O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Team Udayavani, Apr 19, 2024, 11:10 AM IST

O2

ಪಿ.ಆರ್‌.ಕೆ ಬ್ಯಾನರ್‌ನಡಿ ನಿರ್ಮಾಣವಾಗಿರುವ “ಓ2′ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದು ಪುನೀತ್‌ ರಾಜಕುಮಾರ್‌ ಅವರು ಕೇಳಿ ಮೆಚ್ಚಿಕೊಂಡ ಕೊನೆಯ ಸಿನಿಮಾ ಕಥೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕದ್ವಯರಾದ ರಾಘವ್‌ ನಾಯಕ್‌ ಹಾಗೂ ಪ್ರಶಾಂತ್‌, “ಮಾಯಾಬಜಾರ್‌ ಚಿತ್ರದ ರಾಧಾಕೃಷ್ಣ ಅವರ ಮೂಲಕ ನಮಗೆ ಪುನೀತ್‌ ರಾಜಕುಮಾರ್‌ ಅವರ ಪರಿಚಯವಾಯಿತು. ಈ ಚಿತ್ರದ ಕಥೆ ಕೇಳಿದ ಪುನೀತ್‌ ರಾಜಕುಮಾರ್‌ ಹಾಗೂ ಅಶ್ವಿ‌ನಿ ಪುನೀತ್‌ ರಾಜಕುಮಾರ್‌ ಅವರು ನಿರ್ಮಾಣಕ್ಕೆ ಮುಂದಾದರು. ಓ2 ಪ್ರಮುಖವಾಗಿ ಮೆಡಿಕಲ್‌ ಕುರಿತಾದ ಸಿನಿಮಾ. ಹೃದಯ ಸ್ತಂಭನವಾಗಿ ಸಾವಿನಂಚಿಗೆ ತಲುಪಿದ ವ್ಯಕ್ತಿಯನ್ನು ಓ2 ಡ್ರಗ್‌ ಮೂಲಕ ಬದುಕಿಸಬಹುದು. ಆ ಹೊಸ ಆವಿಷ್ಕಾರವನ್ನು ನಮ್ಮ ಚಿತ್ರದಲ್ಲಿ ನಾಯಕಿ ಶ್ರದ್ಧಾ (ಆಶಿಕಾ ರಂಗನಾಥ್‌) ಮಾಡುತ್ತಾರೆ. ಓ2 ಡ್ರಗ್‌ ಕುರಿತು ಸಂಶೋಧನೆ ನಡೆಸುವಾಗ ಆಕೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ. ಇದಷ್ಟೇ ಅಲ್ಲದೆ ನಮ್ಮ ಚಿತ್ರದಲ್ಲಿ ಪ್ರೀತಿ, ಅನಿರೀಕ್ಷಿತ ತಿರುವುಗಳು ಹಾಗೂ ಮನರಂಜನೆ ಕೂಡ ಇದೆ. ಕನ್ನಡದಲ್ಲಿ ಈ ರೀತಿಯ ಕಥೆ ವಿರಳ ಎನ್ನಬಹುದು’ ಎಂದರು.

“ನಮ್ಮ ಇಡೀ ಕುಟುಂಬದವರು ರಾಜಕುಮಾರ್‌ ಅವರ ಕುಟುಂಬದ ಅಪ್ಪಟ ಅಭಿಮಾನಿಗಳು. ಅಂತಹುದರಲ್ಲಿ ನನಗೆ ಪುನೀತ್‌ ರಾಜಕುಮಾರ್‌ಅವರ ನಿರ್ಮಾಣದ ಚಿತ್ರದಲ್ಲಿ ನಟಿಸುವ ಆವಕಾಶ ಸಿಕ್ಕಾಗ ತುಂಬಾ ಸಂತೋಷವಾಯಿತು. ನನ್ನದು ಈ ಚಿತ್ರದಲ್ಲಿ ಎನ್‌ಆರ್‌ಐ ವೈದ್ಯನ ಪಾತ್ರ’ ಎಂದು ನಾಯಕ ಪ್ರವೀಣ್‌ ತೇಜ್‌ ತಿಳಿಸಿದರು.

ನಾಯಕಿ ಆಶಿಕಾ ರಂಗನಾಥ್‌ ಮಾತನಾಡಿ, “ಶ್ರದ್ದಾ ನನ್ನ ಪಾತ್ರದ ಹೆಸರು. ನಾನು ಕೂಡ ಈ ಚಿತ್ರದಲ್ಲಿ ವೈದ್ಯೆ. ಪಿ.ಆರ್‌.ಕೆ ಪ್ರೊಡಕ್ಷನ್ಸ್‌ ಸಂಸ್ಥೆಯ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ’ ಎನ್ನುತ್ತಾರೆ ನಟಿ ಆಶಿಕಾ ರಂಗನಾಥ್‌.

