಇತ್ತೀಚೆಗೆ ಮುಹೂರ್ತ ಆಚರಿಸಿಕೊಂಡ ಹಾಗೂ ಶೀಘ್ರದಲ್ಲಿ ಆಚರಿಸಿಕೊಳ್ಳಲಿರುವ ಸಿನಿಮಾಗಳ ಕುರಿತು ಒಂದು ರೌಂಡಪ್‌ ಇಲ್ಲಿದೆ …

‌ಗಣೇಶ್‌ ತ್ರಿಬಲ್‌ ರೈಡಿಂಗ್‌ ಶುರು :  ಗೋಲ್ಡನ್‌ ಸ್ಟಾರ್‌ ಗಣೇಶ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರ “ತ್ರಿಬಲ್‌ ರೈಡಿಂಗ್‌’ನ ಚಿತ್ರೀಕರಣ ಸೋಮವಾರದಿಂದ ಆರಂಭವಾಗಿದೆ.ಮೈಸೂರಿನಲ್ಲಿ ಸರಳವಾಗಿ ನಡೆದ ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡ, “ತ್ರಿಬಲ್‌ ರೈಡಿಂಗ್‌’ ಚಿತ್ರೀಕರಣಕ್ಕೆ ಚಾಲನೆ ನೀಡಿದೆ. ಇನ್ನು ಸುಮಾರು ಆರು ತಿಂಗಳ ಬಳಿಕ ನಟ ಗಣೇಶ್‌ ಈ ಚಿತ್ರದ ಮೂಲಕ ಚಿತ್ರೀಕರಣಕ್ಕೆ ಹಾಜರಾಗುತ್ತಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿರುವ ಗಣೇಶ್‌, “ನನ್ನ ಆತನ ಜೊತೆಗಿನ ಸಂಬಂಧ ಈ ಜನ್ಮಕ್ಕೆ ದೇವರುಕೊಟ್ಟ ವರವೇ ಇರಬೇಕು. ನಾ ನಕ್ಕಾಗ ನಕ್ಕು, ಅತ್ತಾಗ ಅತ್ತು, ನನ್ನನ್ನು ನಿಮಗೆ ಅದ್ಭುತವಾಗಿ ತೋರಿಸಿದಆಸಲುಗೆಗೆ ಅದಾವಕಣ್ಣು ತಗುಲಿತ್ತೂ.6 ತಿಂಗಳಕಾಲ ದೂರಾಗಿ ಈಗ ಎದುರಾಗಿದ್ದೇವೆ. ಆತ ಬೇರಾರಲ್ಲ ಬದುಕಿನ ಭಾಗ ಕ್ಯಾಮೆರಾ, ತ್ರಿಬಲ್‌ ರೈಡಿಂಗ್‌ ಚಿತ್ರೀಕರಣ ಶುರು ನಿಮ್ಮ ಹಾರೈಕೆಯಿರಲಿ” ಎಂದು ಬರೆದುಕೊಂಡಿದ್ದಾರೆ. ಪಕ್ಕಾ ಲವ್‌,ಕಾಮಿಡಿ, ಆ್ಯಕ್ಷನ್‌ ಹಾಗೂ ಥ್ರಿಲ್ಲರ್‌ ಕಥಾನಕ ಹೊಂದಿರುವ “ತ್ರಿಬಲ್‌ ರೈಡಿಂಗ್‌’ ಚಿತ್ರಕ್ಕೆ ಮಹೇಶ್‌ ಗೌಡ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ.­

ಹೊಸ ಚಿತ್ರಕ್ಕೆ ಧ್ರುವ ರೆಡಿ :  ನಟ ಧ್ರುವ ಸರ್ಜಾ ಇತ್ತೀಚೆಗಷ್ಟೇ “ಪೊಗರು’ ಚಿತ್ರದ ಚಿತ್ರೀಕರ ಪೂರ್ಣಗೊಳಿಸಿದ್ದು, ಹೊಸ ಚಿತ್ರಕ್ಕೆ ಅಣಿಯಾಗಿದ್ದಾರೆ. ಅವರ ಹೊಸ ಚಿತ್ರವನ್ನು ಉದಯ್‌ ಕೆ ಮೆಹ್ತಾ ನಿರ್ಮಿಸುತ್ತಿದ್ದು, ನಂದಕಿಶೋರ್‌ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭ ಅಕ್ಟೋಬರ್‌26 ರಂದು ನಡೆಯಲಿದೆ. ಈ ಚಿತ್ರದ ಟೈಟಲ್‌ ಲಾಂಚ್‌ ನವೆಂಬರ್ 6 ರಂದು ಆಗಲಿದೆ. ಈ ಮೂಲಕ ಧ್ರುವ ಹೊಸ ಸಿನಿಮಾದಕ್ರೇಜ್‌ ಶುರುವಾಗಲಿದೆ. ನಿರ್ಮಾಪಕ ಉದಯ್‌ ಮೆಹ್ತಾ ಈಗಾಗಲೇಕನ್ನಡದಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಈಗ ಧ್ರುವ ಹಾಗೂ ನಂದಕಿಶೋರ್‌ ಅವರಜೊತೆಯಾಗಿರುವುದರಿಂದ ಮತ್ತೂಂದು ಗೆಲುವಿನ ನಿರೀಕ್ಷೆ ಆರಂಭವಾಗಿದೆ

