Udayavni Special

ನಾತಿಚರಾಮಿ ಸಿನಿಮಾದಕಥೆಗಾರ್ತಿ ಸಂಧ್ಯಾರಾಣಿ ನಿರ್ದೇಶಕರಿಗೆ ಬರೆದ ಪತ್ರ


Team Udayavani, Dec 26, 2018, 11:32 AM IST

image-1.gif

ಮಂಸೋರೆ ನಿರ್ದೇಶನದಲ್ಲಿ, ಸಂಚಾರಿ ವಿಜಯ್, ಶೃತಿಹರಿಹರನ್ ಮುಂತಾದವರು ನಟಿಸಿರುವ ನಾತಿಚರಾಮಿ ಸಿನಿಮಾ ಈ ವಾರ ಬಿಡುಗಡೆಯಾಗಲು ಸನ್ನದ್ದವಾಗಿದೆ. ಈ ಸಿನಿಮಾಗೆ ಕಥೆ ಬರೆದವರು ಖ್ಯಾತ ಅಂಕಣ ಬರಹಗಾರ್ತಿ, ಕವಯತ್ರಿ ಎನ್. ಸಂಧ್ಯಾರಾಣಿ. ಕಥೆಯ ಜೊತೆಗೆ ಸಂಭಾಷಣೆಯನ್ನೂ ರಚಿಸಿರುವ ಸಂಧ್ಯಾರಾಣಿ ನಾತಿಚರಾಮಿ ಸಿನಿಮಾ ಆರಂಭವಾದಬಗೆಯನ್ನು ವಿವರಿಸುತ್ತಲೇ ನಿರ್ದೇಶಕ ಮಂಸೋರೆ ಅವರಿಗೊಂದು ಆತ್ಮೀಯ ಪತ್ರ ಬರೆದಿದ್ದಾರೆ.  ದೇನು ಅನ್ನೋದರ ವಿವರ ಇಲ್ಲಿದೆ. ಓದಿ..

