ತಪ್ಪುಗಳಿಂದ ಅಂತರವಿರಲಿ…

Team Udayavani, Jul 5, 2018, 5:18 PM IST

miovie.jpg

‌ಕನ್ನಡದಲ್ಲಿ ಹೊಸಬರ ಪ್ರಯೋಗ ಹೆಚ್ಚಾಗುತ್ತಿದೆ. ಹೊಸತನದ ಚಿತ್ರದೊಂದಿಗೆ ನೂರೆಂಟು ಕನಸು ಕಟ್ಟಿಕೊಂಡು ಬರುವ ಯುವ ನಿರ್ದೇಶಕರು, ಇಲ್ಲಿ ಗಟ್ಟಿಯಾಗಿ ನಿಲ್ಲಬೇಕೆಂಬ ಕಾರಣಕ್ಕೆ ಆಕರ್ಷಿಸುವ ಶೀರ್ಷಿಕೆ ಜೊತೆ ಅಚ್ಚರಿ ಕಥೆಯೊಂದಿಗೆ ಬರುತ್ತಿದ್ದಾರೆ. ಈಗ “ನಡುವೆ ಅಂತರವಿರಲಿ’
ಎಂಬ ಹೊಸಬರ ತಂಡ ಕೂಡ ಅದೇ ಸಾಲಿನ ಚಿತ್ರ. ಈ ಚಿತ್ರದ ಮೂಲಕ ರವೀನ್‌ ನಿರ್ದೇಶಕರಾಗುತ್ತಿದ್ದಾರೆ. ಯೋಗರಾಜ್‌ ಭಟ್‌ ಸೇರಿದಂತೆ ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ರವೀನ್‌ ಅವರಿಗಿದೆ. ಇದು ಪಕ್ಕಾ ಯೂಥ್‌ ಸಿನಿಮಾ.

ಹದಿಹರೆಯದ ಪ್ರೇಮಿಗಳು ತಮಗೆ ಗೊತ್ತಿಲ್ಲದೆಯೇ ಮಾಡಿದ ತಪ್ಪಿನಿಂದ ಆಗುವ ಪರಿಣಾಮಗಳ ಕುರಿತ ಕಥೆ ಇದಾಗಿದ್ದು, ಇಲ್ಲಿ ಒಂದಷ್ಟು ಅರಿವು ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದೆ ಚಿತ್ರತಂಡ. ಚಿತ್ರದ ಕಥೆಯ ಗುಟ್ಟು ರಟ್ಟು ಮಾಡದ ನಿರ್ದೇಶಕರು, ಇಲ್ಲಿ ಹೆಚ್ಚು ಮನಕಲಕುವ ಸನ್ನಿವೇಶಗಳನ್ನಿಟ್ಟಿದ್ದಾರಂತೆ. ಕ್ಲೈಮ್ಯಾಕ್ಸ್‌ ವೇಳೆ ನೋಡುವ ಕಣ್ಣುಗಳು ಖಂಡಿತವಾಗಿಯೂ ಒದ್ದೆಯಾಗಿರುತ್ತವೆ ಎಂಬ ಗ್ಯಾರಂಟಿ ಚಿತ್ರತಂಡದ್ದು. ಈಗಿನ ಯುವ ಸಮಾಜ ಎತ್ತ ಸಾಗುತ್ತಿದೆ ಎಂಬ ಕಥೆಯಲ್ಲಿ ಸಾಕಷ್ಟು ಏರಿಳಿತಗಳಿವೆಯಂತೆ.

ಪ್ರಖ್ಯಾತ್‌ ಈ ಚಿತ್ರದ ನಾಯಕ. ಅವರಿಗೆ ತಕ್ಕಂತಹ ಪಾತ್ರ ಸಿಕ್ಕಿದ್ದು ಅವರಿಗೆ ಖುಷಿ ಕೊಟ್ಟಿದೆ. ಇನ್ನು, ಐಶಾನಿ ಶೆಟ್ಟಿ ಈ ಚಿತ್ರದ ನಾಯಕಿ. ಅಂದಹಾಗೆ, ಚಿತ್ರದ ಆಡಿಯೋ ಸಿಡಿ ಬಿಡುಗಡೆ ಕೂಡ ನಡೆದಿದೆ. ಸಂಸದ ಡಿ.ಕೆ.ಸುರೇಶ್‌ ಅವರು ಆಡಿಯೋ ಸಿಡಿ ಬಿಡುಗಡೆ ಮಾಡಿ ಶುಭಕೋರಿದ್ದೂ ಆಗಿದೆ.