ಪೆಟ್ರೋಮ್ಯಾಕ್ಸ್‌ಗೆ ಚಾಲನೆ : ನೀನಾಸಂ ಸತೀಶ್‌ ನಾಯಕರಾಗಿರುವ “ಪೆಟ್ರೋಮ್ಯಾಕ್ಸ್‌’ ಚಿತ್ರಕ್ಕೂ ಸೋಮವಾರ ಮೈಸೂರಿನಲ್ಲಿ ಮುಹೂರ್ತ ನಡೆದಿದೆ. ಈ ಚಿತ್ರವನ್ನು “ಸಿದ್ಲಿಂಗು’, “ನೀರ್‌ ದೋಸೆ’ ಚಿತ್ರ ಖ್ಯಾತಿಯ ವಿಜಯ್‌ ಪ್ರಸಾದ್‌ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಹರಿಪ್ರಿಯಾ ನಾಯಕಿಯಾಗಿದ್ದಾರೆ. 15 ದಿನಗಳಕಾಲ ಮೈಸೂರಿನಲ್ಲೇ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಅರುಣ್‌, ನಾಗಭೂಷಣ್‌,ಕಾರುಣ್ಯಾ ರಾಮ್‌ ಮುಂತಾದವರು ನಟಿಸುತ್ತಿದ್ದಾರೆ. ಅನೂಪ್‌ ಸೀಳಿನ್‌ ಸಂಗೀತ ನಿರ್ದೇಶನವಿರುವ “ಪೆಟ್ರೋಮ್ಯಾಕ್ಸ್‌’ ಗೆ ನಿರಂಜನ್‌ ಬಾಬು ಅವರ ಛಾಯಾಗ್ರಹಣವಿದೆ. ಸುರೇಶ್‌ ಅರಸ್‌ ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿದೆ

ದಿಗಂತ್‌ ಚಿತ್ರಕ್ಕೆ ಮುಹೂರ್ತ :  ನಟದಿಗಂತ್‌ ನಾಯಕರಾಗಿರುವ ಹೊಸ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು. ಗೋಲ್ಡನ್‌ ಸ್ಟಾರ್‌ ಗಣೇಶ್‌ ಹೊಸ ಚಿತ್ರಕ್ಕೆ ಕ್ಲಾಪ್‌ ಮಾಡಿದರು. ಇದು ತೆಲುಗಿನ “ಎವರು’ ಚಿತ್ರದ ರೀಮೇಕ್‌ ಆಗಿದ್ದು, ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ವಸಿಷ್ಠ ಸಿಂಹ ಕೂಡಾ ಪ್ರಮುಖಪಾತ್ರ ಮಾಡುತ್ತಿದ್ದಾರೆ. ಅಶೋಕ್‌ ತೇಜಾ ನಿರ್ದೇಶನದ ಈ ಚಿತ್ರವನ್ನು ರಾಜೇಶ್‌ ಅಗರ್‌ವಾಲ್‌ ಹಾಗೂ ಜಯಪ್ರಕಾಶ್‌ರಾವ್‌ ಸೇರಿ ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಲು ಚಿತ್ರತಂಡ ತಯಾರಿ ನಡೆಸಿದೆ.