ಓಹ್! ಇದೆಂತಹ ಸರ್ಪ್ರೈಜ್  ಕೊಟ್ಟಿರಿ ಮಂಸೋರೆ? ಎಲ್ಲಾ ನಿನ್ನೆ ಮೊನ್ನೆ ನಡೆದ ಹಾಗಿದೆ. ಕತೆಯ ಬಗ್ಗೆ ನಡೆದ ಚರ್ಚೆಗಳು, ಗಂಟೆಗಟ್ಟಲ್ಲೆ ಆಡಿದ ಮಾತುಗಳು, ನಾನು ಬರೆದ ಮೊದಲ ವರ್ಷನ್ ಅನ್ನು ನೀವು ಸಾರಾಸಗಟಾಗಿ ನಿರಾಕರಿಸಿದ್ದು, ಒಂದು ಮಧ್ಯರಾತ್ರಿ ಇಲ್ಲ ಇನ್ನು ನನ್ನಿಂದ ಬರೆಯಲಾಗದು ಎನ್ನಿಸಿ ನಾನು ನಿಮಗೆ `ನನ್ನಿಂದ ಆಗೋಲ್ಲ, ಪ್ಲೀಸ್ ಬೇರೆ ಯಾರ ಬಳಿಯಾದರೂ ಕತೆ ಬರೆಸಿಕೊಳ್ಳಿ ಎಂದು ಹೇಳಿದ್ದು, ಮತ್ತೆ ನೀವು ‘ಇಲ್ಲ ಮೇಡಂ, ಇದನ್ನು ನೀವೇ ಬರೆಯಬೇಕು, ನಿಮ್ಮಿಂದ ಆಗುತ್ತೆ ಎಂದು ಧೈರ್ಯ ತುಂಬಿದ್ದು… ಎಲ್ಲಾ ಈಗ ಮತ್ತೆ ನೆನಪಾಗುತ್ತಿದೆ. Thank you for not giving up on me? ನೀವು ಮೊದಲ ಚಿತ್ರಕ್ಕೇ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಪಡೆದ ನಿರ್ದೇಶಕರು, ನಾನೋ ಚಿತ್ರದ ಕಥೆ ಇರಲಿ, ಒಂದು ಕಥೆಯನ್ನೂ ಇನ್ನೂ ಬರೆಯದವಳು. ಹಾಗಿದ್ದೂ ನೀವಿಟ್ಟ ನಂಬಿಕೆಗೆ ನಾನು ಸದಾ ಋಣಿ. ಆಮೇಲೆ ನೀವು ಹೇಳಲು ಪ್ರಾರಂಭಿಸಿದಿರಿ, ‘ಮೇಡಂ ಈ ಕಥೆಯಲ್ಲಿ ನೀವಿಲ್ಲ, ನೀವು ಹೇಗೆ ಪ್ರತಿಕ್ರಯಿಸುವಿರಿ ಎನ್ನುವುದು ನನಗೆ ಬೇಡ. ಈಗ ಅವಳು ಹೇಗೆ ಯೋಚಿಸಬಹುದು ಎಂದು ನೋಡಿ’, ‘ಇಂತಹ ಪರಿಸ್ಥಿತಿಯಲ್ಲಿ ಅವಳು ಹೇಗೆ ಪ್ರತಿಕ್ರಯಿಸುತ್ತಾಳೆ?’, ‘ಅವಳು ಈ ಮಾತನ್ನು ಆಡುವಳೆ?’…. ನಾನೂ ಸ್ವಲ್ಪ ಸ್ವಲ್ಪ ಅವಳಾಗುತ್ತಾ ಹೋದೆ. ತಮಾಶೆ ಎಂದರೆ ಕಡೆಗೆ ಕಥೆ ಮುಗಿದು, ನಿಮಗೆ ಓಕೆ ಆದ ನಂತರ ನಾನು ಪ್ರಯತ್ನಪೂರ್ವಕವಾಗಿ, ‘ಸಂಧ್ಯಾ ಈಗ ಹೇಗೆ ಪ್ರತಿಕ್ರಿಯಿಸುತ್ತಾಳೆ’ ಎಂದು ನನ್ನನ್ನೇ ನಾನು ಕೇಳಿಕೊಳ್ಳಬೇಕಾಯ್ತು! ಥ್ಯಾಂಕ್ಯೂ ಮಂಸೋರೆ, ನನ್ನನ್ನು ಈ ಕನಸಿನ ಭಾಗವಾಗಿಸಿದ್ದಕ್ಕೆ. ನೀವು ಇದಕ್ಕಾಗಿ ಹೇಗೆ ಕೆಲಸ ಮಾಡಿದ್ದೀರಿ ಎಂದು ಬಲ್ಲೆ, ಇಡೀ ತಂಡ ಇದಕ್ಕಾಗಿ ಹೇಗೆ ಕೈ ಜೋಡಿಸಿದೆ ಎಂದು ಬಲ್ಲೆ. ಅಂದು ತಾಂತ್ರಿಕ ಪ್ರದರ್ಶನ ಆದಾಗ ನನ್ನ ಕಣ್ಣುಗಳಲ್ಲಿ ನೀರಿದ್ದವು, ನಿಮಗೆ ಏನೂ ಹೇಳಲಾಗಿರಲಿಲ್ಲ, ‘ಥ್ಯಾಂಕ್ಯೂ’ ಎಂದು ಮಾತ್ರ ಹೇಳಿ ಹೊರಟುಬಿಟ್ಟೆ. ಥ್ಯಾಂಕ್ಯೂ ಮತ್ತೊಮ್ಮೆ… ಅಂದಹಾಗೆ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ನನ್ನ ಕನಸಿನ ಕಥೆಯನ್ನು ಜನ ಮೆಚ್ಚಿಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ. 

ಟಾಪ್ ನ್ಯೂಸ್

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ

ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ

ವಲಸಿಗರ ಹತ್ಯೆಗೆ ಕಾರ್ಯಸೂಚಿ; ಕಾಶ್ಮೀರದ ಉಗ್ರರಿಗೆ ಐಎಸ್‌ಐಯಿಂದ 22 ಅಂಶಗಳ ನೀಲನಕ್ಷೆ

ವಲಸಿಗರ ಹತ್ಯೆಗೆ ಕಾರ್ಯಸೂಚಿ; ಕಾಶ್ಮೀರದ ಉಗ್ರರಿಗೆ ಐಎಸ್‌ಐಯಿಂದ 22 ಅಂಶಗಳ ನೀಲನಕ್ಷೆ

ರಾಜಕೀಯದಲ್ಲಿ ನಶೆ ಗಲಾಟೆ!

