“ಗೋವಿಂದ’ ಜೊತೆ ಮುಂಬೈ ಬೆಡಗಿ “ಹಾಟ್‌ ಸ್ಟೆಪ್‌’

ಐಟಂ ಸಾಂಗ್‌ಗೆ ಕುಣಿಯಲು ಬಂದಳು ನೋರಾ

Team Udayavani, Jan 21, 2020, 7:03 AM IST

ಕನ್ನಡ ಚಿತ್ರರಂಗಕ್ಕೂ ಮುಂಬೈಗೂ ಒಂದು ನಂಟಿದೆ ಎಂದರೆ ತಪ್ಪಲ್ಲ. ಅದಕ್ಕೆ ಕಾರಣ ಮುಂಬೈನಿಂದ ಕನ್ನಡ ಚಿತ್ರಗಳಿಗೆ ನಾಯಕಿಯರಾಗಿ ಸಾಕಷ್ಟು ನಟಿಯರು ಬಂದಿದ್ದಾರೆ. ಜೊತೆಗೆ ಐಟಂ ಸಾಂಗ್‌ಗಳಿಗೂ ಮುಂಬೈ ಮೂಲದ ಬೋಲ್ಡ್‌ ಬೆಡಗಿಯರು ಹೆಜ್ಜೆ ಹಾಕಿದ್ದಾರೆ. ಈಗ ಈ ಸಾಲಿಗೆ ಮತ್ತೂಬ್ಬ ಮುಂಬೈ ಬೆಡಗಿ ಸೇರ್ಪಡೆ ಯಾಗುತ್ತಿದ್ದಾಳೆ. ಆಕೆ ನೋರಾ ಫ‌ತೆಹೀ. ಅದು “ಗೋವಿಂದ ಗೋವಿಂದ’ ಚಿತ್ರದ ಮೂಲಕ.

ಸುಮಂತ್‌ ನಾಯಕರಾಗಿ ನಟಿಸುತ್ತಿರುವ “ಗೋವಿಂದ ಗೋವಿಂದ’ ಚಿತ್ರದ ಐಟಂ ಸಾಂಗ್‌ನಲ್ಲಿ ನೋರಾ ಫ‌ತೆಹೀ ಸ್ಟೆಪ್‌ ಹಾಕಲಿದ್ದಾರೆ. . ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯ ಹಲವು ಚಿತ್ರಗಳಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿರುವ ನೋರಾ, “ಬಾಹುಬಲಿ’ ಚಿತ್ರದಲ್ಲಿ ಪ್ರಭಾಸ್‌ ಜೊತೆಯೂ ಕಾಣಿಸಿಕೊಂಡಿದ್ದರು. ನೋರಾ ಫ‌ತೆಹೀ ಸ್ಟೆಪ್‌ ಹಾಕಲಿರುವ ಹಾಡನ್ನು ರಾಜು ಸುಂದರಂ ನೃತ್ಯ ನಿರ್ದೇಶನ ಮಾಡಲಿದ್ದಾರೆ.

ಇವರಿಬ್ಬರ ಡೇಟ್‌ ಹೊಂದಿಕೆಯಾದ ಕೂಡಲೇ ಹಾಡಿನ ಚಿತ್ರೀಕರಣ ಆರಂಭವಾಗಲಿದೆ. ಹಿರಿಯ ನಿರ್ಮಾಪಕ ಎಸ್‌. ಶೈಲೇಂದ್ರ ಬಾಬು, ಕಿಶೋರ್‌ ಎಂ.ಕೆ ಮಧುಗಿರಿ ಮತ್ತು ರವಿ ಆರ್‌ ಗರಣಿ ಜಂಟಿಯಾಗಿ ನಿರ್ಮಿಸುತ್ತಿರುವ “ಗೋವಿಂದ… ಗೋವಿಂದ’ ಚಿತ್ರಕ್ಕೆ ನವ ನಿರ್ದೇಶಕ ತಿಲಕ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹಿರಿಯ ನಿರ್ಮಾಪಕ ಎಸ್‌. ಶೈಲೇಂದ್ರ ಬಾಬು ಪುತ್ರ ಸುಮಂತ್‌ ಶೈಲೇಂದ್ರ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು ಕವಿತಾ ಗೌಡ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಜಾಕಿ ಭಾವನಾ ಕೂಡ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರೂಪೇಶ್‌ ಶೆಟ್ಟಿ, ಬೆನಕ ಪವನ್‌, ಅಚ್ಯುತ ಕುಮಾರ್‌, ವಿಜಯ್‌ ಚಂಡೂರ್‌, ಶೋಭರಾಜ್‌, ಸುನೇತ್ರಾ ಪಂಡಿತ್‌, ಪದ್ಮಾ ವಸಂತಿ, ಗೋವಿಂದೇ ಗೌಡ, ಶ್ರೀನಿವಾಸ ಪ್ರಭು ಮೊದಲಾದ ಕಲಾವಿದರ ದಂಡೇ ಚಿತ್ರದಲ್ಲಿದೆ. ಜೀವನದಲ್ಲಿ ಗೋಲ್‌ ಇಲ್ಲದ ಮೂವರು ಹುಡುಗರು ಹಣ ಮಾಡಲು ಹುಡುಗಿಯ ಅಪಹರಣಕ್ಕೆ ಪ್ಲ್ರಾನ್‌ ಮಾಡುತ್ತಾರೆ. ನಂತರ ಅಲ್ಲಿ ಏನೇನು ನಡೆಯುತ್ತದೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ.

ಹಣದ ಹಿಂದೆ ಓಡುವ ಪಾತ್ರಗಳು ನಂತರ ಸ್ನೇಹವನ್ನು, ಜೀವವನ್ನು ಉಳಿಸಿ ಕೊಳ್ಳಲು ಏನೆಲ್ಲ ಸರ್ಕಸ್‌ ಮಾಡು ತ್ತವೆ ಅನ್ನೋದೆ ಚಿತ್ರ. ಇಡೀ ಚಿತ್ರದಲ್ಲಿ ಕಾಮಿಡಿ, ಸೆಂಟಿ ಮೆಂಟ್‌, ಥ್ರಿಲ್ಲರ್‌ ಎಲ್ಲವೂ ಇದ್ದು ಕುತೂಹಲ ಮೂಡಿಸುತ್ತ ಚಿತ್ರಕಥೆ ಸಾಗುತ್ತದೆ. ಈಗಾಗಲೇ ಸುಮಾರು 45 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದ್ದು, ಎರಡನೇ ಹಂತ ದಲ್ಲಿ ಎಂಟು-ಹತ್ತು ದಿನ ಚಿತ್ರೀಕರಣ ಬಾಕಿಯಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