ಚಿತ್ರಕ್ಕೆ ನವೀನ್‌ ಕುಮಾರ್‌ ಅವರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್‌ ಅವರ ಸಂಕಲನವಿದೆ. ಆಶಿಕಾ ರಂಗನಾಥ್‌, ಪ್ರವೀಣ್‌ ತೇಜ್, ರಾಘವ್‌ ನಾಯಕ್‌, ಸಿರಿ ರವಿಕುಮಾರ್‌, ಪ್ರಕಾಶ್‌ ಬೆಳವಾಡಿ, ಪುನೀತ್‌ ಬಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಟಾಪ್ ನ್ಯೂಸ್

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

T20 World Cup 2024: ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯಕ್ಕಿಲ್ಲ ವಿರಾಟ್-ಹಾರ್ದಿಕ್

T20 World Cup 2024: ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯಕ್ಕಿಲ್ಲ ವಿರಾಟ್-ಹಾರ್ದಿಕ್

6-vitla

Vitla: ಬೀಗ ಹಾಕಿದ್ದ ಮನೆಯಲ್ಲಿ ಕಳ್ಳರ ಕರಾಮತ್ತು; ಡಿ.ವಿ.ಆರ್ ಕೂಡಾ ಕದ್ದೊಯ್ದರು

rajnath singh

Indian Constitution ಪೀಠಿಕೆಯನ್ನು ಬದಲಾವಣೆ ಮಾಡಿದ್ದು ಕಾಂಗ್ರೆಸ್: ರಾಜನಾಥ್ ಸಿಂಗ್

5-health

Female health: ಸ್ತ್ರೀ ದೇಹ ಮತ್ತು ಆರೋಗ್ಯ

3

Snakes: ಹುಷಾರ್‌! ಮನೆಗೂ ಬರಬಹುದು ಹಾವುಗಳು

I will do the continuation of the film A: Actress Chandini

ಎ ಚಿತ್ರದ ಮುಂದುವರೆದ ಭಾಗ ಮಾಡುತ್ತೇನೆ: ನಾಯಕಿ ಚಾಂದಿನಿ ಮಾತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

janata city song of Kotee

Kannada Cinema; ‘ಕೋಟಿ’ಯಿಂದ ಬಂತು ಜನತಾ ಸಿಟಿ; ಧನಂಜಯ್‌ ನಟನೆಯ ಸಿನಿಮಾ

I will do the continuation of the film A: Actress Chandini

ಎ ಚಿತ್ರದ ಮುಂದುವರೆದ ಭಾಗ ಮಾಡುತ್ತೇನೆ: ನಾಯಕಿ ಚಾಂದಿನಿ ಮಾತು

ಸಿನೆಮಾ ತಾರೆಯರಿಗೆ ಒತ್ತಡ ಹೇರಬೇಡಿ: ರವಿಚಂದ್ರನ್‌

ಸಿನೆಮಾ ತಾರೆಯರಿಗೆ ಒತ್ತಡ ಹೇರಬೇಡಿ: ರವಿಚಂದ್ರನ್‌

Kannada Cinema; ನೆರಳಿಲ್ಲದ ದಾರಿಯಲ್ಲಿ ‘ನಸಾಬ್’

Kannada Cinema; ನೆರಳಿಲ್ಲದ ದಾರಿಯಲ್ಲಿ ‘ನಸಾಬ್’

Martin’s team announced the release date of the film

Martin: ಬಂತು ಸ್ಟಾರ್ ಸಿನಿಮಾ; ಧ್ರುವ ಸರ್ಜಾ ಚಿತ್ರ ಬಿಡುಗಡೆ ದಿನಾಂಕ ಘೋಷಿಸಿದ ತಂಡ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Vijayapura ಆಕಸ್ಮಿಕ ಬೆಂಕಿ: ನೂರಾರು ಲಿಂಬೆ ಗಿಡ ಹಾನಿ

Vijayapura; ಆಕಸ್ಮಿಕ ಬೆಂಕಿ: ನೂರಾರು ಲಿಂಬೆ ಗಿಡ ಹಾನಿ

janata city song of Kotee

Kannada Cinema; ‘ಕೋಟಿ’ಯಿಂದ ಬಂತು ಜನತಾ ಸಿಟಿ; ಧನಂಜಯ್‌ ನಟನೆಯ ಸಿನಿಮಾ

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

T20 World Cup 2024: ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯಕ್ಕಿಲ್ಲ ವಿರಾಟ್-ಹಾರ್ದಿಕ್

T20 World Cup 2024: ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯಕ್ಕಿಲ್ಲ ವಿರಾಟ್-ಹಾರ್ದಿಕ್

6-vitla

Vitla: ಬೀಗ ಹಾಕಿದ್ದ ಮನೆಯಲ್ಲಿ ಕಳ್ಳರ ಕರಾಮತ್ತು; ಡಿ.ವಿ.ಆರ್ ಕೂಡಾ ಕದ್ದೊಯ್ದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.