ರಾಜಕೀಯದಲ್ಲಿ ನಶೆ ಗಲಾಟೆ!

ಬುದ್ಧನ ನಿರ್ವಾಣ ಸ್ಥಳದಲ್ಲಿ ಮೋದಿಯಿಂದ ಅಂ.ರಾ. ವಿಮಾನ ನಿಲ್ದಾಣ ಉದ್ಘಾಟನೆ

ಬುದ್ಧನ ನಿರ್ವಾಣ ಸ್ಥಳದಲ್ಲಿ ಮೋದಿಯಿಂದ ಅಂ.ರಾ. ವಿಮಾನ ನಿಲ್ದಾಣ ಉದ್ಘಾಟನೆ

ಮಧ್ಯಾಂತರ-ನಿಗದಿತ ಚುನಾವಣೆಯ ಲಾಭ ನಷ್ಟದ ಲೆಕ್ಕ

ಮಧ್ಯಾಂತರ-ನಿಗದಿತ ಚುನಾವಣೆಯ ಲಾಭ ನಷ್ಟದ ಲೆಕ್ಕ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊರಬಂತು ‘ಕ್ರಿಮಿನಲ್‌’ ಫ‌ಸ್ಟ್‌ ಲುಕ್‌

ಹೊರಬಂತು ‘ಕ್ರಿಮಿನಲ್‌’ ಫ‌ಸ್ಟ್‌ ಲುಕ್‌

ghfghtyt

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಸುದೀಪ್ -ಪ್ರಿಯಾ ದಂಪತಿ

andondittu kala film

ಫೆಬ್ರವರಿಯಲ್ಲಿ ವಿನಯ್‌ ರಾಜ್‌ಕುಮಾರ್‌ ರ ‘ಅಂದೊಂದಿತ್ತು ಕಾಲ’ ಚಿತ್ರ ಬಿಡುಗಡೆ

ಹೊಸ ಗೆಟಪ್‌ಗೆ ಪುನೀತ್‌ ರೆಡಿ: ಜೇಮ್ಸ್‌ ಹಾಡಿನಲ್ಲಿ ನ್ಯೂಲುಕ್‌

ಹೊಸ ಗೆಟಪ್‌ಗೆ ಪುನೀತ್‌ ರೆಡಿ: ಜೇಮ್ಸ್‌ ಹಾಡಿನಲ್ಲಿ ನ್ಯೂಲುಕ್‌

ಪ್ರೇಮಂ ಪೂಜ್ಯಂ ಲವ್ಲಿ ಟ್ರೇಲರ್‌ :  ಗಮನ ಸೆಳೆದ ಪ್ರೇಮ್‌ ಹೊಸ ಗೆಟಪ್‌

ಪ್ರೇಮಂ ಪೂಜ್ಯಂ ಲವ್ಲಿ ಟ್ರೇಲರ್‌ :  ಗಮನ ಸೆಳೆದ ಪ್ರೇಮ್‌ ಹೊಸ ಗೆಟಪ್‌

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ಹಳೆ ತಂತ್ರಗಾರಿಕೆ ಬದಲಿಸಿದ ಪಾಕ್‌

ಹಳೆ ತಂತ್ರಗಾರಿಕೆ ಬದಲಿಸಿದ ಪಾಕ್‌

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ಡಾ| ವಿವೇಕ ರೈ ಸಹಿತ 7 ಮಂದಿಗೆ “ಮಾಸ್ತಿ ಪ್ರಶಸ್ತಿ’

ಡಾ| ವಿವೇಕ ರೈ ಸಹಿತ 7 ಮಂದಿಗೆ “ಮಾಸ್ತಿ ಪ್ರಶಸ್ತಿ’

ಭಾರತ-ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು: ಬಿಸಿಸಿಐ

ಭಾರತ-ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು: ಬಿಸಿಸಿಐ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.