ಮಣಿಕಾಂತ್‌ ಕದ್ರಿ ಈ ಚಿತ್ರದ ಸಂಗೀತ ನಿರ್ದೇಶಕರು. ಈ ಚಿತ್ರದ ಆಡಿಯೋ ಹಕ್ಕನ್ನು ಪಿಆರ್‌ಕೆ ಆಡಿಯೋ ಸಂಸ್ಥೆ ಪಡೆದುಕೊಂಡಿದೆ. ಆಡಿಯೋ ಬಿಡುಗಡೆ ಅಂದಮೇಲೆ ಚಿತ್ರರಂಗದ ಒಂದಷ್ಟು ಮಂದಿ ಸಹಜವಾಗಿಯೇ ಇರುತ್ತಾರೆ. “ನಡುವೆ ಅಂತರವಿರಲಿ’ ಆಡಿಯೋ ಸಿಡಿ ಬಿಡುಗಡೆ ವೇಳೆ ನಿರ್ದೇಶಕ ನರ್ತನ್‌, ಉದಯ್‌ ಮೆಹ್ತಾ, ಕೆ.ಪಿ.ಶ್ರೀಕಾಂತ್‌, ಆನಂದ್‌ ಇತರರು ಇದ್ದರು. ಈ ಚಿತ್ರವನ್ನು ರವೀನ್‌ಗೌಡ ಮತ್ತು ಜೆ.ಕೆ.ನಾಗರಾಜ್‌ ನಿರ್ಮಾಣ ಮಾಡಿದ್ದಾರೆ. ಸದ್ಯದಲ್ಲೇ ಚಿತ್ರ ಅಂತರವನ್ನು ಬೆಸೆಯಲಿದೆ. 

ಟಾಪ್ ನ್ಯೂಸ್

16DC

ಮಂಗಳೂರು: ಆ. 14ರ ವರೆಗೆ ಸೆಕ್ಷನ್‌ 144 ಮುಂದುವರಿಕೆ

ಬಿಡುವು ಕೊಡದ ಮಳೆ: ಮೂವರ ಸಾವು; ಕರಾವಳಿ, ಕೊಡಗು ಭಾಗದಲ್ಲಿ ವರುಣನ ಅಬ್ಬರ

ಬಿಡುವು ಕೊಡದ ಮಳೆ: ಮೂವರ ಸಾವು; ಕರಾವಳಿ, ಕೊಡಗು ಭಾಗದಲ್ಲಿ ವರುಣನ ಅಬ್ಬರ

ನೇಕಾರ ಸಮುದಾಯದ ಅಭಿವೃದ್ಧಿಗೆ ಕ್ರಮ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ನೇಕಾರ ಸಮುದಾಯದ ಅಭಿವೃದ್ಧಿಗೆ ಕ್ರಮ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

1-adadasd

ಶೀಘ್ರದಲ್ಲೇ ಮಹಾ ಸಂಪುಟ ವಿಸ್ತರಣೆ; ಫಡ್ನವೀಸ್‌ ಗೆ ಪ್ರಮುಖ ಖಾತೆ?

ಆರ್ಯ ವಾಲ್ವೇಕರ್ ಮುಡಿಗೆ ಮಿಸ್ ಇಂಡಿಯಾ ಯುಎಸ್‍ಎ-2022 ಕಿರೀಟ

ಆರ್ಯ ವಾಲ್ವೇಕರ್ ಮುಡಿಗೆ ಮಿಸ್ ಇಂಡಿಯಾ ಯುಎಸ್‍ಎ-2022 ಕಿರೀಟ

ಕಿಡ್ನ್ಯಾಪ್‌ ಕೇಸ್‌ಗೆ “ಡಿಜಿಟಲ್‌’ ಸುಖಾಂತ್ಯ! 9 ವರ್ಷದ ನಂತರ ಕುಟುಂಬ ಸೇರಿದ ಯುವತಿ

ಕಿಡ್ನ್ಯಾಪ್‌ ಕೇಸ್‌ಗೆ “ಡಿಜಿಟಲ್‌’ ಸುಖಾಂತ್ಯ! 9 ವರ್ಷದ ನಂತರ ಕುಟುಂಬ ಸೇರಿದ ಯುವತಿ

1-sadsadsad

ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೂರನೇ ಚಿನ್ನ ಗೆದ್ದು ಕೊಟ್ಟ ನಿಖತ್ ಜರೀನ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