1980ಯಲ್ಲಿ ಪ್ರಿಯಾಂಕಾ :  ನಟಿ ಪ್ರಿಯಾಂಕಾ ಉಪೇಂದ್ರ ಸದ್ದಿಲ್ಲದೇ ಹೊಸಸಿನಿಮಾ ಒಪ್ಪಿಕೊಂಡಿದ್ದಾರೆ. ಅದು 1980. ಹೀಗೊಂದು ವಿಭಿನ್ನ ಶೀರ್ಷಿಕೆಯ ಈ ಚಿತ್ರದ ಚಿತ್ರೀಕರಣ ಅಕ್ಟೋಬರ್‌ 28ರಿಂದ ಆರಂಭ ವಾಗಲಿದೆ. ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಚಿತ್ರದ ಬಹುತೇಕ ಚಿತ್ರೀಕರಣಕೊಡಗಿನಸುಂದರ ಪರಿಸರ ದಲ್ಲಿ ನಡೆಯಲಿದೆ. ರಾಜ್‌ಕಿರಣ್‌ ಈ ಚಿತ್ರದ ನಿರ್ದೇಶಕರು. ಇವರೆ ಚಿತ್ರಕ್ಕೆಕಥೆ, ಚಿತ್ರಕಥೆ ಬರೆದಿದ್ದಾರೆ. ಆರ್‌.ಕೆ. ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಚಿಂತನ್‌ ವಿಕಾಸ್‌ ಸಂಗೀತ ನಿರ್ದೇಶನ, ಜೀವನ್‌ ಅಂತೋಣಿಛಾಯಾ ಗ್ರಹಣ ಹಾಗೂ ಶ್ರೀಕಾಂತ್‌ ಅವರ ಸಂಕಲನವಿದೆ.

 

ಹೊಸಬರ ವಿಧಿಬರಹ ಆರಂಭ :  ಇತ್ತೀಚೆಗೆ ಹೊಸಬರ “ವಿಧಿಬರಹ’ ಚಿತ್ರದ ಮುಹೂರ್ತ ಸಮಾರಂಭ ಕನಕಪುರ ರಸ್ತೆಯಲ್ಲಿ ರುವ ತ್ರಿಮೂರ್ತಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ನಿರ್ಮಾಪಕ ಮಂಜುನಾಥ್‌ ಅರಂಭ ಫ‌ಲಕ ತೋರಿದರು. ಎಲ್ಲರ ಜೀವನದದಲ್ಲೂ ವಿಧಿ ಒಂದಲ್ಲ ಒಂದು ರೀತಿ ಆಟವಾಡುತ್ತದೆ ಎಂಬ ಕಥಾಹಂದರ“ವಿಧಿಬರಹ” ಚಿತ್ರದಲ್ಲಿದೆ. ರಘುವರ್ಮ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಎರಡು ಚಿತ್ರಗಳ ನಿರ್ದೇಶಿಸಿ ಅನುಭವವಿರುವ ರಘುವರ್ಮ ನಿರ್ದೇ ಶನದ ಮೂರನೇ ಚಿತ್ರವಿದು. ದೀಪ ಕ್ರಿಯೇ ಷನ್ಸ್‌ ಲಾಂಛನದಲ್ಲಿ ಮಂಜುನಾಥ್‌ ಈ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಕ್ಟೋಬರ್‌ 30ರಿಂದ ಬೆಂಗಳೂರು, ಶಿವಮೊಗ್ಗ ಮುಂತಾದಕಡೆ ಚಿತ್ರೀಕರಣನಡೆಯಲಿದೆ. ಚಿತ್ರದಲ್ಲಿ ಶೋಭರಾಜ್‌, ಲಯಕೋಕಿಲ, ರಾಜೇಶ್‌ ನಟರಂಗ, ಟೆನ್ನಿಸ್‌ ಕೃಷ್ಣ, ಮೋಹನ್‌ ಜುನೇಜ, ಪದ್ಮಜಾ, ರಾಜೇಶ್ ಗಟ್ಟಿಮೇಳ ಮುಂತಾದವರು ನಟಿಸುತ್ತಿದ್ದಾರೆ.­

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಇದು ಮರ್ಯಾದೆ ಪ್ರಶ್ನೆ!

Sandalwood: ಇದು ಮರ್ಯಾದೆ ಪ್ರಶ್ನೆ!

15

Pawan Wadeyar: ವೆಂಕ್ಯಾನ ಹಿಂದೆ ಸಾಗರ್‌-ಪವನ್‌

14

Sandalwood: ರಿಷಬ್‌ ಶೆಟ್ಟಿ ʼಕಾಂತಾರ-1ʼ ʼಸಪ್ತ ಸಾಗರದಾಚೆʼಯ ಬೆಡಗಿ ರುಕ್ಮಿಣಿ ನಾಯಕಿ?

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.