‘ಹೊಡಿರೆಲೆ ಹಲಗಿ…’ ಗರಡಿ ಮನೆಯಲ್ಲಿ ನಿಶ್ವಿಕಾ ನಾಯ್ಡು ಹಾಟ್ ಸ್ಟೆಪ್
Team Udayavani, Jun 16, 2023, 12:58 PM IST
ಯೋಗರಾಜ್ ಭಟ್ ನಿರ್ದೇಶನದ “ಗರಡಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಉತ್ತರ ಕರ್ನಾಟಕ ಶೈಲಿಯಲ್ಲಿರುವ “ಹೊಡಿರಲೆ ಹಲಗಿ’ ಎಂಬ ಈ ಹಾಡಿನಲ್ಲಿ ನಿಶ್ವಿಕಾ ನಾಯ್ಡು ಸ್ಟೆಪ್ ಹಾಕಿದ್ದು, ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ವರ್ಷದ ಹಿಟ್ ಸಾಂಗ್ ಲಿಸ್ಟ್ನಲ್ಲಿ ಸೇರಿಕೊಳ್ಳುವ ನಿರೀಕ್ಷೆ ಇದೆ.
ಇನ್ನು, ಡ್ಯಾನ್ಸ್ ಸ್ಟೆಪ್ ನೋಡಿ ಫಿದಾ ಆಗಿರುವ ಯೋಗರಾಜ್ ಭಟ್ ನಿಶ್ವಿಕಾಗೆ “ಡ್ಯಾನ್ಸಿಂಗ್ ಡಾಲ್’ ಎಂಬ ಹೊಸ ಹೆಸರು ನೀಡಿದ್ದಾರೆ. “ನಿಶ್ವಿಕಾ ಒಳ್ಳೆಯ ಡ್ಯಾನ್ಸರ್. ಆಕೆ ಮಾಡಿದ ಹಾಡುಗಳೆಲ್ಲವೂ ಹಿಟ್ ಆಗಿವೆ’ ಎಂದು ಹೇಳಿದರು.
ಅಂದಹಾಗೆ, “ಗರಡಿ’ ಚಿತ್ರದಲ್ಲಿ ಯಶಸ್ ಸೂರ್ಯ ನಾಯಕರಾಗಿ ನಟಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಯವ ಯೋಗರಾಜ್ ಭಟ್, “ನಾನು ಬರೆದ ಕಥೆಯಲ್ಲಿ ನನಗೆ ತುಂಬಾ ಇಷ್ಟವಾದ ಕಥೆ. ಗರಡಿ ಮನೆಯಲ್ಲಿ ಅಡುಗೆ ಮಾಡಿಕೊಂಡಿದ್ದ ಯುವಕನೊಬ್ಬನ ಕಥೆ. ಏಕಲವ್ಯನಂತಹ ಯುವಕನ ಕಥೆ ಎನ್ನಬಹುದು. ಗರಡಿ ಮನೆಯಿಂದ ಆತನನ್ನು ಹೊರ ಹಾಕಿದ ನಂತರ ಏನಾಗುತ್ತದೆ ಎಂಬ ಅಂಶದೊಂದಿಗೆ ಈ ಚಿತ್ರ ಸಾಗುತ್ತದೆ’ ಎಂದರು.
ಇದನ್ನೂ ಓದಿ:World Test Championship Final ಪಂದ್ಯದಲ್ಲಿ ಸಿಗದ ಚಾನ್ಸ್: ಕೊನೆಗೂ ಮೌನ ಮುರಿದ ಅಶ್ವಿನ್
ಮಾಜಿ ಸಚಿವ ಬಿ.ಸಿ.ಪಾಟೀಲ್ ಅವರು “ಗರಡಿ’ ಚಿತ್ರದ ನಿರ್ಮಾಣದ ಜೊತೆಗೆ ಪ್ರಮುಖ ಪಾತ್ರ ಕೂಡಾ ಮಾಡಿದ್ದಾರೆ. ಇಲ್ಲಿ ಅವರು ಗರಡಿ ಮನೆಯ ಕುಸ್ತಿ ಗುರುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. “ಇದು ನನ್ನ ಪ್ರೊಡಕ್ಷನ್ನ 16ನೇ ಸಿನಿಮಾ. ಈ ಕಥೆ ಚೆನ್ನಾಗಿದೆ. ಮುಂದೆಯೂ ನಮ್ಮ ಬ್ಯಾನರ್ನಲ್ಲಿ ಸಿನಿಮಾ ನಿರ್ಮಿಸಲಿದ್ದೇವೆ’ ಎಂದರು.
ಚಿತ್ರದ ವಿಲನ್ ಪಾತ್ರದಲ್ಲಿ ಬಿ.ಸಿ.ಪಾಟೀಲ್ ಅಳಿಯ ಸುಜಯ್ ಬೇಲೂರು ನಟಿಸಿದ್ದಾರೆ. ಅವರು ಕೂಡಾ ಸಿನಿಮಾದ ಅನುಭವ ಹಂಚಿಕೊಂಡರು. ನಿರ್ಮಾಪಕಿ ಸೃಷ್ಟಿ ಪಾಟೀಲ್, ವನಜಾ ಪಾಟೀಲ್, ಸೋನಾಲ್, ಯಶಸ್, ನಿಶ್ವಿಕಾ ಸೇರಿದಂತೆ ಇಡೀ ಚಿತ್ರತಂಡ ಸಿನಿಮಾದ ಖುಷಿ ಹಂಚಿಕೊಂಡಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