miss nandini

ಟ್ರೇಲರ್ ನಲ್ಲಿ ‘ನಂದಿನಿ ಟೀಚರ್’ ಎಂಟ್ರಿ

ಕಿಚ್ಚನ ಕೈಯಲ್ಲಿ ಗಾಳಿಪಟ-2 ಹಾಡು

ಕಿಚ್ಚನ ಕೈಯಲ್ಲಿ ಗಾಳಿಪಟ-2 ಹಾಡು

love-360

ಮುದ್ದು ಪ್ರೇಮಿಗಳ ಥ್ರಿಲ್ಲರ್‌ ಜರ್ನಿ: ಲವ್‌ 360ಯಲ್ಲಿ ಶಶಾಂಕ್‌ ಕನಸು

ಪುನೀತ್‌ ಸ್ಮರಣಾರ್ಥ ಆ್ಯಂಬುಲೆನ್ಸ್‌ ಕೊಡುಗೆ

ಪುನೀತ್‌ ಸ್ಮರಣಾರ್ಥ ಆ್ಯಂಬುಲೆನ್ಸ್‌ ಕೊಡುಗೆ

monsoon raaga

ಮಳೆ, ಡಾಲಿ ಮತ್ತು ಹೃದಯ ರಾಗ…: ‘ಮಾನ್ಸೂನ್‌ ರಾಗ’ ಟ್ರೇಲರ್‌ ರಿಲೀಸ್‌

MUST WATCH

udayavani youtube

NEWS BULLETIN 08-08-2022

udayavani youtube

ಕಾಮನ್‌ವೆಲ್ತ್‌ ಪದಕ ವೀರ ಗುರುರಾಜ್‌ ಗೆ ಉಡುಪಿ ಜಿಲ್ಲಾಡಳಿತದಿಂದ ಸನ್ಮಾನ

udayavani youtube

ಮೈಸೂರು ದಸರಾ : ಮಳೆಯ ನಡುವೆಯೇ ಗಜ ಪಯಣಕ್ಕೆ ಸಂಭ್ರಮದ ಚಾಲನೆ…

udayavani youtube

ಮಳೆಗಾಲದಲ್ಲಿ ಇಲ್ಲಿ ಸತ್ತವರ ಅಂತಿಮ ಯಾತ್ರೆ ಮಾತ್ರ ನರಕಯಾತನೆ..

udayavani youtube

ಒಂದು ಮೂಟೆಯ ಗೊಬ್ಬರದ ದುಡ್ಡಿನಲ್ಲಿ ೧ವರ್ಷದ ಜೀವಾಮೃತ ತಯಾರು ಮಾಡಬಹುದು!

ಹೊಸ ಸೇರ್ಪಡೆ

16DC

ಮಂಗಳೂರು: ಆ. 14ರ ವರೆಗೆ ಸೆಕ್ಷನ್‌ 144 ಮುಂದುವರಿಕೆ

ಬಿಡುವು ಕೊಡದ ಮಳೆ: ಮೂವರ ಸಾವು; ಕರಾವಳಿ, ಕೊಡಗು ಭಾಗದಲ್ಲಿ ವರುಣನ ಅಬ್ಬರ

ಬಿಡುವು ಕೊಡದ ಮಳೆ: ಮೂವರ ಸಾವು; ಕರಾವಳಿ, ಕೊಡಗು ಭಾಗದಲ್ಲಿ ವರುಣನ ಅಬ್ಬರ

15-loan

ಬೀದಿಬದಿ ವರ್ತಕರು ಸಾಲ ಸೌಲಭ್ಯ ಬಳಸಿಕೊಳ್ಳಿ

ನೇಕಾರ ಸಮುದಾಯದ ಅಭಿವೃದ್ಧಿಗೆ ಕ್ರಮ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ನೇಕಾರ ಸಮುದಾಯದ ಅಭಿವೃದ್ಧಿಗೆ ಕ್ರಮ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

1-adadasd

ಶೀಘ್ರದಲ್ಲೇ ಮಹಾ ಸಂಪುಟ ವಿಸ್ತರಣೆ; ಫಡ್ನವೀಸ್‌ ಗೆ ಪ್ರಮುಖ ಖಾತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.